ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಫೈನಲ್‌: ಚೆನ್ನೈ vs ಮುಂಬೈ, ಕುತೂಹಲಕಾರಿ ಅಂಕಿ-ಅಂಶಗಳು!

IPL 2019 Final, Chennai vs Mumbai, a battle of two 3 times champions

ಹೈದರಾಬಾದ್, ಮೇ 11: ಫುಟ್ಬಾಲ್‌ನಲ್ಲಿ ಬದ್ಧ ಎದುರಾಳಿಗಳಾದ ಬಾರ್ಸಿಲೋನಾ ಮತ್ತು ರಿಯಲ್ ಮ್ಯಾಡ್ರಿಡ್ ತಂಡಗಳ ಮುಖಾಮುಖಿಗೆ 'ಎಲ್ ಕ್ಲಾಸಿಕೋ' ಎಂಬ ಹೆಸರಿದೆ. ಭಾರತೀಯ ಕ್ರಿಕೆಟ್‌ಗೆ ಬಂದರೆ ಇಲ್ಲಿ ಐಪಿಎಲ್‌ನಲ್ಲಿನ ಎಲ್ ಕ್ಲಾಸಿಕೋ ಪಂದ್ಯವಾಗಿ ಚೆನ್ನೈ ಸೂಪರ್‌ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ಮುಖಾಮುಖಿ ಗುರುತಿಸಿಕೊಂಡಿದೆ.

ಐಪಿಎಲ್ ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ

ಐಪಿಎಲ್ ಇತಿಹಾಸದಲ್ಲೇ ಎರಡೂ ತಂಡಗಳೂ ತಲಾ 3 ಸಾರಿ ಟ್ರೋಫಿ ಜಯಿಸಿ ಟೂರ್ನಿಯ ಅತ್ಯಂತ ಯಶಸ್ವಿ ತಂಡಗಳೆಂಬ ಹೆಗ್ಗಳಿಕೆ ಪಾತ್ರವಾಗಿವೆ. 2019ರ ಐಪಿಎಲ್‌ ಫೈನಲ್‌ನಲ್ಲೂ ಎಂಐ ಮತ್ತು ಸಿಎಸ್‌ಕೆ ತಂಡಗಳು ಎದುರುಬದುರಾಗುತ್ತಿರುವುದು ಇನ್ನಷ್ಟು ಕುತೂಹಲ ಮೂಡಿಸಿದೆ.

ಐಪಿಎಲ್ 2019 ಫೈನಲ್‌: ಚೆನ್ನೈ vs ಮುಂಬೈ (ಮೇ 12), Live ಸ್ಕೋರ್‌ಕಾರ್ಡ್

1
45949

ಐಪಿಎಲ್‌ನಲ್ಲಿ ಅತೀ ಹೆಚ್ಚು ಸಾರಿ ಟ್ರೋಫಿ ಗೆದ್ದ ಹಿರಿಮೆ ಎರಡೂ ತಂಡಗಳದ್ದು ಎಂದಾದ ಮೇಲೆ ಇತ್ತಂಡಗಳ ಫೈನಲ್ ಹಣಾಹಣಿಯ ಇತಿಹಾಸ ಕೆದಕಿದರೆ ಅಲ್ಲಿ ಕುತೂಹಲಕಾರಿ ಅಂಕಿ-ಅಂಶಗಳು ಸಿಕ್ಕಲಾರವೆ? ಅವುಗಳಲ್ಲೊಂದಿಷ್ಟು ಇಲ್ಲಿವೆ.

ನಾಲ್ಕನೇ ಫೈನಲ್ ಕಾದಾಟ

ನಾಲ್ಕನೇ ಫೈನಲ್ ಕಾದಾಟ

ಐಪಿಎಲ್‌ ಫೈನಲ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್‌ ಕಿಂಗ್ಸ್ ತಂಡಗಳು ಎದುರೆದುರಾಗುತ್ತಿರುವುದು ಇದು ನಾಲ್ಕನೇ ಬಾರಿ. ಈ ಹಿಂದೆ ಮೂರು ಸಾರಿಯ ಮುಖಾಮುಖಿಯಲ್ಲಿ ಮುಂಬೈ ತಂಡ ಸಿಎಸ್‌ಕೆಯನ್ನು 2013ರಲ್ಲಿ 23 ರನ್‌ಗಳಿಂದ, 2015ರಲ್ಲಿ 41 ರನ್‌ಗಳಿಂದ ಸೋಲಿಸಿತ್ತು. ಚೆನ್ನೈ ತಂಡ ಮುಂಬೈಯನ್ನು 2010ರಲ್ಲಿ 22 ರನ್‌ಗಳಿಂದ ಮಣಿಸಿತ್ತು. ಅಂದರೆ ದಾಖಲೆಯ ಪ್ರಕಾರ ಇತ್ತಂಡಗಳ ಮೂರು ಫೈನಲ್ ಮುಖಾಮುಖಿಯಲ್ಲಿ ಮುಂಬೈ 2-1ರ ಮುನ್ನಡೆಯಲ್ಲಿದೆ.

