'ಹಿಂದೆಂದೂ ಕಂಡಿಲ್ಲ': ಭಾರತೀಯ ವೇಗಿಗಳ ಆಕ್ರಮಣಕಾರಿ ದಾಳಿಗೆ ಪಾಕ್ ಮಾಜಿ ನಾಯಕ ಪ್ರಶಂಸೆ

ಬೆಂಗಳೂರು, ಆಗಸ್ಟ್ 8: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದೆ. ಅದರಲ್ಲೂ ಭಾರತೀಯ ವೇಗದ ಬೌಲಿಂಗ್ ಪಡೆ ಇಂಗ್ಲೆಂಡ್ ನೆಲದಲ್ಲಿ ನೀಡಿದ ಪ್ರದರ್ಶನ ಗಮನಾರ್ಹವಾಗಿತ್ತು. ಈ ಪ್ರದರ್ಶನಕ್ಕೆ ಪಾಕಿಸ್ತಾನದ ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್ ಕೂಡ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಭಾರತ ಕ್ರಿಕೆಟ್ ತಂಡದಲ್ಲಿ ಹಿಂದೆಂದೂ ಇಷ್ಟೊಂದು ಆಕ್ರಮಣಕಾರಿ ಬೌಲಿಂಗ್‌ ಲೈನ್‌ಅಪ್‌ಅನ್ನು ನಾನು ಕಂಡಿಲ್ಲ ಎಂದು ಇನ್ಜಮಾಮ್ ಉಲ್ ಹಕ್ ಹೇಳಿದ್ದಾರೆ.

ಪಾಕಿಸ್ತಾನ ಕ್ರಕೆಟ್ ತಮಡದ ಮಾಜಿ ನಾಯಕ ಇನ್ಜಮಾಮ್ ಉಲ್ ಹಕ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಸರಣಿಯ ಮೊದಲ ಪಂದ್ಯದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಅವರು ಭಾರತೀಯ ವೇಗದ ಬೌಲಿಂಗ್ ವಿಭಾಗದ ಪ್ರದರ್ಶನವನ್ನು ಮೆಚ್ಚಿ ಪ್ರಶಂಶೆಯ ಮಾತುಗಳನ್ನು ಆಡಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ನಿರ್ಮಿಸಿದ ಅಪರೂಪದ ದಾಖಲೆಗಳಿವು!ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಭಾರತ ನಿರ್ಮಿಸಿದ ಅಪರೂಪದ ದಾಖಲೆಗಳಿವು!

"ಭಾರತ ತನ್ನ ವೇಗದ ಬೌಲಿಂಗ್ ಮೂಲಕ ಮೊದಲ ದಿನವೇ ಟೆಸ್ಟ್ ಸರಣಿಗೆ ಲಯವನ್ನು ಹೊಂದಿಸಿಕೊಂಡಿದೆ. ಆರಂಭದಲ್ಲಿಯೇ ಅವರು ಇಂಗ್ಲೆಂಡ್ ತಂಡವನ್ನು ಹಿಮ್ಮೆಟ್ಟಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ಬೌಲಿಂಗ್ ಮಾಡಲು ಲೈನ್‌ಗಳು ವಿಭಿನ್ನವಾಗಿರುವುದರಿಂದ ಉಪಖಂಡದ ಬೌಲರ್‌ಗಳು ಆರಂಭದ ಪಂದ್ಯದಲ್ಲಿ ಕಷ್ಟು ಪಡುತ್ತಾರೆ. ಆದರೆ ಭಾರತದ ಬೌಲರ್‌ಗಳು ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಕುಗ್ಗಿಸುವಲ್ಲಿ ಯಶಸ್ವಿಯಾಗಿದ್ದಾರೆ" ಎಂದು ಇನ್ಜಮಾಮ್ ಉಲ್ ಹಕ್ ಭಾರತೀಯ ವೇಗಿಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಇನ್ನು ಮೊದಲ ಸರಣಿಯ ಎರಡು ಇನ್ನಿಂಗ್ಸ್‌ಗಳಲ್ಲಿ 9 ವಿಕೆಟ್ ಪಡೆದು ಮಿಂಚಿದ ಭಾರತೀಯ ತಮಡದ ವೇಗಿ ಜಸ್ಪ್ರೀತ್ ಬೂಮ್ರಾ ಬಗ್ಗೆಯೂ ಇನ್ಜಮಾಮ್ ಉಲ್ ಹಕ್ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. "ಬೂಮ್ರಾ ಮೊದಲ ಇನ್ನಿಂಗ್ಸ್‌ನಲ್ಲಿ ನಾಲ್ಕು ವಿಕೆಟ್ ಪಡೆಯುವ ಮೂಲಕ ಇಂಗ್ಲೆಂಡ್ ತಂಡವನ್ನು ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದರು. ಜೋ ರೂಟ್ ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧ ಶತಕವನ್ನು ಗಳಿಸುವ;್;ಇ ಯಶಸ್ವಿಯಾಗಿದ್ದರೂ ಆದರೂ ಅವರನ್ನು ಕ್ರೀಸ್‌ನಲ್ಲಿ ಭದ್ರವಾಗಿ ನೆಲೆಯೂರಲು ಬೂಮ್ರಾ ಅವಕಾಶ ನೀಡಲಿಲ್ಲ. ಮೊಹಮ್ಮದ್ ಶಮಿ ಹಾಗೂ ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್ ದಾಳಿ ಕೂಡ ಪರಿಣಾಮಕಾರಿಯಾಗಿತ್ತು. ಈ ರೀತಿಯಾದ ವೇಗದ ಬೌಲಿಂಗ್ ಲೈನ್‌ಅಪ್‌ಅನ್ನು ನಾನು ಹಿಂದೆಂದೂ ನೋಡಿಲ್ಲ" ಎಂದಿದ್ದಾರೆ ಇನ್ಜಮಾಮ್ ಉಲ್ ಹಕ್.

