ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ 2020: ಡೆಲ್ಲಿ ಕ್ಯಾಪಿಟಲ್ಸ್‌ ಸೇರಲಿದ್ದಾರಂತೆ ರಾಯಲ್ಸ್‌ನ ಅಜಿಂಕ್ಯ ರಹಾನೆ!

ರಾಜಸ್ಥಾನ ತಂಡಕ್ಕೆ ಆಘಾತ ನೀಡಲು ಮುಂದಾದ ರಹಾನೆ..? | Oneindia Kannada
Ajinkya Rahane 2019

ಹೊಸದಿಲ್ಲಿ, ಆಗಸ್ಟ್‌ 12: ರಾಜಸ್ಥಾನ್‌ ರಾಯಲ್ಸ್‌ ತಂಡದ ಮಾಜಿ ನಾಯಕ ಹಾಗೂ ಸ್ಟಾರ್‌ ಬ್ಯಾಟ್ಸ್‌ಮನ್‌ ಅಜಿಂಕ್ಯ ರಹಾನೆ ಅವರನ್ನು 2020ರ ಐಪಿಎಲ್‌ ಟೂರ್ನಿಗೆ ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಡೆಲ್ಲಿ ಕ್ಯಾಪಿಟಲ್ಸ್‌ ತಂಡ ರಾಯಲ್ಸ್‌ ಫ್ರಾಂಚೈಸಿ ಜೊತೆಗೆ ಮಾತುಕತೆಯಲ್ಲಿ ತೊಡಗಿದೆ.

ODIನಲ್ಲಿ ಕಿಂಗ್‌ ಕೊಹ್ಲಿ 42ನೇ ಶತಕ, ದಾದಾ ದಾಖಲೆ ಧೂಳೀಪಟ!ODIನಲ್ಲಿ ಕಿಂಗ್‌ ಕೊಹ್ಲಿ 42ನೇ ಶತಕ, ದಾದಾ ದಾಖಲೆ ಧೂಳೀಪಟ!

ಈ ಬೆಳವಣಿಗೆ ಹತ್ತಿರದ ಮೂಲಗಳು ತಿಳಿಸಿರುವ ಪ್ರಕಾರ, ರಹಾನೆ ಅವರನ್ನು ತೆಗೆದುಕೊಳ್ಳುವ ವಿಚಾರವಾಗಿ ರಾಜಸ್ಥಾನ್‌ ರಾಯಲ್ಸ್‌ ಜೊತೆಗೆ ಮಾತುಕತೆ ಚಾಲ್ತಿಯಲ್ಲಿದ್ದು ಎಲ್ಲವೂ ಸರಿಯಾದ ರೀತಿಯಲ್ಲಿ ಸಾಗಿದರೆ ವಿಶ್ವದ ಅತ್ಯಂತ ಐಶಾರಾಮಿ ಟಿ20 ಲೀಗ್‌ ಆಗಿರುವ ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ 2020ರ ಆವೃತ್ತಿಯಲ್ಲಿ ರಹಾನೆ ಡೆಲ್ಲಿ ಕ್ಯಾಪಿಟಲ್ಸ್‌ ಪರ ಆಡಲಿದ್ದಾರೆ.

ಕೆರಿಬಿಯನ್‌ ನೆಲದಲ್ಲಿ ಪ್ರಿನ್ಸ್‌ ಲಾರಾ ದಾಖಲೆ ಮುರಿದ ಕಿಂಗ್‌ ಕೊಹ್ಲಿ!ಕೆರಿಬಿಯನ್‌ ನೆಲದಲ್ಲಿ ಪ್ರಿನ್ಸ್‌ ಲಾರಾ ದಾಖಲೆ ಮುರಿದ ಕಿಂಗ್‌ ಕೊಹ್ಲಿ!

