ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದ ನಂತರ ಭಾರತ ತಂಡ ಸುಧಾರಿಸಿಲ್ಲ; ಪಾಕ್ ಕ್ರಿಕೆಟಿಗ

Indian Cricket Team Has Not Improved Since Virat Kohli Was Removed From The Captaincy Says Salman Butt

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಶುಕ್ರವಾರ ಟೀಂ ಇಂಡಿಯಾ ರಾಷ್ಟ್ರೀಯ ಆಯ್ಕೆಗಾರರ ​​ಸ್ಥಾನಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ ಎಂದು ಪ್ರಕಟಿಸಿದೆ. ಅರ್ಜಿಗಳನ್ನು ಸಲ್ಲಿಸಲು ನವೆಂಬರ್ 28 ಕೊನೆಯ ದಿನಾಂಕವಾಗಿದ್ದು, ಅಂದಿನ ಸಂಜೆ 6 ಗಂಟೆಗೆ ಬಿಸಿಸಿಐ ಡೆಡ್‌ಲೈನ್ ನಿಗದಿಪಡಿಸಿದೆ.

2022ರ ಟಿ20 ವಿಶ್ವಕಪ್ ವೈಫಲ್ಯದ ನಂತರ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಕಳೆದ ಶುಕ್ರವಾರದಂದು ಚೇತನ್ ಶರ್ಮಾ ನೇತೃತ್ವದ ಭಾರತ ಹಿರಿಯ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ವಜಾಗೊಳಿಸಿದೆ, ಹೀಗಾಗಿ ಹೊಸ ರಾಷ್ಟ್ರೀಯ ಆಯ್ಕೆಗಾರ ಸಮಿತಿಗೆ ಅರ್ಜಿ ಆಹ್ವಾನಿಸಿದೆ.

ಚೇತನ್ ಶರ್ಮಾ ವಜಾ; ಭಾರತ ಕ್ರಿಕೆಟ್ ತಂಡದ ರಾಷ್ಟ್ರೀಯ ಆಯ್ಕೆಗಾರರ ​​ಸ್ಥಾನಕ್ಕೆ ಅರ್ಜಿ ಆಹ್ವಾನಿಸಿದ ಬಿಸಿಸಿಐ

ಭಾರತ ಕ್ರಿಕೆಟ್ ತಂಡದ ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಪಾಕಿಸ್ತಾನ ತಂಡದ ಮಾಜಿ ನಾಯಕ ಸಲ್ಮಾನ್ ಬಟ್ ಪ್ರತಿಕ್ರಿಯಿಸಿದ್ದು, ವಿರಾಟ್ ಕೊಹ್ಲಿಯನ್ನು ಏಕದಿನ ನಾಯಕತ್ವದಿಂದ ತೆಗೆದುಹಾಕುವಂತಹ ಕೆಲವು ಪ್ರಶ್ನಾರ್ಹ ನಿರ್ಧಾರಗಳನ್ನು ಆಯ್ಕೆಗಾರರು ಮಾಡಿದ್ದಾರೆ ಎಂದು ಹೇಳಿದ್ದಾರೆ. ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದ ನಂತರ ಭಾರತ ತಂಡ ಹೆಚ್ಚು ಸುಧಾರಿಸಿಲ್ಲ ಎಂದು ಸಲ್ಮಾನ್ ಬಟ್ ಹೇಳಿದರು.

 ಎಷ್ಟು ನಾಯಕರು ಐಸಿಸಿ ಟ್ರೋಫಿಯನ್ನು ಗೆದ್ದಿದ್ದಾರೆ?

ಎಷ್ಟು ನಾಯಕರು ಐಸಿಸಿ ಟ್ರೋಫಿಯನ್ನು ಗೆದ್ದಿದ್ದಾರೆ?

"ಆಸ್ಟ್ರೇಲಿಯಾದ ಪರ್ತ್ ಮತ್ತು ಮೆಲ್ಬೋರ್ನ್‌ ಮೈದಾನಗಳಲ್ಲಿ ಟಿ20 ವಿಶ್ವಕಪ್‌ ಆಡುತ್ತಿರುವಾಗ ಭಾರತ ತಂಡದಲ್ಲಿ ಅತ್ಯುತ್ತಮ ವೇಗದ ಬೌಲರ್ ಇಲ್ಲದಿರುವುದಕ್ಕೆ ಕಾರಣವೇನು?, ಐಸಿಸಿ ಟ್ರೋಫಿಯನ್ನು ಗೆದ್ದಿಲ್ಲ ಎಂದು ವಿರಾಟ್ ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಿದರು. ಹಾಗಾದರೆ ಎಷ್ಟು ನಾಯಕರು ಐಸಿಸಿ ಟ್ರೋಫಿಯನ್ನು ಗೆದ್ದಿದ್ದಾರೆ?" ಎಂದು ಪ್ರಶ್ನಿಸಿದ ಸಲ್ಮಾನ್ ಬಟ್, ಬಹಳಷ್ಟು ನಾಯಕರು ಟ್ರೋಫಿಯನ್ನು ಗೆಲ್ಲದಿದ್ದರೂ ತಮ್ಮ ವೃತ್ತಿಜೀವನವನ್ನು ಮುಗಿಸುತ್ತಾರೆ ಎಂದರು.

