ಕೊಹ್ಲಿ ಅನುಪಸ್ಥಿತಿಯಲ್ಲಿ ಭಾರತೀಯರು ಚೆನ್ನಾಗಿ ಆಡ್ತಾರೆ: ಗವಾಸ್ಕರ್

ನವದೆಹಲಿ: ಮುಂಬರಲಿರುವ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ವೇಳೆ ತಂಡದ ನಾಯಕ ವಿರಾಟ್ ಕೊಹ್ಲಿಯ ಅನುಪಸ್ಥಿತಿಯ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ತಲೆ ಕೆಡಿಸಿಕೊಳ್ಳಬೇಕಿಲ್ಲ ಎಂದು ಟೀಮ್ ಇಂಡಿಯಾದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಹೇಳಿದ್ದಾರೆ.

ಸೂರ್ಯಕುಮಾರ್-ಕೊಹ್ಲಿ ಸಿಡುಕಿನ ಬಳಿಕ ಏನಾಯ್ತು?!: ಯಾದವ್ ವಿವರಣೆಸೂರ್ಯಕುಮಾರ್-ಕೊಹ್ಲಿ ಸಿಡುಕಿನ ಬಳಿಕ ಏನಾಯ್ತು?!: ಯಾದವ್ ವಿವರಣೆ

ಆಸ್ಟ್ರೇಲಿಯಾಕ್ಕೆ ಭಾರತದ ಪ್ರವಾಸದ ವೇಳೆ ಟೆಸ್ಟ್ ಸರಣಿಯ ಎಲ್ಲಾ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಆಡುತ್ತಿಲ್ಲ. ಮೊದಲ ಟೆಸ್ಟ್ (ಪಿಂಕ್‌ ಬಾಲ್‌ ಟೆಸ್ಟ್‌)ನಲ್ಲಿ ಆಡಿದ ಬಳಿಕ ಕೊಹ್ಲಿ ಪಿತೃತ್ವ ರಜೆ ಪಡೆದುಕೊಳ್ಳಲಿದ್ದಾರೆ. ಜನವರಿಯಲ್ಲಿ ಕೊಹ್ಲಿ ತಂದೆ ಅನ್ನಿಸುವ ನಿರೀಕ್ಷೆಯಿರುವುದರಿಂದ ಪೂರ್ತಿ ಟೆಸ್ಟ್ ಸರಣಿಯಲ್ಲಿ ಕೊಹ್ಲಿ ಆಡುತ್ತಿಲ್ಲ.

ಟೈಮ್ಸ್ ಆಫ್‌ ಇಂಡಿಯಾ ಜೊತೆ ಮಾತನಾಡಿದ ಸುನಿಲ್ ಗವಾಸ್ಕರ್, 'ನೀವು ಹಿಂತಿರುಗಿ ನೋಡಿದರೆ ಕೊಹ್ಲಿ ತಂಡದಲ್ಲಿ ಇಲ್ಲದಾಗ ಭಾರತೀಯ ಆಟಗಾರರು ಇನ್ನೂ ಚೆನ್ನಾಗಿ ಆಡ್ತಾರೆ. ಪಂದ್ಯಗಳನ್ನು ಗೆಲ್ಲುತ್ತಾರೆ. ಆಸ್ಟ್ರೇಲಿಯಾ ವಿರುದ್ಧದ ಧರ್ಮಶಾಲಾ ಟೆಸ್ಟ್, ಅಫ್ಘಾನಿಸ್ತಾನ ಟೆಸ್ಟ್, ನಿದಹಾಸ್ ಟ್ರೋಫಿ ಅಥವಾ 2018ರ ಏಷ್ಯಾಕಪ್ ಇದನ್ನೆಲ್ಲಾ ನೀವು ಗಮನಿಸಬಹುದು,' ಎಂದಿದ್ದಾರೆ.

ಭಾರತ vs ಆಸೀಸ್: ಕಾಮೆಂಟೇಟರ್ಸ್ ಪಟ್ಟಿಯಲ್ಲಿ ಸಂಜಯ್ ಮಂಜ್ರೇಕರ್ಭಾರತ vs ಆಸೀಸ್: ಕಾಮೆಂಟೇಟರ್ಸ್ ಪಟ್ಟಿಯಲ್ಲಿ ಸಂಜಯ್ ಮಂಜ್ರೇಕರ್

ಮಾತು ಮುಂದುವರೆಸಿದ ಗವಾಸ್ಕರ್, 'ಕೊಹ್ಲಿ ತಂಡದಲ್ಲಿಲ್ಲದಾಗ ಆಟವನ್ನು ಇನ್ನೂ ಹೆಚ್ಚಿಸಲು ಭಾರತೀಯ ಆಟಗಾರರು ಇಚ್ಛಿಸುತ್ತಾರೆ. ಕೊಹ್ಲಿ ಅನುಪಸ್ಥಿತಿ ತಂಡಕ್ಕೆ ಕಾಡದಂತೆ ಆಡಬೇಕು ಅನ್ನೋದು ಭಾರತೀಯರು ಅರ್ಧ ಮಾಡಿಕೊಂಡಿದ್ದಾರೆ,' ಎಂದು ವಿವರಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Saturday, November 21, 2020, 16:36 [IST]
Other articles published on Nov 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X