ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: 'ಕಪ್ಪಿಲ್ಲದಿದ್ರೂ ಸ್ಪೆಷಲ್ ಅವಾರ್ಡ್ ಇದೆಯಲ್ಲ' ಅಂತ ಬೀಗಿದೋರು!

IPL 2019 : ಕಪ್ ಗೆಲ್ಲದಿದ್ರು ಇವರಿಗೆ ಸಿಕ್ಕಿದೆ ಲಕ್ಷ ಲಕ್ಷ ಬಹುಮಾನ..!?
IPL 2019 Award Winners: MVP, Orange Cap, Purple Cap

ಹೈದರಾಬಾದ್, ಮೇ 13: ಇಂಡಿಯನ್ ಪ್ರೀಮಿಯರ್‌ ಲೀಗ್‌ (ಐಪಿಎಲ್‌)ನಲ್ಲಿ ಟ್ರೋಫಿ ಗೆಲ್ಲೋದೇ ದೊಡ್ಡ ಹಿರಿಮೆ. ಆದರೆ ಕಪ್ಪು ಸಿಕ್ಕಿಲ್ಲವೆಂದಮಾತ್ರಕೆ ಆಟಗಾರನಲ್ಲಿರುವ ವಿಶೇಷ ಪ್ರತಿಭೆ ಮೂಲೆ ಗುಂಪಾಯಿತು ಅನ್ನೋ ಮಾತಿಗೆ ಟೂರ್ನಿ ಹೆಚ್ಚು ಅವಕಾಶ ಕೊಡಲಾರದು.

ಐಪಿಎಲ್ ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ

ಟ್ರೋಫಿ ಗೆಲ್ಲಲಿ, ಗೆಲ್ಲದಿರಲಿ ಪ್ರತಿಭಾನ್ವಿತ ಆಟಗಾರ ಐಪಿಎಲ್‌ನಲ್ಲಿ ಎಲ್ಲರ ಚಿತ್ತ ತನ್ನತ್ತ ಹರಿಸಿಕೊಳ್ಳಲು ಅವಕಾಶವಿದೆ. ವಿಶೇಷ ಪ್ರತಿಭೆ ಎಲ್ಲರ ಗಮನಕ್ಕೆ ಬರಬೇಕಾದರೆ ಸಣ್ಣಮಟ್ಟಿಗಾದರೂ ಬಳಿ ಕರೆದು ಬೆನ್ನು ತಟ್ಟುವ ಕೆಲಸ ಅಲ್ಲಿ ಆಗಬೇಕು. ಐಪಿಎಲ್‌ನಲ್ಲಿ ಹೀಗೆ ಪ್ರತಿಭಾನ್ವಿತರ ಬೆನ್ನು ತಟ್ಟುವ ಇರಾದೆಯಿದೆ.

'ಗೇಲಿಗೊಳಗಾದವನೇ ಗೆಲ್ಲೋದು' ಅಂತ ಸಾರಿದ ಸಿಎಸ್‌ಕೆ ಬೌಲರ್ ತಾಹಿರ್!'ಗೇಲಿಗೊಳಗಾದವನೇ ಗೆಲ್ಲೋದು' ಅಂತ ಸಾರಿದ ಸಿಎಸ್‌ಕೆ ಬೌಲರ್ ತಾಹಿರ್!

ಐಪಿಎಲ್ 2019ರ ಫೈನಲ್ ಕಾದಾಟದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ಸೋಲಿಸಿ, ಮುಂಬೈ ತಂಡ ನಾಲ್ಕನೇ ಕಪ್ ಜಯಿಸಿದೆಯಾದರೂ ಪ್ರತಿಭಾನ್ವಿತರನ್ನು ಗುರುತಿಸಲು ಐಪಿಎಲ್‌ನಲ್ಲಿ ಕೊಡಲಾಗು ವಿವಿಧ ವಿಭಾಗಗಳ ಪ್ರಶಸ್ತಿಗಳ ಸಂಕ್ಷಿಪ್ತ ವಿವರ ಇಲ್ಲಿದೆ.

ಎಮರ್ಜಿಂಗ್ ಪ್ಲೇಯರ್

ಎಮರ್ಜಿಂಗ್ ಪ್ಲೇಯರ್

124.30 ಸ್ಟ್ರೈಕ್ ರೇಟ್‌ನೊಂದಿಗೆ ಈ ಸಾರಿಯ ಎಮರ್ಜಿಂಗ್ ಪ್ಲೇಯರ್ (ಉದಯೋನ್ಮುಖ ಆಟಗಾರ) ಪ್ರಶಸ್ತಿಯನ್ನು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಶುಭ್‌ಮಾನ್‌ಗಿಲ್ ಪಡೆದುಕೊಂಡಿದ್ದಾರೆ. 19ರ ಹರೆಯದ ಗಿಲ್‌ 10 ಲಕ್ಷ ರೂ.ಗಳನ್ನು ಬಹುಮಾನದ ಮೊತ್ತವಾಗಿ ಪಡೆಯುತ್ತಿದ್ದಾರೆ.

