ವಿಜಯ್, ಪೂಜಾರಾ, ಕೊಹ್ಲಿ ಶತಕಗಳ ನೆರವಿನಿಂದ ಭಾರತದ 404/3

Posted By:

ನಾಗ್ಪುರ್, ನವೆಂಬರ್ 26: ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಂದು ಚೇತೇಶ್ವರ್ ಪೂಜಾರಾ ಹಾಗೂ ವಿರಾಟ್ ಕೊಹ್ಲಿ ಅವರ ವಿಕೆಟ್ ಬೇಗನೆ ಕೀಳಲು ಶ್ರೀಲಂಕಾ ಬೌಲರ್ ಗಳು ಯತ್ನಿಸಿ ವಿಫಲರಾದರು.

ಗವಾಸ್ಕರ್ ದಾಖಲೆ ಮುರಿದ ನಾಯಕ ವಿರಾಟ್ ಕೊಹ್ಲಿ

143 ರನ್(14 ಬೌಂಡರಿ) ಗಳಿಸಿ ಶನಕಗೆ ವಿಕೆಟ್ ಚೇತೇಶ್ವರ್ ಪೂಜಾರಾ ವಿಕೆಟ್ ಒಪ್ಪಿಸಿದರು. ವಿಜಯ್, ಪೂಜಾರಾ, ಕೊಹ್ಲಿ ಶತಕಗಳ ನೆರವಿನಿಂದ ಭಾರತ 404/3 ಸ್ಕೋರ್ ಮಾಡಿದ್ದು, ಭೋಜನ ವಿರಾಮದ ವೇಳೆಗೆ 199ರನ್ ಗಳ ಮುನ್ನಡೆ ಪಡೆದುಕೊಂಡಿದೆ. ಮುರಳಿ ವಿಜಯ್ ಭರ್ಜರಿ ಶತಕ ದಾಖಲಿಸಿ 128ರನ್ ಗಳಿಸಿ ಔಟಾದರು.

ಸ್ಕೋರ್ ಕಾರ್ಡ್

ವಿರಾಟ್ ಕೊಹ್ಲಿ ಶತಕ : ಈ ಪಂದ್ಯದಲ್ಲಿ ಗಳಿಸಿದ ಶತಕದ ನೆರವಿನಿಂದ ಕೊಹ್ಲಿ ಟೆಸ್ಟ್ ನಲ್ಲಿ 19 ಹಾಗೂ ಏಕದಿನ ಕ್ರಿಕೆಟ್ 32 ಶತಕಗಳಿಸಿದ್ದಾರೆ.ಒಟ್ಟು 51 ಶತಕ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲೂ ಕೊಹ್ಲಿ ಶತಕ ಬಾರಿಸಿದ್ದರು. ಈ ಪಂದ್ಯದಲ್ಲಿ ಮೂರನೇ ದಿನದ ಭೋಜನ ವಿರಾಮದ ವೇಳೆಗೆ ಕೊಹ್ಲಿ ಅಜೇಯ 123ರನ್(13 ಬೌಂಡರಿ) ಗಳಿಸಿ ಆಡುತ್ತಿದ್ದಾರೆ.

Story first published: Sunday, November 26, 2017, 10:06 [IST]
Other articles published on Nov 26, 2017

myKhel ನಿಂದ ತಾಜಾ ಸುದ್ದಿಗಳನ್ನು ಪಡೆಯಿರಿ