ಐಪಿಎಲ್ 2021: ಕ್ರೀಡಾ ನಿರೂಪಕಿ ಮಧು ಮೈಲಂಕೋಡಿ ಕಿರುಪರಿಚಯ

ಮಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಥವಾ ಟೀಮ್ ಇಂಡಿಯಾ ಪಾಲ್ಗೊಳ್ಳುವ ಇನ್ಯಾವುದೇ ಕ್ರಿಕೆಟ್ ಸರಣಿಯಾಗಲಿ, ನೀವು ಸ್ಟಾರ್ ಸ್ಪೋರ್ಟ್ಸ್‌ ಕನ್ನಡ ಚಾನೆಲ್‌ನಲ್ಲಿ ಇಂಥ ಟೂರ್ನಿಗಳನ್ನು ವೀಕ್ಷಿಸುತ್ತಿದ್ದರೆ ನಿಮಗೆ ರೀನಾ ಡಿ'ಸೋಜ, ಕಿರಣ್ ಶ್ರೀನಿವಾಸ್, ಮಧು ಮೈಲಂಕೋಡಿ ಮೊದಲಾದವರ ಪರಿಚಯವಿರಬಹುದು.

ಆರಂಭಿಕ ಪಂದ್ಯದಲ್ಲಿ ಆರ್‌ಸಿಬಿಯೇ ಗೆಲ್ಲುತ್ತದೆ ಎನ್ನುತ್ತಿದೆ ಈ ಅಂಕಿ-ಅಂಶ!

ಇತ್ತೀಚೆಗಷ್ಟೇ ಮುಕ್ತಾಯಗೊಂಡ ಭಾರತ-ಇಂಗ್ಲೆಂಡ್ ಪ್ರವಾಸ ಸರಣಿಯ ವೇಳೆ ಸ್ಟಾರ್‌ ಸ್ಪೋರ್ಟ್ಸ್ ಕನ್ನಡದಲ್ಲಿ ಮಧು ಮೈಲಂಕೋಡಿ ಅವರು ಸರಣಿಯ ಲೈವ್ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದರು. ಅದೇ ಮಧು ಏಪ್ರಿಲ್ 9ರಿಂದ ಆರಂಭಗೊಳ್ಳಲಿರುವ 14ನೇ ಆವೃತ್ತಿಯ ