ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2021 Auction: ಆರ್‌ಸಿಬಿ ಪಾಲಾದ ಅಜರುದ್ದೀನ್ ಬಗ್ಗೆ ಎಬಿಸಿಡಿ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2021ಗಾಗಿ ಫೆಬ್ರವರಿ 18ರಂದು ಚೆನ್ನೈನಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಇಬ್ಬರು ಭಾರತೀಯ ಆಟಗಾರರು ಅತಿ ಹೆಚ್ಚು ಬೆಲೆಗೆ ಮಾರಾಟವಾಗುವ ನಿರೀಕ್ಷೆಯಿತ್ತು. ಇಬ್ಬರ ಪೈಕಿ ಮೊಹಮ್ಮದ್ ಅಜರುದ್ದೀನ್ ಮೂಲ ಬೆಲೆಗೆ ರಾಯಲ್ಸ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮಾರಾಟವಾಗಿದ್ದಾರೆ.

ಅತಿ ಹೆಚ್ಚು ಬೆಲೆಗೆ ಸೇಲ್ ಆಗಬಲ್ಲ 5 ಕ್ರಿಕೆಟರ್ಸ್ ಎಂದು ಅಂದಾಜಿಸಲಾಗಿದ್ದ ಅಲೆಕ್ಸ್ ಕ್ಯಾರಿ, ಅಲೆಕ್ಸ್ ಹೇಲ್ಸ್ ಮಾರಾಟವಾಗಿಲ್ಲ, ಡೇವಿಡ್ ಮಲಾನ್ 1.5 ಕೋಟಿ ರು ಗೆ ಪಂಜಾಬ್ ಕಿಂಗ್ಸ್ ತಂಡದ ಪಾಲಾಗಿದ್ದಾರೆ. ಮಿಕ್ಕಂತೆ ಆಸಕ್ತಿ ಮೂಡಿಸಿದ್ದ ಮೊಹಮ್ಮದ್ ಅಜರುದ್ದೀನ್ ಆರ್ ಸಿಬಿ ಪಾಲಾಗಿದ್ದರೆ, ಶಾರುಖ್ ಖಾನ್ ಭರ್ಜರಿ ಬೆಲೆ ಪಡೆದು 5.25 ಕೋಟಿ ರುಗೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ.

ನತದೃಷ್ಟ ಕ್ರಿಕೆಟರ್ ರಹೀಂಗೆ 2021ರಲ್ಲಿ ಒಲಿದ ಅದೃಷ್ಟ, ರಾಯಲ್ಸ್ ಪಾಲುನತದೃಷ್ಟ ಕ್ರಿಕೆಟರ್ ರಹೀಂಗೆ 2021ರಲ್ಲಿ ಒಲಿದ ಅದೃಷ್ಟ, ರಾಯಲ್ಸ್ ಪಾಲು

ಕೇರಳ ಬ್ಯಾಟ್ಸ್ ಮನ್ ಮೊಹಮ್ಮದ್ ಅಜರುದ್ದೀನ್ ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ 37 ಎಸೆತಗಳಲ್ಲಿ ಶತಕ ಬಾರಿಸಿ ಎಲ್ಲರ ಗಮನ ಸೆಳೆದಿದ್ದರು. ಮೂಲ ಬೆಲೆ ಕಡಿಮೆ ಇರುವುದರಿಂದ ಹೆಚ್ಚಿನ ತಂಡಗಳು ಬಿಡ್ ಮಾಡುವ ಸಾಧ್ಯತೆಯಿತ್ತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಬಿಡ್ ಸಲ್ಲಿಸಿ ಮೂಲ ಬೆಲೆಗೆ ಖರೀದಿ ಮಾಡಿದೆ.

ಭರ್ಜರಿ ಬೆಲೆಗೆ ಮಾರಾಟವಾದ ಶಾರುಖ್ ಖಾನ್

ಭರ್ಜರಿ ಬೆಲೆಗೆ ಮಾರಾಟವಾದ ಶಾರುಖ್ ಖಾನ್

ಇನ್ನೊಂದೆಡೆ ತಮಿಳುನಾಡಿನ ಬ್ಯಾಟ್ಸ್ ಮನ್ ಶಾರುಖ್ ಖಾನ್ ಅವರು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಅಂತಿಮ ಹಣಾಹಣಿಯಲ್ಲಿ 7 ಎಸೆತಗಳಲ್ಲಿ 18 ರನ್ ಚೆಚ್ಚಿ ತಂಡದ ಗೆಲುವಿಗೆ ಕಾರಣರಾದವರು. ಸ್ಲ್ಯಾಗ್ ಓವರ್ ಗಳಲ್ಲಿ ಹೆಚ್ಚಿನ ರನ್ ಗಳಿಸುವಲ್ಲಿ ಶಾರುಖ್ ಯಶಸ್ವಿಯಾಗಿದ್ದಾರೆ.5.25 ಕೋಟಿ ರುಗೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ.

ಮೊಹಮ್ಮದ್ ಅಜರುದ್ದೀನ್ ಅಂಕಿ ಅಂಶ

ಮೊಹಮ್ಮದ್ ಅಜರುದ್ದೀನ್ ಅಂಕಿ ಅಂಶ

ಪ್ರಥಮ ದರ್ಜೆಪಂದ್ಯ:
22 ಪಂದ್ಯ, 37 ಇನ್ನಿಂಗ್ಸ್ 959 ರನ್, 25.91 ರನ್ ಸರಾಸರಿ 1 ಶತಕ, 5 ಅರ್ಧಶತಕ, 112 ಗರಿಷ್ಠ ಮೊತ್ತ.
ಲಿಸ್ಟ್ ಎ ಪಂದ್ಯ: 24 ಪಂದ್ಯ, 23 ಇನ್ನಿಂಗ್ಸ್ 445 ರನ್, 22.25 ರನ್ ಸರಾಸರಿ ಶತಕ, 3 ಅರ್ಧಶತಕ, 73 ಗರಿಷ್ಠ ಮೊತ್ತ.

