ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇನ್‌ಸ್ಟಾಗ್ರಾಮ್‌ ಶ್ರೀಮಂತರ ಪಟ್ಟಿಯಲ್ಲಿ ಕೊಹ್ಲಿಗೆ 19ನೇ ಸ್ಥಾನ: ಒಂದು ಪೋಸ್ಟ್‌ಗೆ 5 ಕೋಟಿ ರೂಪಾಯಿ

Virat kohli

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಿಲಿಯನ್‌ಗಟ್ಟಲೇ ಫಾಲೋವರ್ಸ್ ಹೊಂದಿದ್ದಾರೆ. ವಿಶ್ವದ ಬಹುದೊಡ್ಡ ಬ್ರ್ಯಾಂಡ್‌ಗಳ ಅಂಬಾಸಿಡರ್ ಆಗಿರೋ ಕೊಹ್ಲಿಗೆ ಸಾಕಷ್ಟು ಬೇಡಿಕೆ ಇದೆ. ಹೀಗಾಗಿಯೇ ಕೊಹ್ಲಿಯನ್ನ ತಮ್ಮ ಕಂಪನಿಯ ಪ್ರಾಡಕ್ಟ್‌ಗಳಿಗೆ ಅಂಬಾಸಿಡರ್ ಆಗಿಸಿಕೊಳ್ಳಲು ಅನೇಕ ಕಂಪನಿಗಳು ಪ್ರಯತ್ನ ಪಡುತ್ತವೆ. ಆದ್ರೆ ವಿರಾಟ್ ಆಯ್ದ ಬ್ರ್ಯಾಂಡ್‌ಗಳ ಆಯ್ಕೆ ಜೊತೆಗೆ ಹೆಚ್ಚು ಪಾವತಿಸುವ ಸಂಸ್ಥೆಗೂ ಮನ್ನಣೆ ನೀಡುತ್ತಾರೆ.

ಅಧಿಕೃತ ಹಾಪರ್ HQ 2021 ರ ತಮ್ಮ ಇನ್‌ಸ್ಟಾಗ್ರಾಮ್ ಶ್ರೀಮಂತರ ಪಟ್ಟಿಯನ್ನು ಪ್ರಕಟಿಸಿದೆ ಮತ್ತು ಅಗ್ರ 20 ರ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯರಾಗಿದ್ದಾರೆ.

ನಾಯಕತ್ವಕ್ಕೆ ಕೊಹ್ಲಿ ರಾಜೀನಾಮೆ ನೀಡಲು ಈತನೇ ಕಾರಣ ಎಂದ ರಶೀದ್ ಲತೀಫ್!ನಾಯಕತ್ವಕ್ಕೆ ಕೊಹ್ಲಿ ರಾಜೀನಾಮೆ ನೀಡಲು ಈತನೇ ಕಾರಣ ಎಂದ ರಶೀದ್ ಲತೀಫ್!

ಇನ್‌ಸ್ಟಾಗ್ರಾಮ್ ಶ್ರೀಮಂತರ ಪಟ್ಟಿಯಲ್ಲಿ 19ನೇ ಸ್ಥಾನ ಪಡೆದಿರುವ ವಿರಾಟ್ ಕೊಹ್ಲಿ ಬರೋಬ್ಬರಿ 179 ಮಿಲಿಯನ್ ಫಾಲೋವರ್ಸ್‌ ಹೊಂದಿದ್ದು, ಒಂದು ಪೋಸ್ಟ್‌ಗೆ $6,80,000 ಅಮೆರಿಕನ್ ಡಾಲರ್ ಸಂಭಾವನೆ ಪಡೆಯುತ್ತಾರೆ. ಅಂದ್ರೆ ಭಾರತೀಯ ರೂಪಾಯಿಗಳಲ್ಲಿ ಒಂದು ಪೋಸ್ಟ್‌ಗೆ ಬರೋಬ್ಬರಿ 5 ಕೋಟಿ ರೂಪಾಯಿಗೂ ಹೆಚ್ಚು.

ಕೊಹ್ಲಿ ಹೊರತುಪಡಿಸಿ ಟಾಪ್ 30 ಲಿಸ್ಟ್‌ನಲ್ಲಿ ಕಂಡುಬರುವ ಏಕೈಕ ಭಾರತೀಯರೆಂದರೆ ಬಾಲಿವುಡ್ ಮತ್ತು ಹಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ. ಪ್ರಿಯಾಂಕ ಚೋಪ್ರಾ ಜೋನಸ್ ಸದ್ಯ ಈ ಪಟ್ಟಿಯಲ್ಲಿ 27ನೇ ಸ್ಥಾನ ಹೊಂದಿದ್ದು, ಒಂದು ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ $403,000 ಅಮೆರಿಕನ್ ಡಾಲರ್ ಚಾರ್ಜ್ ಮಾಡುತ್ತಾರೆ.

