ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಫೈನಲ್‌ಗೆ ಪ್ರವೇಶ ಪಡೆದುಕೊಳ್ಳದಿರುವುದು ನಿಜವಾದ ಅವಮಾನ: ಕೇನ್ ವಿಲಿಯಮ್ಸನ್

IPL 2020: Its a shame not to make the finals: Kane Williamson

ಐಪಿಎಲ್ 2020 ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ 16 ಪಂದ್ಯಗಳನ್ನು ಆಡಿ ಅದರಲ್ಲಿ ಅರ್ಧದಷ್ಟು ಗೆಲುವು ಸಾಧಿಸಿದೆ. ಟೂರ್ನಿಯ ಆರಂಭದಲ್ಲಿ ಕಳಪೆ ಆರಂಭವನ್ನು ಪಡೆದ ತಂಡ ಲೀಗ್‌ನಿಂದಲೇ ಹೊರಬೀಳುವ ಸಾಧ್ಯತೆಯಿತ್ತು. ಆದರೆ ಅಂತಿಮ ಹಂತದಲ್ಲಿ ಅನಿರೀಕ್ಷಿತವಾಗಿ ತಿರುಗಿಬೀಳಲು ಯಶಸ್ವಿಯಾಗಿ ಪ್ಲೇಆಫ್‌ಗೆ ಮೂರನೇ ತಂಡವಾಗಿ ಪ್ರವೇಶ ಪಡೆಯಿತು.

ಎರನೇ ಕ್ವಾಲಿಫೈಯರ್‌ನಲ್ಲಿ ಡೆಲ್ಲಿ ವಿರುದ್ಧ 17 ರನ್‌ಗಳಿಂದ ಸೋಲುವ ಮೂಲಕ ಹೈದರಾಬಾದ್ ತನ್ನ ಹೋರಾಟವನ್ನು ಅಂತ್ಯಗೊಳಿಸಿತು. ಈ ಸೋಲಿನ ಬಳಿಕ ಸನ್‌ರೈಸರ್ಸ್ ಹೈದರಾಬಾದ್ ತಂಡದ ಅನುಭವಿ ಆಟಗಾರ ಕೇನ್ ವಿಲಿಯಮ್ಸನ್ ಪ್ರತಿಕ್ರಿಯಿಸಿದರು.

ಐಪಿಎಲ್: ಅತಿ ಹೆಚ್ಚು ರನ್ ಗಳಿಕೆಯಲ್ಲಿ ರೋಹಿತ್ ಹಿಂದಿಕ್ಕಿದ ಧವನ್ಐಪಿಎಲ್: ಅತಿ ಹೆಚ್ಚು ರನ್ ಗಳಿಕೆಯಲ್ಲಿ ರೋಹಿತ್ ಹಿಂದಿಕ್ಕಿದ ಧವನ್

"ನಾವು ಉತ್ತಮ ಆರಂಭವನ್ನು ಪಡೆಯಲಿಲ್ಲ. ಆದರೆ ಪಂದ್ಯದ ಮಧ್ಯಭಾಗದಲ್ಲಿ ನಾವು ಉತ್ತಮ ಆರಮಭವನ್ನು ಪಡೆಯಲು ಯಶಸ್ವಿಯಾದೆವು. ಆದರೆ ನಮಗೆ ಆ ಸಂದರ್ಭದಲ್ಲೂ ಗೆಲ್ಲುವ ಅವಕಾಶವಿತ್ತು. ಫೈನಲ್‌ಗೆ ಪ್ರವೇಶ ಪಡೆಯಲು ಸಾಧ್ಯವಾಗದಿರುವುದು ಅವಮಾನಕರ ಸಂಗತಿ. ಆದರೆ ಸದಸ್ಯದ ಪರಿಶ್ರಮ ಹೆಮ್ಮೆಪಡುವಂತಾ ಸಂಗತಿ" ಎಂದು ವಿಲಿಯಮ್ಸನ್ ವಿವರಿಸಿದ್ದಾರೆ.

ಇನ್ನು ಇದೇ ಸಂದರ್ಭದಲ್ಲಿ ಡೆಲ್ಲಿ ತಂಡದ ಪ್ರದರ್ಶನವನ್ನು ಮಿಲಿಯಮ್ಸನ್ ಕೊಂಡಾಡಿದರು. ಡೆಲ್ಲಿ ಅತ್ಯುತ್ತಮವಾದ ತಂಡ. ಅವರ ಉತ್ತಮ ಲಯವನ್ನು ಕಂಡುಕೊಲ್ಳಲು ಯಶಸ್ವಿಯಾದರು. ಈ ಮೂಲಕ ನಮ್ಮ ಮೇಲೆ ಒತ್ತಡವನ್ನು ಹೇರುವಲ್ಲಿ ಯಶಸ್ವಿಯಾದರು. ಉತ್ತಮ ಪ್ರದರ್ಶನ ನೀಡುವ ಮೂಲಕ ಸ್ಪರ್ಧಾತ್ಮಕ ಮೊತ್ತವನ್ನು ಗುರಿಯಾಗಿ ನೀಡಿದರು ಎಂದು ಮಿಲಿಯಮ್ಸನ್ ವಿವರಿಸಿದ್ದಾರೆ.

ದಾಖಲೆ: ಮೊದಲ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿದ ಡೆಲ್ಲಿದಾಖಲೆ: ಮೊದಲ ಬಾರಿಗೆ ಐಪಿಎಲ್ ಫೈನಲ್ ಪ್ರವೇಶಿಸಿದ ಡೆಲ್ಲಿ

ಟೂರ್ನಿಯಲ್ಲಿ ಆರಂಬದ ಕೆಲ ಪಂದ್ಯಗಳಲ್ಲಿ ಗಾಯಗೊಂಡು ಹೊರಗುಳಿದಿದ್ದ ಕೇನ್ ಬಳಿಕ 12 ಪಂದ್ಯಗಳಲ್ಲಿ ಹೈದರಾಬಾದ್ ಪರ ಕಣಕ್ಕಿಳಿದರು. ಇದರಲ್ಲಿ 45.28ರ ಸರಾಸರಿಯಲ್ಲಿ 317 ರನ್ ಬಾರಿಸಿದ್ದಾರೆ. ಟೂರ್ನಿಯಲ್ಲಿ ಕೇನ್ ವಿಲಿಯಮ್ಸನ್ 3 ಅರ್ಧ ಶತಕವನ್ನು ಭಾರಿಸಿದ್ದಾರೆ.

Story first published: Monday, November 9, 2020, 13:32 [IST]
Other articles published on Nov 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X