ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: 4ನೇ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾದಲ್ಲಿ ಈ ಬದಲಾವಣೆ ನಿಶ್ಚಿತ!

India vs England: senior pacer Ishant sharma would be dropped for 4th test

ಲಂಡನ್, ಆಗಸ್ಟ್ 30: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡು ತಂಡಗಳು ಕೂಡ ಈಗ ತಲಾ ಒಂದು ಪಂದ್ಯಗಳನ್ನು ಗೆದ್ದಿದೆ. ಈ ಮೂಲಕ ಸರಣಿ ಈಗ ಕುತೂಹಲಕಾರಿ ಘಟ್ಟವನ್ನು ತಲುಪಿದ್ದು ನಾಲ್ಕನೇ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಲಂಡನ್‌ನ ಕನ್ನಿಂಗ್ಟನ್ ಓವಲ್‌ನಲ್ಲಿ ನಾಲ್ಕನೇ ಪಂದ್ಯ ನಡೆಯಲಿದ್ದು ಎರಡು ತಂಡಗಳ ಆಟಗಾರರು ಕೂಡ ಈಗ ಲಂಡನ್ ತಲುಪಿದ್ದಾರೆ.

ಲೀಡ್ಸ್‌ನ ಹೆಡಿಂಗ್ಲೆ ಮೈದಾನದಲ್ಲಿ ನಡೆದ ಸರಣಿಯ ಮೂರನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಹೀನಾಯ ಪ್ರದರ್ಶನ ನೀಡುವ ಮೂಲಕ ಆಘಾತಕಾರಿ ರೀತಿಯಲ್ಲಿ ಇನ್ನಿಂಗ್ಸ್ ಅಂತರದಿಂದ ಸೋಲು ಕಂಡಿತ್ತು. ಇದೀಗ ಟೀಮ್ ಇಂಡಿಯಾ ಮತ್ತೆ ಅದ್ಭುತವಾದ ಪ್ರದರ್ಶನದ ಮೂಲಕ ಕಮ್‌ಬ್ಯಾಕ್ ಮಾಡಬೇಕಿದ್ದು ಅದಕ್ಕೆ ಬೇಕಾದ ಆತ್ಮವಿಶ್ವಾಸ ವಿರಾಟ್ ಪಡೆಯಲ್ಲಿದೆ. ಆದರೆ ಕಳೆದ ಮೂರು ಪಂದ್ಯಗಳಲ್ಲಿ ಮಹತ್ವದ ಯಾವುದೇ ಬದಲಾವಣೆ ಮಾಡಿಕೊಳ್ಳದ ಭಾರತ ತಂಡ ಅಂತಿಮ ಪಂದ್ಯದಲ್ಲಿ ಕೆಲ ಬದಲಾವಣೆಗಳನ್ನು ಅನಿವಾರ್ಯವಾಗಿ ಮಾಡಿಕೊಳ್ಳಬೇಕಿದೆ.

ಫ್ಯಾರಾಲಿಂಪಿಕ್ಸ್: ಪದಕ ಗೆದ್ದ ನಿಶಾದ್, ವಿನೋದ್ ಹಿಂದಿನ ಸ್ಪೂರ್ತಿಯ ಕಥೆ!ಫ್ಯಾರಾಲಿಂಪಿಕ್ಸ್: ಪದಕ ಗೆದ್ದ ನಿಶಾದ್, ವಿನೋದ್ ಹಿಂದಿನ ಸ್ಪೂರ್ತಿಯ ಕಥೆ!

