ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಬೃಹತ್ ದಾಖಲೆಯತ್ತ ಚಿತ್ತ ನೆಟ್ಟ ಅಶ್ವಿನ್, ಬೂಮ್ರಾ, ರೂಟ್, ಆಂಡರ್ಸನ್

India vs England: Ashwin, James Anderson, Jasprit Bumrah, Joe Root near to big milestone

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿ ಈಗ ಕ್ರಿಕೆಟ್ ಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿದೆ. ಎರಡು ತಂಡಗಳು ಕೂಡ ಈ ಹಿಂದಿನ ಸರಣಿಯಲ್ಲಿ ವಿದೇಶಿ ನೆಲದಲ್ಲಿ ಭರ್ಜರಿ ಗೆಲುವು ಸಾಧಿಸಿದ ಉತ್ಸಾಹದಲ್ಲಿದೆ. ಭಾರತ ಆಸ್ಟ್ರೇಲಿಯಾವನ್ನು 2-1 ಅಂತರದಿಂದ ಮಣಿಸಿದ್ದರೆ ಇಂಗ್ಲೆಂಡ್ ಶ್ರೀಲಂಕಾವನ್ನು ಲಂಕಾ ನೆಲದಲ್ಲಿ 2-0 ಅಂತರದಿಂದ ಮಣಿಸಿ ಸರಣಿ ಗೆದ್ದುಕೊಂಡಿದೆ.

ಈಗ ಎರಡು ತಂಡಗಳು ಆಟಗಾರರು ಮತ್ತೊಂದು ದೊಡ್ಡ ಸರಣಿಗೆ ಸಜ್ಜಾಗಿದ್ದು ಉತ್ತಮ ಪ್ರದರ್ಶನ ನೀಡುವ ಹುಮ್ಮಸ್ಸಿನಲ್ಲಿದ್ದಾರೆ. ನಾಲ್ಕು ಪಂದ್ಯಗಳ ಸರಣಿಯ ಮೊದಲ ಪಂದ್ಯ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಮ್‌ನಲ್ಲಿ ಫೆಬ್ರವರಿ 5ರಿಂದ ನಡೆಯಲಿದೆ. ಎರಡು ತಂಡಗಳ ಆಟಗಾರರು ಸದ್ಯ ಹೋಟೆಲ್ ಕ್ವಾರಂಟೈನ್ ಅನ್ನು ಪೂರೈಸುತ್ತಿದ್ದಾರೆ.

ಟೀಮ್ ಇಂಡಿಯಾಗೆ ಇಂಗ್ಲೆಂಡ್ ಬೆಂಬಲಿಸಿದ ಸಂಗತಿ ಹೇಳಿದ ಸ್ಟುವರ್ಟ್ ಬ್ರಾಡ್ಟೀಮ್ ಇಂಡಿಯಾಗೆ ಇಂಗ್ಲೆಂಡ್ ಬೆಂಬಲಿಸಿದ ಸಂಗತಿ ಹೇಳಿದ ಸ್ಟುವರ್ಟ್ ಬ್ರಾಡ್

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಈ ಟೆಸ್ಟ್ ಸರಣಿಯಲ್ಲಿ ಎರಡೂ ತಂಡಗಳ ಕೆಲ ಪ್ರಮುಖ ಆಟಗಾರರು ಕೆಲ ಮಹತ್ವದ ದಾಖಲೆಯನ್ನು ಬರೆಯುವ ಸನಿಹದಲ್ಲಿದ್ದಾರೆ. ಆ ಆಟಗಾರರು ಯಾರು? ಆ ದಾಖಲೆಗಳು ಯಾವುದು ಅನ್ನುವುದನ್ನು ಬನ್ನಿ ನೋಡೋಣ..

100 ವಿಕೆಟ್ ಮೈಲಿಗಲ್ಲಿನ ಮೇಲೆ ಬೂಮ್ರಾ ಚಿತ್ತ

100 ವಿಕೆಟ್ ಮೈಲಿಗಲ್ಲಿನ ಮೇಲೆ ಬೂಮ್ರಾ ಚಿತ್ತ

ಟೀಮ್ ಇಂಡಿಯಾದ ವೇಗಿ ಜಸ್ಪ್ರೀತ್ ಬೂಮ್ರ ಕಳೆದ ಆಸ್ಟ್ರೇಲಿಯಾ ವಿರುದ್ಧದ ಬ್ರಿಸ್ಬೇನ್‌ನಲ್ಲಿ ನಡೆದ ಪಂದ್ಯವನ್ನು ಗಾಯದ ಕಾರಣದಿಂದ ತಪ್ಪಿಸಿಕೊಂಡಿದ್ದರು. ಈಗ ಸಂಪೂರ್ಣ ಚೇತರಿಸಿಕೊಂಡಿರುವ ಅವರು ಇಂಗ್ಲೆಂಡ್ ವಿರುದ್ಧ ಹೋರಾಡಲು ಸಜ್ಜಾಗಿದ್ದಾರೆ. 17 ಪಂದ್ಯಗಳನ್ನು ಆಡಿರುವ ಬೂಮ್ರಾ ಈವರೆಗೆ 79 ವಿಕೆಟ್ ಪಡೆದುಕೊಂಡಿದ್ದು ಟೆಸ್ಟ್ ಕ್ರಿಕೆಟ್‌ನಲ್ಲಿ 100 ವಿಕೆಟ್‌ಗಳ ಮೈಲಿಗಲ್ಲಿಗೆ 21 ವಿಕೆಟ್‌ಗಳ ಅಗತ್ಯವಿದೆ.

