ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ ವಿಕೆಟ್ ಪಡೆಯಲು ಹೆಣೆದ ರಣತಂತ್ರವನ್ನು ಬಹಿರಂಗಪಡಿಸಿದ ರಾಬಿನ್ಸನ್

India vs England: Robinson reveals tactic against Indian skipper Virat Kohli

ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ದಿನದ ಅಂತ್ಯದ ವೇಳೆಗೆ ತಮ್ಮ ವಿಕೆಟನ್ನು ಕಳೆದುಕೊಂಡರು, ಇಂಗ್ಲೆಂಡ್ ತಂಡದ ವೇಗಿ ರಾಬಿನ್ಸನ್ ಎಸೆತದಲ್ಲಿ ಎಡ್ಜ್ ಆಡುವ ಮೂಲಕ ವಿರಾಟ್ ಕೊಹ್ಲಿ ಔಟಾಗು ಫೆವಿಲಿಯನ್ ಸೇರಿದರು. ಈ ಮೂಲಕ ಇಂಗ್ಲೆಂಡ್ ತಂಡಕ್ಕೆ ಮೇಲುಗೈ ಒದಗಿಸುವಲ್ಲಿ ರಾಬಿನ್ಸನ್ ಯಶಸ್ವಿಯಾದರು. ಈ ವಿಕೆಟ್‌ ಪಡೆದ ಬಗ್ಗೆ ಸಂತಸವನ್ನು ವ್ಯಕ್ತಪಡಿಸಿದ ರಾಬಿನ್ಸನ್ ತಾನು ಪಡೆದ ಅತ್ಯಂತ ದೊಡ್ಡ ವಿಕೆಟ್ ಇದು ಎಂದು ಬಣ್ಣಿಸಿದ್ದಾರೆ.

ಟ್ರೆಂಟ್‌ಬ್ರಿಡ್ಜ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ತಮ್ಮ ಚೊಚ್ಚಲ ಐದು ವಿಕೆಟ್‌ಗಳ ಗೊಂಚಲು ಪಡೆದಿದ್ದರು ರಾಬಿನ್ಸನ್. ಲಾರ್ಡ್ಸ್ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು 42 ರನ್‌ಗಳಿಸಿದ್ದ ವೇಳೆ ಔಟ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಎರಡನೇ ಹೊಸ ಚೆಂಡನ್ನು ಪಡೆದ ಬಳಿಕ ಟೀಮ್ ಇಂಡಿಯಾ ನಾಯಕನಿಗೆ ಆಘಾತ ನೀಡುವಲ್ಲಿ ರಾಬಿನ್ಸನ್ ಯಶಸ್ವಿಯಾಗಿದ್ದರು. ವಿರಾಟ್ ಕೊಹ್ಲಿ ಬ್ಯಾಟ್ ಸವರಿಕೊಂಡು ಬಂದ ಚೆಂಡು ಎರಡನೇ ಸ್ಲಿಪ್‌ನಲ್ಲಿ ಕಾಯುತ್ತಿದ್ದ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಬೊಗಸೆಗೆ ಸೇರಿಕೊಂಡಿತ್ತು. ಈ ಮೂಲಕ ವಿರಾಟ್ ಕೊಹ್ಲಿ ತಮ್ಮ ಮೊದಲ ಇನ್ನಿಂಗ್ಸ್‌ನ ಆಟವನ್ನು ಅಂತ್ಯಗೊಳಿಸಿದರು.

ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ಶತಕ ಸಿಡಿಸಿದ ಮೂವರು ಕನ್ನಡಿಗರು ಇವರು!ಕ್ರಿಕೆಟ್ ಕಾಶಿ ಲಾರ್ಡ್ಸ್ ಅಂಗಳದಲ್ಲಿ ಶತಕ ಸಿಡಿಸಿದ ಮೂವರು ಕನ್ನಡಿಗರು ಇವರು!

ಮೊದಲ ದಿನದಾಟದ ಬಳಿಕ ರಾಬಿನ್ಸನ್ ಪ್ರತಿಕ್ರಿಯಿಸಿದ್ದು ವಿರಾಟ್ ಕೊಹ್ಲಿ ವಿಕೆಟ್ ಪಡೆಯಲು ಯಾವ ರೀತಿಯ ರಣತಂತ್ರವನ್ನು ಹೆಣೆದಿದ್ದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಅವರು ಹೇಳಿದ್ದೇನು ಮುಂದೆ ಓದಿ..

