ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2018 : ಯಾರು ಯಾರಿಗೆ ಯಾವ ಪ್ರಶಸ್ತಿ?

By Mahesh
IPL 2018 : Full List of Awards winners at the 11th edition

ಬೆಂಗಳೂರು, ಮೇ 27: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ ) 11ರ ಅಂತಿಮ ಹಣಾಹಣಿಯಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್ ಗಳಿಂದ ಸೋಲಿಸಿದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ ಕೆ) ಮತ್ತೊಮ್ಮೆ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಹೈದರಾಬಾದ್ ತಂಡ ಮೊದಲು ಬ್ಯಾಟಿಂಗ್ ಮಾಡಿ 178/6 ಸ್ಕೋರ್ ಮಾಡಿತು. ಕೇನ್ ವಿಲಿಯಮ್ಸನ್ 47ರನ್ ಗಳಿಸಿದರು. ಚೆನ್ನೈ ಪರ ಶೇನ್ ವಾಟ್ಸನ್ 57ಎಸೆತಗಳಲ್ಲಿ 117ರನ್ ( 11 ಬೌಂಡರಿ, 8 ಸಿಕ್ಸರ್) ಗಳಿಸಿ ಗೆಲುವಿನ ದಡ ಮುಟ್ಟಿಸಿದರು.

ಪಂದ್ಯದ ಸ್ಕೋರ್ ಕಾರ್ಡ್

ಲೀಗ್ ಹಂತದ ಕೊನೆಗೆ ಈ ಎರಡು ತಂಡಗಳು ಮೊದಲೆರಡು ಸ್ಥಾನ ಗಳಿಸಿದ್ದವು. ಕ್ವಾಲಿಫೈಯರ್ ನಲ್ಲಿ ಸೋಲು ಕಂಡಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡ, ಕೋಲ್ಕತ್ತಾ ತಂಡವನ್ನು ಸೋಲಿಸಿ, ಫೈನಲ್ ತಲುಪಿತ್ತು. ಆದರೆ, ಲೀಗ್ ಹಾಗೂ ಫೈನಲ್ ಎರಡರಲ್ಲೂ ಚೆನ್ನೈ ಸರಿ ಸಮಕ್ಕೆ ನಿಲ್ಲಲಾಗದೆ ಹೈದರಾಬಾದ್ ಸೋಲೊಪ್ಪಿಕೊಂಡಿದೆ.

ಐಪಿಎ 2018ರಲ್ಲಿ ಪ್ರಶಸ್ತಿ ವಿಜೇತರು ಹಾಗೂ ಅಂಕಿ ಅಂಶಗಳು:
* ಚಾಂಪಿಯನ್ಸ್ : ಚೆನ್ನೈ ಸೂಪರ್ ಕಿಂಗ್ಸ್ ಪ್ರಶಸ್ತಿ ಮೊತ್ತ 15 ಕೋಟಿ ರು
* ರನ್ನರ್ ಅಪ್ : ಸನ್ ರೈಸರ್ಸ್ ಹೈದರಾಬಾದ್, ಪ್ರಶಸ್ತಿ ಮೊತ್ತ 10 ಕೋಟಿ ರು
* ಕಿತ್ತಳೆ ಟೋಪಿ (ಅತಿ ಹೆಚ್ಚು ರನ್ ) -ಕೇನ್ ವಿಲಿಯಮ್ಸನ್(ಹೈದರಾಬಾದ್) 17 ಪಂದ್ಯ-735 ರನ್ (142.44 ಸ್ಟ್ರೈಕ್ ರೇಟ್)
* ನೇರಳೆ ಟೋಪಿ(ಅತಿ ಹೆಚ್ಚು ವಿಕೆಟ್) -ಆಂಡ್ರ್ಯೂ ಟೈ (ಪಂಜಾಬ್) 14 ಪಂದ್ಯ- 24 ವಿಕೆಟ್
* ಫೈನಲ್ ಪಂದ್ಯದ ಪಂದ್ಯ ಶ್ರೇಷ್ಠ : ಶೇನ್ ವಾಟ್ಸನ್ (ಚೆನ್ನೈ ಸೂಪರ್ ಕಿಂಗ್ಸ್)

* ಎಫ್ ಬಿಬಿ ಸ್ಟೈಲಿಶ್ ಆಟಗಾರ : ಲುಂಗಿ ನಿಗಿಡಿ
* ಸ್ಟಾರ್ ಪ್ಲಸ್ ಪ್ರಶಸ್ತಿ : ಎಂಎಸ್ ಧೋನಿ

* ಫ್ಲೇರ್ ಪ್ಲೇ ಪ್ರಶಸ್ತಿ : ಮುಂಬೈ ಇಂಡಿಯನ್ಸ್

* ಉದಯೋನ್ಮುಖ ಆಟಗಾರ: ರಿಷಬ್ ಪಂತ್- 684 ರನ್ 173.6 ಸ್ಟ್ರೈಕ್ ರೇಟ್

* ಅತ್ಯುತ್ತಮ ಕ್ಯಾಚ್ :ಟ್ರೆಂಟ್ ಬೌಲ್ಟ್

* ಸೂಪರ್ ಸ್ಟ್ರೈಕರ್ : ಸುನೀಲ್ ನರೇನ್ 190 ಸ್ಟ್ರೈಕ್ ರೇಟ್

* ಅತ್ಯಂತ ಮೌಲ್ಯಯುತ ಆಟಗಾರ: ಸುನೀಲ್ ನರೇನ್ (ಕೆಕೆಆರ್)

Story first published: Sunday, May 27, 2018, 23:30 [IST]
Other articles published on May 27, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X