ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್ 5ನೇ ಟೆಸ್ಟ್‌ ರದ್ದಿಗೆ ಅಸಲಿ ಕಾರಣ ಹೇಳಿದ ದಿನೇಶ್ ಕಾರ್ತಿಕ್

Indian players got the jitters after assistant physio tested positive, says Dinesh Karthik
5ನೇ ಪಂದ್ಯ ರದ್ದಾಗಲು ಅಸಲಿ ಕಾರಣ ತಿಳಿಸಿದ ದಿನೇಶ್ ಕಾರ್ತಿಕ್ | Oneindia Kannada

ಲಂಡನ್: ಟೀಮ್ ಇಂಡಿಯಾದ ಅನುಭವಿ ಬ್ಯಾಟ್ಸ್‌ಮನ್‌ ದಿನೇಶ್ ಕಾರ್ತಿಕ್ ಸೆಪ್ಟೆಂಬರ್‌ 10ರಂದು ಮ್ಯಾನ್ಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಮತ್ತು ಕೊನೇಯ ಟೆಸ್ಟ್‌ ಪಂದ್ಯ ರದ್ದಾಗಿದ್ದಕ್ಕೆ ಅಸಲಿ ಕಾರಣ ಹೇಳಿದ್ದಾರೆ. ಪಂದ್ಯ ರದ್ದಾಗಲು ಟೀಮ್ ಇಂಡಿಯಾ ಆಟಗಾರರು ಕಾರಣ, ಕೋವಿಡ್‌-19 ಭೀತಿಯಿಂದಾಗಿ ಭಾರತೀಯ ಆಟಗಾರರು ಹೆದರಿದ್ದರು ಎಂದು ಕಾರ್ತಿಕ್ ಹೇಳಿದ್ದಾರೆ.

ಮ್ಯಾಂಚೆಸ್ಟರ್ ಟೆಸ್ಟ್ ರದ್ದು: ಇಂಗ್ಲೆಂಡ್‌ಗೆ ಕೋಟಿ ಕೋಟಿ ನಷ್ಟ; ರದ್ದಾದ ಈ ಪಂದ್ಯ ಮತ್ತೆ ನಡೆಯುತ್ತೆ!ಮ್ಯಾಂಚೆಸ್ಟರ್ ಟೆಸ್ಟ್ ರದ್ದು: ಇಂಗ್ಲೆಂಡ್‌ಗೆ ಕೋಟಿ ಕೋಟಿ ನಷ್ಟ; ರದ್ದಾದ ಈ ಪಂದ್ಯ ಮತ್ತೆ ನಡೆಯುತ್ತೆ!

ಸೆಪ್ಟೆಂಬರ್‌ 10ರ ಕೊನೇ ಕ್ಷಣದ ವರೆಗೂ ಭಾರತ-ಇಂಗ್ಲೆಂಡ್ ಐದನೇ ಟೆಸ್ಟ್‌ ಪಂದ್ಯ ನಡೆಯುವುದನ್ನು ನಿರೀಕ್ಷಿಸಲಾಗಿತ್ತು. ಆದರೆ ಪಂದ್ಯ ಶುರುವಾಗಲು ಇನ್ನೇನು ಕೆಲವೇ ಕ್ಷಣಗಳು ಬಾಕಿಯಿರುವಾಗ ಪಂದ್ಯ ರದ್ದೆಂದು ಘೋಷಿಸಲಾಯ್ತು. ಶುಕ್ರವಾರ ಕೊನೇ ಕ್ಷಣದಲ್ಲಿ ಪಂದ್ಯ ರದ್ದಾಗಿತ್ತು. ಪಂದ್ಯ ರದ್ದಾಗಿದ್ದು, ಭಾರತೀಯ ಆಟಗಾರರ ಭಯದಿಂದಾಗಿ ಎಂದು ದಿನೇಶ್ ಕಾರ್ತಿಕ್ ತಿಳಿಸಿದ್ದಾರೆ.