ಮ್ಯಾನ್ ಆಫ್ ದ ಮ್ಯಾಚ್-ಫೈನಲ್

ಮ್ಯಾನ್ ಆಫ್ ದ ಮ್ಯಾಚ್-ಫೈನಲ್

ಸಿಎಸ್‌ಕೆ-ಎಂಐ ಪ್ರಶಸ್ತಿ ಪಂದ್ಯದಲ್ಲಿ 14 ರನ್ನಿಗೆ 2 ವಿಕೆಟ್ ಪಡೆದ ಮುಂಬೈ ವೇಗಿ ಜಸ್‌ಪ್ರೀತ್ ಬೂಮ್ರಾ ಮ್ಯಾನ್ ಆಫ್‌ ದಿ ಮ್ಯಾಚ್ ಪ್ರಶಸ್ತಿ ಪಡೆದುಕೊಂಡರು. ಫೈನಲ್‌ನಲ್ಲಿ ಬೂಮ್ರಾಗೆ ಅಂಬಾಟಿ ರಾಯುಡು ಮತ್ತು ಡ್ವೇನ್ ಬ್ರಾವೋ ವಿಕೆಟ್‌ಗಳು ಲಭಿಸಿದ್ದವು.

ಪರ್ಫೆಕ್ಟ್ ಕ್ಯಾಚ್ ಆಫ್ ಸೀಸನ್

ಪರ್ಫೆಕ್ಟ್ ಕ್ಯಾಚ್ ಆಫ್ ಸೀಸನ್

2019ರ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿರುವ ಮುಂಬೈ ಇಂಡಿಯನ್ ತಂಡದ ಆಲ್ ರೌಂಡರ್ ಕೀರನ್ ಪೊಲಾರ್ಡ್ ಪರ್ಫೆಕ್ಟ್ ಕ್ಯಾಚ್ ಆಫ್ ಸೀಸನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಲೀಗ್ ಹಂತದ ಪಂದ್ಯದಲ್ಲಿ ಅದ್ಭುತ ಕ್ಯಾಚ್ ಮೂಲಕ ಸಿಎಸ್‌ಕೆ ಬ್ಯಾಟ್ಸ್ಮನ್ ಸುರೇಶ್ ರೈನಾ ಅವರನ್ನು ಪೆವಿಲಿಯನ್‌ಗಟ್ಟಿದ್ದಕ್ಕಾಗಿ ಪೊಲಾರ್ಡ್ ಈ ಪ್ರಶಸ್ತಿ (10 ಲಕ್ಷ ರೂ. ಬಹುಮಾನ) ಪಡೆದುಕೊಂಡಿದ್ದಾರೆ.

ಸ್ಟೈಲಿಶ್ ಪ್ಲೇಯರ್ ಆಫ್ ದ ಸೀಸನ್

ಸ್ಟೈಲಿಶ್ ಪ್ಲೇಯರ್ ಆಫ್ ದ ಸೀಸನ್

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸ್ಫೋಟಕ ಬ್ಯಾಟ್ಸ್ಮನ್, ಕನ್ನಡಿಗ ಕೆಎಲ್ ರಾಹುಲ್ 2019ರ ಐಪಿಎಲ್‌ನಲ್ಲಿ ಸ್ಟೈಲಿಶ್ ಪ್ಲೇಯರ್ ಆಗಿ ಗುರುತಿಸಿಕೊಂಡರು. ಈ ಪ್ರಶಸ್ತಿಯನ್ನು ರಾಹುಲ್ ಅನುಪಸ್ಥಿತಿಯಲ್ಲಿ ಅವರ ಸ್ನೇಹಿತ ಹಾರ್ದಿಕ್ ಪಾಂಡ್ಯ ಪಡೆದುಕೊಂಡರು.

