ಐಪಿಎಲ್‌ನಲ್ಲಿ ಡಿಆರ್‌ಎಸ್ ಬಳಕೆ!..ಅಭಿಮಾನಿಗಳು ಫುಲ್ ಖುಷ್!!

ಬೆಂಗಳೂರು, ಮಾರ್ಚ್ 22: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈಗಾಗಲೇ ಬಳಕೆಯಲ್ಲಿರುವ ಅಂಪೈರ್ ತೀರ್ಪು ಪರಾಮರ್ಶೆ ವ್ಯವಸ್ಥೆ (ಡಿಆರ್‌ಎಸ್) ಇದೇ ಮೊದಲ ಬಾರಿಗೆ ದೇಶೀಯ ಕ್ರಿಕೆಟ್ ಲೀಗ್ ಐಪಿಎಲ್‌ನಲ್ಲಿ ಬಳಕೆಯಾಗುತ್ತಿದೆ. ಏಪ್ರಿಲ್ ತಿಂಗಳಿನಿಂದ ಆರಂಭವಾಗಲಿರುವ 11ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಡಿಆರ್‌ಎಸ್ ಬಳಕೆಯನ್ನು ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ) ಸ್ವಾಗತಿಸಿದೆ.
ಅಂಪೈರ್‌ಗಳಿಂದ ಉಂಟಾಗುತ್ತಿದ್ದ ಕೆಲ ತಪ್ಪು ತೀರ್ಪುಗಳನ್ನು ಪರಾಮರ್ಶಿಸಲು ಅಂಪೈರ್ ತೀರ್ಪು ಪರಾಮರ್ಶೆ ವ್ಯವಸ್ಥೆ(ಡಿಆರ್ ಎಸ್) ಐಪಿಎಲ್‌ನಲ್ಲಿಯೂ ತರಬೇಕು ಎಂಬ ಬೇಡಿಕೆಗೆ ಈ ಬಾರಿ ಬಿಸಿಸಿಐ ಸಮ್ಮತಿಸಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ, ಐಪಿಎಲ್ ಅಧ್ಯಕ್ಷರಾದ ರಾಜೀವ್ ಶುಕ್ಲಾ ಡಿಆರ್‌ಎಸ್ ಬಗ್ಗೆ ಆಡಳಿತ ಮಂಡಳಿಯ ನಿರ್ಧಾರವನ್ನು ಪ್ರಕಟಿಸಿದ್ದಾರೆ.!
ನೂರಕ್ಕೆ ನೂರರಷ್ಟು ಸರಿಯಾದ ತೀರ್ಪು ನೀಡಲು ಸಾಧ್ಯವಿಲ್ಲದಿದ್ದಲ್ಲಿ ಮಾತ್ರವೇ ಡಿಆರ್‌ಎಸ್ ಬಳಕೆ ಮಾಡಬೇಕು, ಇಲ್ಲದಿದ್ದಲ್ಲಿ ಡಿಆರ್ಎಸ್ಗೆ ತಮ್ಮ ಬೆಂಬಲವಿಲ್ಲ ಎಂದು ವಾದಿಸುತ್ತಿದ್ದ ಬಿಸಿಸಿಐ ಇದೀಗ ಡಿಆರ್‌ಎಸ್ ನಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿರುವ ಅಲ್ಟ್ರಾ ಎಡ್ಜ್ ತಂತ್ರಜ್ಞಾನವನ್ನು ಒಪ್ಪಿಕೊಂಡು ಐಪಿಎಲ್‌ನಲ್ಲಿ ಡಿಆರ್‌ಎಸ್ ಬಳಕೆಗೆ ಅನುವುಮಾಡಿಕೊಟ್ಟಿದೆ.!

ಅಭಿಮಾನಿಗಳು ಫುಲ್ ಖುಷ್!!
ಡಿಆರ್‌ಎಸ್ ಬಳಕೆಯನ್ನು ವಿರೋಧಿಸುತ್ತಿದ್ದ ಬಿಸಿಸಿಐ ಮೊದಲ ಬಾರಿಗೆ ದೇಶೀಯ ಐಪಿಎಲ್‌ನಲ್ಲಿ ಡಿಆರ್‌ಎಸ್ ಬಳಕೆಯನ್ನು ಜಾರಿಗೆ ತಂದಿರುವುದರಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಈ ಹಿಂದಿನ ಐಪಿಎಲ್‌ಗಳಲ್ಲಿ ಅಂಪೈರ್‌ಗಳ ತಪ್ಪು ನಿರ್ಧಾರಗಳಿಂದ ಹಲವು ಪಂದ್ಯಗಳ ಫಲಿತಾಂಶವೇ ಬದಲಾಗಿದ್ದು ಇದಕ್ಕೆ ಕಾರಣವಾಗಿದೆ.!