ಭಾರತ ತಂಡದ ನಾಯಕತ್ವದ ವಿಷಯದ ಬಗ್ಗೆ ಮತ್ತಷ್ಟು ಮಾತನಾಡಿದ ಸಲ್ಮಾನ್ ಬಟ್, "ಇದು ಗೆಲ್ಲುವ ನಾಯಕನ ಅಗತ್ಯವಿದ್ದಲ್ಲಿ, ಎಂಎಸ್ ಧೋನಿಯನ್ನು ಏಕೆ ಯುಎಇಯಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಆಡಿಸಲು ಸಾಧ್ಯವಾಗಲಿಲ್ಲ? ಅವರು ಇನ್ನೂ ಫಿಟ್ ಆಗಿದ್ದರು. ಆಗ ಎಂಎಸ್ ಧೋನಿ ಮಾರ್ಗದರ್ಶಕರಾಗಿದ್ದಾಗ, ವಿರಾಟ್ ಕೊಹ್ಲಿ ಮಾತ್ರ ಫಿಟ್ ಆಗಿದ್ದರು. ಅವರಿಗಿಂತ ಫಿಟ್ ಆಗಿ ಯಾರೂ ಕಾಣಿಸಲಿಲ್ಲ," ಎಂದು ಅಭಿಪ್ರಾಯಪಟ್ಟರು.

 ಕೊಹ್ಲಿಯನ್ನು ಮಾನಸಿಕವಾಗಿ ಕುಗ್ಗಿಸುವಲ್ಲಿ ದೊಡ್ಡ ಪಾತ್ರ ವಹಿಸಿದೆ

ಕೊಹ್ಲಿಯನ್ನು ಮಾನಸಿಕವಾಗಿ ಕುಗ್ಗಿಸುವಲ್ಲಿ ದೊಡ್ಡ ಪಾತ್ರ ವಹಿಸಿದೆ

"ಇದರ ಹಿಂದಿನ ಯೋಜನೆ ಏನು ಎಂದು ನನಗೆ ಗೊತ್ತಾಗುತ್ತಿಲ್ಲ. ಟಿ20 ಕ್ರಿಕೆಟ್‌ನಲ್ಲಿ ಭಾರತ ತಂಡದಲ್ಲಿ ಆಗಾಗ್ಗೆ ಬದಲಾವಣೆಯಾಗುತ್ತಿದೆ. ಪ್ರತಿ ಎರಡು ವರ್ಷಗಳಿಗೊಮ್ಮೆ ವಿಶ್ವಕಪ್ ಇರುತ್ತದೆ ಮತ್ತು ಫ್ರಾಂಚೈಸ್ ಲೀಗ್‌ಗಳು ಸಹ ಇವೆ. ಆದರೂ ಭಾರತ ತಂಡ ಟಿ20 ವಿಶ್ವಕಪ್‌ ಗೆಲ್ಲಲು ಹಲವು ವರ್ಷಗಳಿಂದ ಹೋರಾಡುತ್ತಿದೆ. ತಂಡದಲ್ಲಿ ಫಿಟ್ ಆಗಿರುವ, ಪ್ರದರ್ಶನ ನೀಡುವ ಆಟಗಾರರನ್ನು ತಂಡದಲ್ಲಿ ಇಟ್ಟುಕೊಳ್ಳಿ," ಎಂದು ಸಲ್ಮಾನ್ ಬಟ್ ತಿಳಿಸಿದರು.

ವಿರಾಟ್ ಕೊಹ್ಲಿಯನ್ನು ನಾಯಕನ ಸ್ಥಾನದಿಂದ ತೆಗೆದು ಹಾಕಿರುವುದು, ಅವರನ್ನು ಮಾನಸಿಕವಾಗಿ ಕುಗ್ಗಿಸುವಲ್ಲಿ ದೊಡ್ಡ ಪಾತ್ರ ವಹಿಸಿದೆ ಎಂದು ಪಾಕಿಸ್ತಾನ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ಹೇಳಿದರು.

 ವಿರಾಟ್ ಕೊಹ್ಲಿ ಕಳಪೆ ಫಾರ್ಮ್‌ಗೆ ಕಾರಣವಾಯಿತು

ವಿರಾಟ್ ಕೊಹ್ಲಿ ಕಳಪೆ ಫಾರ್ಮ್‌ಗೆ ಕಾರಣವಾಯಿತು

"ವಿರಾಟ್ ಕೊಹ್ಲಿ ಅದ್ಭುತ ಕೆಲಸ ಮಾಡುತ್ತಿದ್ದಾರೆ, ಆದರೆ ಅವರು ಐಸಿಸಿ ಪ್ರಶಸ್ತಿಯನ್ನು ಗೆಲ್ಲದಿರುವುದು ದುರದೃಷ್ಟಕರ. ಆದರೆ ಗೆಲ್ಲದಿರಲು ಕಾರಣಗಳೇನು ಎಂದು ಭಾರತ ತಂಡದ ಆಡಳಿತ ಮಂಡಳಿ ಯೋಚಿಸಬಹುದಿತ್ತು. ನೀವು ವಿರಾಟ್ ಕೊಹ್ಲಿಯನ್ನು ಬದಲಾಯಿಸಿದ್ದರಿಂದ ಅವರ ಕಳಪೆ ಫಾರ್ಮ್‌ಗೆ ಕಾರಣವಾಯಿತು ಮತ್ತು ಇದರಿಂದಾಗಿ ಕೊಹ್ಲಿ ಮಾನಸಿಕವಾಗಿ ಬಳಲುತ್ತಿದ್ದರು," ಎಂದು ಸಲ್ಮಾನ್ ಬಟ್ ತಿಳಿಸಿದ್ದಾರೆ.

Story first published: Sunday, November 20, 2022, 15:49 [IST]
Other articles published on Nov 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X