ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ವಿಕ್ರಮ ಕೊಂಡಾಡಿದ ಕನ್ನಡ ದಿನಪತ್ರಿಕೆಗಳು

ಬೆಂಗಳೂರು, ಫೆ.16: ಪಾಕಿಸ್ತಾನದ ವಿರುದ್ಧ ಭಾರತ ಗೆದ್ದಿದ್ದನ್ನು ಪಟಾಕಿ ಸಿಡಿಸಿ ಸಂಭ್ರಮಿಸಿದವರಿಗೆ ಲೆಕ್ಕವಿಲ್ಲ. ಸಿಹಿ ಹಂಚಿ ಹಬ್ಬ ಮಾಡಿದವರಿಗೂ ಕಡಿಮೆಯಿಲ್ಲ. ಗೆಲುವಿನ ಸಂಭ್ರಮವನ್ನು ಭಾನುವಾರವಿಡೀ ಭಾರತದ ನಾಗರಿಕರು ಆಚರಿಸಿದರು.

ಇತ್ತ ಕನ್ನಡದ ದಿನಪತ್ರಿಕೆಗಳಲ್ಲೂ ತರೇವಾರಿ ಶೀರ್ಷಿಕೆಗಳು ಒಡಮೂಡಿದವು. ಸತತವಾಗಿ ವಿಶ್ವಕಪ್ ನಲ್ಲಿ ಆರನೇ ಸಾರಿ ಗೆದ್ದ ಭಾರತದ ಪರಾಕ್ರಮವನ್ನೇ ಪ್ರಮುಖ ಪತ್ರಿಕೆಗಳು ತಮ್ಮ ಹೆಡ್ ಲೈನ್ ಗಳಲ್ಲಿ ಬಳಸಿಕೊಂಡವು. ವಿರಾಟ್ ಕೊಹ್ಲಿ ಪರಾಕ್ರಮವನ್ನು ಕೊಂಡಾಡಿದವು.[ಚಿತ್ರಗಳಲ್ಲಿ: ಪಾಕ್ ಬಗ್ಗು ಬಡಿದ ಆ ಕ್ಷಣ... ರೋಮಾಂಚನ]

ಬಹುತೇಕ ಪತ್ರಿಕೆಗಳು ಮುಖಪುಟದಲ್ಲೇ ಪಂದ್ಯದ ಫಲಿತಾಂಶ ಸಾರುವ ವರದಿ ಪ್ರಕಟಮಾಡಿದವು. ಅವುಗಳನ್ನೆಲ್ಲ ಒಗ್ಗೂಡಿಸಿ ನಿಮ್ಮ ಮುಂದಿಡುವ ಪ್ರಯತ್ನ ಮಾಡುತ್ತಿದ್ದೇವೆ.

ಉದಯವಾಣಿ

ಉದಯವಾಣಿ

ವಿರಾಟ್ ಕೊಹ್ಲಿ ಶತಕ ಸಾಧನೆಯೇ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು ಎಂಬುದನ್ನು ಬಿಂಬಿಸಿದ ಉದಯವಾಣಿ 'ವಿರಾಟ್ ಶಕ್ತಿಗೆ ಮಣಿದ ಪಾಕ್' ಎಂಬ ತಲೆಬರಹದಡಿ ಭಾರತ ಪಾಕ್ ಪಂದ್ಯದ ಫಲಿತಾಂಶ ನೀಡಿತು.

ವಿಜಯ ಕರ್ನಾಟಕ

ವಿಜಯ ಕರ್ನಾಟಕ

'ಆರರಲ್ಲಿ ಆರು ನಮ್ಮದೇ ದರ್ಬಾರು' ಎಂಬ ಪ್ರಾಸಉಳ್ಳ ತಲೆಬರಹ ನೀಡಿದ್ದು ವಿಜಯ ಕರ್ನಾಟಕ. ಇಲ್ಲಿ ಸಹ ವಿರಾಟ್ ಕೊಹ್ಲಿ ಶತಕ ಸಾಧನೆಯನ್ನೇ ಹೈಲೈಟ್‌ ಮಾಡಲಾಯಿತು.

ವಿಜಯವಾಣಿ

ವಿಜಯವಾಣಿ

ಅಡಿಲೇಡ್ ನಲ್ಲೂ ಅಜೇಯ ಭಾರತ ಎಂಬ ತಲೆಬರಹದ ಮೂಲಕ ಹಿಂದಿನ ಇತಿಹಾಸವನ್ನು ಸೇರಿಸಿ ಭಾರತಕ್ಕೆ ಸೋಲಿಲ್ಲ ಎಂಬುದನ್ನು ಸಾರಿದ ವಿಜಯವಾಣಿ.

ಕನ್ನಡಪ್ರಭ

ಕನ್ನಡಪ್ರಭ

'ಬದಲಾಗದ ಇತಿಹಾಸ' ಎಂಬ ತಲೆಬರಹದ ಮೂಲಕ ಪಂದ್ಯದ ಫಲಿತಾಂಶವ ವರದಿ ನೀಡಿದ ಕನ್ನಡ ಪ್ರಭ ಟ್ವೀಟ್ ಗಳನ್ನು ಬಳಸಿಕೊಂಡಿತು.

ಪ್ರಜಾವಾಣಿ

ಪ್ರಜಾವಾಣಿ

ಮೂರು ಪ್ರಮುಖ ಫೋಟೋಗಳನ್ನು ಬಳಸಿಕೊಂಡ ಪ್ರಜಾವಾಣಿ ಪಂದ್ಯದ ಸಂಪೂರ್ಣ ಫಲಿತಾಂಶವನ್ನು ನೀಡಿತು.

ಸಂಯುಕ್ತ ಕರ್ನಾಟಕ

ಸಂಯುಕ್ತ ಕರ್ನಾಟಕ

ಗೆಲುವಿನ ಸಿಕ್ಸರ್ ಎಂಬ ತಲೆಬರಹದ ಮೂಲಕ ಸತತವಾಗಿ ಆರನೇ ಸಾರಿ ಗೆದ್ದಿದ್ದನ್ನು ವಿವರಿಸಿದ ಸಂಯುಕ್ತ ಕರ್ನಾಟಕ.

ವಾರ್ತಾಭಾರತಿ

ವಾರ್ತಾಭಾರತಿ

ಶಮಿ ದಾಳಿಗೆ ಪಾಕ್ ಪಂಕ್ಚರ್ ಎಂಬ ತಲೆಬರಹದ ಮುಖೇನ ವಾರ್ತಾ ಭಾರತಿ ನಾಲ್ಕು ವಿಕೆಟ್ ಪಡೆದು ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ವೇಗದ ಬೌಲರ್ ಸಾಧನೆಯನ್ನು ಕೊಂಡಾಡಿತು.

Story first published: Wednesday, January 3, 2018, 10:12 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X