ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ 'ಟೈ' ಎನ್ನುವುದು ಎಷ್ಟು ಕ್ರೂರ: ಭಾರತ Vs ವಿಂಡೀಸ್ ಟ್ವಿಟ್ಟರ್ ಪ್ರತಿಕ್ರಿಯೆ

India Vs West Indies 2nd Odi match tied twitter reactions

ವಿಶಾಖಪಟ್ಟಣ, ಅಕ್ಟೋಬರ್ 25: ಭಾರತದ ಬಾಯಿಗೆ ಬಂದಿದ್ದ ಗೆಲುವಿನ ತುತ್ತನ್ನು ವೆಸ್ಟ್ ಇಂಡೀಸ್‌ನ ಶಾಯ್ ಹೋಪ್ ಕಸಿದುಕೊಂಡರು. ಕೊನೆಯ ಎಸೆತವನ್ನು ಬೌಂಡರಿಗಟ್ಟಿದ ಹೋಪ್, ತಮ್ಮ ತಂಡ ಸೋಲುವುದರಿಂದ ತಪ್ಪಿಸಿದರು. ಆದರೆ, ಕಠಿಣ ಹೋರಾಟ ನಡೆಸಿಯೂ ಗೆಲುವು ಪಡೆದುಕೊಳ್ಳಲಾಗದ ಹತಾಶೆಗೆ ಒಳಗಾದರು.

ಇತ್ತ ಕೊನೆಯ ಆರು ಎಸೆತಗಳಲ್ಲಿ 14 ರನ್ ನಿಯಂತ್ರಿಸಲಾಗದೆ ವೇಗಿ ಉಮೇಶ್ ಯಾದವ್ ಅಭಿಮಾನಿಗಳನ್ನು ನಿರಾಶೆಗೆ ನೂಕಿದರು.

ಭಾರತ vs ವಿಂಡೀಸ್, ಏಕದಿನ: ರೋಚಕ ಪಂದ್ಯವನ್ನು 'ಟೈ' ಮಾಡಿದ ಹೋಪ್ ಭಾರತ vs ವಿಂಡೀಸ್, ಏಕದಿನ: ರೋಚಕ ಪಂದ್ಯವನ್ನು 'ಟೈ' ಮಾಡಿದ ಹೋಪ್

ಸತತ ಎರಡು ಟೂರ್ನಿಗಳಲ್ಲಿ 'ಟೈ' ಫಲಿತಾಂಶ ಸಾಧಿಸಿದ ದಾಖಲೆ ಭಾರತದ ಹೆಸರಲ್ಲಿ ಸೃಷ್ಟಿಯಾಯಿತು. ಏಷ್ಯಾ ಕಪ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯವೂ ರೋಚಕ ಟೈ ಆಗಿತ್ತು.

ಸವಾಲಿನ ಮೊತ್ತ ಪೇರಿಸಿಯೂ, ಐವರು ಪರಿಣತ ಬೌಲರ್‌ಗಳಿದ್ದರೂ ಅದನ್ನು ಸಮರ್ಥಿಸಿಕೊಳ್ಳಲಾಗದೆ ಭಾರತದ ಬೌಲಿಂಗ್ ಪಡೆದ ತನ್ನ ದೌರ್ಬಲ್ಯವನ್ನು ಸಾಬೀತುಪಡಿಸಿತು. ವೆಸ್ಟ್ ಇಂಡೀಸ್‌ನ ಆಕ್ರಮಣಕಾರಿ ಬ್ಯಾಟಿಂಗ್‌ ಎದುರು ಬೌಲಿಂಗ್ ಕರಾಮತ್ತು ನಡೆಯಲಿಲ್ಲ. ಇದು ಮೊದಲ ಪಂದ್ಯದಲ್ಲಿಯೂ ಸಾಬೀತಾಗಿತ್ತು. ಶಾಯ್ ಹೋಪ್ ಮತ್ತು ಹೆಟ್ಮೇರ್ ಅವರ ಛಲದ ಹೋರಾಟಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

10 ಸಾವಿರ ರನ್ ಕ್ಲಬ್ ನಲ್ಲಿ ಕೊಹ್ಲಿ ಜತೆಗಿರುವ 5 ದಿಗ್ಗಜರು 10 ಸಾವಿರ ರನ್ ಕ್ಲಬ್ ನಲ್ಲಿ ಕೊಹ್ಲಿ ಜತೆಗಿರುವ 5 ದಿಗ್ಗಜರು

ರೋಚಕ ಟೈನಲ್ಲಿ ಅಂತ್ಯಗೊಂಡ ಪಂದ್ಯದ ಕುರಿತು ಟ್ವಿಟ್ಟರ್‌ನಲ್ಲಿ ಬಂದಿರುವ ಪ್ರತಿಕ್ರಿಯೆಗಳು ಇಲ್ಲಿವೆ...

