ಟಿ20 ವಿಶ್ವಕಪ್‌ 2021: ಟೀಮ್ ಇಂಡಿಯಾದ ನೂತನ ಜೆರ್ಸಿ ಬಿಡುಗಡೆ

ಅಬುಧಾಬಿ: ಮುಂಬರಲಿರುವ ಟಿ20 ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲಿರುವ ಟೀಮ್ ಇಂಡಿಯಾದ ನೂತನ ಜೆರ್ಸಿ ಬಿಡುಗಡೆಯಾಗಿದೆ. ಕಡು ನೀಲಿ ಬಣ್ಣದ ಜೆರ್ಸಿಯ ಮೇಲೆ ತಿಳಿ ನೀಲಿ ಬಣ್ಣದ ವಿನ್ಯಾಸವಿದೆ. ನೂತನ ಜೆರ್ಸಿ ಆಕರ್ಷಕವಾಗಿದೆ. ಭಾರತದ ಕಿಟ್ ಸ್ಪಾನ್ಸರ್ ಮೊಬೈಲ್ ಪ್ರೀಮಿಯರ್ ಲೀಗ್‌ (ಎಂಪಿಎಲ್) ಮತ್ತು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಈ ನೂತನ ಜೆರ್ಸಿಯ ಚಿತ್ರ ಬಹಿರಂಗಪಡಿಸಿವೆ.

ಟಿ20 ವಿಶ್ವಕಪ್‌ ಇತಿಹಾಸದಲ್ಲಿ 6 ಮರೆಯಲಾಗದ ಘಟನೆಗಳಿವು!ಟಿ20 ವಿಶ್ವಕಪ್‌ ಇತಿಹಾಸದಲ್ಲಿ 6 ಮರೆಯಲಾಗದ ಘಟನೆಗಳಿವು!

ಈ ಬಾರಿ ಭಾರತದ ಜೆರ್ಸಿ ಉಳಿದೆಲ್ಲಾ ಜೆರ್ಸಿಗಳಿಗೆ ಹೋಲಿಸಿದರೆ ತುಂಬಾ ವ್ಯತ್ಯಾಸ ಹೊಂದಿದೆ. ಎದೆಯ ಭಾಗದಲ್ಲಿ ಇಂಡಿಯಾ ಎಂದು ಬರೆದಿರುವ ಬಣ್ಣ ಮಾತ್ರ ಕೇಸರಿ ಬಿಟ್ಟರೆ, ಹಿಂದಿನ ಜೆರ್ಸಿ ವಿನ್ಯಾಸಗಳಿಗೆ ಹೋಲಿಸಿದರೆ ಈ ಜೆರ್ಸಿ ಭಿನ್ನವಾಗಿದೆ. ಹಿಂದಿನ ಸೀಸನ್‌ನಲ್ಲಿ ಭಾರತ ಆಕಾಶ ನೀಲಿ ಜೆರ್ಸಿ ಧರಿಸಿ ಆಡಿತ್ತು. ಈ ಬಾರಿ ಕಡು ನೀಲಿ ಬಣ್ಣದ ಜೆರ್ಸಿಯನ್ನು ವಿರಾಟ್ ಕೊಹ್ಲಿ ಪಡೆ ಧರಿಸುವುದರಲ್ಲಿದೆ.

ಟಿ20 ವಿಶ್ವಕಪ್‌ ಟೂರ್ನಿ ಅಕ್ಟೋಬರ್ 17ರಿಂದ ಯುಎಇ ಮತ್ತು ಓಮನ್‌ನಲ್ಲಿ ಪ್ರಾರಂಭಗೊಳ್ಳಲಿದೆ. ಒಟ್ಟು 16 ತಂಡಗಳು ಈ ಬಾರಿಯ ಟೂರ್ನಿಯಲ್ಲಿ ಸೆಣಸಾಡಲಿವೆ. ಈ ಟೂರ್ನಿಗೆ ಸಂಬಂಧಿಸಿ ಭಾರತದ ಜೆರ್ಸಿ ಬಿಡುಗಡೆಯಾಗಿದೆ. ಅಕ್ಟೋಬರ್‌ 24ರಂದು ಭಾರತ ಹೊಸ ಜೆರ್ಸಿ ಧರಿಸಿ ಪಾಕ್ ವಿರುದ್ಧ ಆಡಲಿದೆ.

