ವಿಶ್ವಕಪ್ 2019: ಸದ್ದಿಲ್ಲದೆ ವಿಶ್ವದಾಖಲೆ ಬರೆದ ಕೂಲ್ ಕ್ಯಾಪ್ಟನ್ ಧೋನಿ

ಮ್ಯಾಂಚೆಸ್ಟರ್, ಜುಲೈ 9: ಐಸಿಸಿ ವಿಶ್ವಕಪ್‌ 2019ರಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಅವರು ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್‌ಪ್ರೀತ್ ಬೂಮ್ರಾ ಅಥವಾ ಮೊಹಮ್ಮದ್ ಶಮಿಯಂತೆ ಹೆಚ್ಚು ಗಮನ ಸೆಳೆಯಲಿಲ್ಲ ನಿಜ. ಆದರೆ ಮ್ಯಾಂಚೆಸ್ಟರ್ ಪಂದ್ಯದಲ್ಲಿ ಕೂಲ್ ಕ್ಯಾಪ್ಟನ್ ಅಪರೂಪದ ವಿಶ್ವದಾಖಲೆಗೆ ಕಾರಣರಾಗಿದ್ದಾರೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ಮಂಗಳವಾರ (ಜುಲೈ 9) ನಡೆದ ವಿಶ್ವಕಪ್ ಸೆಮಿಫೈನಲ್ ಮೊದಲ ಪಂದ್ಯದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಕಣಕ್ಕಿಳಿದಿತ್ತು. ಪಂದ್ಯಕ್ಕಾಗಿ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಬದಲು ಲೆಗ್ ಸ್ಪಿನ್ನರ್ ಯುಜುವೇಂದ್ರ ಚಾಹಲ್‌ಗೆ ಸ್ಥಾನ ನೀಡಲಾಗಿತ್ತು. ಧೋನಿ 6ನೇ ಕ್ರಮಾಂಕದಲ್ಲಿ ಕಾಣಿಸಿಕೊಂಡಿದ್ದರು.

ನ್ಯೂಜಿಲೆಂಡ್ vs ಭಾರತ, ಸೆಮಿಫೈನಲ್ 1, ಜುಲೈ 9, Live ಸ್ಕೋರ್‌ಕಾರ್ಡ್

1
43689

ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾದ ರಾಹುಲ್ ದ್ರಾವಿಡ್ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾದ ರಾಹುಲ್ ದ್ರಾವಿಡ್

ನ್ಯೂಜಿಲೆಂಡ್ vs ಭಾರತ ಸೆಮಿಪೈನಲ್ ಪಂದ್ಯದಲ್ಲಿ ಧೋನಿ ಆಡಿದ್ದೇ ದಾಖಲೆಗೆ ಕಾರಣವಾಗಿದೆ. ಯಾಕೆಂದರೆ ಇದು ಮಾಹಿಯ 350ನೇ ಅಂತಾರಾಷ್ಟ್ರೀಯ ಏಕದಿನ ಪಂದ್ಯ. ಈ ಸಾಧನೆಯಿಂದ ಧೋನಿ 350 ಏಕದಿನ ಪಂದ್ಯಗಳನ್ನಾಡಿದ ಭಾರತದ ಎರಡನೇ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ. ಈ ಮೈಲಿಗಲ್ಲು ಮೊದಲು ಸ್ಥಾಪಿಸಿದ್ದು ಸಚಿನ್ ತೆಂಡೂಲ್ಕರ್.

ಬುಮ್ರಾ ಬೌಲಿಂಗ್‌ ಬಗ್ಗೆ ಡೇನಿಯಲ್‌ ವೆಟೊರಿ ಹೇಳಿದ್ದೇನು ಗೊತ್ತಾ?ಬುಮ್ರಾ ಬೌಲಿಂಗ್‌ ಬಗ್ಗೆ ಡೇನಿಯಲ್‌ ವೆಟೊರಿ ಹೇಳಿದ್ದೇನು ಗೊತ್ತಾ?