ಚೆನ್ನೈ ಹೆಚ್ಚು ಸಾರಿ ಫೈನಲ್‌ ಪ್ರವೇಶಿಸಿತ್ತು

ಚೆನ್ನೈ ಹೆಚ್ಚು ಸಾರಿ ಫೈನಲ್‌ ಪ್ರವೇಶಿಸಿತ್ತು

ಐಪಿಎಲ್ ದಾಖಲೆಗಳ ಪ್ರಕಾರ ಚೆನ್ನೈ ಸೂಪರ್‌ ಕಿಂಗ್ಸ್ ಇದು 8ನೇ ಸಾರಿ ಫೈನಲ್ ಪ್ರವೇಶಿಸಿದ್ದರೆ, ಮುಂಬೈ ಇಂಡಿಯನ್ಸ್ 5ನೇ ಬಾರಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಪ್ಲೇ ಆಫ್ಸ್ ಹಂತದಲ್ಲಿ ಮೊದಲ ಕ್ವಾಲಿಫೈಯರ್‌ ನಲ್ಲಿ ಎಂಐ ತಂಡ ಚೆನ್ನೈ ಸೋಲಿಸಿ ನೇರವಾಗಿ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿತ್ತು. ಕ್ವಾಲಿಫೈಯರ್-2ರಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಬಂದಿದೆ.

ಮುಂಬೈದ್ದೇ ಮೇಲುಗೈ

ಮುಂಬೈದ್ದೇ ಮೇಲುಗೈ

ಎರಡೂ ತಂಡಗಳ ರೋಚಕ ಕಾಳಗದಲ್ಲಿ ಜಯಿಸಿದ್ದು ಮುಂಬೈ ಇಂಡಿಯನ್ಸ್ ತಂಡವೇ ಎನ್ನುತ್ತಿವೆ ಐಪಿಎಲ್ ದಾಖಲೆಗಳು. ಈವರೆಗೆ ಇತ್ತಂಡಗಳು ಒಟ್ಟು 27 ಸಾರಿ ಕಾದಾಡಿದ್ದವು. ಇದರಲ್ಲಿ ಒಟ್ಟು 16 ಪಂದ್ಯಗಳನ್ನು ಎಂಐ ಗೆದ್ದುಕೊಂಡಿದೆ. ಈ ಫೈನಲ್‌ನಲ್ಲಿ ಮುಂಬೈ ಒಂದು ವೇಳೆ ಪಂದ್ಯ ಗದ್ದರೆ ಟ್ರೋಫಿ ಲೆಕ್ಕಾಚರಾದಲ್ಲಿ ಎಂಐ 4-3ರ ಮುನ್ನಡೆ ಪಡೆಯಲಿದೆ. ಚೆನ್ನೈ ಗೆದ್ದರೆ ಸಿಎಸ್‌ಕೆಗೆ 4-3ರ ಮುನ್ನಡೆ ಲಭಿಸಲಿದೆ.

ಮುಂಬೈ ಗೆಲ್ಲುವ ನಿರೀಕ್ಷೆ

ಮುಂಬೈ ಗೆಲ್ಲುವ ನಿರೀಕ್ಷೆ

ಈ 12ನೇ ಆವೃತ್ತಿಯ ಐಪಿಎಲ್‌ನಲ್ಲಿ ಮುಂಬೈ ಮತ್ತು ಚೆನ್ನೈ ತಂಡಗಳು ಒಟ್ಟು ಮೂರು ಸಾರಿ ಕಾದಾಡಿದ್ದವು. ಇದರಲ್ಲಿ 2 ಲೀಗ್ ಪಂದ್ಯಗಳಾದರೆ, 1 ಪ್ಲೇ ಆಫ್ ಹಂತದ ಪಂದ್ಯ. ವಿಶೇಷವೆಂದರೆ ಈ ಬಾರಿ ಚೆನ್ನೈ ಎದುರು ಆಡಿದ ಮೂರೂ ಪಂದ್ಯಗಳನ್ನು ಗೆದ್ದು ಮುಂಬೈ 3-0ಯ ಮುನ್ನಡೆಯಲ್ಲಿದೆ. ಹೀಗಾಗಿ ಫೈನಲ್‌ನಲ್ಲಿ ಎಂಐ ತಂಡ ಗೆಲ್ಲವುದನ್ನು ನಿರೀಕ್ಷಿಸಲಾಗಿದೆ. ಹಾಗಂತ ಈ ಎಣಿಕೆ ಉಲ್ಟಾ ಆದರೂ ಅದರಲ್ಲಿ ಅಚ್ಚರಿಯಿಲ್ಲ.

Story first published: Saturday, May 11, 2019, 16:27 [IST]
Other articles published on May 11, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X