ಭಾರತ vs ವೆಸ್ಟ್‌ ಇಂಡೀಸ್‌: ಪ್ರಥಮ ಟೆಸ್ಟ್‌ಗೆ ಟೀಮ್‌ ಇಂಡಿಯಾದ ಸಂಭಾವ್ಯ XI

ಮೊದಲ ಟೆಸ್ಟ್ ಮ್ಯಾಚ್ ಗೂ ಮುನ್ನ ಕೊಹ್ಲಿ ಹೇಳಿದ್ದೇನು ? | Oneindia Kannada

ನಾರ್ತ್‌ ಸೌಂಡ್‌, ಆಗಸ್ಟ್‌ 21: ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿ ಟಿ20 ಮತ್ತು ಏಕದಿನ ಕ್ರಿಕೆಟ್‌ ಸರಣಿಗಳನ್ನು ಕ್ಲೀನ್‌ ಸ್ವೀಪ್‌ ಮಾಡಿರುವ ಟೀಮ್‌ ಇಂಡಿಯಾ ಇದೀಗ ಟೆಸ್ಟ್‌ ಕ್ರಿಕೆಟ್‌ ಸರಣಿಯನ್ನೂ ವಶಪಡಿಸಿಕೊಳ್ಳುವತ್ತ ಎದುರು ನೋಡುತ್ತಿದೆ.

1
46250

ಇಲ್ಲಿನ ಸರ್‌ ವಿವಿಯನ್‌ ರಿಚರ್ಡ್ಸ್‌ ಕ್ರೀಡಾಂಗಣದಲ್ಲಿ ಗುರುವಾರ (ಆ.22) ರಂದು ಆರಂಣವಾಗಲಿರುವ 2 ಟೆಸ್ಟ್‌ಗಳ ಸರಣಿಯ ಪ್ರಥಮ ಟೆಸ್ಟ್‌ ಪಂದ್ಯದ ಮೂಲಕ ಭಾರತ ತಂಡ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ)ಯ ಮಹತ್ವಾಕಾಂಕ್ಷೀಯ 'ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌'ಗೆ ಪದಾರ್ಪಣೆ ಮಾಡಲಿದೆ. ಸರಣಿಯ ಎರಡೂ ಟೆಸ್ಟ್‌ಗಳನ್ನು ಗೆದ್ದು ಭರ್ಜರಿ ಆರಂಭ ಪಡೆಯುವುದು ಭಾರತದ ಗುರಿಯಾಗಿದೆ.

ಟೆಸ್ಟ್‌ ಕ್ರಿಕೆಟ್‌: ಪಂಟರ್‌ ದಾಖಲೆ ಮುರಿಯಲು ಸಜ್ಜಾದ ಕಿಂಗ್‌ ಕೊಹ್ಲಿ!ಟೆಸ್ಟ್‌ ಕ್ರಿಕೆಟ್‌: ಪಂಟರ್‌ ದಾಖಲೆ ಮುರಿಯಲು ಸಜ್ಜಾದ ಕಿಂಗ್‌ ಕೊಹ್ಲಿ!

ವೆಸ್ಟ್‌ ಇಂಡೀಸ್‌ ವಿರುದ್ಧದ ಅಂತಾರಾಷ್ಟ್ರೀಯ ಟಿ20 ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್‌ ಸ್ವೀಪ್‌ ಮಾಡಿದ ಭಾರತ, ಬಳಿಕ ಏಕದಿನ ಕ್ರಿಕೆಟ್‌ ಸರಣಿ ಎರಡನ್ನೂ 2-0 ಅಂತರದಲ್ಲಿ ವೈಟ್‌ವಾಷ್‌ ಮಾಡಿತು. ಒಡಿಐ ಸರಣಿಯ ಮೊದಲ ಪಂದ್ಯ ಮಳೆಯಿಂದಾಗಿ ರದ್ದಾಗಿತ್ತು.