ಮುಂದುವರಿದು ಮಾತನಾಡಿದ ಹಕ್ "ಟೀಮ್ ಇಂಡಿಯಾ ಈ ಹಿಂದೆಯೂ ಉತ್ತಮ ವೇಗದ ಬೌಲರ್‌ಗಳನ್ನು ಹುಟ್ಟುಹಾಕಿದೆ. ಆದರೆ ಈಗಿನ ವೇಗದ ಬೌಲರ್‌ಗಳು ನಿಜವಾದ ವೇಗದ ಬೌಲರ್‌ಗಳ ಆಕ್ರಮಣಕಾರಿತ್ವವನ್ನು ಹೊಂದಿದೆ. ನೀವು ಆಕ್ರಮಣಕಾರಿ ವೇಗಿಗಳನ್ನು ಹೊಂದಿರುವಾಗ ಅದೇ ರೀತಿಯ ಪ್ರದರ್ಶನಗಳು ಕೂಡ ಬರುತ್ತದೆ" ಎಂದು ಇನ್ಜಮಾಮ್ ಉಲ್ ಹಕ್ ಹೇಳಿದ್ದಾರೆ.

ತನ್ನದೇ ದೇಶದ ಬಗ್ಗೆ ಪಾಕ್ ಮೀಡಿಯಾ ಮಾಡಿದ ಅಪಹಾಸ್ಯದ ವಿಡಿಯೋ ವೈರಲ್ | Oneindia Kannada

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಸರ್ವಾಂಗೀಣ ಪ್ರದರ್ಶನ ನೀಡಲು ಯಶಸ್ವಿಯಾಗಿದೆ. ಮೊದಲ ಇನ್ನಿಂಗ್ಸ್‌ನಲ್ಲೊ ಇಂಗ್ಲೆಂಡ್ ತಂಡವನ್ನು 200 ರನ್‌ಗಳಿಗೂ ಮುನ್ನವೇ ಆಲೌಟ್ ಮಾಡಲು ಯಶಸ್ವಿಯಾಗಿದ್ದ ಭಾರತ ಎರಡನೇ ಇನ್ನಿಂಗ್ಸ್‌ನಲ್ಲಿಯೂ ಬೌಲಿಂಗ್ ದಾಳಿಯಲ್ಲಿ ಇಂಗ್ಲೆಂಡ್ ತಂಡಕ್ಕೆ ಸವಾಲಾಗಿತ್ತು. ನಾಯಕ ಜೋ ರೂಟ್ ಹೊರತು ಪಡಿಸಿದರೆ ಉಳಿದ ಎಲ್ಲಾ ಆಟಗಾರರು ಕೂಡ ಭಾರತೀಯ ಬೌಲಿಂಗ್ ದಾಳಿಗೆ ಸಂಪೂರ್ಣವಾಗಿ ಶರಣಾಗಿದ್ದರು. ಆದರೆ ಜೋ ರೂಟ್ ಮಾತ್ರ ಭಾರತೀಯ ಬೌಲರ್‌ಗಳ ಬೆವರಿಳಿಸುವಲ್ಲಿ ಯಶಸ್ವಿಯಾಗಿದ್ದರು. ಈ ಅದ್ಭುತ ಬ್ಯಾಟಿಂಗ್‌ನ ಸಹಾಯದಿಂದಾಗಿ ಇಂಗ್ಲೆಂಡ್ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ 303 ರನ್‌ಗಳಿಸಲು ಶಕ್ತವಾಯಿತು. ಈ ಮೂಲಕ ಭಾರತ ತಂಡಕ್ಕೆ ಎರಡನೇ ಇನ್ನಿಂಗ್ಸ್‌ನಲ್ಲಿ 209 ರನ್‌ಗಳ ಗುರಿಯನ್ನು ನಿಗದಿಪಡಿಸಿದೆ. ಆದರೆ ಅಂತಿಮ ದಿನದಾಟಕ್ಕೆ ಮಳೆ ಅಡ್ಡಿಯಾಗಿದ್ದು ತಡವಾಗಿ ಪಂದ್ಯ ಆರಂಭವಾಗಲಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, August 8, 2021, 20:38 [IST]
Other articles published on Aug 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X