ಟಿ20 ಪಂದ್ಯ: 24 ಪಂದ್ಯ, 22 ಇನ್ನಿಂಗ್ಸ್ 451 ರನ್, 22.55 ರನ್ ಸರಾಸರಿ ಶತಕ, 142.27 ಸ್ಟ್ರೈಕ್ ರೇಟ್, ಅಜೇಯ 137 ಗರಿಷ್ಠ ಮೊತ್ತ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಅಭ್ಯಾಸ ಪಂದ್ಯಗಳಲ್ಲೇ 6 ಪಂದ್ಯಗಳಲ್ಲಿ 330 ರನ್ ಚೆಚ್ಚಿದ್ದ 26 ವರ್ಷದ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ನಂತರ 5 ಪಂದ್ಯಗಳಲ್ಲಿ 53.50 ರನ್ ಸರಾಸರಿ, 194. 54 ಸ್ಟ್ರೈಕ್ ರೇಟ್ ನಂತೆ 214ರನ್ ಗಳಿಸಿದ್ದಾರೆ. ಇದರಲ್ಲಿ ದಾಖಲೆಯ 37 ಎಸೆತಗಳಲ್ಲಿ ಶತಕ ನಂತರ 137 ಅಜೇಯ ರನ್ ಗಳು ಸೇರಿವೆ.

ಕ್ರಿಕೆಟ್ ಇಷ್ಟಪಡುವ ಕುಟುಂಬ

ಕ್ರಿಕೆಟ್ ಇಷ್ಟಪಡುವ ಕುಟುಂಬ

ಕೇರಳದ ಥಲಂಗರ ಎಂಬ ಪುಟ್ಟಗ್ರಾಮದ ನಿವಾಸಿಯಾಗಿರುವ ಅಜರುದ್ದೀನ್ ಅವರಿಗೆ 7 ಮಂದಿ ಅಣ್ಣಂದಿರಿದ್ದಾರೆ. ಎಲ್ಲರೂ ಜಿಲ್ಲಾಮಟ್ಟದಲ್ಲಿ ಕ್ರಿಕೆಟ್ ಆಡಿದ್ದಾರೆ. ಕ್ರಿಕೆಟ್ ದಿಗ್ಗಜ ಅಜರುದ್ದೀನ್ ಹೆಸರನ್ನು ನನಗೆ ಇಟ್ಟಿದ್ದಾರೆ ಎಂಬುದು ನಂತರ ತಿಳಿಯಿತು. ಅಜರುದ್ದೀನ್ ಬಗ್ಗೆ ವಿಡಿಯೋ ನೋಡಿ ಅವರ ಸಾಧನೆ ಬಗ್ಗೆ ತಿಳಿದು ಕೊಂಡೆ ಎಂದಿರುವ ಅಜ್ಜು 9 ನೇ ವಯಸ್ಸಿನಿಂದ ಕ್ರಿಕೆಟ್ ಆಡಲು ಶುರು ಮಾಡಿದ್ದಾರೆ.

ಕೆಸಿಎ ಕ್ರಿಕೆಟ್ ಅಕಾಡೆಮಿಯಲ್ಲಿ 15 ವರ್ಷವಿದ್ದಾಗ ಬಿಜುಮೊನ್ ಕೋಚಿಂಗ್ ನಲ್ಲಿ ಉತ್ತಮ ತರಬೇತಿ ಪಡೆದು ಕೇರಳ ತಂಡದ ಪರ ಆಡಿದ್ದಾರೆ. ಡೇವ್ ವಾಟ್ಮೋರ್, ಟಿನು ಯೋಹಾನನ್ ಸಲಹೆಗಳು ಸಹಕಾರಿಯಾಗಿವೆ ಎಂದು ಅಜರುದ್ದೀನ್ ಸ್ಮರಿಸುತ್ತಾರೆ.

ಆರ್ ಸಿಬಿ ಕೊಹ್ಲಿ ಫ್ಯಾನ್

ಆರ್ ಸಿಬಿ ಕೊಹ್ಲಿ ಫ್ಯಾನ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಲು ಉತ್ಸುಕರಾಗಿರುವುದಾಗಿ ಹರಾಜಿಗೂ ಮುನ್ನ ಅಜರುದ್ದೀನ್ ಬಯಕೆ ವ್ಯಕ್ತಪಡಿಸಿದ್ದರು. ಇಂದು ಅದರಂತೆ ಆರ್ ಸಿಬಿ ಪಾಲಾಗಿದ್ದಾರೆ. ತಮ್ಮ ನೆಚ್ಚಿನ ಕ್ರಿಕೆಟರ್ ಕೊಹ್ಲಿ ಜೊತೆ ಆಡುವ ಅವಕಾಶ ಪಡೆದುಕೊಂಡಿದ್ದಾರೆ. ಆರ್ ಸಿಬಿ ಪರ ಆಡುವುದು ನನ್ನ ಸಂತಸದ ಕ್ಷಣವಾಗಲಿದೆ ಎಂದು ಕಾಸರಗೋಡಿನ ಈ ಕ್ರಿಕೆಟರ್ ಹೇಳಿದ್ದಾರೆ.

Story first published: Friday, February 19, 2021, 9:40 [IST]
Other articles published on Feb 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X