3ನೇ ಆ್ಯಷಸ್ ಟೆಸ್ಟ್‌ನಿಂದ ಆಸೀಸ್ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ ಹೊರಕ್ಕೆ3ನೇ ಆ್ಯಷಸ್ ಟೆಸ್ಟ್‌ನಿಂದ ಆಸೀಸ್ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ ಹೊರಕ್ಕೆ

ಇದೀಗ ಟೆಸ್ಟ್‌ ಕ್ರಿಕೆಟ್‌ನಲ್ಲೂ ಅಂಥದ್ದೇ ಭರ್ಜರಿ ಪ್ರದರ್ಶನ ನೀಡುವುದನ್ನು ಟೀಮ್‌ ಇಂಡಿಯಾ ಎದುರು ನೋಡುತ್ತಿದೆ. ಅಂದಹಾಗೆ ನಾರ್ತ್‌ಸೌಂಡ್‌ನಲ್ಲಿ ಭಾರತ ತಂಡದ ಪರ ಕಣಕ್ಕಿಳಿಯುವ 11 ಆಟಗಾರರ ಸಂಭ್ಯಾವ್ಯ ಪಟ್ಟಿಯನ್ನು ಮೈಖೇಲ್‌ ಕನ್ನಡ ಇಲ್ಲಿ ವಿವಿವರಿಸಿದೆ.

1. ಮಯಾಂಕ್‌ ಅಗರ್ವಾಲ್‌ (ಓಪನರ್‌)

1. ಮಯಾಂಕ್‌ ಅಗರ್ವಾಲ್‌ (ಓಪನರ್‌)

ಇದೇ ವರ್ಷ ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡುವ ಅವಕಾಶ ಪಡೆದ ಕರ್ನಾಟಕದ ಬ್ಯಾಟ್ಸ್‌ಮನ್‌ ಮಯಾಂಕ್‌ ಅಗರ್ವಾಲ್‌, ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಕಣಕ್ಕಿಳಿದು ಎರಡು ಅರ್ಧಶತ ದಾಖಲಿಸಿ ಗಮನ ಸೆಳೆದಿದ್ದಾರೆ. ಹೀಗಾಗಿ ವಿಂಡೀಸ್‌ ಪ್ರವಾಸದಲ್ಲೂ ಮಯಾಂಕ್‌ ಭಾರತದ ಪರ ಇನಿಂಗ್ಸ್‌ ಆರಂಭಿಸುವ ಅವಕಾಶ ಪಡೆಯಲಿದ್ದಾರೆ.

2. ಕೆ.ಎಲ್‌ ರಾಹುಲ್‌ (ಓಪನರ್‌)

2. ಕೆ.ಎಲ್‌ ರಾಹುಲ್‌ (ಓಪನರ್‌)

ಸೀಮಿತ ಓವರ್‌ಗಳ ಕ್ರಿಕೆಟ್‌ ತಂಡದಲ್ಲಿ ಖಾಯಂ ಸ್ಥಾನ ಪಡೆಯಲು ಪರದಾಡುತ್ತಿರುವ ಕರ್ನಾಟಕದ ಮತ್ತೊಬ್ಬ ಬ್ಯಾಟ್ಸ್‌ಮನ್‌ ಕೆ.ಎಲ್‌ ರಾಹುಲ್‌ಗೆ ಭಾರತ ಟೆಸ್ಟ್‌ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ನ ಸ್ಥಾನ ಬಹುತೇಕ ಭದ್ರವಾದಂತಿದೆ. ಹೀಗಾಗಿ ಲಭ್ಯವಾಗಿರುವ ಅವಕಾಶವನ್ನು ಬಳಸಿಕೊಂಡು ತಮ್ಮ ಸ್ಥಾನ ಮತ್ತಷ್ಟು ಭದ್ರ ಪಡಿಸಿಕೊಳ್ಳುವ ಕಡೆಗೆ ರಾಹುಲ್‌ ಹೋರಾಟಬೇಕಿದೆ.