400ನೇ ವಿಕೆಟ್ ಮೇಲೆ ಅಶ್ವಿನ್ ಕಣ್ಣು

400ನೇ ವಿಕೆಟ್ ಮೇಲೆ ಅಶ್ವಿನ್ ಕಣ್ಣು

ಮತ್ತೊಂದಡೆ ಟೀಮ್ ಇಂಡಿಯಾದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ 74 ಟೆಸ್ಟ್ ಪಂದ್ಯಗಳನ್ನು ಆಡಿದ್ದು 377 ವಿಕೆಟ್ ಕಬಳಿಸಿದ್ದಾರೆ. ನಾಲ್ಕು ಪಂದ್ಯಗಳ ಈ ಸರಣಿಯಲ್ಲಿ ಅಶ್ವಿನ್ 23 ವಿಕೆಟ್ ಪಡೆಯಲು ಸಾಧ್ಯವಾದರೆ ಈ ದೊಡ್ಡ ಮೈಲಿಗಲ್ಲಿ ತಲುಪಿದ 4ನೇ ಭಾರತೀಯ ಬೌಲರ್ ಎನಿಸಿಕೊಳ್ಳಲಿದ್ದಾರೆ.

ಕುಂಬ್ಳೆ ದಾಖಲೆ ಹಿಂದಿಕ್ಕುವ ಹುಮ್ಮಸ್ಸಿನಲ್ಲಿ ಆಂಡರ್ಸನ್

ಕುಂಬ್ಳೆ ದಾಖಲೆ ಹಿಂದಿಕ್ಕುವ ಹುಮ್ಮಸ್ಸಿನಲ್ಲಿ ಆಂಡರ್ಸನ್

ಇಂಗ್ಲೆಂಡ್ ತಂಡದ ಅನುಭವಿ ವೇಗಿ ಜೇಮ್ಸ್ ಆಂಡರ್ಸನ್ 157 ಟೆಸ್ಟ್ ಪಂದ್ಯಗಳನ್ನು ಆಡಿದ್ದು 606 ವಿಕೆಟ್ ಪಡೆದಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ 600ಕ್ಕೂ ಅಧಿಕ ವಿಕೆಟ್ ಪಡೆದ ಕೆಲವೇ ಆಟಗಾರರ ಪಟ್ಟಿಗೆ ಆಂಡರ್ಸನ್ ಸೇರಿಕೊಂಡಿದ್ದಾರೆ. ಆದರೆ 619 ವಿಕೆಟ್ ಪಡೆದಿರುವ ಭಾರತೀಯ ದಿಗ್ಗಜ ಬೌಲರ್ ಅನಿಲ್ ಕುಂಬ್ಳೆಯನ್ನು ಹಿಂದಿಕ್ಕುವ ಅವಕಾಶ ಈ ಸರಣಿಯಲ್ಲಿ ಆಂಡರ್ಸನ್‌ಗೆ ದೊರಕಿದ್ದು ಅದಕ್ಕಾಗಿ 14 ವಿಕೆಟ್‌ಗಳು ಮಾತ್ರವೇ ಅಗತ್ಯವಿದೆ. ಇನ್ನು ಇಂಗ್ಲೆಂಡ್ ಪರವಾಗಿ ಅತಿ ಹೆಚ್ಚು ಟೆಸ್ಟ್ ಪಂದ್ಯಗಳನ್ನಾಡಿದ ದಾಖಲೆಯನ್ನು ಮುರಿಯುವ ಅವಕಾಶವೂ ಆಂಡರ್ಸನ್‌ಗೆ ಇದ್ದು ಅದಕ್ಕಾಗಿ ಸರಣಿಯ ನಾಲ್ಕು ಪಂದ್ಯಗಳಲ್ಲೂ ಆಂಡರ್ಸನ್ ಕಣಕ್ಕಿಳಿಯಬೇಕಾಗಿದೆ. ಅಲೆಸ್ಟರ್ ಕುಕ್ ಇಂಗ್ಲೆಂಡ್ ಪರವಾಗಿ 161 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದು ಇಂಗ್ಲೆಂಡ್ ಪರ ದಾಖಲೆ ಹೊಂದಿದ್ದಾರೆ.

100ನೇ ಟೆಸ್ಟ್ ಪಂದ್ಯನ್ನಾಡಲು ಜೋ ರೂಟ್ ಸಜ್ಜು

100ನೇ ಟೆಸ್ಟ್ ಪಂದ್ಯನ್ನಾಡಲು ಜೋ ರೂಟ್ ಸಜ್ಜು

ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ಈಗ 99 ಪಂದ್ಯಗಳಲ್ಲ ಆಡಿದ್ದು ಭಾರತದ ವಿರುದ್ಧ ನಡೆಯುವ ಮೊದಲ ಪಂದ್ಯದಲ್ಲಿ ಆಡುವ ಮೂಲಕ 100ನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದಂತಾಗುತ್ತದೆ. ಈವರೆಗೆ ರೂನ್ 49.39ರ ಸರಾಸರಿಯಲ್ಲಿ 8249 ರನ್ ಬಾರಿಸಿದ್ದಾರೆ. 19 ಶತಕ ಹಾಗೂ 49 ಅರ್ಧ ಶತಕವನ್ನು ಸಿಡಿಸಿದ್ದಾರೆ.

Story first published: Thursday, February 11, 2021, 15:14 [IST]
Other articles published on Feb 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X