ನಾಲ್ವರು ವೇಗಿಗಳೊಂದಿಗೆ ಕಣಕ್ಕೆ

ನಾಲ್ವರು ವೇಗಿಗಳೊಂದಿಗೆ ಕಣಕ್ಕೆ

ಈ ಬಾರಿಯ ಇಂಗ್ಲೆಂಡ್ ಸರಣಿಯಲ್ಲಿ ಭಾರತ ನಾಲ್ಕು ವೇಗಿಗಳು ಹಾಗೂ ಓರ್ವ ಸ್ಪಿನ್ನರ್‌ ಕಣಕ್ಕಿಳಿಯುವ ನಿರ್ಧಾರವನ್ನು ಮಾಡಿದ್ದು. ಟೀಮ್ ಇಂಡಿಯಾದ ಈ ನಿರ್ಧಾರದಿಂದಾಗಿ ತಂಡ ಯಶಸ್ಸನ್ನು ಕೂಡ ಸಾಧಿಸಿದೆ. ಇಂಗ್ಲೆಂಡ್‌ನ ನೆಲದಲ್ಲಿ ಭಾರತೀಯ ವೇಗಿಗಳು ಉತ್ತಮ ಆಟವನ್ನು ಪ್ರದರ್ಶಿಸುವ ಮೂಲಕ ಹೆಚ್ಚುನ ಸಂದರ್ಭದಲ್ಲಿ ಮೇಲುಗೈ ಒದಗಿಸಿದ್ದಾರೆ. ಮೊದಲ ಪಂದ್ಯದಲ್ಲಿ ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದ ಶಾರ್ದೂಲ್ ಠಾಕೂರ್ ಎರಡನೇ ಪಂದ್ಯಕ್ಕೂ ಮುನ್ನ ಗಾಯಗೊಂಡ ಕಾರಣದಿಂದಾಗಿ ಇಶಾಂತ್ ಶರ್ಮಾ ಎರಡನೇ ಪಂದ್ಯದಲ್ಲಿ ಆಡುವ ಅವಕಾಶ ಪಡೆದರು. ಈ ಅವಕಾಶವನ್ನು ಬಳಸಿಕೊಂಡ ಶರ್ಮಾ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿ ಮಿಂಚಿದ್ದರು. ಲಾರ್ಡ್ಸ್ ಅಂಗಳದಲ್ಲಿ ಟೀಮ್ ಇಂಡಿಯಾ ಎರಡನೇ ಪಂದ್ಯವನ್ನು ಗೆದ್ದು ಬೀಗಿತ್ತು. ಹೀಗಾಗಿ ನಾಲ್ಕನೇ ಪಂದ್ಯದಲ್ಲಿ ಯಾವುದೇ ಬದಲಾವನೆ ಮಾಡದೆಯೇ ತಂಡವನ್ನು ಉಳಿಸಿಕೊಂಡಿದ್ದರು ನಾಯಕ ವಿರಾಟ್ ಕೊಹ್ಲಿ

ಬದಲಾವಣೆಯ ಸುಳಿವು ನೀಡಿದ ಕೊಹ್ಲಿ

ಬದಲಾವಣೆಯ ಸುಳಿವು ನೀಡಿದ ಕೊಹ್ಲಿ

ಇನ್ನು ಮೂರನೇ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲು ಕಂಡ ಬಳಿಕ ನಾಯಕ ವಿರಾಟ್ ಕೊಹ್ಲಿ ಮಾಧ್ಯಮ ಸಂವಾದಲ್ಲಿ ಭಾಗಿಯಾಗಿ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಬದಲಾವನೆ ಮಾಡುವ ಸುಳಿವನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ಆಟಗಾರರ ಮೇಲಿರುವ ವರ್ಕ್‌ಲೋಡ್‌ಅನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಪಂದ್ಯದಲ್ಲಿ ಕಣಕ್ಕಿಳಿಯುವುದಾಗಿ ತಿಳಿಸಿದ್ದರು. ವಿರಾಟ್ ಕೊಹ್ಲಿ ಆಡಿದ ಈ ಮಾತು ತಂಡದ ಅನುಭವಿ ಆಟಗಾರನಾಗಿರುವ ಇಶಾಂತ್ ಶರ್ಮಾಗೆ ವಿಶ್ರಾಂತಿ ನೀಡುವ ಸುಳಿವನ್ನು ನೀಡುತ್ತಿದೆ. ಈ ಮೂಲಕ ಓವಲ್ ಮೈದಾನದಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್‌ನಲ್ಲಿ ಇಶಾಂತ್ ಶರ್ಮಾ ಆಡಲಿಳಿಯುವುದು ಅನುಮಾನವೆನಿಸಿದೆ.

ಇಶಾಂತ್ ಶರ್ಮಾ ಹೊರಗುಳಿಯುವುದು ನಿಶ್ಚಿತ!

ಇಶಾಂತ್ ಶರ್ಮಾ ಹೊರಗುಳಿಯುವುದು ನಿಶ್ಚಿತ!

ಇನ್ನು ಟೀಮ್ ಇಂಡಿಯಾದ ಅನುಭವಿ ವೇಗಿಯಾಗಿರುವ ಇಶಾಂತ್ ಶರ್ಮಾ ಹೆಡಿಂಗ್ಲೆಯಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಹೊಸ ಚೆಂಡಿನೊಂದಿಗೆ ಕಣಕ್ಕಿಳಿದಿದ್ದರು. ಆದರೆ ಇಶಾಂತ್ ಶರ್ಮಾ ಹೆಡಿಂಗ್ಲೆ ಅಂಗಳದಲ್ಲಿ ಪರಿಣಾಮಕಾರಿಯಾಗಿರಲಿಲ್ಲ. ಒಂದೇ ಒಂದು ವಿಕೆಟ್ ಪಡೆಯಲು ಕೂಡ ಇಶಾಂತ್ ಶರ್ಮಾಗೆ ಸಾಧ್ಯವಾಗಿರಲಿಲ್ಲ. ಅಲ್ಲದೆ 4.20 ಎಕಾನಮಿಯಲ್ಲಿ ಶರ್ಮಾ ರನ್ ಬಿಟ್ಟುಕೊಟ್ಟಿದ್ದರು. ಹೀಗಾಗಿ ಸರಣಿ ನಿರರ್ಣಾಯಕ ಘಟ್ಟಕ್ಕೆ ಬಂದಿರುವ ಈ ಸಂದರ್ಭದಲ್ಲಿ ಇಶಾಂತ್ ಶರ್ಮಾಗೆ ವಿಶ್ರಾಂತಿ ನೀಡುವ ಸಾಧ್ಯತೆ ಹೆಚ್ಚಿದೆ.

