ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರೆಂಜ್, ಪರ್ಪಲ್ ಕ್ಯಾಪ್ ಯಾದಿಯ ಉಲ್ಟಾಪಲ್ಟಾ ಕತೆ ನೋಡಿ!

IPL 2018: Rishabh Pant and Andrew Tye bow out with Orange, Purple Caps

ನವದೆಹಲಿ, ಮೇ 21: ಐಪಿಎಲ್ ಪ್ಲೇ ಆಫ್ ಸುತ್ತಿನ ಪ್ರವೇಶಕ್ಕೆ ನಡೆಯಲಿದ್ದ ಕಾದಾಟಗಳೆಲ್ಲಾ ಮುಗಿದಿವೆ. ಇನ್ನು ಉಳಿದಿದ್ದು ಪ್ರಶಸ್ತಿ ಸುತ್ತಿನೆಡೆಗಿನ ಜಟಾಪಟಿಯಷ್ಟೆ. ಈ ನಡುವೆ ಈ ಐಪಿಎಲ್ ಸೀಸನ್ ನಲ್ಲಿ ಆರೆಂಜ್ ಕ್ಯಾಪ್, ಪರ್ಪಲ್ ಕ್ಯಾಪ್ ಹಾದಿಯಲ್ಲಿದ್ದ ಪ್ರತಿಭಾನ್ವಿತರ ಕತೆ ಉಲ್ಪಾಪಲ್ಟಾವಾಗಿರೋದು ದುರಾದೃಷ್ಟಕರ!

ಸಂಗತಿಯೇನಂದರೆ ಈಗ ಪ್ಲೇ-ಆಫ್ ಹಂತಕ್ಕೆ ಪ್ರವೇಶ ಗಿಟ್ಟಿಸಿಕೊಳ್ಳದೆ ಹೊರ ನಡೆದಿರುವ ಐಪಿಎಲ್ ತಂಡಗಳಲ್ಲೇ ಅಧಿಕ ರನ್, ಅಧಿಕ ವಿಕೆಟ್ ಗಳಿಸಿದ್ದ ಪ್ರತಿಭಾನ್ವಿತರಿದ್ದು, ಮುಂದೆ ಈ ಆಟಗಾರರಿಗೆ ಪಂದ್ಯವೇ ಸಿಗದಿರುವುದರಿಂದ ಸಾಧನೆಯೆಲ್ಲ ಉಲ್ಟಾಪಲ್ಟಾವಾಗುವ ಸಾಧ್ಯತೆಯಿದೆ. ಈ ಬಗ್ಗೆ ಗಮ್ಮತ್ತು ಏನೇನಿದೆ ನೋಡೋಣ; ಹಾಗೇ ಬನ್ನಿ ಬೆನ್ನ ಹಿಂದೆ..

ವಿದಾಯ ಹೇಳುವ ಹೊತ್ತಾಯಿತೇ? ಈ ಆಟಗಾರರ ಭವಿಷ್ಯವೇನು?ವಿದಾಯ ಹೇಳುವ ಹೊತ್ತಾಯಿತೇ? ಈ ಆಟಗಾರರ ಭವಿಷ್ಯವೇನು?

ದುರಾದೃಷ್ಟವಂತ ಪಂತ್

ದುರಾದೃಷ್ಟವಂತ ಪಂತ್

ಸದ್ಯ ಈ ಐಪಿಎಲ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಆಟಗಾರರ ಸಾಲಿನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ರಿಶಬ್ ಪಂತ್ ಮುಂಚೂಣಿಯಲ್ಲಿದ್ದರು. ಒಟ್ಟು 14 ಪಂದ್ಯಗಳನ್ನು ಆಡಿರುವ ರಿಷಬ್ ಪಂತ್ 684 ರನ್ ಗಳಿಸಿ ಆರೆಂಜ್ ಕ್ಯಾಪ್ ಧರಿಸಿದ್ದರು. ಭಾನುವಾರ ಮುಂಬೈ ಎದುರಿನ ಕೊನೆಯ ಪಂದ್ಯದಲ್ಲೇ ಪಂತ್ ಆರೆಂಜ್ ಕ್ಯಾಪ್ ತಲೆಗೇರಿಸಿಕೊಂಡಿದ್ದರು. ಆದರೆ ಇನ್ನು ಡೆಲ್ಲಿಗೆ ಪಂದ್ಯವೇ ಇಲ್ಲದ ಕಾರಣ ಆರೆಂಜ್ ಕ್ಯಾಪ್ ಪಂತ್ ಕೈಯಿಂದ ತಪ್ಪುವ ಸಂಭವವಿದೆ. ಫೈನಲ್ ಪಂದ್ಯದ ಬಳಿಕ ಅತೀ ಹೆಚ್ಚಿನ ರನ್ ದಾರರನ್ನು ಗುರುತಿಸಿ ಆರೆಂಜ್ ಕ್ಯಾಪ್ ನೀಡಲಾಗುವುರಿಂದ ಪಂತ್ ಒಂದು ರೀತಿಯಲ್ಲಿ ದುರದೃಷ್ಟವಂತರು.

ಕೇನ್ ವಿಲಿಯಮ್ಸನ್ ಕಡೆಗಿದೆ ಅದೃಷ್ಟ

ಕೇನ್ ವಿಲಿಯಮ್ಸನ್ ಕಡೆಗಿದೆ ಅದೃಷ್ಟ

ಪಂತ್ ಗೆ ಇನ್ನು ಪಂದ್ಯ ಆಡುವ ಅವಕಾಶವಿಲ್ಲವಾದ್ದರಿಂದ ಆರೆಂಜ್ ಕ್ಯಾಪ್ ಹೈದರಾಬಾದ್ ತಂಡದ ಕೇನ್ ವಿಲಿಯಮ್ಸನ್ ಪಾಲಾಗುವ ಸಾಧ್ಯತೆಯಿದೆ. ಸನ್ ರೈಸರ್ಸ್ ಹೈದರಾಬಾದ್ ಪ್ಲೇ-ಆಫ್ ಸುತ್ತಿಗೆ ಆಯ್ಕೆಗೊಂಡಿದ್ದು, ಅತೀ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ 661 ರನ್ ಗಳಿಸಿ ಎರಡನೇ ಸ್ಥಾನದಲ್ಲಿರುವ ಕೇನ್ ವಿಲಿಯಮ್ಸನ್ ಗೆ ರನ್ ಹೆಚ್ಚಿಸಿಕೊಳ್ಳಲು ಅವಕಾಶವಿದೆ. ಇದು ಬಿಟ್ಟರೆ ಚೆನ್ನೈ ಸೂಪರ್ ಕಿಂಗ್ಸ್ ನ ಅಂಬಾಟಿ ರಾಯುಡು ಅವರಿಗೂ ರನ್ ಹೆಚ್ಚಿಸಿಕೊಂಡು ಆರೆಂಜ್ ಕ್ಯಾಪ್ ಧರಿಸುವ ಅವಕಾಶ ಇದೆ. ರಾಯುಡು 586 ರನ್ ಗಳೊಂದಿಗೆ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ.

ರಾಹುಲ್, ಬಟ್ಲರ್ ಶ್ರಮವೂ ವ್ಯರ್ಥ

ರಾಹುಲ್, ಬಟ್ಲರ್ ಶ್ರಮವೂ ವ್ಯರ್ಥ

ಆರೆಂಜ್ ಕ್ಯಾಪ್ ಯಾದಿಯಲ್ಲಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸ್ಫೋಟಕ ಬ್ಯಾಟ್ಸ್ಮನ್ ಕೆಎಲ್ ರಾಹುಲ್ ಅವರಿಗೂ ಆರೆಂಜ್ ಕ್ಯಾಪ್ ಧರಿಸುವ ಅವಕಾಶ ಬಹುತೇಕ ಇಲ್ಲವಾಗಿದೆ. 659ರನ್ ಗಳಿಸಿದ್ದ ರಾಹುಲ್ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದರು. ರಾಜಸ್ಥಾನ್ ತಂಡಕ್ಕೆ ಮುಂದೆ ಪಂದ್ಯದ ಅವಕಾಶವಿದೆಯಾದರೂ ರಾಜಸ್ಥಾನ್ ಸ್ಫೋಟಕ ಬ್ಯಾಟ್ಸ್ಮನ್ ಆರೆಂಜ್ ಕ್ಯಾಪ್ ಪಟ್ಟಿಯಲ್ಲಿ 548 ರನ್ ನೊಂದಿಗೆ 5ನೇ ಸ್ಥಾನದಲ್ಲಿದ್ದ ಜಾಸ್ ಬಟ್ಲರ್ ತನ್ನ ತವರಾದ ಇಂಗ್ಲೆಂಡ್ ಗೆ ಪಂದ್ಯದ ನಿಮಿತ್ತ ತೆರಳಿದ್ದಾರೆ.