ಪಂದ್ಯದ ರದ್ದಿಗೆ ಅಸಲಿ ಕಾರಣ ವಿವರಿಸಿದ ದಿನೇಶ್ ಕಾರ್ತಿಕ್
ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ದ್ವಿತೀಯ ಹಂತದ ಟೂರ್ನಿಗಾಗಿ ಸದ್ಯ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಬಯೋ ಬಬಲ್‌ ಒಳಗಿರುವ ಭಾರತದ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್‌ ದಿನೇಶ್ ಕಾರ್ತಿಕ್, ಭಾರತ-ಇಂಗ್ಲೆಂಡ್ ಐದನೇ ಟೆಸ್ಟ್‌ ಪಂದ್ಯದ ರದ್ದತಿ ಬಗ್ಗೆ ಮಾತನಾಡಿದ್ದಾರೆ. "ನಾನು ನಾಲ್ಕನೇ ಟೆಸ್ಟ್‌ ಪಂದ್ಯದ ಬಳಿಕ ಭಾರತೀಯ ಕೆಲ ಆಟಗಾರರ ಜೊತೆ ಮಾತನಾಡಿದೆ. ಆದರೆ ಹೆಚ್ಚಿನವರಲ್ಲಿ ಮಾತನಾಡಿಲ್ಲ. ಅವರು ದಣಿದಿದ್ದಾರೆ. ಎಲ್ಲಾ ಪಂದ್ಯಗಳು ಬೆನ್ನು ಬೆನ್ನಿಗೆ ನಡೆದಿದ್ದಾಗಿದೆ. ಆದರೆ ಅವರಿಗೆ ಕೇವಲ ಒಬ್ಬನೇ ಒಬ್ಬ ಫಿಸಿಯೋ (ಯೋಗೇಶ್ ಪಾರ್ಮರ್) ಉಳಿದಿದ್ದರು. ಹೀಗಾಗಿ ಅವರೆಲ್ಲ ಆ ಒಬ್ಬನೇ ಫಿಸಿಯೋನ ಸಹಾಯ ಪಡೆಯಬೇಕಾಗಿತ್ತು. ಬಹಳ ಕೆಲಸಗಳು ಅವರಿಂದಲೇ ಆಗಬೇಕಾಗಿದೆ. ಈಗ ಅವರಿಗೂ ಪಾಸಿಟಿವ್ ಬಂದಿದೆ. ಹೀಗಾಗಿ ಸಮಸ್ಯೆ ಶುರುವಾಗಿದೆ," ಎಂದು ಕಾರ್ತಿಕ್ ಹೇಳಿದ್ದಾರೆ.

ಟಿ20 ವಿಶ್ವಕಪ್‌ಗೆ ಅಫ್ಘಾನಿಸ್ತಾನ ತಂಡ ಪ್ರಕಟವಾದ ಬೆನ್ನಲ್ಲೇ ಮನನೊಂದ ರಶೀದ್ ಖಾನ್ ರಾಜೀನಾಮೆ!ಟಿ20 ವಿಶ್ವಕಪ್‌ಗೆ ಅಫ್ಘಾನಿಸ್ತಾನ ತಂಡ ಪ್ರಕಟವಾದ ಬೆನ್ನಲ್ಲೇ ಮನನೊಂದ ರಶೀದ್ ಖಾನ್ ರಾಜೀನಾಮೆ!

ಏನಾಯ್ತು ಟೀಮ್ ಇಂಡಿಯಾದಲ್ಲಿ? ಯಾರಿಗೆಲ್ಲ ಸೋಂಕು?
ಕೋವಿಡ್-19 ಪ್ರಕರಣಗಳು ಹೆಚ್ಚಿದ್ದರಿಂದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್‌ ಪಂದ್ಯ ರದ್ದಾಗಲು ಕಾರಣ ಟೀಮ್ ಇಂಡಿಯಾದಲ್ಲಿ ಮುಖ್ಯವಾಗಿ ಕೋಚಿಂಗ್, ಸಿಬ್ಬಂದಿ ವಿಭಾಗದಲ್ಲಿ ಬಹಳಷ್ಟು ಪ್ರಕರಣಗಳು ಕಾಣಿಸಿಕೊಂಡಿದ್ದವು. ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ರವಿ ಶಾಸ್ತ್ರಿ, ಬೌಲಿಂಗ್‌ ಕೋಚ್ ಭರತ್ ಅರುಣ್, ಫೀಲ್ಡಿಂಗ್ ಕೋಚ್ ಆರ್‌ ಶ್ರೀಧರ್, ಫಿಸಿಯೋ ನಿತಿನ್ ಪಾಟೆಲ್‌, ಮತ್ತೊಬ್ಬ ಬೆಂಬಲ ಸಿಬ್ಬಂದಿ ಜೂನಿಯರ್ ಫಿಸಿಯೋ ಯೋಗೇಶ್ ಪಾರ್ಮರ್ ಕೋವಿಡ್-19 ಫಲಿತಾಂಶಗಳು ಪಾಸಿಟಿವ್ ಬಂದಿದ್ದರಿಂದ ಕೊನೇ ಟೆಸ್ಟ್‌ ಅನ್ನು ಮುಂದೂಡಲು ಅಂತಿಮವಾಗಿ ನಿರ್ಧರಿಸಲಾಯ್ತು. ಟೀಮ್ ಇಂಡಿಯಾದ ಎಲ್ಲಾ ಆಟಗಾರರ ಫಲಿತಾಂಶ ನೆಗೆಟಿವ್ ಬಂದಿತ್ತು. ಆದರೆ ಕೋಚ್‌ಗಳು, ಬೆಂಬಲ ಸಿಬ್ಬಂದಿಗಳ ನೆರವೇ ಇಲ್ಲದೆ ಇಡೀ ಒಂದು ಟೆಸ್ಟ್‌ ಪಂದ್ಯ ಆಡೋದು ಸುಲಭದ ಮಾತಲ್ಲ. ಹೀಗಾಗಿ ಪಂದ್ಯವನ್ನು ಬೇರೊಂದು ವೇಳಾಪಟ್ಟಿಯಲ್ಲಿ ನಡೆಸಲು ನಿರ್ಧರಿಸಿ ಪಂದ್ಯವನ್ನು ಮುಂದೂಡಲಾಗಿದೆ.

