ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬೆನ್ನು ತಟ್ಟಿದ ಸೆಹ್ವಾಗ್‌ಗೆ ಅಜಾಜ್ ನೆನಪಿಸಿದ್ದು ಸಿಕ್ಸರ್‌ಗೆ ಅಟ್ಟಿದ ಕಥೆ: ಟ್ವೀಟ್ ಸಂವಹನಕ್ಕೆ ಅಭಿಮಾನಿಗಳು ಪುಳಕ

Interesting Social media conversation between Virender Sehwag and Ajaz Patel

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿ ಅಂತ್ಯವಾಗಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಸರಣಿಯ ಎರಡನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತ ಟೆಸ್ಟ್ ಇತಿಹಾಸದಲ್ಲಿ ರನ್‌ಗಳ ಅಂತರದಲ್ಲಿ ತನ್ನ ಬೃಹತ್ ಗೆಲುವನ್ನು ದಾಖಲಿಸಿದೆ. ಈ ಗೆಲುವಿನೊಂದಿಗೆ ಭಾರತ ಟೆಸ್ಟ್ ಸರಣಿಯನ್ನು ಕೂಡ ತನ್ನ ವಶಕ್ಕೆ ಪಡೆದುಕೊಂಡಿದೆ. ಆದರೆ ಈ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಸ್ಪಿನ್ನರ್ ಅಜಾಜ್ ಪಟೇಲ್ ಟೆಸ್ಟ್ ಇತಿಹಾಸದಲ್ಲಿ ಅಪರೂಪದ ಸಾಧನೆ ಮಾಡುವ ಮೂಲಕ ಕ್ರಿಕೆಟ್ ಲೋಕದ ಗಮನ ಸೆಳೆದಿದ್ದಾರೆ. ಮುಂಬೈ ಟೆಸ್ಟ್ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತದ ಎಲ್ಲಾ 10 ವಿಕೆಟ್ ಪಡೆದು ಜಿಮ್ ಲೇಕರ್ ಹಾಗೂ ಅನಿಲ್ ಕುಂಬ್ಳೆ ದಾಖಲೆಯನ್ನು ಸರಿಗಟ್ಟಿದ್ದಾರೆ.

ಅಜಾಜ್ ಪಟೇಲ್ ಅವರ ಈ ಸಾಧನೆಗೆ ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಕೂಡ ಅಭಿನಂದಿಸಿದ್ದಾರೆ. ಕ್ರಿಕೆಟ್‌ ಪಂಡಿತರು, ಹಾಲಿ ಹಾಗೂ ಮಾಜಿ ಆಟಗಾರರು ಕೂಡ ಅಜಾಜ್ ಪಟೇಲ್ ಅವರ ಸಾಧನೆಯನ್ನು ಕೊಂಡಾಡಿದ್ದಾರೆ. ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಡ ಅಜಾಜ್ ಪಟೇಲ್ ಸಾಧನೆಗೆ ಮನದುಂಬಿ ಹಾರೈಸಿದ್ದಾರೆ. ಆದರೆ ಇದಕ್ಕೆ ಅಜಾಜ್ ಪಟೇಲ್ ಅವರಿಂದ ಬಂದ ಪ್ರತಿಕ್ರಿಯೆ ಹಾಗೂ ಸೆಹ್ವಾಗ್ ಅವರ ಪ್ರತ್ಯುತ್ತರ ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ಪುಳಕಗೊಳಿಸಿದೆ.

ತವರಿನಲ್ಲಿ ವೇಗವಾಗಿ 300 ಟೆಸ್ಟ್‌ ವಿಕೆಟ್ ಪಡೆದ ಬೌಲರ್ಸ್‌: ಭಾರತದವರೆಷ್ಟು?ತವರಿನಲ್ಲಿ ವೇಗವಾಗಿ 300 ಟೆಸ್ಟ್‌ ವಿಕೆಟ್ ಪಡೆದ ಬೌಲರ್ಸ್‌: ಭಾರತದವರೆಷ್ಟು?

