ಭಾರತ vs ಶ್ರೀಲಂಕಾ: ನಾಯಕನಾಗಿ ಮೊದಲ ಬಾರಿಗೆ ಟಾಸ್ ಗೆದ್ದ ಧವನ್ ಸಂಭ್ರಮಿಸಿದ್ದು ಹೀಗೆ: ವಿಡಿಯೋ

Rahuld Dravid ಪಂದ್ಯಕ್ಕೂ ಮುನ್ನ ಪಿಚ್ ಮದ್ಯೆ ಕಂಡಿದ್ದು ಹೀಗೆ | Oneindia Kannada

ಕೊಲಂಬೋ, ಜುಲೈ 23: ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯ ಇಂದು ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿದೆ. ಟಾಸ್ ಪ್ರಕ್ರಿಯೆಯ ಸಂದರ್ಭದಲ್ಲಿ ಭಾರತ ತಂಡದ ನಾಯಕ ಶಿಖರ್ ಧವನ್ ಟಾಸ್ ಗೆದ್ದಾಗ ಸಂಭ್ರಮಿಸಿದ್ದು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿಯೂ ಧವನ್ ಟಾಸ್ ಸೋತಿದ್ದರು. ಆದರೆ ಮೂರನೇ ಪಂದ್ಯದಲ್ಲಿ ಇದೇ ಮೊದಲ ಬಾರಿಗೆ ಧವನ್ ಟಾಸ್ ಗೆದ್ದಿದ್ದರು. ಧವನ್ ಟಾಸ್ ಗೆದ್ದಿರುವುದುದನ್ನು ಘೋಷಿಸುತ್ತಿದ್ದಂತೆಯೇ ಅವರ ಪ್ರತಿಕ್ರಿಯೆ ಎಲ್ಲರಲ್ಲಿಯೂ ನಗು ಮೂಡಿಸಿತ್ತು.

ಟಾಸ್ ಗೆದ್ದ ತಕ್ಷಣವೇ ಶಿಖರ್ ಧವನ್ ತಮ್ಮ ಟ್ರೇಡ್‌ಮಾರ್ಕ್‌ ಸಂಭ್ರಮಾಚನೆಯನ್ನು ಮಾಡಿದರು. ಕಬಡಿ ಶೈಲಿಯಲ್ಲಿ ತೊಡೆತಟ್ಟಿ ಕೈಮೇಲೆತ್ತಿದರು. ಶಿಖರ್ ಧವನ್ ಅವರ ಈ ತಕ್ಷಣದ ಪ್ರತಿಕ್ರಿಯೆಗೆ ಕಾಮೆಂಟೇಟರ್‌ಗಳು ಕೂಡ ನಗೆಗಡಲಲ್ಲಿ ತೇಲಿದರು. ಮೊದಲ ಬಾರಿಗೆ ಟಾಸ್ ಗೆದ್ದ ಧವನ್ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಇನ್ನು ಶಿಖರ್ ಧವನ್ ಟಾಸ್ ವೇಳೆ ಹೀಗೆ ಸಂಭ್ರಮಿಸಿದ್ದು ಮಾತ್ರವೇ ಸುದ್ದಿಯಾಗಲಿಲ್ಲ. ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾದಲ್ಲಿ ಒಟ್ಟು ಆರು ಬದಲಾವಣೆ ಮಾಡಿರುವುದು ಕೂಡ ಅಚ್ಚರಿ ಮೂಡಿಸಿತ್ತು, ಇದರಲ್ಲಿ ಐವರು ಕ್ರಿಕೆಟಿಗರು ಇದೇ ಮೊದಲ ಬಾರಿಗೆ ಭಾರತ ತಂಡದ ಪರವಾಗಿ ಏಕದಿನ ಪಂದ್ಯವನ್ನಾಡಲು ಕಣಕ್ಕಿಳಿಯುತ್ತಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, July 23, 2021, 16:35 [IST]
Other articles published on Jul 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X