ಕೊಹ್ಲಿ ವಿಶ್ವದಾದ್ಯಂತ ಕ್ರೀಡಾ ಲೋಕದಲ್ಲಿ ದೊಡ್ಡ ಹೆಸರನ್ನು ಗಳಿಸಿದ್ದಾರೆ ಮತ್ತು ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮೊದಲ ಕ್ರಿಕೆಟಿಗರಾಗಿದ್ದಾರೆ ಎಂಬುದು ವಿಶೇಷ. ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಮತ್ತೊಬ್ಬ ಕ್ರಿಕೆಟಿಗ ಅಂದ್ರೆ ಅದು ದಕ್ಷಿಣ ಆಫ್ರಿಕಾದ ಸ್ಟಾರ್ ಮಾಜಿ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ 76ನೇ ಸ್ಥಾನದಲ್ಲಿದ್ದಾರೆ.

ಇನ್‌ಸ್ಟಾಗ್ರಾಮ್ ಶ್ರೀಮಂತರ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿರುವುದು ಪೋರ್ಚುಗಲ್ ಫುಟ್ಬಾಲ್ ಸೂಪರ್‌ ಸ್ಟಾರ್ ಕ್ರಿಸ್ಟಿಯಾನೊ ರೊನಾಲ್ಡೊ. ಈತ ಪ್ರತಿ ಇನ್‌ಸ್ಟಾಗ್ರಾಮ್ ಪೋಸ್ಟ್‌ಗೆ ಬರೋಬ್ಬರಿ $ 1,604,000 ಡಾಲರ್ ಅಂದ್ರೆ ಸುಮಾರು 12 ಕೋಟಿ ರೂಪಾಯಿಗಳನ್ನ ಚಾರ್ಜ್ ಮಾಡುತ್ತಾರೆ.

ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಕ್ರಿಸ್ಟಿಯಾನೊ ರೊನಾಲ್ಡ್ ನಂತರದಲ್ಲಿ ಹಾಲಿವುಡ್ ನಟ ಡ್ವೇನ್ ಜಾನ್ಸನ್, ಅರಿಯಾನಾ ಗ್ರಾಂಡೆ, ಕೈಲಿ ಜೆನ್ನರ್ ಮತ್ತು ಸೆಲೀನ್ ಗೊಮೆಜ್ ಇದ್ದಾರೆ. ಮತ್ತೊಂದೆಡೆ, ಕೊಹ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಕ್ರಿಕೆಟಿಗರಾಗಿದ್ದಾರೆ ಮತ್ತು ಏಷ್ಯಾದಲ್ಲಿ ಅತಿ ಹೆಚ್ಚು ಫಾಲೋವರ್ ಹೊಂದಿರುವ ವ್ಯಕ್ತಿಯಾಗಿದ್ದಾರೆ.

ಇತ್ತೀಚೆಗಷ್ಟೇ ಅವರು ಟಿ20 ಮತ್ತು ಐಪಿಎಲ್ ನಾಯಕತ್ವವನ್ನು ತ್ಯಜಿಸಿದ ನಂತರ ಟೆಸ್ಟ್ ನಾಯಕತ್ವದಿಂದ ಕೆಳಗಿಳಿದಿದ್ದರು. ಏಕದಿನ ನಾಯಕತ್ವದಿಂದ ವಜಾಗೊಂಡರೂ ಸಹ ಅವರ ಬ್ರ್ಯಾಂಡ್ ಮೌಲ್ಯದ ಮೇಲೆ ಹೆಚ್ಚಾಗಿ ಪರಿಣಾಮ ಬೀರಿಲ್ಲ. ಹೀಗಾಗಿಯೇ ಕಿಂಗ್ ಕೊಹ್ಲಿ ಭಾರತದ ಜಾಹೀರಾತು ಪ್ರಪಂಚವನ್ನು ಆಳುತ್ತಾರೆ ಎಂದು ವರದಿಯಾಗಿದೆ.

Story first published: Tuesday, January 18, 2022, 17:16 [IST]
Other articles published on Jan 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X