ಪರ್ಪಲ್ ಕ್ಯಾಪ್ ನ ಕತೆಯೇ ಬೇರೆ

ಪರ್ಪಲ್ ಕ್ಯಾಪ್ ನ ಕತೆಯೇ ಬೇರೆ

ಆರೆಂಜ್ ಕ್ಯಾಪ್ ಸಾಧನೆ ಯಾದಿಯಲ್ಲಿದ್ದ ಆಟಗಾರರ ಕತೆ ಹಾಗಿದ್ದರೆ ಇನ್ನು ಅತೀ ಹೆಚ್ಚು ವಿಕೆಟ್ ಸಾಧನೆ ಮೂಲಕ ಪರ್ಪಲ್ ಕ್ಯಾಪ್ ಧರಿಸುವುದರಲ್ಲಿದ್ದ ಆಟಗಾರರ ಕತೆಯೇ ಬೇರೆಯಾಗಿದೆ. ಸದ್ಯ ಟಾಪ್ 5 ಸ್ಥಾನದಲ್ಲಿ ಅತೀ ಹೆಚ್ಚಿನ ವಿಕೆಟ್ ಗಳಿಕೆದಾರರಿದ್ದ ಯಾವುದೇ ತಂಡಗಳೂ ಇನ್ನು ಸ್ಪರ್ಧೆ ಉಳಿಸಿಕೊಂಡಿಲ್ಲ. ಪ್ಲೇ ಆಫ್ ಹಂತಕ್ಕೆ ಅರ್ಹತೆ ಗಿಟ್ಟಿಸಿಕೊಳ್ಳದೆ ಹೊರಬಿದ್ದ ತಂಡಗಳಲ್ಲೇ ಹೆಚ್ಚಿನ ವಿಕೆಟ್ ಗಳಿಸಿದ್ದ ಆಟಗಾರರಿದ್ದರು.

4 ತಂಡವೂ ಹೊರಗೆ

4 ತಂಡವೂ ಹೊರಗೆ

ಅತೀ ಹೆಚ್ಚು ವಿಕೆಟ್ ಗಳಿಸಿದವರ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದ ಟಾಪ್ 5 ಆಟಗಾರರ 4 ತಂಡಗಳೂ ಹೊರನಡೆದಿರುವುದು ವಿಶೇಷ. ಕ್ರಮವಾಗಿ ಒಂದರಿಂದ ಐದನೇ ಸ್ಥಾನದಲ್ಲಿದ್ದ ಆಂಡ್ರ್ಯೂ ಟೈ (ಪಂಜಾಬ್), ಉಮೇಶ್ ಯಾದವ್ (ಆರ್ಸಿಬಿ), ಹಾರ್ದಿಕ್ ಪಾಂಡ್ಯ (ಮುಂಬೈ), ಟ್ರೆಂಟ್ ಬೌಲ್ಟ್ (ಡೆಲ್ಲಿ), ಜಸ್ಪ್ರೀತ್ ಬುಮ್ರಾ (ಮುಂಬೈ) ಎಲ್ಲರೂ ಪಂದ್ಯವನ್ನಾಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಮುಂದಿನ ಐಪಿಎಲ್ ಪಂದ್ಯಗಳಲ್ಲಿ ಇವರನ್ನು ಹೊರತುಪಡಿಸಿ ಬೇರೆ ತಂಡದ ಆಟಗಾರರು ಹೆಚ್ಚಿನ ವಿಕೆಟ್ ಗಳಿಸದಿದ್ದರೆ ಆರೆಂಜ್ ಕ್ಯಾಪ್ ಟೈ ಕೈಯಲ್ಲೇ ಉಳಿಯಲಿದೆ.

Story first published: Monday, May 21, 2018, 20:35 [IST]
Other articles published on May 21, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X