 ಟಿ20 ವಿಶ್ವಕಪ್‌: ಟೀಮ್ ಇಂಡಿಯಾ ಸೇರಿಕೊಳ್ಳಲಿದ್ದಾರೆ ಆವೇಶ್ ಖಾನ್ ಟಿ20 ವಿಶ್ವಕಪ್‌: ಟೀಮ್ ಇಂಡಿಯಾ ಸೇರಿಕೊಳ್ಳಲಿದ್ದಾರೆ ಆವೇಶ್ ಖಾನ್

ಪ್ರತಿಷ್ಠಿತ ಟಿ20 ವಿಶ್ವಕಪ್‌ಗೆ ಸಂಬಂಧಿಸಿ ಮಂಗಳವಾರ ನಾಲ್ಕು ದೇಶಗಳು ತಮ್ಮ ಆಕರ್ಷಕ ಜೆರ್ಸಿ ಅನಾವರಣಗೊಳಿಸಿದ್ದವು. ಅಕ್ಟೋಬರ್‌ 12ರ ಮಂಗಳವಾರದ ವೇಳೆ ಐರ್ಲೆಂಡ್, ನಮೀಬಿಯಾ, ಸ್ಕಾಟ್ಲೆಂಡ್ ಮತ್ತು ಶ್ರೀಲಂಕಾ ದೇಶಗಳು ಟಿ20 ವಿಶ್ವಕಪ್‌ಗಾಗಿ ತಮ್ಮ ನೂತನ ಜರ್ಸಿ ಬಿಡುಗಡೆ ಮಾಡಿದ್ದವು.

ಐರ್ಲೆಂಡ್ ದೇಶದ ವಿಶ್ವಕಪ್‌ ಜೆರ್ಸಿ ತಿಳಿ ಹಸಿರು ಮತ್ತು ಕಡು ಹಸಿರು ಬಣ್ಣದಲ್ಲಿದ್ದರೆ, ನಮೀಬಿಯಾ ದೇಶದ ಆಟಗಾರರು ಆಕಾಶ ನೀಲಿ ಮತ್ತು ಕಡು ನೀಲಿ ಬಣ್ಣದ ವಿನ್ಯಾಸದ ಜೆರ್ಸಿ ಧರಿಸಲಿದ್ದಾರೆ. ಸ್ಕಾಟ್ಲೆಂಡ್ ದೇಶದ ಆಟಗಾರರು ತಿಳಿ ನೇರಳೆ ಮತ್ತು ಕಡು ನೇರಳೆ ಬಣ್ಣದ ಜೆರ್ಸಿ ಧರಿಸಲಿದ್ದಾರೆ.

ಐಪಿಎಲ್ 2021: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕಳವಳವನ್ನು ವಿವರಿಸಿದ ಲಾರಾಐಪಿಎಲ್ 2021: ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕಳವಳವನ್ನು ವಿವರಿಸಿದ ಲಾರಾ

ನಾಲ್ಕು ದೇಶಗಳಲ್ಲಿ ಶ್ರೀಲಂಕಾ ದೇಶ ಎರಡು ಬಣ್ಣಗಳಲ್ಲಿ ವಿಭಿನ್ನ ಜೆರ್ಸಿ ಹೊರ ತಂದಿದೆ. ಇದರಲ್ಲಿ ಒಂದು ಜೆರ್ಸಿಯ ಬಣ್ಣ ನೀಲಿ ಮತ್ತು ಹಳದಿ ಬಣ್ಣದ ವಿನ್ಯಾಸ ಹೊಂದಿದ್ದರೆ, ಇನ್ನೊಂದು ಜೆರ್ಸಿ ಆಕಾಶ ನೀಲಿ ಮತ್ತು ಕಡು ನೀಲಿ ಬಣ್ಣದಲ್ಲಿ ರಚಿಸಲ್ಪಟ್ಟಿತ್ತು.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 5 - October 19 2021, 03:30 PM
ಸ್ಕಾಟ್ಲೆಂಡ್
ಪಪುವಾ ನ್ಯೂ ಗಿನಿವಾ
Predict Now

For Quick Alerts
ALLOW NOTIFICATIONS
For Daily Alerts
Story first published: Wednesday, October 13, 2021, 14:39 [IST]
Other articles published on Oct 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X