ಆರ್‌ ಅಶ್ವಿನ್‌ಗೆ ಅವಕಾಶ ದೊರೆಯುವ ಸಾಧ್ಯತೆ

ಆರ್‌ ಅಶ್ವಿನ್‌ಗೆ ಅವಕಾಶ ದೊರೆಯುವ ಸಾಧ್ಯತೆ

ಇನ್ನು ಭಾರತದ ಅನುಭವಿ ಸ್ಪಿನ್ನರ್ ಆಗಿರುವ ಆರ್ ಅಶ್ವಿನ್ ಅಚ್ಚರಿಯೆಂಬಂತೆ ಈ ಬಾರಿಯ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಆರಂಭಿಕ ಮೂರು ಪಂದ್ಯಗಳಲ್ಲಿಯೂ ಆರ್ ಅಶ್ವಿನ್ ಆಡುವ ಅವಕಾಶವನ್ನು ಪಡೆಯುವಲ್ಲಿ ವಿಫಲವಾಗಿದ್ದಾರೆ. ಆರ್ ಅಶ್ವಿನ್‌ಗೆ ಅವಕಾಶ ನೀಡಬೇಕೆಂದಯ ಟೀಮ್ ಇಂಡಿಯಾ ಅಭಿಮಾನಿಗಳು ಹಾಗೂ ಅನೇಕ ವಿಶ್ಲೇಷಕರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಆದರೆ ಟೀಮ್ ಮ್ಯಾನೇಜ್‌ಮೆಂಟ್ ಈ ಬಗ್ಗೆ ಒಲವು ವ್ಯಕ್ತಪಡಿಸಿರಲಿಲ್ಲ. ಆದರೆ ಅಂತಿಮ ಎರಡು ಪಂದ್ಯಗಳಿರುವವಾಗ ಆರ್ ಅಶ್ವಿನ್‌ಗೆ ಆಡುವ ಅವಕಾಶ ದೊರೆಯುವ ಸಾಧ್ಯತೆ ಹೆಚ್ಚಿದೆ. ಬೌಲಿಂಗ್‌ನಲ್ಲಿ ಹಾಗೂ ಬ್ಯಾಟಿಂಗ್ ಎರಡಲ್ಲಿಯೂ ಕೊಡುಗೆ ನೀಡುವ ಸಾಮರ್ಥ್ಯವನ್ನು ಹೊಂದಿರುವ ಅಶ್ವಿನ್ ತಂಡಕ್ಕೆ ಹೆಚ್ಚಿನ ಬಲ ನೀಡುವುದರಲ್ಲಿ ಅನುಮಾನವಿಲ್ಲ.

ಟೀಮ್ ಇಂಡಿಯಾ ನೆಕ್ಸ್ಟ್ ಮ್ಯಾಚ್ ಗೆಲ್ಲಬೇಕಂದ್ರೆ KL ರಾಹುಲ್ ಬದ್ಲಿಗೆ ಈತ ಇರ್ಬೇಕು | Oneindia Kannada
ಕೌಂಟಿಯಲ್ಲಿ ಆಡಿ ಸಿದ್ಧತೆ ನಡೆಸಿದ್ದ ಆರ್ ಅಶ್ವಿನ್

ಕೌಂಟಿಯಲ್ಲಿ ಆಡಿ ಸಿದ್ಧತೆ ನಡೆಸಿದ್ದ ಆರ್ ಅಶ್ವಿನ್

ಇನ್ನು ಟೀಮ್ ಇಂಡಿಯಾದ ಈ ಅನುಭವಿ ಆಟಗಾರ ಈ ಸರಣಿಯ ಆರಂಭಕ್ಕೂ ಮುನ್ನ ಸುದೀರ್ಘ ವಿಶ್ರಾಂತಿಯ ಅವಧಿಯನ್ನು ಉತ್ತಮವಾಗಿ ಬಳಸಿಕೊಂಡಿದ್ದಾರೆ. ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್‌ನಲ್ಲಿ ಆಡುವ ಮೂಲಕ ಆರ್ ಅಶ್ವಿನ್ ಸರಣಿಗೆ ಸಿದ್ಧತೆನ್ನು ನಡೆಸಿದ್ದರು. ಸಸ್ಸೆಕ್ಸ್ ತಂಡದ ಪರವಾಗಿ ಆರ್ ಅಶ್ವಿನ್ ಆಡಿ ಉತ್ತಮ ತಯಾರಿಯನ್ನು ನಡೆಸಿದ್ದಾರೆ. ಇನ್ನು ಇಂಗ್ಲೆಂಡ್ ತಂಡದ ವಿರುದ್ಧ ಈ ವರ್ಷದ ಆರಂಭದಲ್ಲಿ ಭಾರತದಲ್ಲಿ ನಡೆದಿದ್ದ ಸರಣಿಯಲ್ಲಿಯೂ ಆರ್ ಅಶ್ವಿನ್ ಅದ್ಭುತವಾದ ಪ್ರದರ್ಶನ ನೀಡಿ ಮಿಂಚಿದ್ದರು. ಸರಣಿಯಲ್ಲಿ ಒಟ್ಟು 32 ವಿಕೆಟ್ ಪಡೆಯುವ ಮೂಲಕ ಆರ್ ಅಶ್ವಿನ್ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ತನ್ನ ಎಸೆತದಲ್ಲಿರುವ ಹೆಚ್ಚಿನ ವೇಗ ಹಾಗೂ ಸ್ಪಿನ್ ಮೂಲಕ ಎದುರಾಳಿ ಪಾಲಿಗೆ ಅಪಾಕಾರಿಯಾಗಬಲ್ಲ ಸಾಮರ್ಥ್ಯವನ್ನು ಅಶ್ವಿನ್ ಹೊಂದಿದ್ದಾರೆ. ಇದರ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ಅನಿವಾರ್ಯ ಸಂದರ್ಭಗಳಲ್ಲಿ ಕೆಚ್ಚೆದೆಯ ಪ್ರದರ್ಶನ ನೀಡುವ ಮೂಲಕ ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗ್‌ನಲ್ಲಿಯೂ ತಂಡಕ್ಕೆ ನೆರವಾಗಬಲ್ಲರು.

ತಂಡದ ಸಂಯೋಜನೆಯ ಸವಾಲು

ತಂಡದ ಸಂಯೋಜನೆಯ ಸವಾಲು

ಟೀಮ್ ಇಂಡಿಯಾದಲ್ಲಿ ನಾಲ್ಕನೇ ಟೆಸ್ಟ್‌ನಲ್ಲಿ ತಂಡದಲ್ಲಿ ಯಾವ ರೀತಿಯ ಸಂಯೋಜನೆಯೊಂದಿಗೆ ಕಣಕ್ಕಿಳಿಯಬೇಕು ಎಂಬುದು ದೊಡ್ಡ ಸವಾಲಾಗಿದೆ. ಪ್ರಮುಖವಾಗಿ ನಾಲ್ವರು ವೇಗಿಗಳು ಹಾಗೂ ಓರ್ವ ಸ್ಪಿನ್ನರ್ ಜೊತೆಗೆ ಕಣಕ್ಕಿಳಿಯಬೇಕಾ ಅಥವಾ ಇಬ್ಬರು ಸ್ಪಿನ್ನರ್‌ ಹಾಗೂ ಮೂವರು ವೇಗಿಗಳೊಂದಿಗೆ ಕಣಕ್ಕಿಳಿಬೇಕಾ ಎಂಬುದು ತಂಡದ ಮುಂದಿರುವ ದೊಡ್ಡ ಸವಾಲು. ಇನ್ನು ಭಾರತದ ಬ್ಯಾಟಿಂಗ್‌ನಲ್ಲಿ ವೈಫಲ್ಯ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಐವರು ಬೌಲರ್‌ಗಳ ಬದಲಿಗೆ ಹೆಚ್ಚುವರಿ ಬ್ಯಾಟ್ಸ್‌ಮನ್‌ನನ್ನು ಆಡುವ ಬಳಗಕ್ಕೆ ಸೇರಿಸಿಕೊಳ್ಳಬೇಕು ಎಂಬ ಅಭಿಪ್ರಾಯಗಳು ಕೂಡ ಜೋರಾಗಿ ವ್ಯಕ್ತವಾಗುತ್ತಿದೆ. ಹೀಗಾಗಿ ತಂಡದ ಆಯ್ಕೆಯ ಬಗ್ಗಡ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲ ಮೂಡಿಸಿದೆ.

Story first published: Monday, August 30, 2021, 14:30 [IST]
Other articles published on Aug 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X