"ಹೌದು, ಡೆಲ್ಲಿ ಕ್ಯಾಪಿಟಲ್ಸ್‌ ತಂಡ ರಹಾನೆ ಅವರನ್ನು ತೆಗೆದುಕೊಳ್ಳಲು ಮಾತುಕತೆ ನಡೆಸಿದೆ. ಆದರೆ, ಈ ವಿಚಾರವಾಗಿ ಸದ್ಯಕ್ಕೆ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ. ಒಪ್ಪಂದಕ್ಕೂ ಮುನ್ನ ಹಲವು ಸಂಗತಿಗಳ ಕುರಿತಾಗಿ ಎಚ್ಚರಿಕೆ ವಹಿಸುವ ಅಗತ್ಯವಿರುತ್ತದೆ. ಏಕೆಂದರೆ ರಹಾನೆ ರಾಯಲ್ಸ್‌ ತಂಡದ ಪ್ರಮುಖ ಆಟಗಾರನಾಗಿದ್ದಾರೆ. ಮಾತುತೆ ನಡೆಯುತ್ತಿರುವುದಂತೂ ನಿಜ," ಎಂದು ಮೂಲಗಳು ಸುದ್ದಿ ಸಂಸ್ಥೆಗೆ ತಿಳಿಸಿವೆ.

ತಂಡವನ್ನು ಮೇಲೆತ್ತಲು ಜೆಎಸ್‌ಡಬ್ಲ್ಯು ಶತಪ್ರಯತ್ನ

ತಂಡವನ್ನು ಮೇಲೆತ್ತಲು ಜೆಎಸ್‌ಡಬ್ಲ್ಯು ಶತಪ್ರಯತ್ನ

ಜಿಂದಾಲ್‌ ಸ್ಟೀಲ್ ವರ್ಕ್ಸ್‌ (ಜೆಎಸ್‌ಡಬ್ಲ್ಯು) 2019ರಲ್ಲಿ ಡೆಲ್ಲಿ ಫ್ರಾಂಚೈಸಿ ತಂಡದ ಮಾಲೀಕತ್ವ ಪಡೆದ ಬಳಿಕ ತಂಡದಲ್ಲಿ ಹಲವು ಬದಲಾವಣೆಗಳ್ನು ತಂದಿದೆ. ಅಲ್ಲದೆ ತಂಡಕ್ಕೆ ಹೊಸ ಹುರುಪು ನೀಡುವ ಪ್ರಯತ್ನದಲ್ಲಿ ಸ್ಟಾರ್‌ ಆಟಗಾರರನ್ನು ಕರೆ ತಂದಿದೆಯಲ್ಲದೆ, ಡೆಲ್ಲಿ ಡೇರ್‌ಡೆವಿಲ್ಸ್‌ ಬದಲಾಗಿ ಡೆಲ್ಲಿ ಕ್ಯಾಪಿಟಲ್ಸ್‌ ಎಂದು ಫ್ರಾಂಚೈಸಿಗೆ ಮರು ನಾಮಕರಣ ಕೂಡ ಮಾಡಿದೆ. ಇದೀಗ 2020ರ ಲೀಗ್‌ಗೆ ತಂಡವನ್ನು ಬಲಿಷ್ಠವನ್ನಾಗಿಸಲು ತನ್ನ ಪ್ರಯತ್ನ ಮುಂದುವರಿಸಿದೆ. 2019ರ ಆವೃತ್ತಿಯಲ್ಲೂ ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಸ್ಟಾರ್ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಅವರನ್ನು ಡೆಲ್ಲಿ ತಂಡ ತನ್ನದಾಗಿಸಿಕೊಂಡಿತ್ತು.

2012ರ ಬಳಿಕ ಮೊದಲ ಬಾರಿ ಪ್ಲೇಆಫ್ಸ್‌ಗೆ

2012ರ ಬಳಿಕ ಮೊದಲ ಬಾರಿ ಪ್ಲೇಆಫ್ಸ್‌ಗೆ

ಡೆಲ್ಲಿ ಪರ ಮಿಂಚಿದ ಧವನ್‌ 5 ಅರ್ಧಶತಕಗಳನ್ನು ಒಳಗೊಂಡ 521 ರನ್‌ಗಳನ್ನು ಚೆಚ್ಚಿದ್ದರು. ಅವರ ಈ ಭರ್ಜರಿ ಪ್ರದರ್ಶನದ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್‌ ತಂಡ 2012ರ ಬಳಿಕ ಇದೇ ಮೊದಲ ಬಾರಿ ಐಪಿಎಲ್‌ನ ನಾಕ್‌ಔಟ್‌ ಹಂತಕ್ಕೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಅನುಭವಿಗಳು ಮತ್ತು ಯುವ ಆಟಗಾರರ ಸಂಮಿಶ್ರಣವನ್ನು ಹೊಂದುವುದು ತಂಡದ ಮುಖ್ಯ ಗುರಿಯಾಗಿದೆ ಎಂದು ಇದೇ ವೇಳೆ ಕ್ಯಾಪಿಟಲ್ಸ್‌ನ ಅಧಿಕಾರಿಗಳು ಹೇಳಿಕೊಂಡಿದ್ದಾರೆ.