ಪರ್ಪಲ್ ಕ್ಯಾಪ್

ಪರ್ಪಲ್ ಕ್ಯಾಪ್

ಬಹುಶಃ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿದ್ದ ದಕ್ಷಿಣ ಆಫ್ರಿಕಾ ವೇಗಿ ಕಾಗಿಸೋ ರಬಾಡಾ ಐಪಿಎಲ್‌ ಟೂರ್ನಿಯ ಅಂತ್ಯದ ವರೆಗೂ ಇದ್ದಿದ್ದರೆ, ಅತ್ಯಧಿಕ ವಿಕೆಟ್‌ಗಾಗಿ ಕೊಡಲಾಗುವ ಪರ್ಪಲ್ ಕ್ಯಾಪ್ ಸರದಾರ ಅನ್ನಿಸಿಕೊಳ್ಳುತ್ತಿದ್ದರು (12 ಪಂದ್ಯ 25 ವಿಕೆಟ್). ಆದರೆ ಈ ಪ್ರಶಸ್ತಿ ಸಿಎಸ್‌ಕೆ ಸ್ಪಿನ್ನರ್ ಇಮ್ರಾನ್ ತಾಹಿರ್ (17 ಪಂದ್ಯ, 26 ವಿಕೆಟ್) ಪಾಲಾಯಿತು.

ಆರೆಂಜ್ ಕ್ಯಾಪ್

ಆರೆಂಜ್ ಕ್ಯಾಪ್

ಚೆಂಡು ವಿರೂಪ ಪ್ರಕರಣದಡಿಯಲ್ಲಿ ಆಸ್ಟ್ರೇಲಿಯಾ ಕ್ರಿಕೆಟ್ ನಿಂದ ನಿಷೇಧಕ್ಕೀಡಾಗಿದ್ದ ಡೇವಿಡ್ ವಾರ್ನರ್ ಅವರ ನಿಷೇಧ ತೆರವಾಗುವ ಹೊತ್ತು ಐಪಿಎಲ್ ಆರಂಭಗೊಂಡಿತ್ತು. ಸನ್ ರೈಸರ್ಸ್ ಹೈದರಾಬಾದ್ ಪರ ಭರ್ಜರಿ ಬ್ಯಾಟ್ ಬೀಸಿದ ವಾರ್ನರ್, ಅತ್ಯಧಿಕ ರನ್‌ಗಾಗಿ (692 ರನ್, 12 ಪಂದ್ಯ) ಆರೆಂಜ್ ಕ್ಯಾಪ್ ಪಡೆದುಕೊಂಡರು.

ಮೋಸ್ಟ್ ವ್ಯಾಲ್ಯುಯೇಬಲ್ ಪ್ಲೇಯರ್

ಮೋಸ್ಟ್ ವ್ಯಾಲ್ಯುಯೇಬಲ್ ಪ್ಲೇಯರ್

ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದು ಬ್ಯಾಟಿಂಗ್‌ಗಾಗಿ ತೋಳ್ಬಲ ಪ್ರದರ್ಶಿಸಿ ರಂಜಿಸಿದ್ದ ವೆಸ್ಟ್ ಇಂಡೀಸ್ ಆಲ್ ರೌಂಡರ್ ಆ್ಯಂಡ್ರೆ ರಸೆಲ್‌ಗೆ ಮೋಸ್ಟ್ ವ್ಯಾಲ್ಯುಯೇಬಲ್ ಪ್ಲೇಯರ್ ಪ್ರಶಸ್ತಿ ಲಭಿಸಿದೆ. ರಸೆಲ್ ಅನುಪಸ್ಥಿತಿಯಲ್ಲಿ ಕೆಕೆಆರ್ ಸಹ ಆಟಗಾರ ಸುಭ್‌ಮಾನ್‌ ಗಿಲ್ ಪ್ರಶಸ್ತಿ ಸ್ವೀಕರಿಸಿದರು.

ಸೂಪರ್ ಸ್ಟ್ರೈಕರ್ ಆಫ್ ದ ಸೀಸನ್

ಸೂಪರ್ ಸ್ಟ್ರೈಕರ್ ಆಫ್ ದ ಸೀಸನ್

ಅತ್ಯಧಿಕ ರನ್‌ಗಾಗಿ ವಾರ್ನರ್ ಗಮನ ಸೆಳೆದರಾದರೂ ಸ್ಫೋಟಕ ಬ್ಯಾಟಿಂಗ್‌ಗಾಗಿ ಮಿಂಚು ಹರಿಸಿದ್ದು ಕೆಕೆಆರ್‌ನ ಆ್ಯಂಡ್ರೆ ರಸೆಲ್. ಹೀಗಾಗಿ ವಿಶೇಷ ಪ್ರತಿಭಾನ್ವಿತ ವಿಭಾಗದ ಸೂಪರ್ ಸ್ಟ್ರೈಕರ್ ಆಫ್ ದ ಸೀಸನ್ ಪ್ರಶಸ್ತಿಯೂ ರಸೆಲ್ ಪಾಲಾಯಿತು.

Story first published: Monday, May 13, 2019, 13:36 [IST]
Other articles published on May 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X