ಭಾರತೀಯ ತಂಡದ ಆಟಗಾರರಲ್ಲಿ ತಳಮಳ ಶುರುವಾಯ್ತು
"ನಿಮಗೆ ಸಹಾಯ ಬೇಕಿದ್ದಾಗ ಯಾರಾದರೂ ಸಹಾಯ ಮಾಡುತ್ತಾರೆ. ಓಡಾಟದ ವೇಳೆ ಸಹಜವಾಗೇ ಸಹಾಯ ಬೇಕಾಗುತ್ತದೆ. ಆದರೆ ಒಬ್ಬ ಫಿಸಿಯೋವನ್ನು ಬೇರೆ ವ್ಯಕ್ತಿಗಳಂತೆ ಪರಿಗಣಿಸಲಾಗೋಲ್ಲ. ಅವರೇ ಸೋಂಕಿಗೀಡಾಗಿದ್ದರಿಂದ ಸಹಜವಾಗೇ ಭಾರತೀಯ ತಂಡದ ಆಟಗಾರರಲ್ಲಿ ತಳಮಳ ಶುರುವಾಯ್ತು. ಇದೇ ಕಾರಣಕ್ಕೆ ಪಂದ್ಯ ರದ್ದಾಯಿತು," ಡಿಕೆ ಹೇಳಿದ್ದಾರೆ. ಒಂದು ದಿನ ಮುಂದೂಡಿ ಪಂದ್ಯ ನಡೆಸಲು ಸಾಧ್ಯವಿರಲಿಲ್ಲವೆ? ಇಲ್ಲ, ಅದು ಕಷ್ಟ. ಯಾಕೆಂದರೆ ಭಾರತೀಯ ತಂಡದಲ್ಲಿ ಕೋಚ್‌ಗಳು, ಬೆಂಬಲ ಸಿಬ್ಬಂದಿಗಳೇ ಇಲ್ಲ. ಅವರೆಲ್ಲರೂ ಕೋವಿಡ್‌ಗೆ ತುತ್ತಾಗಿದ್ದಾರೆ. ಅವರು ಚೇತರಿಸೋಕೆ ಸಮಯ ಹಿಡಿಯುತ್ತೆ. ಕಾಯುತ್ತ ಕೂರೋದಕ್ಕೆ ಸಾಧ್ಯವಿಲ್ಲ. ಯಾಕೆಂದರೆ ಇದೇ ಸೆಪ್ಟೆಂಬರ್ 19ಕ್ಕೆ ಇಂಡಿಯನ್ ಪ್ರೀಮಿಯರ್ ಲೀಗ್‌ ದ್ವಿತೀಯ ಹಂತದ ಸ್ಪರ್ಧೆಗಳು ನಡೆಯಲಿವೆ. ಹೀಗಾಗಿ ಟೆಸ್ಟ್ ಸರಣಿ ಎಲ್ಲಿಗೆ ಮುಟ್ಟಲಿದೆ ಅನ್ನೋದು ಕಾದು ನೋಡಬೇಕಷ್ಟೇ.

Story first published: Friday, September 10, 2021, 20:41 [IST]
Other articles published on Sep 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X