ಅಜಾಜ್ ಅಭಿನಂದಿಸಿ ಸೆಹ್ವಾಗ್ ಟ್ವೀಟ್: ಅಜಾಜ್ ಅವರ 10 ವಿಕೆಟ್‌ಗಳ ಸಾಧನೆಯನ್ನು ಪ್ರಶಂಸಿಸಿ ವಿರೇಂದ್ರ ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ. "ಈ ಕ್ರೀಡೆಯಲ್ಲಿ ಅತ್ಯಂತ ಕಠಿಣವಾದ ಸಾಧನೆ ಇನ್ನಿಂಗ್ಸ್‌ನಲ್ಲಿ 10 ವಿಕೆಟ್ ಪಡೆಯುವುದು. ಈ ದಿನ ನಿಮ್ಮ ಜೀವನವಿಡೀ ನೆನಪಿರುತ್ತದೆ ಅಜಾಜ್ ಪಟೇಲ್. ಮುಂಬೈನಲ್ಲಿ ಹುಟ್ಟಿ ಮುಂಬೈನಲ್ಲಿ ಇತಿಹಾಸ ನಿರ್ಮಿಸಿದ್ದೀರಿ. ಈ ಐತಿಹಾಸಿಕ ಸಾಧನೆಗೆ ಅಭಿನಂದನೆಗಳು" ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಇನ್ನು ಸೆಹ್ವಾಗ್ ಮಾಡಿದ ಈ ಟ್ವೀಟ್ ನೋಡಿದ ಅಜಾಜ್ ಪಟೇಲ್ ಅದಕ್ಕೆ ಪ್ರತಿಕ್ರಿಯಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ನೆಟ್ ಬೌಲರ್ ಆಗಿ ಸೆಹ್ವಾಗ್‌ಗೆ ಬೌಲಿಂಗ್ ಮಾಡಿದ್ದಾಗಿನ ಘಟನೆಯೊಂದನ್ನು ನೆನಪಿಸಿಕೊಂಡಿದ್ದು ಮೈದಾನದಾಚೆಗೆ ತನ್ನ ಬೌಲಿಂಗ್‌ನಲ್ಲಿ ಸೆಹ್ವಾಗ್ ಚೆಂಡನ್ನು ಬಾರಿಸಿದ ಘಟನೆಯನ್ನು ತಮಾಷೆಯಾಗಿ ಸೆಹ್ವಾಗ್‌ಗೆ ನೆನಪಿಸಿದ್ದಾರೆ. "ಧನ್ಯವಾದಗಳು ವೀರೇಂದ್ರ ಸೆಹ್ವಾಗ್. ಒಂದು ತಮಾಷೆಯ ಘಟನೆ ನನಗೆ ಇನ್ನೂ ನೆನಪಿದೆ. ನಾನು ನೆಟ್ ಬೌಲರ್‌ ಆಗಿ ಬಂದಿದ್ದಾಗ ಓವಲ್‌ನ ಈಡನ್ ಪಾರ್ಕ್‌ನಲ್ಲಿ ನನ್ನ ಎಸೆತವನ್ನು ನೀವು ಮೈದಾನದಾಚೆಗೆ ಬಾರಿಸಿದ್ದಿರಿ" ಎಂದು ಅಜಾಜ್ ಪಟೇಲ್ ಟ್ವೀಟ್ ಮಾಡಿದ್ದಾರೆ.

ಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್, ಏಕದಿನ ಸರಣಿ: ಪರಿಷ್ಕೃತ ವೇಳಾಪಟ್ಟಿ ಪ್ರಕಟಭಾರತ-ದಕ್ಷಿಣ ಆಫ್ರಿಕಾ ಟೆಸ್ಟ್, ಏಕದಿನ ಸರಣಿ: ಪರಿಷ್ಕೃತ ವೇಳಾಪಟ್ಟಿ ಪ್ರಕಟ

ಇನ್ನು ಅಜಾಜ್ ಪಟೇಲ್ ಅವರ ಈ ಟ್ವೀಟ್‌ಗೆ ಸೆಹ್ವಾಗ್ ನೀಡಿದ ಪ್ರತಿಕ್ರಿಯೆ ಮೆಚ್ಚುಗೆಯ ಮಾತುಗಳು ಸಾಕಷ್ಟು ಪ್ರಶಂಸೆಗೆ ಒಳಗಾಗಿದೆ. ಅಜಾಜ್ ಸಾಧನೆಯನ್ನು ಸೆಹ್ವಾಗ್ ಹೃದಯಾಂತರಾಳದಿಂದ ಪ್ರಶಂಸಿದಿದ್ದಾರೆ. "ಈಗ ಕಾಲ ಬದಲಾಗಿದೆ. ಮುಂಬೂನಲ್ಲಿ ನೀವು ಮಾಡಿದ ಸಾಧನೆ ನಿಜಕ್ಕೂ ಅಮೋಘವಾದದ್ದು. ಆ ಕಾರಣಕ್ಕಾಗಿಯೇ ಭಾರತ ಗೆಲುವಿಗಿಂತಲೂ ನಿಮ್ಮ ಪ್ರದರ್ಶನವೇ ಹೆಚ್ಚು ಚರ್ಚೆಗೆ ಒಳಗಾಗಿದೆ. ನೀವು ಮತ್ತಷ್ಟು ಸಾಧನೆಯನ್ನು ಮಾಡುವಂತಾಗಲಿ, ಒಳ್ಳೆಯದಾಗಲಿ" ಎಂದು ಸೆಹ್ವಾಗ್ ಟ್ವೀಟ್ ಮಾಡಿ ಅಜಾಜ್ ಪಟೇಲ್‌ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ವಿದೇಶಿ ಪಿಚ್‌ಗಳಲ್ಲಿ ಅಕ್ಷರ್ ಪಟೇಲ್ ಮಿಂಚಬಲ್ಲರೇ? ಡೇನಿಯಲ್ ವೆಟ್ಟೋರಿ ಪ್ರಶ್ನೆ!ವಿದೇಶಿ ಪಿಚ್‌ಗಳಲ್ಲಿ ಅಕ್ಷರ್ ಪಟೇಲ್ ಮಿಂಚಬಲ್ಲರೇ? ಡೇನಿಯಲ್ ವೆಟ್ಟೋರಿ ಪ್ರಶ್ನೆ!

ಸಹಿ ಹಾಕಿದ ಜರ್ಸಿ ನೀಡಿದ್ದ ಟೀಮ್ ಇಂಡಿಯಾ: ಇನ್ನು ಅಜಾಜ್ ಪಟೇಲ್ ಅವರು ಮಾಡಿದ ಈ ಸಾಧನೆಗೆ ಟೀಮ್ ಇಂಡಿಯಾ ಕಡೆಯಿಂದ ಸ್ಮರಣಿಯ ಉಡುಗೊರೆಯೊಂದನ್ನು ನೀಡಲಾಗಿದೆ. ಟೀಮ್ ಇಂಡಿಯಾದ ಎಲ್ಲಾ ಆಟಗಾರರು ಸಹಿ ಹಾಕಿದ ಜರ್ಸಿಯನ್ನು ಅಜಾಜ್ ಪಟೇಲ್‌ಗೆ ಆರ್ ಅಶ್ವಿನ್ ನೀಡಿದ್ದಾರೆ. ನಂತರ ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಪಂದ್ಯದ ಅಧಿಕೃತ ಸ್ಕೋರ್‌ ಪಟ್ಟಿಯನ್ನು ಫ್ರೇಮ್ ಹಾಕಿ ಅಜಾಜ್ ಪಟೇಲ್‌ಗೆ ನಿಡುವ ಮೂಲಕ ಸಾಧನೆಗೆ ಗೌರವ ನೀಡಿದೆ.

Story first published: Tuesday, December 7, 2021, 19:09 [IST]
Other articles published on Dec 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X