ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಫೈನಲ್ ಗೆ ಮುನ್ನಾ ಡೆಲ್ಲಿ ತಂಡಕ್ಕೆ ಕಿವಿಮಾತು ಹೇಳಿದ ಸಂಜಯ್ ಬಾಂಗರ್

IPL 2020: Sanjay Bangar Advice To Delhi Capitals

ಐಪಿಎಲ್ 2020 ಮುಗಿಯಲು ಒಂದು ಪಂದ್ಯವಷ್ಟೆ ಬಾಕಿ ಇದೆ. ಇಂದು (ನವೆಂಬರ್ 10) ರಾತ್ರಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ಮಧ್ಯೆ ಟ್ರೋಫಿಗಾಗಿ ಸೆಣಸಾಟ ನಡೆಯಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ಇದೇ ಮೊದಲ ಬಾರಿಗೆ ಐಪಿಎಲ್‌ ಟೂರ್ನಿಯ ಫೈನಲ್‌ ಪ್ರವೇಶಿಸಿದೆ. ಮೇಲ್ನೋಟಕ್ಕೆ ಮುಂಬೈ ತಂಡ ಬಲಶಾಲಿಯಾಗಿ ಕಾಣುತ್ತಿದೆಯಾದರೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಪ್ರತಿಭಾವಂತರ ಪಡೆ ಇದೆ.

ಮುಂಬೈ ಈಗಾಗಲೇ ಐದು ಬಾರಿ ಚಾಂಪಿಯನ್ ಪಟ್ಟ ಗೆದ್ದಿದೆ. ಆದರೆ ಡೆಲ್ಲಿಗೆ ಇದು ಮೊದಲ ಐಪಿಎಲ್ ಫೈನಲ್ ಅನುಭವ ಹಾಗಾಗಿ ಡೆಲ್ಲಿಗೆ ಈ ಪಂದ್ಯ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಇಂಥಹಾ ಮಹತ್ವಪೂರ್ಣ ಪಂದ್ಯದ ದಿನ ಭಾರತದ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದ ಸಂಜಯ್ ಬಾಂಗರ್ ಡೆಲ್ಲಿ ತಂಡಕ್ಕೆ ಸಲಹೆಯೊಂದನ್ನು ನೀಡಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಸಮತೋಲಿತ ತಂಡ: ಸಂಜಯ್ ಬಾಂಗರ್

ಡೆಲ್ಲಿ ಕ್ಯಾಪಿಟಲ್ಸ್ ಸಮತೋಲಿತ ತಂಡ: ಸಂಜಯ್ ಬಾಂಗರ್

ಡೆಲ್ಲಿ ಕ್ಯಾಪಿಟಲ್ಸ್, ಅದ್ಭುತವಾದ ಸಮತೋಲನ ಹೊಂದಿದ ತಂಡವನ್ನು ಹೊಂದಿದೆ. ಯುವಕರ-ಅನುಭವಿಗಳ. ವಿದೇಶಿ ಫಾಸ್ಟ್ ಬೌಲಿಂಗ್, ಭಾರತೀಯ ಸ್ಪಿನ್ನರ್ಸ್, ಭಾರತೀಯ ಬಾಟ್ಸ್‌ಮನ್‌ಗಳ ಉತ್ತಮ ಸಮತೋಲನ ಆ ತಂಡದಲ್ಲಿದೆ.

ಆಟಗಾರರ ಮೇಲೆ ವಿಶ್ವಾಸವಿಡಬೇಕು: ಸಂಜಯ್ ಬಾಂಗರ್

ಆಟಗಾರರ ಮೇಲೆ ವಿಶ್ವಾಸವಿಡಬೇಕು: ಸಂಜಯ್ ಬಾಂಗರ್

ಡೆಲ್ಲಿ ಕ್ಯಾಪಿಟಲ್ಸ್ ತಂಡವು ತಮ್ಮ ತಂಡದ ಆಟಗಾರರ ಪ್ರತಿಭೆಯ ಮೇಲೆ ವಿಶ್ವಾಸವಿಡಬೇಕು. ಇಂದಿನ ರಾತ್ರಿಯ ಪಂದ್ಯ ಏನಾದರೂ ಆಗಲಿ, ಅವರ ತಮ್ಮ ತಂಡದ ಆಟಗಾರರ ಮೇಲಿನ ವಿಶ್ವಾಸ ಕಳೆದುಕೊಳ್ಳಬಾರದು, ಏಕೆಂದರೆ ಅದೊಂದು ಸಮತೋಲಿತ ತಂಡ ಎಂದಿದ್ದಾರೆ ಬಾಂಗರ್.

ಶಿಖರ್ ಹಾಗೂ ಅಶ್ವಿನ್ ತಡವಾಗಿ ತಂಡಕ್ಕೆ ಬಂದವರು

ಶಿಖರ್ ಹಾಗೂ ಅಶ್ವಿನ್ ತಡವಾಗಿ ತಂಡಕ್ಕೆ ಬಂದವರು

ಶಿಖರ್ ಧವನ್ ಹಾಗೂ ಆರ್.ಅಶ್ವಿನ್ ಅನ್ನು ತಡವಾಗಿ ತಂಡಕ್ಕೆ ಸೇರಿಸಿಕೊಂಡಿತು ಡೆಲ್ಲಿ ಕ್ಯಾಪಿಟಲ್ಸ್ ಆದರೆ ಆ ಇಬ್ಬರೂ ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಆಟಗಾರರನ್ನು ಕೈಬಿಡುವ, ಹೊಸ ಆಟಗಾರರನ್ನು ಸೇರಿಸಿಕೊಳ್ಳುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಬಾಂಗರ್ ಮೇಲಿನ ಮಾತುಗಳನ್ನು ಹೇಳಿದ್ದಾರೆ.

ಡೆಲ್ಲಿ ಪರ ಕೀ ಆಟಗಾರರು

ಡೆಲ್ಲಿ ಪರ ಕೀ ಆಟಗಾರರು

ಮುಂಬೈ ವಿರುದ್ಧ ಇಂದು ರಾತ್ರಿ 7 ಗಂಟೆಗೆ ದುಬೈನಲ್ಲಿ ಐಪಿಎಲ್ ಫೈನಲ್ ನಡೆಯಲಿದ್ದು, ಡೆಲ್ಲಿ ಪರ, ಶಿಖರ್ ಧವನ್, ಸ್ಟೋಯ್ನಿಸ್, ಶ್ರೇಯಸ್ ಐಯ್ಯರ್, ಅಶ್ವಿನ್, ರಬಾಡಾ ಅವರುಗಳು ಪ್ರಮುಖ ಆಟಗಾರರಾಗಿದ್ದಾರೆ. ಪೃಥ್ವಿ ಶಾ, ಪಂತ್ ಲಯಕ್ಕೆ ಬರಬೇಕಿದೆ.

Story first published: Tuesday, November 10, 2020, 15:15 [IST]
Other articles published on Nov 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X