ಕೇಪ್ ಟೌನ್ ಟೆಸ್ಟ್ ಮೇಲೆ ಬೆಟ್ಟಿಂಗ್, ಬೆಂಗಳೂರಿನಲ್ಲಿ ಒಬ್ಬನ ಬಂಧನ

Posted By:

ಬೆಂಗಳೂರು, ಜನವರಿ 07: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಕೇಪ್ ಟೌನಿನಲ್ಲಿ ನಡೆದಿರುವ ಮೊದಲ ಟೆಸ್ಟ್ ಪಂದ್ಯದ ಮೇಲೆ ಬಾಜಿ ಕಟ್ಟಿ, ಬೆಟ್ಟಿಂಗ್ ದಂಧೆ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ತಿಲಕನಗರದಲ್ಲಿ ಬಂಧಿಸಲಾಗಿದೆ.

ತಿಲಕನಗರ ಪೊಲೀಸ್ ಠಾಣಾ ಸರಹದ್ದಿನ ಶಾಂತಿ ಪಾರ್ಕ್ ಅಪಾರ್ಟಮೆಂಟ್ ನಂ-07 ರಲ್ಲಿನ ಮನೆ ನಂ 106 ರ ಮನೆಯಲ್ಲಿ ವಾಸವಾಗಿರುವ ಪ್ರೇಮ್ ಅಖೀಜ ಎಂಬ ವ್ಯಕ್ತಿಯು ಕ್ರಿಕೆಟ್ ಬೆಟ್ಟಿಂಗ್ ಜಾಲದಲ್ಲಿ ತೊಡಗಿ ಬಂಧಿತನಾಗಿರುವ ಆರೋಪಿ.

ಭಾರತ ಮತ್ತು ದಕ್ಷಿಣ ಆಫ್ರಿಕಾ ದೇಶಗಳ ನಡುವೆ ದಕ್ಷಿಣ ಆಫ್ರಿಕಾ ಕೇಪ್ ಟೌನಿನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಕ್ರಿಕೆಟ್ ಪಂದ್ಯದ ಸೋಲು ಗೆಲುವಿನ ಬಗ್ಗೆ ಸಾರ್ವಜನಿಕರಿಂದ ಹಣವನ್ನು ಪಣವಾಗಿ ಕಟ್ಟಿಸಿಕೊಂಡು ಕ್ರಿಕೆಟ್ ಬೆಟ್ಟಿಂಗ್ ಎಂಬ ಅದೃಷ್ಟದ ಜೂಜಾಟ ಆಡುತ್ತಿದ್ದ.

India vs South Africa tie: One held in betting racket in Tilak Nagar

ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಕೇಂದ್ರ ಅಪರಾಧ ವಿಭಾಗ (ಸಿ.ಸಿ.ಬಿ) ವಿಶೇಷ ವಿಚಾರಣಾ ವಿಭಾಗದ ಪೊಲೀಸರು ಮೇಲ್ಕಂಡ ಸ್ಥಳದ ಮೇಲೆ ಕಾರ್ಯಾಚರಣೆ ನಡೆಸಿ, ಜೂಜಾಟದಲ್ಲಿ ತೊಡಗಿದ್ದ ಪ್ರೇಮ್ ಅಖೀಜ (42 ವರ್ಷ) ಎಂಬುವವನ್ನು ವಶಕ್ಕೆ ಪಡೆದಿದ್ದಾರೆ.

ಪ್ರೇಮ್ ಅಖೀಜ ವಶದಿಂದ ಜೂಜಾಟಕ್ಕೆ ಸಂಬಂಧಪಟ್ಟ ನಗದು ಹಣ 42,000/- ರೂ, ಒಂದು ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದಾರೆ. ಪ್ರೇಮ್ ಅಖೀಜ ವಿರುದ್ದ ತಿಲಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಜಾರಿಯಲ್ಲಿದೆ.

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, January 7, 2018, 13:11 [IST]
Other articles published on Jan 7, 2018

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