3. ಚೇತೇಶ್ವರ್‌ ಪೂಜಾರ (3ನೇ ಕ್ರಮಾಂಕ)

3. ಚೇತೇಶ್ವರ್‌ ಪೂಜಾರ (3ನೇ ಕ್ರಮಾಂಕ)

ಆಸ್ಟ್ರೇಲಿಯಾ ನೆಲದಲ್ಲಿ ಐತಿಹಾಸಿಕ ಟೆಸ್ಟ್‌ ಸರಣಿ ಗೆಲುವಿನ ರೂವಾರಿ ಚೇತೇಶ್ವರ್‌ ಪೂಜಾರ, ಇದೀಗ ವಿಂಡೀಸ್‌ ನೆಲದಲ್ಲೂ ಅದೇ ಪ್ರದರ್ಶನ ಕಾಯ್ದುಕೊಂಡು ಟೀಮ್‌ ಇಂಡಿಯಾಗೆ ಮತ್ತೊಂದು ಸರಣಿ ಗೆದ್ದುಕೊಡುವ ವಿಶ್ವಾಸದಲ್ಲಿದ್ದಾರೆ. ವೆಸ್ಟ್‌ ಇಂಡೀಸ್‌ 'ಎ' ವಿರುದ್ಧದ ಅಭ್ಯಾಸ ಪಂದ್ಯದಲ್ಲೂ ಪೂಜಾರ ಶತಕ ಬಾರಿಸಿ ಲಯ ಕಂಡುಕೊಂಡಿದ್ದಾರೆ.

4. ವಿರಾಟ್‌ ಕೊಹ್ಲಿ (4ನೇ ಕ್ರಮಾಂಕ)

4. ವಿರಾಟ್‌ ಕೊಹ್ಲಿ (4ನೇ ಕ್ರಮಾಂಕ)

ಕದ್ಯಾಪ್ಟನ್‌ ವಿರಾಟ್‌ ಕೊಹ್ಲಿ, ಏಕದಿನ ಕ್ರಿಕೆಟ್‌ ಸರಣಿಯಲ್ಲಿ ವಿಂಡೀಸ್‌ ಎದುರು ಎರಡು ಶತಕ ಬಾರಿಸಿ ಮಿಂಚಿದ್ದಾರೆ. ಇದೀಗ ಟೆಸ್ಟ್‌ ಸರಣಿಯಲ್ಲೂ ಅಂಥದ್ದೇ ಪ್ರದರ್ಶನ ಕಾಯ್ದುಕೊಳ್ಳುವ ಮೂಲಕ ಮತ್ತಷ್ಟು ದಾಖಲೆಗಳನ್ನು ಪುಡಿ ಮಾಡಲು ಎದುರು ನೋಡುತ್ತಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಕೊಹ್ಲಿ ಸದ್ಯ 25 ಶತಕಗಳನ್ನು ಬಾರಿಸಿದ್ದು, ಈ ಸರಣಿಯಲ್ಲಿ ಇದನ್ನು ಮತ್ತಷ್ಟು ವಿಸ್ತರಿಸುವ ಸಾಧ್ಯತೆ ಇದೆ.

5. ಅಜಿಂಕ್ಯ ರಹಾನೆ (5ನೇ ಕ್ರಮಾಂಕ)

5. ಅಜಿಂಕ್ಯ ರಹಾನೆ (5ನೇ ಕ್ರಮಾಂಕ)

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತ ತಂಡದ ಪರ ಆಡುವ ಅವಕಾಶ ವಂಚಿತರಾದ ಟೆಸ್ಟ್‌ ತಂಡದ ಉಪನಾಯಕ ಅಜಿಂಕ್ಯ ರಹಾನೆ, ಮಧ್ಯಮ ಕ್ರಮಾಂಕದ ಬ್ಯಾಟಿಂಗ್‌ ಬೆನ್ನೆಲುಬಾಗಿದ್ದಾರೆ. ಟೆಸ್ಟ್‌ನಲ್ಲಿ ಮಿಂಚಿ ಮತ್ತೆ ಏಕದಿನ ಮತ್ತು ಟಿ20 ತಂಡಗಳಲ್ಲಿ ಸ್ಥಾನ ಪಡೆದುಕೊಳ್ಳುವುದನ್ನು ರಹಾನೆ ಎದುರು ನೋಡುತ್ತಿದ್ದಾರೆ.

