ಟೀಮ್ ಇಂಡಿಯಾ ಆಯ್ಕೆಗೆ ಪೃಥ್ವಿಗೆ ಶರತ್ತು ವಿಧಿಸಿದ ಆಯ್ಕೆದಾರರು

Prithvi Shaw ಯಾವ ಕಾರಣಕ್ಕೆ ಆಯ್ಕೆಯಾಗಿಲ್ಲ ಗೊತ್ತಾ | Oneindia Kannada

ನವದೆಹಲಿ: ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ಗೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) 20 ಮಂದಿಯ ತಂಡ ಪ್ರಕಟಿಸಿದೆ. ಈ ತಂಡ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲೂ ಆಡಲಿದೆ. ಆದರೆ ಪ್ರಕಟಿತ ತಂಡದಲ್ಲಿ ಯುವ ಬ್ಯಾಟ್ಸ್‌ಮನ್‌ ಪೃಥ್ವಿ ಶಾಗೆ ಸ್ಥಾನ ನೀಡಿಲ್ಲ.

ಈ ವಿಚಾರದಲ್ಲಿ ಆರ್‌ಸಿಬಿಯೇ ನಂ.1, ಬೆಂಗಳೂರ್ ಸೂಪರ್!ಈ ವಿಚಾರದಲ್ಲಿ ಆರ್‌ಸಿಬಿಯೇ ನಂ.1, ಬೆಂಗಳೂರ್ ಸೂಪರ್!

ಈ ವರ್ಷಾರಂಭದಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯ ವೇಳೆ ಭಾರತ ಟೆಸ್ಟ್ ತಂಡದಲ್ಲಿದ್ದ ಪೃಥ್ವಿ ಶಾ ಆ ಬಳಿಕ ಕಳಪೆ ಪ್ರದರ್ಶನದಿಂದಾಗಿ ತಂಡದಿಂದ ಕೈಬಿಡಲ್ಪಟ್ಟಿದ್ದರು. ಅದಾಗಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಿದ್ದ ಪೃಥ್ವಿ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ್ದರು. ವಿಜಯ್ ಹಜಾರೆ ಇತಿಹಾಸದಲ್ಲೇ ಒಂದೇ ಸೀಸನ್‌ನಲ್ಲಿ 800+ ರನ್ ಬಾರಿಸಿದ ದಾಖಲೆಯೂ ನಿರ್ಮಿಸಿದ್ದರು.

ಅನಂತರ ಐಪಿಎಲ್‌ನಲ್ಲೂ ಪೃಥ್ವಿ ಅದೇ ಫಾರ್ಮ್ ಮುಂದುವರೆಸಿದ್ದರು. ಡೆಲ್ಲಿ ಕ್ಯಾಪಿಟಲ್ಸ್ ಪರ 8 ಇನ್ನಿಂಗ್ಸ್‌ ಆಡಿದ್ದ ಪೃಥ್ವಿ 308 ರನ್‌ನೊಂದಿಗೆ ಅತ್ಯಧಿಕ ರನ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರು. ಆದರೂ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಗಳಿಗೆ ಪೃಥ್ವಿಯ ಕಡೆಗಣನೆ ಕ್ರಿಕೆಟ್ ಪ್ರೇಮಿಗಳ ಅಚ್ಚರಿಗೆ ಕಾರಣವಾಗಿತ್ತು. ಆದರೆ ಇದಕ್ಕೆ ಕಾರಣವೇನೆಂದು ಬಿಸಿಸಿಐ ಮೂಲ ತಿಳಿಸಿದೆ.

ಇಂಗ್ಲಿಷ್ ಕೌಂಟಿಗಳಿಂದ ಬಂದ ಐಪಿಎಲ್ ಆಫರ್ ಚರ್ಚಿಸಲಿದೆ ಬಿಸಿಸಿಐಇಂಗ್ಲಿಷ್ ಕೌಂಟಿಗಳಿಂದ ಬಂದ ಐಪಿಎಲ್ ಆಫರ್ ಚರ್ಚಿಸಲಿದೆ ಬಿಸಿಸಿಐ

'21ರ ಹರೆಯದ ಪೃಥ್ವಿ ಮೈದಾನದಲ್ಲಿ ಎಲ್ಲರಿಗಿಂತಲೂ ತುಂಬಾ ಸ್ಲೋ ಇದ್ದಾರೆ. ಹೀಗಾಗಿ ಅವರು ಅವರ ತೂಕವನ್ನು ಕೆಲವು ಕಿಲೋಗಳವರೆಗೆ ಕಡಿಮೆ ಮಾಡಿಕೊಳ್ಳಬೇಕು. ಆಸ್ಟ್ರೇಲಿಯಾದಲ್ಲಿ ಫೀಲ್ಡಿಂಗ್‌ ಮಾಡುವಾಗ ಗಮನದ ಕೊರತೆಯೂ ಅನುಭವಿಸಿದ್ದರು. ಆತನಿಗೆ ರಿಷಭ್ ಪಂತ್ ಒಳ್ಳೆಯ ಉದಾಹರಣೆಯಾಗಬಹುದು. ಪಂತ್‌ ಕಮ್‌ಬ್ಯಾಕ್‌ ಮಾಡಿದ್ದಾರೆಂದರೆ ಪೃಥ್ವಿಗೂ ಆಗುತ್ತದೆ,' ಎಂದು ಬಿಸಿಸಿಐ ಮೂಲ ಹೇಳಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Saturday, May 8, 2021, 13:39 [IST]
Other articles published on May 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X