ಈ ಯುವ ಆಟಗಾರ ಪೊಲಾರ್ಡ್ ಅವರನ್ನು ನೆನಪಿಸುತ್ತಾನೆ: ಅನಿಲ್ ಕುಂಬ್ಳೆ

ಪಂಜಾಬ್ ಕಿಂಗ್ಸ್ ಕಳೆದ ಬಾರಿಯ ಆವೃತ್ತಿಯಲ್ಲಿ ಕೆಲ ಅದ್ಭುತ ಪಂದ್ಯಗಳ ಹೊರತಾಗಿಯೂ ಪ್ಲೇಆಫ್ ಪ್ರವೇಶಿಸುವಲ್ಲಿ ವಿಫಲವಾಗಿತ್ತು. ಆದರೆ ಕಳೆದ ಫೆಬ್ರವರಿಯಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕೆಲ ಅತ್ಯುತ್ತಮ ಆಟಗಾರರನ್ನು ಸೇರಿಸಿಕೊಳ್ಳುವ ಮೂಲಕ ತಂಡವನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ. ಈ ಸಂದರ್ಭದಲ್ಲಿ ತಂಡವನ್ನು ಸೇರಿಕೊಂಡ ಓರ್ವ ಯುವ ಆಟಗಾರನ ಬಗ್ಗೆ ಪಂಜಾಬ್ ಕಿಂಗ್ಸ್ ತಂಡದ ಕ್ರಿಕೆಟ್ ಚಟುವಟಿಕೆಗಳ ನಿರ್ದೇಶಕನಾಗಿರುವ ಅನಿಲ್ ಕುಂಬ್ಳೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

ಆರ್‌ಸಿಬಿ ತಂಡದ ಕೋಚ್ ಆಗಿರುವ ಅನಿಲ್ ಕುಂಬ್ಳೆ 25ರ ಹರೆಯದ ಯುವ ಆಟಗಾರನನ್ನು ಮನಃಪೂರ್ವಕವಾಗಿ ಪ್ರಶಂಸಿಸಿದ್ದಾರೆ. ಈ ಆಟಗಾರ ತನಗೆ ಮುಂಬೈ ಇಂಡಿಯನ್ಸ್ ತಂಡದ ಸ್ಪೋಟಕ ಆಟಗಾರ ಕಿರಾನ್ ಪೊಲಾರ್ಡ್ ಅವರನ್ನು ನೆನಪಿಸುತ್ತಾನೆ ಎಂದಿದ್ದಾರೆ ಅನಿಲ್ ಕುಂಬ್ಳೆ.

ಮುಂಬೈ ವಿರುದ್ಧದ ಪಂದ್ಯಕ್ಕೆ ಆರ್‌ಸಿಬಿ ಪ್ಲೇಯಿಂಗ್ XI ಹೆಸರಿಸಿದ ಚೋಪ್ರಾ

ಹಾಗಾದರೆ ಅನಿಲ್ ಕುಂಬ್ಳೆಯಂತಾ ದಿಗ್ಗಜ ಆಟಗಾರನಿಂದ ಮುಕ್ತಕಂಠದ ಪ್ರಶಂಸೆಗೆ ಒಳಗಾದ ಆ ಆ ಯುವ ಆಟಗಾರ ಯಾರು? ಮುಂದೆ ಓದಿ..

ಯುವ ಆಟಗಾರ ಶಾರೂಖ್ ಖಾನ್

ಯುವ ಆಟಗಾರ ಶಾರೂಖ್ ಖಾನ್

ಪಂಜಾಬ್ ಕಿಂಗ್ಸ್ ತಂಡದ ನಿರ್ದೇಶಕನಾಗಿರುವ ಅನಿಲ್ ಕುಂಬ್ಳೆಯಿಂದ ಹೀಗೆ ಹೊಗಳಿಸಿಕೊಂಡ ಆಟಗಾರ ಪಂಜಾಬ್ ಕಿಂಗ್ಸ್ ತಂಡಕ್ಕೆ ಇತ್ತೀಚೆಗೆ ಸೇರ್ಪಡೆಯಾಗಿರುವ ಶಾರೂಖ್ ಖಾನ್. ಮುಂಬೈ ಇಂಡಿಯನ್ಸ್ ತಂಡದ ಆಲ್‌ರೌಂಡರ್ ಆಗಿರುವ ಕಿರಾನ್ ಪೊಲಾರ್ಡ್ ಅವರನ್ನು ಶಾರೂಖ್ ಖಾನ್ ನೆನಪಿಸುತ್ತಾರೆ ಎಂದು ಕುಂಬ್ಳೆ ಹೇಳಿದ್ದಾರೆ.