6. ರಿಷಭ್‌ ಪಂತ್‌ (ವಿಕೆಟ್‌ಕೀಫರ್‌)

6. ರಿಷಭ್‌ ಪಂತ್‌ (ವಿಕೆಟ್‌ಕೀಫರ್‌)

ಟಿ20 ಮತ್ತು ಏಕದಿನ ಕ್ರಿಕೆಟ್‌ಸರಣಿಗಳಲ್ಲಿ ವೈಫಲ್ಯ ಅನುಭವಿಸಿದ ವಿಕೆಟ್‌ಕೀಪರ್‌ ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌, ಟೆಸ್ಟ್‌ ಸರಣಿಯಲ್ಲಿ ಪ್ರದರ್ಶನ ಸುಧಾರಿಸಿಕೊಳ್ಳುವತ್ತ ಗಮನ ನೀಡಲಿದ್ದಾರೆ. ಒಂದು ವೇಳೆ ಪಂತ್‌ ಕಳಪೆ ಪ್ರದರ್ಶನ ಮುಂದುವರಿದರೆ ಅವರ ಸ್ಥಾನವನ್ನು ಆಕ್ರಮಿಸಲು ಅನುಭವಿ ವಿಕೆಟ್‌ಕೀಪರ್‌ ವೃದ್ಧಿಮಾನ್‌ ಸಹಾ ಕಾದಯ ಕುಳಿತಿದ್ದಾರೆ.

7. ಹನುಮ ವಿಹಾರಿ (ಆಲ್‌ರೌಂಡರ್‌), ರೋಹಿತ್‌ ಶರ್ಮಾ

7. ಹನುಮ ವಿಹಾರಿ (ಆಲ್‌ರೌಂಡರ್‌), ರೋಹಿತ್‌ ಶರ್ಮಾ

ತಂಡದ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ ಎರಡರಲ್ಲೂ ಕೊಡುಗೆ ಸಲ್ಲಿಸಬಲ್ಲ ಆಟಗಾರ ಹನುಮ ವಿಹಾರಿ. ತಂಡಕ್ಕೆ ಆಲ್‌ರೌಂಡರ್‌ನ ಅಗತ್ಯವಿದ್ದ ಹನುಮ ವಿರಾರಿ ಆಡುವ ಅವಕಾಶ ಪಡೆಯಲಿದ್ದಾರೆ. ಒಂದು ವೇಳೆ ಬ್ಯಾಟಿಂಗ್‌ಗೆ ಹೆಚ್ಚು ಒತ್ತು ನೀಡಿದಲ್ಲಿ ರೋಹಿತ್‌ ಶರ್ಮಾ ಮಧ್ಯಮ ಕ್ರಮಾಂಕದಲ್ಲಿ ಮತ್ತೆ ಕಣಕ್ಕಿಳಿಯಲಿದ್ದಾರೆ.

8. ಆರ್. ಅಶ್ವಿನ್‌ (ಆಫ್‌ ಸ್ಪಿನ್ನರ್‌)

8. ಆರ್. ಅಶ್ವಿನ್‌ (ಆಫ್‌ ಸ್ಪಿನ್ನರ್‌)

ವಿಶ್ವ ಶ್ರೇಷ್ಠ ಆಫ್‌ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿರುವ ಆರ್. ಅಶ್ವಿನ್‌, ಹಲವು ವರ್ಷಗಳಿಂದ ಭಾರತ ತಂಡದ ಮ್ಯಾಚ್‌ ವಿನ್ನರ್‌ ಆಗಿದ್ದಾರೆ. ತಮ್ಮ ಸ್ಪಿನ್‌ ಮೋಡಿಯ ಮೂಲಕ ಯಾವುದೇ ಹಂತದಲ್ಲಿ ಪಂದ್ಯ ಗೆದ್ದುಕೊಡಬಲ್ಲ ಸಾಮರ್ಥ್ಯ ಅಶ್ವಿನ್‌ ಅವರದ್ದು. ಇನ್ನು ಬ್ಯಾಟಿಂಗ್‌ನಲ್ಲೂ ಅಶ್ವಿನ್‌ ಕೆಳ ಕ್ರಮಾಂಕದಲ್ಲಿ ಆಸರೆಯಾಗುವ ಸಾಮರ್ಥ್ಯ ಹೊಂದಿದ್ದಾರೆ.