ಮಂಗಳವಾರದ ಪಂದ್ಯಕ್ಕೂ ಮುನ್ನ ಧೋನಿ ಸುಮಾರು 349 ಏಕದಿನ ಪಂದ್ಯಗಳನ್ನಾಡಿದ್ದರು. ಇದರಲ್ಲಿ 346 ಪಂದ್ಯಗಳನ್ನು ಭಾರತವನ್ನು, 3 ಪಂದ್ಯಗಳನ್ನು ಏಷ್ಯಾ XI ಅನ್ನು ಪ್ರತಿನಿಧಿಸಿದ್ದರು. ಅಂತೂ ಧೋನಿಯೀಗ 350ನೇ ಪಂದ್ಯವನ್ನಾಡಿದ ವಿಶ್ವದ 10ನೇ ಆಟಗಾರರಾಗಿ ಗುರುತಿಸಿಕೊಂಡಿದ್ದಾರೆ.

ಇಂಗ್ಲೆಂಡ್‌ ವಿರುದ್ಧದ ಸೆಮಿಫೈನಲ್ಸ್‌ಗೆ ಬ್ಯಾಟಿಂಗ್‌ ಬಲ ಹೆಚ್ಚಿಸಿದ ಆಸೀಸ್‌!ಇಂಗ್ಲೆಂಡ್‌ ವಿರುದ್ಧದ ಸೆಮಿಫೈನಲ್ಸ್‌ಗೆ ಬ್ಯಾಟಿಂಗ್‌ ಬಲ ಹೆಚ್ಚಿಸಿದ ಆಸೀಸ್‌!

ಅತೀ ಹೆಚ್ಚು ಏಕದಿನ ಪಂದ್ಯಗಳನ್ನಾಡಿದ ಹೆಗ್ಗಳಿಕೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರದ್ದು. ತೆಂಡೂಲ್ಕರ್ ಒಟ್ಟು 463 ಪಂದ್ಯಗಳನ್ನಾಡಿದ್ದಾರೆ. ಧೋನಿ ಒಟ್ಟು 296 ಏಕದಿನ ಇನ್ನಿಂಗ್ಸ್‌ಗಳಲ್ಲಿ 183 ಅತ್ಯಧಿಕ ರನ್ ಸೇರಿ 10,723 ರನ್ ಬಾರಿಸಿದ್ದಾರೆ. ಅಂದ್ಹಾಗೆ ಏಕದಿನ ಕ್ರಿಕೆಟ್‌ನಲ್ಲಿ 350 ಪಂದ್ಯಗಳನ್ನಾಡಿದ ವಿಶ್ವದ ಮೊದಲ ವಿಕೆಟ್ ಕೀಪರ್ ಧೋನಿ!.

ವಿಶ್ವಕಪ್ 2019 ಲೀಗ್ ಹಂತದ ನಂತರ ರೋಹಿತ್, ಸ್ಟಾರ್ಕ್ ಮಿಂಚಿಂಗ್ವಿಶ್ವಕಪ್ 2019 ಲೀಗ್ ಹಂತದ ನಂತರ ರೋಹಿತ್, ಸ್ಟಾರ್ಕ್ ಮಿಂಚಿಂಗ್

350+ ಏಕದಿನ ಪಂದ್ಯಗಳನ್ನಾಡಿದವರಲ್ಲಿ 2ರಿಂದ 9ನೇ ಸ್ಥಾನಗಳಲ್ಲಿ ಶ್ರೀಲಂಕಾದ ಮಹೇಲ ಜಯವರ್ಧನ (448), ಸನತ್ ಜಯಸೂರ್ಯ (445), ಕುಮಾರ ಸಂಗಕ್ಕಾರ (404), ಪಾಕಿಸ್ತಾನದ ಶಾಹಿದ್ ಅಫ್ರಿದಿ (398), ಇಂಜಮಾಮ್-ಉಲ್-ಹಕ್ (378), ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ (375), ಪಾಕ್‌ನ ವಾಸಿಮ್ ಅಕ್ರಮ್ (356) ಮತ್ತು ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ (350) ಇದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Tuesday, July 9, 2019, 15:59 [IST]
Other articles published on Jul 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X