ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ 'ಎ' ವಿರುದ್ಧ ಇಂಗ್ಲೆಂಡ್ ಲಯನ್ಸ್‌ಗೆ 1 ವಿಕೆಟ್ ರೋಚಕ ಜಯ

India A vs England Lions, 5th unofficial ODI: England won by 1 wickets

ತಿರುವನಂತಪುರಂ, ಜನವರಿ 31: ತಿರುವನಂತಪುರಂನ ಗ್ರೀನ್‌ಫೀಲ್ಡ್ ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ಗುರುವಾರ (ಜನವರಿ 31) ನಡೆದ ಭಾರತ 'ಎ' ಮತ್ತು ಇಂಗ್ಲೆಂಡ್ ಲಯನ್ಸ್ ನಡುವಣ 5ನೇ ಮತ್ತು ಕೊನೆಯ ಅನಧಿಕೃತ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 1 ವಿಕೆಟ್ ರೋಚಕ ಗೆಲುವನ್ನಾಚರಿಸಿದೆ.

ಐಪಿಎಲ್ ಫಾರ್ಮನ್ನು ವಿಶ್ವಕಪ್ ಆಯ್ಕೆಗೆ ಪರಿಗಣಿಸಬಾರದು: ಮೋಹೀಂದರ್ಐಪಿಎಲ್ ಫಾರ್ಮನ್ನು ವಿಶ್ವಕಪ್ ಆಯ್ಕೆಗೆ ಪರಿಗಣಿಸಬಾರದು: ಮೋಹೀಂದರ್

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಎ ತಂಡಕ್ಕೆ ಆರಂಭಿಕ ಆಟಗಾರರಾದ ಲೋಕೇಶ್ ರಾಹುಲ್ (0) ಮತ್ತು ಹಿಮ್ಮತ್ ಸಿಂಗ್ (3) ರನ್ ಬಲ ಸಿಗಲಿಲ್ಲ. ಆದರೆ ಸಿದ್ಧೇಶ್ ಲಾಡ್ 36, ಅಕ್ಸರ್ ಪಟೇಲ್ 23, ದೀಪಕ್ ಚಾಹರ್ 21 ರನ್ ಕೊಡುಗೆ ನೀಡಿದ್ದರಿಂದ ತಂಡ 35 ಓವರ್‌ಗಳಲ್ಲಿ ಎಲ್ಲಾ ವಿಕೆಟ್ ಕಳೆದು 121 ರನ್ ಕಲೆ ಹಾಕಿತು.

121 ಕನಿಷ್ಠ ರನ್ ಗುರಿ ಬೆನ್ನತ್ತಿದ ಇಂಗ್ಲೆಂಡ್‌ಗೆ ಆರಂಭಿಕ ಆಟಗಾರರ ಬೆಂಬಲ ಇಲ್ಲದಿದ್ದರೂ, ಬೆನ್ ಡಕೆಟ್ ಅಜೇಯ ಅರ್ಧ ಶತಕ (70) ರನ್ ನೆರವಿನೊಂದಿಗೆ 30.3 ಓವರ್‌ನಲ್ಲಿ 9 ವಿಕೆಟ್ ಕಳೆದು 125 ರನ್ ಪೇರಿಸುವುದರೊಂದಿಗೆ ಗೆಲುವನ್ನು ಸಂಭ್ರಮಿಸಿತು. ಬೆನ್ ಡಕೆಟ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಹ್ಯಾಮಿಲ್ಟನ್, ಏಕದಿನ: 8 ವಿಕೆಟ್‌ಗಳಿಂದ ನ್ಯೂಜಿಲ್ಯಾಂಡ್‌ಗೆ ಶರಣೆಂದ ಭಾರತಹ್ಯಾಮಿಲ್ಟನ್, ಏಕದಿನ: 8 ವಿಕೆಟ್‌ಗಳಿಂದ ನ್ಯೂಜಿಲ್ಯಾಂಡ್‌ಗೆ ಶರಣೆಂದ ಭಾರತ

ಭಾರತದ ಇನ್ನಿಂಗ್ಸ್‌ ವೇಳೆ ಇಂಗ್ಲೆಂಡ್‌ನ ಜೇಮೀ ಓವರ್ಟನ್ 3, ಟಾಮ್ ಬೈಲೆಯ್ 2 ವಿಕೆಟ್‌ನಿಂದ ಗಮನ ಸೆಳೆದರೆ, ಇಂಗ್ಲೆಂಡ್ ಇನ್ನಿಂಗ್ಸ್‌ನಲ್ಲಿ ಭಾರತದ ದೀಪಕ್ ಚಾಹರ್ ಮತ್ತು ರಾಹುಲ್ ಚಾಹರ್ ತಲಾ 3 ವಿಕೆಟ್ ಪಡೆದು ಮಿಂಚಿದರು. ಈ ಅನಧಿಕೃತ ಸರಣಿಯಲ್ಲಿ ಭಾರತ 4-1ರ ಮುನ್ನಡೆ ಸಾಧಿಸಿದಂತಾಗಿದೆ.

Story first published: Thursday, January 31, 2019, 15:59 [IST]
Other articles published on Jan 31, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X