ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ಕ್ರಿಕೆಟ್ ನ ಅಚ್ಚರಿ: ಕಿಂಗ್ ಕೊಹ್ಲಿ ಈಗ 10,000ರನ್ ಗಳ ಸರದಾರ

INDIA v/s WEST INDIES :10 ಸಾವಿರ ರನ್ ಪೂರೈಸಿದ ಕೊಹ್ಲಿ | Oneindia Kannada
Virat Kohli becomes fastest to score 10,000 ODI runs

ವೈಜಾಗ್, ಅಕ್ಟೋಬರ್ 24: ಟೀಂ ಇಂಡಿಯಾ ನಾಯಕ, ಅಧುನಿಕ ಕ್ರಿಕೆಟ್ ಜಗತ್ತಿನ 'ರನ್ ಮಷಿನ್', 'ಚೇಸಿಂಗ್ ಕಿಂಗ್' ವಿರಾಟ್ ಕೊಹ್ಲಿ ಈಗ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 10,000ರನ್ ಗಳ ಸರದಾರರಾಗಿದ್ದಾರೆ.

ವಿಶಾಖಪಟ್ಟಣಂನ ಈ ಮೈದಾನದಲ್ಲಿ ಕಳೆದ ನಾಲ್ಕು ಏಕದಿನ ಕ್ರಿಕೆಟ್ ಇನ್ನಿಂಗ್ಸ್ ಗಳಲ್ಲಿ ಕ್ರಮವಾಗಿ 118, 117, 99, 65 ಚೆಚ್ಚಿದ್ದರು. ಟೆಸ್ಟ್ ಪಂದ್ಯಗಳಲ್ಲಿ 167, 81ರನ್ ಬಾರಿಸಿದ್ದರು. ಹೀಗಾಗಿ ಇದು ಅವರ ಅದೃಷ್ಟದ ತಾಣವಾಗಿದೆ.

'ಚೇಸಿಂಗ್ ಕಿಂಗ್' ಕೊಹ್ಲಿ ಶತಕ ಬಾರಿಸಿ, ಮುರಿದ ದಾಖಲೆಗಳಿವು'ಚೇಸಿಂಗ್ ಕಿಂಗ್' ಕೊಹ್ಲಿ ಶತಕ ಬಾರಿಸಿ, ಮುರಿದ ದಾಖಲೆಗಳಿವು

ವೆಸ್ಟ್ ಇಂಡೀಸ್ ವಿರುದ್ಧದ 2ನೇ ಏಕದಿನ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿಗೆ 10 ಸಾವಿರ ರನ್ ಪೂರೈಸಲು 81ರನ್ ಮಾತ್ರ ಬೇಕಿತ್ತು. ಕೊಹ್ಲಿ ಅವರು ವೆಸ್ಟ್ ಇಂಡೀಸ್ ನ ಬೌಲರ್ ನರ್ಸ್ ಎಸೆತದಲ್ಲಿ 1 ರನ್ ಗಳಿಸಿ ಈ ಮಹತ್ವ ಗಡಿ ದಾಟಿದರು.

ತ್ವರಿಗತಿಯಲ್ಲಿ 18 ಸಾವಿರ ರನ್, ಲಾರಾ ದಾಖಲೆ ಮುರಿದ ಕೊಹ್ಲಿತ್ವರಿಗತಿಯಲ್ಲಿ 18 ಸಾವಿರ ರನ್, ಲಾರಾ ದಾಖಲೆ ಮುರಿದ ಕೊಹ್ಲಿ

10 ಸಾವಿರ ರನ್ ಕ್ಲಬ್: ಈ ಸಾಧನೆ ಮಾಡಿದ ಭಾರತದ 5ನೇ ಹಾಗೂ ವಿಶ್ವದ 13ನೇ ಬ್ಯಾಟ್ಸ್ ಮನ್ ಎನಿಸಿಕೊಂಡರು.

ವಿರಾಟ್ ಕೊಹ್ಲಿ ಅವರು 213 ಪಂದ್ಯಗಳ 205 ಇನ್ನಿಂಗ್ಸ್ ಗಳಲ್ಲೇ 10 ಸಾವಿರ ರನ್ ಚೆಚ್ಚಿದ್ದಾರೆ. 59.17ರ ಸರಾಸರಿ ಹೊಂದಿದ್ದು, 92.5 ಸ್ಟ್ರೈಕ್ ರೇಟ್. ಸಚಿನ್ ಅವರು 10 ಸಾವಿರ ರನ್ ಗಡಿ ದಾಟಲು 259 ಇನ್ನಿಂಗ್ಸ್ ತೆಗೆದುಕೊಂಡಿದ್ದರು.

ಬಿರಿಯಾನಿ ಪ್ರಿಯ ಕೊಹ್ಲಿ, ಶುದ್ಧ ಶಾಖಾಹಾರಿ ಆಗಿದ್ದೇಕೆ?

ಕಡಿಮೆ ಇನ್ನಿಂಗ್ಸ್(205), ಕಡಿಮೆ ಪಂದ್ಯ(213) ಹೆಚ್ಚು ರನ್ ಸರಾಸರಿ (59.17), ಚೊಚ್ಚಲ ಪಂದ್ಯದಿಂದ ಲೆಕ್ಕಹಾಕಿ ಕಡಿಮೆ ಅವಧಿ(10 ವರ್ಷ 67 ದಿನಗಳು)ಗಳಲ್ಲಿ ತ್ವರಿತಗತಿ 10000ರನ್ ಗಳಿಸಿದ್ದು ಕೊಹ್ಲಿ.

ಕೊಹ್ಲಿಗೂ ಮುನ್ನ ಭಾರತೀಯ ಆಟಗಾರರ ಪೈಕಿ ದಿಗ್ಗಜರಾದ ಸಚಿನ್ ತೆಂಡೂಲ್ಕರ್ (18,426ರನ್), ಸೌರವ್ ಗಂಗೂಲಿ(11,363), ರಾಹುಲ್ ದ್ರಾವಿಡ್ (10,889) ಹಾಗೂ ಎಂ ಎಸ್ ಧೋನಿ(10,123) ಈ ಪಟ್ಟಿಯಲ್ಲಿದ್ದಾರೆ.

Story first published: Wednesday, October 24, 2018, 16:52 [IST]
Other articles published on Oct 24, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X