ಡಿಆರ್‌ಎಸ್ ಧೋನಿ ಕಾರಣವೇ?
ದೇಶೀಯ ಕ್ರಿಕಟ್ ಲೀಗ್ ಐಪಿಎಲ್‌ನಲ್ಲಿ ಡಿಆರ್‌ಎಸ್ ಅಳವಡಿಸಿಕೊಳ್ಳಲು ಧೋನಿ ಕೂಡ ಕಾರಣ ಎನ್ನುತ್ತಿವೆ ಕೆಲವು ವರದಿಗಳು. ಕಳೆದ ವರ್ಷದ ಐಪಿಎಲ್‌ನಲ್ಲಿ ಪುಣೆ ಸೂಪರ್ಜೈಂಟ್ಸ್ನ ತಂಡದ ವಿಕೆಟ್ ಕೀಪರ್ ಆಗಿದ್ದ ಎಂಎಸ್ ಧೋನಿ ಅವರು ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬಳಸುವ ಡಿಆರ್‌ಎಸ್ ಬಳಕೆಯ ಸನ್ನೆ ಮಾಡಿದ್ದರು. ಆಗ ಧೋನಿಗೆ ದಂಡವನ್ನು ಸಹ ವಿಧಿಸಲಾಗಿತ್ತು.!

ಒಂದು ಅವಕಾಶ ಮಾತ್ರವೇ?
ಪ್ರಸ್ತುತ ಅಂತಾರಾಷ್ಟ್ರೀಯ ಟಿ20ಯಲ್ಲಿ ಪ್ರತಿ ಇನಿಂಗ್ಸ್ಗೆ ಒಂದು ಬಾರಿ ಮಾತ್ರ ಡಿಆರ್‌ಎಸ್ ಬಳಸಲು ಅವಕಾಶ ನೀಡಲಾಗುತ್ತದೆ. ಒಮ್ಮೆ ಬಳಸಿದ ಡಿಆರ್‌ಎಸ್ ಯಶಸ್ವಿಯಾದರಷ್ಟೇ ಮತ್ತೊಂದು ಡಿಆರ್‌ಎಸ್ ಬಳಸಲು ಅವಕಾಶವಿರುತ್ತದೆ. ಇನ್ನು ಎಲ್ಲಾ ಯಶಸ್ವಿ ಡಿಆರ್‌ಎಸ್ ಬಳಕೆಯು ಗರಿಷ್ಠ ನಾಲ್ಕು ಬಾರಿ ಇರಲಿದೆ.

ಡಿಆರ್‌ಎಸ್ ಬಗ್ಗೆ ಕೋಚಿಂಗ್!
11ನೇ ಆವೃತ್ತಿಯ ಐಪಿಎಲ್‌ನಲ್ಲಿ ಬಳಕೆಯಾಗುತ್ತಿರುವ ಡಿಆರ್‌ಎಸ್ ಬಗ್ಗೆ ದೇಶದ 10 ಅಗ್ರ ಅಂಪೈರ್ಗಳಿಗೆ ತರಬೇತಿ ನೀಡಲಾಗಿದೆ. ಐಸಿಸಿಯ ಅಂಪೈರ್ಸ್ ಕೋಚ್ ಡೇನಿಸ್ ಬರ್ನ್ಸ್ ಹಾಗೂ ಆಸ್ಟ್ರೇಲಿಯಾದ ಅಂಪೈರ್ ಪೌಲ್ ರೈಫಲ್ ಅವರು ಭಾರತದ ಅಗ್ರ ಅಂಪೈರ್ಗಳಿಗೆ ಡಿಆರ್‌ಎಸ್ ತಂತ್ರಜ್ಞಾನ ಬಳಕೆ ಬಗ್ಗೆ ತರಬೇತಿ ನೀಡಿದ್ದಾರೆ.

ಪಾಕಿಸ್ತಾನ ಲೀಗ್ನಲ್ಲಿ ಜಾರಿಯಲ್ಲಿದೆ
ದೇಶೀಯ ಕ್ರಿಕೆಟ್ ಲೀಗ್ ಐಪಿಎಲ್ ವಿಶ್ವ ಕ್ರಿಕೆಟ್‌ನಲ್ಲಿ ಡಿಆರ್‌ಎಸ್ ಬಳಕೆ ಮಾಡಲಿರುವ 2ನೇ ಟಿ20 ಕ್ರಿಕೆಟ್ ಲೀಗ್ ಎನಿಸಿಕೊಳ್ಳಲಿದೆ. ಹಲವು ರಾಷ್ಟ್ರಗಳು ಕ್ರಿಕೆಟ್ ಲೀಗ್‌ಗಳನ್ನು ಆಯೋಜನೆ ಮಾಡಿದ್ದರೂ ಕೂಡ ಡಿಆರ್‌ಎಸ್ ಬಳಕೆ ಮಾಡಿಕೊಂಡ ಮೊದಲ ಲೀಗ್ ಎಂಬ ಹೆಗ್ಗಳಿಕೆಗೆ ಪಾಕಿಸ್ತಾನ ಸೂಪರ್ ಲೀಗ್ ಪಾತ್ರವಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications