ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೋಲ್ಕತಾ-ರಾಜಸ್ಥಾನ ಪಂದ್ಯ: ಇಲ್ಲಿವೆ ತಮಾಷೆಯ ಟ್ವೀಟ್‌ಗಳು

ipl 2018 eliminator match kolkata knight riders rajasthan royals twitter fun

ಕೋಲ್ಕತಾ, ಮೇ 24: ರಾಜಸ್ಥಾನ ರಾಯಲ್ಸ್ ಮತ್ತು ಕೋಲ್ಕತಾ ನೈಟ್ ರೈಡರ್ಸ್ ತಂಡಗಳ ನಡುವೆ ನಡೆದ ಎಲಿಮಿನೇಟರ್ ಪಂದ್ಯ ಕ್ರಿಕೆಟ್ ಪ್ರಿಯರಿಗೆ ಅಂತ್ಯದಲ್ಲಿ ರೋಚಕ ಅನುಭವವೇನೂ ನೀಡಲಿಲ್ಲ.

ಕೊನೆಯ ಓವರ್‌ಗಳಲ್ಲಿ ಪಂದ್ಯ ಬಹುತೇಕ ಕೋಲ್ಕತಾ ಕಡೆಗೆ ವಾಲಿದ್ದರಿಂದ ಆಟದ ಸೊಬಗು ಮಂಕಾಯಿತು. ಆದರೂ ಪವಾಡ ನಡೆಯಬಹುದೇನೋ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳು ಕಾದಿದ್ದರು. ಅದು ಹುಸಿಯಾಯಿತು.

ಸ್ಕೋರ್ ಕಾರ್ಡ್

ಆದರೆ, ಅದಕ್ಕೂ ಮೊದಲು ಕೋಲ್ಕತಾ ಇನ್ನಿಂಗ್ಸ್‌ನ ಕೊನೆಯಲ್ಲಿ ಹಾಗೂ ರಾಜಸ್ಥಾನ ಇನ್ನಿಂಗ್ಸ್‌ನ ಆರಂಭದಲ್ಲಿ ಒಂದಷ್ಟು ಮನರಂಜನೆಯಂತೂ ಸಿಕ್ಕಿತು. ಫಲಿತಾಂಶ ಏನೇ ಇರಲಿ, ಪಂದ್ಯ ಮುಗಿದ ಬಳಿಕವೂ ಅಭಿಮಾನಿಗಳು ಮನರಂಜನೆ ಪಡೆದುಕೊಳ್ಳುತ್ತಿದ್ದಾರೆ. ಅದು ಎಲ್ಲಿ ಗೊತ್ತಾ? ಟ್ವಿಟ್ಟರ್‌ನಲ್ಲಿ...

ಎಲಿಮಿನೇಟರ್ ಪಂದ್ಯ: ರಾಜಸ್ಥಾನ್ ವಿರುದ್ಧ ಕೋಲ್ಕತ್ತಾ 25 ರನ್ ಗೆಲುವುಎಲಿಮಿನೇಟರ್ ಪಂದ್ಯ: ರಾಜಸ್ಥಾನ್ ವಿರುದ್ಧ ಕೋಲ್ಕತ್ತಾ 25 ರನ್ ಗೆಲುವು

ಆಟಗಾರರನ್ನು ಮತ್ತು ತಂಡಗಳನ್ನು ಲೇವಡಿ ಮಾಡಿರುವ ಟ್ವೀಟ್‌ಗಳನ್ನು ಕಂಡು ಕ್ರಿಕೆಟ್ ಪ್ರಿಯರು ನಕ್ಕು ಹೊಟ್ಟೆ ಹುಣ್ಣಾಗಿಸಿಕೊಳ್ಳುತ್ತಿದ್ದಾರೆ. ಅಂತಹ ಕೆಲವು ತಮಾಷೆಯ ಟ್ವೀಟ್‌ಗಳನ್ನು ನೋಡೋಣ..

ಗಲ್ಲಿ ಕ್ರಿಕೆಟ್ ನೆನಪು

ಕೆಕೆಆರ್ ಮತ್ತು ರಾಜಸ್ಥಾನ ತಂಡಗಳ ನಡುವಣ ಪಂದ್ಯದ ಬಳಿಕ ಅತಿ ಹೆಚ್ಚು ಲೇವಡಿಗೆ ಒಳಗಾಗಿರುವುದು ಕರ್ನಾಟಕದ ಆಟಗಾರ ಸ್ಟುವರ್ಟ್ ಬಿನ್ನಿ.

ಸ್ಟುವರ್ಟ್ ಬಿನ್ನಿ ನಾವು ಬಾಲ್ಯದಲ್ಲಿ ಗಲ್ಲಿ ಕ್ರಿಕೆಟ್‌ನಲ್ಲಿ ಆಡುತ್ತಿದ್ದ ಆಟಗಾರನಂತೆ. 'ಅವನನ್ನು ಔಟ್ ಮಾಡಬೇಡ, ಚೆಂಡು ವೇಸ್ಟ್ ಮಾಡ್ತಾನೆ' ಎನ್ನುತ್ತಿದ್ದೆವಲ್ಲ ಹಾಗೆ ಎಂದು ಅಮನ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಕಾಡುವ ಬಟ್ಲರ್ ನೆನಪು

ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಅಜಿಂಕ್ಯ ರಹಾನೆ, ಅಂತರರಾಷ್ಟ್ರೀಯ ಪಂದ್ಯದಲ್ಲಿ ಆಡುವ ಸಲುವಾಗಿ ತವರಿಗೆ ಮರಳಿರುವ ಇಂಗ್ಲೆಂಡ್‌ನ ಜೋಸ್ ಬಟ್ಲರ್ ಅವರನ್ನು ನೆನಪಿಸಿಕೊಂಡು 'ಯಾದ್ ಆಯಾ ರಹಿ ಹೈ, ತೇರಿ ಯಾದ್ ಆ ರಹಿ ಹೈ' ಎಂದು ಹಾಡುತ್ತಿರುವುದಾಗಿ ಸಾಗರ್ ಟ್ವೀಟ್ ಮಾಡಿದ್ದಾರೆ.

ಈ ಮೂರು ಬಲು ದುಬಾರಿ

ಕಳೆದ ಐಪಿಎಲ್ ಆವೃತ್ತಿಯಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದರೂ ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಭಾರಿ ಬೇಡಿಕೆ ಗಿಟ್ಟಿಸಿಕೊಂಡವರು ಎಡಗೈ ವೇಗದ ಬೌಲರ್ ಜಯದೇವ್ ಉನದ್ಕತ್. ಅವರನ್ನು ಬರೋಬ್ಬರಿ 11.5 ಕೋಟಿಗೆ ರಾಜಸ್ಥಾನ ರಾಯಲ್ಸ್ ತಂಡ ಖರೀದಿ ಮಾಡಿತ್ತು. ಆದರೆ ಟೂರ್ನಿಯುದ್ದಕ್ಕೂ ಅತಿ ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟ ಉನದ್ಕತ್, ಪ್ರತಿ ಪಂದ್ಯದಲ್ಲಿಯೂ ದುಬಾರಿಯಾಗಿದ್ದು ಮಾತ್ರವಲ್ಲ, ತಂಡದ ಖಜಾನೆಗೂ ದುಬಾರಿಯಾಗಿದ್ದರು.

ದೇಶದಲ್ಲಿ ಅತಿ ದುಬಾರಿಯಾಗುತ್ತಿರುವ ವಸ್ತುಗಳೆಂದರೆ
3. ಡೀಸೆಲ್
2. ಪೆಟ್ರೋಲ್
1. ಉನದ್ಕತ್

ಕೆಲವು ಸಂಗತಿಗಳ ಮೂಲ ಗೊತ್ತಾಗುವುದಿಲ್ಲ

ಕೆಲವು ಸಂಗತಿಗಳು ಹೇಗೆ ನಡೆದವು ಎಂಬುದು ಅರ್ಥವಾಗುವುದೇ ಇಲ್ಲ ಎಂದು ರಾಜಸ್ಥಾನ ರಾಯಲ್ಸ್ ತಂಡ ಪ್ಲೇಆಫ್‌ಗೆ ಪ್ರವೇಶ ಪಡೆದಿದ್ದು ಹೇಗೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ.

ಓವರ್ ಕಾನ್ಫಿಡೆನ್ಸ್

ಒಂದೂ ಪಂದ್ಯದಲ್ಲಿ ಉತ್ತಮ ಆಟವಾಡದ ಸ್ಟುವರ್ಟ್ ಬಿನ್ನಿಯನ್ನು ಗೌತಮ್‌ಗಿಂತ ಮೊದಲು ಬ್ಯಾಟಿಂಗ್‌ಗೆ ಕಳುಹಿಸಿದ್ದಕ್ಕೆ ರಾಜಸ್ಥಾನ ರಾಯಲ್ಸ್ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ. ಇನ್ನು ಕೆಲವರು ಅದನ್ನು ತಮಾಷೆ ಮಾಡಿದ್ದಾರೆ.

ಲಾರ್ಡ್ ಸ್ಟುವರ್ಟ್ ಬಿನ್ನಿ ಅವರನ್ನು ಕೃಷ್ಣಪ್ಪ ಗೌತಮ್‌ಗಿಂತ ಮೇಲಿನ ಕ್ರಮಾಂಕದಲ್ಲಿ ಕಳುಹಿಸಲಾಗಿದೆ. ಇಷ್ಟು ಅತಿಯಾದ ಆತ್ಮವಿಶ್ವಾಸ ಎಲ್ಲಿಂದ ಬರುತ್ತದೆ? ಎಂದು ಟ್ವಿಟ್ಟಿಗರು ಕೇಳಿದ್ದಾರೆ.

Story first published: Thursday, May 24, 2018, 17:44 [IST]
Other articles published on May 24, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X