9. ಉಮೇಶ್‌ ಯಾದವ್‌ (ಫಾಸ್ಟ್‌ ಬೌಲರ್‌)

9. ಉಮೇಶ್‌ ಯಾದವ್‌ (ಫಾಸ್ಟ್‌ ಬೌಲರ್‌)

ಕೆರಿಬಿಯನ್‌ ನಾಡಿನ ಪಿಚ್‌ಗಳು ವೇಗದ ಬೌಲರ್‌ಗಳಿಗೆ ನೆರವಾಗುತ್ತದೆ. ಅಂತೆಯೇ ಭಾರತ ತಂಡ ಮೂವರು ವೇಗಿಗಳನ್ನು ಕಣಕ್ಕಿಳಿಸುವ ಸಾಧ್ಯತೆ ಹೆಚ್ಚು. ಉಮೇಶ್‌ ಯಾದವ್‌ ತಮ್ಮ ಅದ್ಭುತ ವೇಗ ಮತ್ತು ಬೌನ್ಸರ್‌ಗಳೊಂದಿಗೆ ವಿಂಡೀಸ್‌ ಬ್ಯಾಟ್ಸ್‌ಮನ್‌ಗಳಿಗೆ ಕಬ್ಬಿಣದ ಕಡಲೆಯಾಗಬಲ್ಲರು.

10. ಇಶಾಂತ್‌ ಶರ್ಮಾ (ಅನುಭವಿ ವೇಗಿ)

10. ಇಶಾಂತ್‌ ಶರ್ಮಾ (ಅನುಭವಿ ವೇಗಿ)

ತಂಡದ ವೇಗದ ಬೌಲಿಂಗ್‌ ವಿಭಾಗದ ಜವಾಬ್ದಾರಿ ಅನುಭವಿ ವೇಗಿ ಇಶಾಂತ್‌ ಶರ್ಮಾ ಅವರ ಮೇಲಿದೆ. ಇಂಶಾಂತ್‌ ಅವರಲ್ಲಿನ ಅನುಭವ ಉಳಿದ ವೇಗಿಗಳಿಗೂ ನೆರವಾಗಲಿದೆ. ಇಶಾಂತ್‌ ಕೂಡ ಕೌಂಟಿ ಕ್ರಿಕೆಟ್‌ಗಳಲ್ಲಿ ಆಡಿ ತಮ್ಮ ಪ್ರದರ್ಶನ ಮಟ್ಟ ಕಾಯ್ದುಕೊಂಡಿದ್ದಾರೆ.

11. ಜಸ್‌ಪ್ರೀತ್‌ ಬುಮ್ರಾ (ವೇಗಿ)

11. ಜಸ್‌ಪ್ರೀತ್‌ ಬುಮ್ರಾ (ವೇಗಿ)

ಸೀಮಿತ ಓವರ್‌ಗಳ ಸರಣಿಯಿಂದ ವಿಶ್ರಾಂತಿ ಪಡೆದಿದ್ದ ಭಾರತ ತಂಡದ ಪ್ರಮುಖ ವೇಗದ ಬೌಲರ್‌ ಜಸ್‌ಪ್ರೀತ್‌ ಬುಮ್ರಾ ಇದೀಗ ತಂಡಕ್ಕೆ ಮರಳಲಿದ್ದಾರೆ. ಟೆಸ್ಟ್‌ ಕ್ರಿಕೆಟ್‌ನಲ್ಲೂ ತಾವು ಅತ್ಯಂತ ಪರಿಣಾಮಕಾರಿ ಬೌಲರ್‌ ಎಂಬುದನ್ನು ಬುಮ್ರಾ ಈಗಾಗಲೇ ಸಾಬೀತು ಪಡಿಸಿದ್ದು, ವಿಂಡೀಸ್‌ ಬ್ಯಾಟ್ಸ್‌ಮನ್‌ಗಳ ದಾಂಡುರುಳಿಸಲು ಎದುರು ನೋಡುತ್ತಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Wednesday, August 21, 2019, 16:56 [IST]
Other articles published on Aug 21, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X