ತನ್ನ ಅನುಭವ ಸ್ಮರಿಸಿದ ಕುಂಬ್ಳೆ

ತನ್ನ ಅನುಭವ ಸ್ಮರಿಸಿದ ಕುಂಬ್ಳೆ

ಅನಿಲ್ ಕುಂಬ್ಳೆ ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಕಿರಾನ್ ಪೊಲಾರ್ಡ್‌ಗೆ ನೆಟ್ಸ್‌ನಲ್ಲಿ ಬೌಲಿಂಗ್ ಮಾಡಿದ ತನ್ನ ಅನುಭವವನ್ನು ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ. ಅದೇ ತೆರನಾದ ಕೌಶಲ್ಯವನ್ನು ಶಾರೂಖ್ ಖಾನ್ ಕೂಡ ಹೊಂದಿದ್ದಾರೆ ಎಂದಿದ್ದಾರೆ ಅನಿಲ್ ಕುಂಬ್ಳೆ .

"ಅಪಾಯಕಾರಿ ಪೊಲಾರ್ಡ್"

ಮುಂಬೈ ಇಂಡಿಯನ್ಸ್ ತಂಡದಲ್ಲಿರುವಾಗ ನಾನು ಕೆಲವು ಬಾರಿ ಪೊಲಾರ್ಡ್‌ಗೆ ಬೌಲಿಂಗ್ ಮಾಡಿದ್ದೇನೆ. ಪೊಲಾರ್ಡ್ ನೆಟ್‌ನಲ್ಲಿರುವಾಗ ಅದು ಅಪಾಯಕಾರಿಯಾಗಿರುತ್ತಿತ್ತು. ಹಾಗಾಗಿ ನೇರವಾಗಿ ಬಾರಿಸಬೇಡ ಎಂದು ಹೇಳುತ್ತಿದ್ದೆ. ಆದರೆ ಈಗ ಇಲ್ಲಿ ನಾನು ಆ ಪ್ರಯತ್ನವನ್ನು ಮಾಡಲಾರೆ. ಈಗ ನನಗೆ ಮತ್ತಷ್ಟು ವಯಸ್ಸಾಗಿದೆ. ನನ್ನ ದೇಹ ಬೌಲಿಂಗ್‌ಗೆ ಸಹಕರಿಸುವುದಿಲ್ಲ. ಹಾಗಾಗಿ ಶಾರೂಕ್‌ಗೆ ನಾನು ಖಂಡಿತವಾಗಿಯೂ ಬೌಲಿಂಗ್ ಮಾಡುವುದಿಲ್ಲ" ಎಂದಿದ್ದಾರೆ ಅನಿಲ್ ಕುಂಬ್ಳೆ

ಉತ್ತಮ ಮೊತ್ತ ಜೇಬಿಗಿಳಿಸಿದ ಶಾರೂಖ್ ಖಾನ್

ಉತ್ತಮ ಮೊತ್ತ ಜೇಬಿಗಿಳಿಸಿದ ಶಾರೂಖ್ ಖಾನ್

ಚೆನ್ನೈ ಮೂಲದ ಶಾರೂಖ್ ಖಾನ್ ಅವರನ್ನು ಪ್ರೀತಿ ಜಿಂಟಾ ನೇತೃತ್ವದ ಫ್ರಾಂಚೈಸಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಆರ್‌ಸಿಬಿ ಜೊತೆಗೆ ಬಿಡ್ಡಿಂಗ್ ಹೋರಾಟವನ್ನು ನಡೆಸಿ 5.25 ಕೋಟಿ ಮೊತ್ತಕ್ಕೆ ಸೇರ್ಪಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದರು. ದೇಶೀಯ ಕ್ರಿಕೆಟ್‌ನಲ್ಲಿ ಮಿಂಚು ಹರಿಸಿದ ಶಾರೂಖ್ ಐಪಿಎಲ್‌ನಲ್ಲಿ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

For Quick Alerts
ALLOW NOTIFICATIONS
For Daily Alerts
Story first published: Monday, April 5, 2021, 18:10 [IST]
Other articles published on Apr 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X