ಮೊದಲು ಮುಂಬೈ ಇಂಡಿಯನ್ಸ್‌ ಪರ ಆಡಿದ್ದರು

ಮೊದಲು ಮುಂಬೈ ಇಂಡಿಯನ್ಸ್‌ ಪರ ಆಡಿದ್ದರು

2008ರಲ್ಲಿ ಐಪಿಎಲ್‌ ಅಭಿಯಾನ ಆರಂಭಿಸಿದ ಅಜಿಂಕ್ಯ ರಹಾನೆ 2008-2009ರಲ್ಲಿ ಮುಂಬೈ ಇಂಡಿಯನ್ಸ್‌ ಪರ ಆಡಿದ್ದರು. ಬಳಿಕ ಒಂದು ವರ್ಷ ವಿರಾಮದ ನಂತರ 2011ರಲ್ಲಿ ರಾಜಸ್ಥಾನ್‌ ರಾಯಲ್ಸ್‌ ಪರ ಪದಾರ್ಪಣೆ ಮಾಡಿದ್ದರು. ಅಂದಿನಿಂದ ಇಂದಿನವರೆಗೂ ತಂದ ಅವಿಭಾಜ್ಯ ಅಂಗವಾಗಿ ಉಳಿದಿದ್ದ ರಜಾನೆ, 2016ರ ಬಳಿಮ ಸ್ಪಾಟ್‌ ಫಿಕ್ಸಿಂಗ್‌ ಮತ್ತು ಬೆಟ್ಟಿಂಗ್‌ ಹಗರಣದಲ್ಲಿ ರಾಯಲ್ಸ್‌ ತಂಡ ಅಮಾನತುಗೊಂಡ ಸಂದರ್ಭದಲ್ಲಿ 2 ವರ್ಷಗಳ ಕಾಲ ಪುಣೆ ಸೂಪರ್‌ಜಯಂಟ್ಸ್‌ ತಂಡದ ಪರ ಆಡಿದ್ದರು. ಬಳಿಕ ಮರಳಿ ರಾಯಲ್ಸ್‌ ಗರಡಿ ತಲುಪಿದರಲ್ಲದೆ, 2019ರ ಐಪಿಎಲ್‌ನಲ್ಲಿ ನಾಯಕತ್ವ ಕೂಡ ಪಡೆದಿದ್ದರು. ರಹಾನೆ ನಾಯಕತ್ವದಲ್ಲಿ ವೈಯಕ್ತಿಕ ಪ್ರದರ್ಶನಗಳು ಉತ್ತಮವಾಗಿತ್ತಾದರೂ ತಂಡ ಜಯ ದಾಖಲಿಸುವಲ್ಲಿ ವಿಫಲಗೊಂಡು ಲೀಗ್‌ ಹಂತದಲ್ಲೇ ಹೊರಬಿದ್ದಿತ್ತು. ಇದೀಗ ರಹಾನೆ, ರಾಯಲ್ಸ್‌ ಜೊತೆಗಿನ ಅಭಿಯಾನ ಅಂತ್ಯಗೊಳಿಸುವ ಹೊಸ್ತಿಲಲ್ಲಿದ್ದಾರೆ.

ರಹಾನೆ ಟಿ20 ಸಾಧನೆ

ರಹಾನೆ ಟಿ20 ಸಾಧನೆ

196 ಪಂದ್ಯ
4988 ರನ್‌
105* ಗರಿಷ್ಠ
29.69 ಸರಾಸರಿ
119.70 ಸ್ಟ್ರೈಕ್‌ರೇಟ್‌
02 ಶತಕ
35 ಅರ್ಧಶತಕ
518 ಫೋರ್‌ಗಳು
94 ಸಿಕ್ಸರ್ಸ್‌

Story first published: Monday, August 12, 2019, 17:35 [IST]
Other articles published on Aug 12, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X