ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ವಿರುದ್ಧ ಭಾರತ ಮಹಿಳಾ ತಂಡದ ಐತಿಹಾಸಿಕ ಜಯ: ಸಾಮಾಜಿಕ ಜಾಲತಾಣದಲ್ಲಿ ಭಾರೀ ಪ್ರಶಂಸೆ

Harmanpreet kaur

ಇಂಗ್ಲೆಂಡ್‌ನಲ್ಲಿ ಭಾರತದ ವನಿತೆಯರು ವಿಜಯ ಪತಾಕೆ ಹಾರಿಸಿದ್ದು 23 ವರ್ಷಗಳ ಬಳಿಕ ಆಂಗ್ಲರ ನಾಡಲ್ಲಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ನಾಯಕಿ ಹರ್ಮನ್ ಪ್ರೀತ್ ಕೌರ್‌ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ವಿರುದ್ಧ ಭಾರತ ಭರ್ಜರಿ ಗೆಲುವು ಸಾಧಿಸಿದ್ದಲ್ಲದೆ, ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿದೆ.

ಸೇಂಟ್ ಲಾರೆನ್ಸ್ ಮೈದಾನ, ಕ್ಯಾಂಟರ್ಬರಿಯಲ್ಲಿ ನಡೆದ ಎರಡನೇ ಏಕದಿನ ಪಂದ್ಯವನ್ನು ಟೀಂ ಇಂಡಿಯಾ ಅಭಿಮಾನಿಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ. ಏಕೆಂದರೆ ಭಾರತದ ಮಹಿಳಾ ಕ್ರಿಕೆಟ್ ತಂಡವು ಇಂಗ್ಲೆಂಡ್‌ನಲ್ಲಿ ಅವಿಸ್ಮರಣೀಯ ಗೆಲುವು ಸಾಧಿಸಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನಡೆ ಪಡೆದಿದೆ.

ಜೂಲನ್ ಗೋಸ್ವಾಮಿಗೆ ಸ್ಮರಣೀಯ ಬೀಳ್ಕೊಡುಗೆ

ಜೂಲನ್ ಗೋಸ್ವಾಮಿಗೆ ಸ್ಮರಣೀಯ ಬೀಳ್ಕೊಡುಗೆ

ಭಾರತ ಮಹಿಳಾ ಕ್ರಿಕೆಟ್ ತಂಡದ ಅನುಭವಿ ಪೇಸರ್ ಲೆಜೆಂಡ್ ಜೂಲನ್ ಗೋಸ್ವಾಮಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಮುನ್ನ ಮಹಿಳಾ ತಂಡವು ಸ್ಮರಣೀಯ ಗೆಲುವು ಸಾಧಿಸಿ ಬೀಳ್ಕೊಟ್ಟಿದೆ. ಇಂಗ್ಲೆಂಡ್ ವಿರುದ್ಧ ಹರ್ಮನ್ ಪ್ರೀತ್ ಕೌರ್‌ 111 ಎಸೆತಗಳಲ್ಲಿ ಅಜೇಯ 143 ರನ್ ಕಲೆಹಾಕುವ ಮೂಲಕ ಭಾರತ 333ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ವನಿತೆಯರು 245 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಭಾರತ 88ರನ್‌ಗಳ ಅಮೋಘ ಗೆಲುವು ದಾಖಲಿಸಿದೆ.

ಟೀಂ ಇಂಡಿಯಾ ವನಿತೆಯರ ಈ ಅದ್ಭುತ ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆಯ ಸುರಿಮಳೆಯೇ ಹರಿದುಬಂದಿದೆ. ಹಿರಿಯ ಮಾಜಿ ಕ್ರಿಕೆಟಿಗರು, ಕ್ರಿಕೆಟ್ ವಿಶ್ಲೇಷಕರು ಭಾರತ ಮಹಿಳಾ ತಂಡದ ಸಾಧನೆಯನ್ನ ಮೆಚ್ಚಿ ಟ್ವೀಟ್ ಮತ್ತು ಪೋಸ್ಟ್ ಹಾಕಿದ್ದು, ಮುಂದೆ ತಿಳಿಯಿರಿ.

ಇಂಗ್ಲೆಂಡ್‌ನಲ್ಲಿ ಗೆಲುವು ಸುಲಭವಲ್ಲ ಎಂದ ಇಯಾನ್ ಬಿಷಪ್

ಭಾರತೀಯ ಮಹಿಳಾ ತಂಡವು ಉತ್ತಮ ಸರಣಿ ಗೆಲುವನ್ನ ಸಾಧಿಸಿದೆ. ಇಂಗ್ಲೆಂಡ್‌ನಲ್ಲಿ ಇಷ್ಟು ವರ್ಷಗಳ ಬಳಿಕ ಗೆಲವು ಸಾಧಿಸುವುದು ಅಷ್ಟು ಸುಲಭದ ಮಾತಲ್ಲ ಎಂದು ಭಾರತದ ಮಹಿಳಾ ತಂಡದ ಸಾಧನೆಯನ್ನ ಹೊಗಳಿ ಟ್ವೀಟ್ ಮಾಡಿದ್ದಾರೆ.

ಹರ್ಮನ್ ಪ್ರೀತ್ ಕೌರ್ ಕ್ವೀನ್!