ವೀರೇಂದ್ರ ಸೆಹ್ವಾಗ್

ಪಂದ್ಯವನ್ನು ಟೈ ಮಾಡುವುದರಲ್ಲಿ ವೆಸ್ಟ್ ಇಂಡೀಸ್ ಅದ್ಭುತ ಪ್ರಯತ್ನ ಮಾಡಿತು. ಹೋಪ್ ಅತ್ಯದ್ಭುತ ಆಟವಾಡಿದರು. ಹೆಟ್ಮೇರ್ ಅವರ ಹೋರಾಟ ನನಗೆ ನಿಜಕ್ಕೂ ಇಷ್ಟವಾಯಿತು ಎಂದು ವೀರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಸ್ನೇಹಲ್ ಪ್ರಧಾನ್

ಭಾರತ- ವೆಸ್ಟ್ ಇಂಡೀಸ್ ಸರಣಿಯು ಕೆಲವು ಏಕಪಕ್ಷೀಯ, ಮರೆತುಹೋಗುವಂತಹ ಮುಖಾಮುಖಿಗಳನ್ನು ನೋಡಿದೆ. ಆದರೆ, ಕಳೆದ ರಾತ್ರಿಯ ಪಂದ್ಯವನ್ನು ನೆನಪಿನಲ್ಲಿಟ್ಟುಕೊಳ್ಳಲು ಒಂದಕ್ಕಿಂತ ಹಲವು ಕಾರಣಗಳಿವೆ. ಅತ್ಯದ್ಭುತ ಅಂತ್ಯ, ಜತೆಗೆ ವಿರಾಟ್ ಕೊಹ್ಲಿಯ 10 ಸಾವಿರ ರನ್ ಸಾಧನೆಯನ್ನು ಯಾರೂ ಮರೆಯಲು ಸಾಧ್ಯವಿಲ್ಲ ಎಂದು ಮಾಜಿ ಕ್ರಿಕೆಟ್ ಆಟಗಾರ್ತಿ ಸ್ನೇಹಲ್ ಪ್ರಧಾನ್ ಟ್ವೀಟ್ ಮಾಡಿದ್ದಾರೆ.

ವಿಂಡೀಸ್ ವಿರುದ್ಧ ಅತ್ಯಧಿಕ ರನ್: ಸಚಿನ್ ದಾಖಲೆ ಮುರಿದ ಕೊಹ್ಲಿ

ಮಹೇಶ್ ಭೂಪತಿ

ವೃತ್ತಿಪರ ಆಟದಲ್ಲಿ 'ಟೈ' ಅಥವಾ 'ಡ್ರಾ' ಪರಿಕಲ್ಪನೆಯನ್ನು ಎಂದಿಗೂ ಅರ್ಥಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಅಂತಹ ಕದನದ ಬಳಿಕ ಆಟಗಾರರು ಅಥವಾ ಅಭಿಮಾನಿಗಳಿಗೆ ಇದು ನ್ಯಾಯೋಚಿತ ಎಂದು ಎನಿಸುವುದಿಲ್ಲ.. ಕ್ರೂರ... ಎಂದು ಟೆನ್ನಿಸ್ ಆಟಗಾರ ಮಹೇಶ್ ಭೂಪತಿ ಪ್ರತಿಕ್ರಿಯೆ ನೀಡಿದ್ದಾರೆ.

ಕ್ರಿಕೆಟ್ ವಾಲಾ

ಎಂತಹ ಪಂದ್ಯ! ಮೊದಲ ಪಂದ್ಯದಲ್ಲಿ ದೊಡ್ಡ ಸೋಲು ಅನುಭವಿಸಿದ ಬಳಿಕ ಚೇತರಿಸಿಕೊಂಡ ವೆಸ್ಟ್ ಇಂಡೀಸ್‌ಗೆ ಎಲ್ಲ ಶ್ರೇಯಸ್ಸು ಸಲ್ಲಬೇಕು ಎಂದು ಕ್ರಿಕೆಟ್ ವಾಲಾ ಎಂಬ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಏಕದಿನ ಕ್ರಿಕೆಟ್ ನ ಅಚ್ಚರಿ: ಕಿಂಗ್ ಕೊಹ್ಲಿ ಈಗ 10,000ರನ್ ಗಳ ಸರದಾರ