ವಿಕೆಟ್ ಕೆಡವಲು ರಾಬಿನ್ಸನ್ ಯೋಜನೆ

ವಿಕೆಟ್ ಕೆಡವಲು ರಾಬಿನ್ಸನ್ ಯೋಜನೆ

ಈ ವಿಕೆಟ್ ಪಡೆದ ಬಗ್ಗೆ ರಾಬಿನ್ಸನ್ ಸಂತಸ ವ್ಯಕ್ತಪಡಿಸಿದ್ದಾರೆ. "ಬಹುಶಃ ವಿರಾಟ್ ವಿಕೆಟ್ ನನ್ನ ಈವರೆಗಿನ ವಿಕೆಟ್‌ಗಳಲ್ಲಿ ಅತಿ ದೊಡ್ಡ ವಿಕೆಟ್ ಆಗಿದೆ. ನಾನು ಅದಕ್ಕಾಗಿ ತುಂಬಾ ಸಂತಸ ಪಡುತ್ತೇನೆ. ಅದು ನನ್ನ ಪಾಲಿಗೆ ನಿಜಕ್ಕೂ ದೊಡ್ಡ ಕ್ಷಣವಾಗಿತ್ತು" ಎಂದು ರಾಬಿನ್ಸನ್ ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ವಿರುದ್ಧ ಹೆಣೆದಿದ್ದ ಯೋಜನೆಯನ್ನು ಕೂಡ ರಾಬಿನ್ಸನ್ ಬಹಿರಂಗಪಡಿಸಿದ್ದಾರೆ. "ವಿರಾಟ್ ಕೊಹ್ಲಿಗೆ ನಾಲ್ಕು ಅಥವಾ ಐದನೇ ವಿಕೆಟ್‌ನ ನೇರಕ್ಕೆ ಚೆಂಡನ್ನು ಎಸೆಯುವುದು ನನ್ನ ಯೋಜನೆಯಾಗಿತ್ತು. ಅದರಲ್ಲಿ ನಾನು ಯಶಸ್ಸು ಗಳಿಸಿದೆ" ಎಂದು ಮೊದಲ ದಿನದ ಪಂದ್ಯ ಮುಕ್ತಾಯದ ಬಳಿಕ ರಾಬಿನ್ಸನ್ ಹೇಳಿದ್ದಾರೆ.

ಭಾರತದ ಬ್ಯಾಟಿಂಗ್ ಉತ್ತಮವಾಗಿತ್ತು

ಭಾರತದ ಬ್ಯಾಟಿಂಗ್ ಉತ್ತಮವಾಗಿತ್ತು

ಇನ್ನು ಈ ಸಂದರ್ಭದಲ್ಲಿ ರಾಬಿನ್ಸನ್ ಭಾರತದ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. "ನಾವು ನಿಜಕ್ಕೂ ಇಲ್ಲಿ ಪರಿಸ್ಥಿತಿಯ ಲಾಭವನ್ನು ಬಳಸಿಕೊಳ್ಳಬಹುದು ಎನಿಸಿದ್ದೆವು. ಆರಂಭದಲ್ಲಿಯೇ ನಾವು ಕೆಲ ಯಶಸ್ಸನ್ನು ಸಾಧಿಸಬಹುದು ಎಂದು ಭಾವಿಸಿದ್ದೆವು. ನಾಳಿನ ದಿನ ನಾವು ಅದನ್ನು ಸಾಧಿಸುವ ವಿಶ್ವಾಸದಲ್ಲಿದ್ದೇವೆ. ನಾವು ನಿಜಕ್ಕೂ ಉತ್ತಮವಾಗಿ ಬೌಲಿಂಗ್ ನಡೆಸಿದ್ದೇವೆ ಎಂದು ಭಾವಿಸಿದ್ದೇನೆ. ಬ್ಯಾಟ್ಸ್‌ಮನ್‌ಗಳನ್ನು ಕೆಡವಲು ನಾವು ಸಾಕಷ್ಟು ಪರಿಶ್ರಮವನ್ನು ಪಟ್ಟಿದ್ದೇವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಅವರು ನಿಜವಾಗಿಯೂ ಉತ್ತಮವಾಗಿ ಆಡಿದ್ದರು" ಎಂದಿದ್ದಾರೆ ರಾಬಿನ್ಸನ್.

ಟೀಮ್ ಇಂಡಿಯಾ ಕೋಚ್ ಸ್ಥಾನಕ್ಕೆ ಭಾರಿ ಬೇಡಿಕೆ | Oneindia Kannada
ಟಾಸ್ ಗೆದ್ದರೂ ಇಂಗ್ಲೆಂಡ್ ತಂಡಕ್ಕೆ ಹಿನ್ನಡೆ

ಟಾಸ್ ಗೆದ್ದರೂ ಇಂಗ್ಲೆಂಡ್ ತಂಡಕ್ಕೆ ಹಿನ್ನಡೆ

ಇನ್ನು ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಟಾಸ್ ಗೆದ್ದುಕೊಮಡು ಮೊದಲಿಗೆ ಭಾರತ ತಂಡವನ್ನು ಬ್ಯಾಟಿಂಗ್‌ಗೆ ಇಳಿಸಿದ್ದರು. ಮಳೆಯ ವಾತಾವರಣ ಇದ್ದ ಕಾರಣ ಆ ಪರಿಸ್ಥಿತಿಯಲ್ಲಿ ಭಾರತೀಯ ಆಟಗಾರರನ್ನು ಬೇಗನೆ ಔಟ್ ಮಾಡುವ ಯೋಜನೆ ಇಂಗ್ಲೆಂಡ್ ತಂಡದ್ದಾಗಿತ್ತು. ಆದರೆ ಭಾರತದ ಬ್ಯಾಟ್ಸ್‌ಮನ್‌ಗಳ ಪರಿಶ್ರಮದಿಂದ ಇಂಗ್ಲೆಂಡ್ ತಂಡಕ್ಕೆ ಮೊದಲ ದಿನ ಯಶಸ್ಸು ಗಳಿಸುವುದು ಅಸಾಧ್ಯವಾಗಿತ್ತು. "ನಾವು ಪಿಚ್ ವೇಗವಾಗಿ ಇರುತ್ತದೆ ಎಂದು ಊಹಿಸಿದ್ದೆವು. ಆದರೆ ಖಂಡಿತವಾಗಿಯೂ ಇದು ಸ್ವಲ್ಪ ನಿಧಾನಗತಿಯಲ್ಲಿದೆ. ಸ್ವಿಂಗ್ ಕೂಡ ಸ್ಥಿರವಾಗಿಲ್ಲ" ಎಂದಿದ್ದಾರೆ ರಾಬಿನ್ಸನ್.

Story first published: Friday, August 13, 2021, 20:47 [IST]
Other articles published on Aug 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X