ಇಂಗ್ಲೆಂಡ್ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಟೀಂ ಇಂಡಿಯಾ ಪರ ನಾಯಕಿ ಹರ್ಮನ್‌ಪ್ರೀತ್ ಕೌರ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ರು. 111 ಎಸೆತಗಳಲ್ಲಿ ಅಜೇಯ 143 ರನ್ ಕಲೆಹಾಕಿದ ಹರ್ಮನ್ ಇನ್ನಿಂಗ್ಸ್‌ನಲ್ಲಿ 18 ಬೌಂಡರಿ ಮತ್ತು 4 ಭರ್ಜರಿ ಸಿಕ್ಸರ್‌ಗಳಿದ್ದವು. 128.83ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಕೌರ್ ಇನ್ನಿಂಗ್ಸ್‌ ಅನ್ನು ಕೋಲ್ಕತ್ತಾ ನೈಟ್ ರೈಡರ್ಸ್‌ ಫ್ರಾಂಚೈಸಿ ಹೊಗಳಿ ಟ್ವೀಟ್ ಮಾಡಿದ್ದು, ' ಹೌದು, ನಾವು ಬಾಗಬೇಕು, ಅವಳು ರಾಣಿ'' ಎಂದು ಟ್ವೀಟ್ ಮಾಡಿದೆ.

ಹರ್ಮನ್‌ಪ್ರೀತ್ ಅಮೋಘ ಶತಕ: 1999ರ ಬಳಿಕ ಇಂಗ್ಲೆಂಡ್ ನೆಲದಲ್ಲಿ ಏಕದಿನ ಸರಣಿ ಗೆದ್ದ ಭಾರತ ಮಹಿಳಾ ತಂಡ

ಕೌರ್ ಇನ್ನಿಂಗ್ಸ್‌ಗೆ ಭೇಷ್ ಎಂದ ಅಮಿತ್ ಮಿಶ್ರಾ!

ಟೀಂ ಇಂಡಿಯಾ ಮಾಜಿ ಆಟಗಾರ ಅಮಿತ್ ಮಿಶ್ರಾ ಕೂಡ ಹರ್ಮನ್ ಪ್ರೀತ್ ಕೌರ್ ಇನ್ನಿಂಗ್ಸ್‌ ಅನ್ನು ಮೆಚ್ಚಿ ಟ್ವೀಟ್ ಮಾಡಿದ್ದಾರೆ. '' ImHarmanpreet ಅವರ ಎಂತಹ ಅದ್ಭುತ ಇನ್ನಿಂಗ್ಸ್ ! 18 ಬೌಂಡರಿ ಮತ್ತು 4 ಸಿಕ್ಸರ್‌ಗಳೊಂದಿಗೆ 143 ರನ್‌ಗಳ ಅಜೇಯ ಮತ್ತು ಮನರಂಜನೆ. ನೀವು ಹೊಳೆಯುತ್ತಿದ್ದೀರಿ'' ಎಂದು ಅನುಭವಿ ಸ್ಪಿನ್ನರ್ ಮಿಶ್ರಾ ಹರ್ಮನ್ ಪ್ರೀತ್ ಇನ್ನಿಂಗ್ಸ್‌ ಕುರಿತು ಹೊಗಳಿದ್ದಾರೆ.

ರೋಹಿತ್ ಶರ್ಮಾ ನಾಯಕತ್ವದ ಕುರಿತಾಗಿ ತೀವ್ರ ಟೀಕೆ: ಕೊಹ್ಲಿಯನ್ನ ಬೆಂಬಲಿಸಿದ ಅಭಿಮಾನಿಗಳು

ಹರ್ಮನ್ ಫಾರ್ಮ್‌ನಲ್ಲಿದ್ರೆ ಅದ್ಭುತ ಸೃಷ್ಟಿಸುತ್ತಾರೆ ಎಂದ ಜಾಫರ್!

ಭಾರತದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಕೂಡ ಹರ್ಮನ್ ಪ್ರೀತ್ ಕೌರ್ ಇನ್ನಿಂಗ್ಸ್ ನೋಡಿ ಆಶ್ಚರ್ಯ ವ್ಯಕ್ತಪಡಿಸಿದ್ದು, ಆಕೆಯ ಅದ್ಭುತ ಆಟವನ್ನ ಮೆಚ್ಚಿ ಟ್ವೀಟ್ ಮಾಡಿದ್ದಾರೆ. '' ನೀವು ಫಾರ್ಮ್‌ನಲ್ಲಿರುವಾಗ ಅದನ್ನು ಎಣಿಕೆ ಮಾಡಿ ಮತ್ತು ಹರ್ಮನ್‌ಪ್ರೀತ್ ಈ ವರ್ಷ ಏನು ಮಾಡುತ್ತಿದ್ದಾರೆ ಎಂದು ತಿಳಿದಿದೆ. ಮತ್ತೊಮ್ಮೆ ಪ್ರಮುಖ ಆಟದಲ್ಲಿ ಮುನ್ನಡೆಸಿ ಆಟವಾಡಿದ್ದಾರೆ. ವಿಶೇಷ ಶತಕಕ್ಕೆ ಅಭಿನಂದನೆಗಳು'' ಎಂದು ಜಾಫರ್ ಟ್ವೀಟ್ ಮಾಡಿದ್ದಾರೆ.

ಟೀಂ ಇಂಡಿಯಾ ಕ್ರಿಕೆಟಿಗರು ಅಷ್ಟೇ ಅಲ್ಲದೆ ವಿದೇಶಿ ಮಾಜಿ ಹಾಗೂ ಹಾಲಿ ಕ್ರಿಕೆಟಿಗರು ಟ್ವೀಟ್ ಮಾಡಿದ್ದನ್ನ ಈ ಕೆಳಗೆ ಕಾಣಬಹುದು.

Story first published: Thursday, September 22, 2022, 11:41 [IST]
Other articles published on Sep 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X