ವಿವಿಎಸ್ ಲಕ್ಷ್ಮಣ್

642 ರನ್ ಮತ್ತು ಕೊನೆಯಲ್ಲಿ ಟೈ. ತಮ್ಮ ಪ್ರಯತ್ನದ ಬಗ್ಗೆ ವೆಸ್ಟ್ ಇಂಡೀಸ್ ಹೆಮ್ಮೆ ಪಡಬೇಕು. ಕ್ರೀಸ್‌ನಲ್ಲಿ ಹೋಪ್ ಅವರ ತಾಳ್ಮೆಯ ಸಂಯೋಜನೆಯ ಇಷ್ಟವಾಯಿತು. ಅದಕ್ಕೆ ಶಿಮ್ರೋನ್ ಹೆಟ್ಮೇರ್ ಅವರ ಆಕ್ರಮಣಶೀಲತೆಯ ಸೊಬಗನ್ನು ಹೊಗಳಿಗೆ ದಕ್ಕಿತು ಎಂದು ವಿವಿಎಸ್ ಲಕ್ಷ್ಮಣ್ ಪ್ರಶಂಸಿಸಿದ್ದಾರೆ.

ರೋಶನ್ ರೈ

ಪ್ರತಿ ಟೈನಲ್ಲಿಯೂ ಒಬ್ಬ ಗೆದ್ದಿರುತ್ತಾನೆ. ಇಂದು ಗೆದ್ದಿರುವುದು ವೆಸ್ಟ್ ಇಂಡೀಸ್. ಅದ್ಭುತ ಆಟವಾಡಿದ್ದೀರಿ ಹೋಪ್ ಎಂದು ರೋಶನ್ ರೈ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿವಿಯನ್ ರಿಚರ್ಡ್ಸ್

ನಿಮ್ಮ ತಲೆಯನ್ನು ಎತ್ತಿಕೊಂಡಿರಿ ಶಿಮ್ರೋನ್ ಹೆಟ್ಮೇರ್. ನೀವು ಮಹತ್ತರವಾದುದ್ದನ್ನು ಮಾಡುತ್ತಿದ್ದೀರಿ. ನಿಮ್ಮಿಂದ ಇಂತಹ ಇನ್ನಷ್ಟು ಉತ್ತಮ ಪ್ರದರ್ಶನವನ್ನು ನೋಡುವ ಭರವಸೆ ಇದೆ ಎಂದು ವಿಂಡೀಸ್ ಕ್ರಿಕೆಟ್‌ನ ದಂತಕತೆ ವಿವಿಯನ್ ರಿಚರ್ಡ್ಸ್ ಹೇಳಿದ್ದಾರೆ.

ಜಾಯ್ ಭಟ್ಟಾಚಾರ್ಜ್ಯ

ಐಪಿಎಲ್ ಕಾಂಟ್ರ್ಯಾಕ್ಟ್‌ಗೆ ಹೆಟ್ಮೇರ್ ಸ್ವತಃ ಸಿದ್ಧರಾಗಿದ್ದಾರೆ. 2016ರ ಅಂಡರ್19 ವಿಶ್ವಕಪ್ ಫೈನಲ್‌ನಲ್ಲಿ ಭಾರತ ತಂಡವನ್ನು ಸೋಲಿಸಿದ ತಂಡದ ವೆಸ್ಟ್ ಇಂಡೀಸ್ ತಂಡದ ನಾಯಕರಾಗಿದ್ದರು. ರಿಷಬ್ ಪಂತ್ ಕೂಡ ಈ ಫೈನಲ್‌ನಲ್ಲಿ ಆಡಿದ್ದರು ಎಂದು ಜಾಯ್ ಭಟ್ಟಾಚಾರ್ಜ್ಯ ನೆನಪಿಸಿಕೊಂಡಿದ್ದಾರೆ.

ಸೌರಭ್ ಮಲ್ಹೋತ್ರಾ

ಪ್ರತಿ ಸಿಕ್ಸರ್‌ನೊಂದಿಗೂ ಹೆಟ್ಮೇರ್ ಅವರ ಐಪಿಎಲ್ ಒಪ್ಪಂದವು ಕೋಟಿ ರೂಪಾಯಿಗಳಷ್ಟು ಹೆಚ್ಚುತ್ತಿದೆ ಎಂದು ಸೌರಭ್ ಮಲ್ಹೋತ್ರಾ, ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಹೆಟ್ಮೇರ್ ಅವರಿಗೆ ಬೇಡಿಕೆ ಉಂಟಾಗಲಿದೆ ಎಂದಿದ್ದಾರೆ.

Story first published: Thursday, October 25, 2018, 14:37 [IST]
Other articles published on Oct 25, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X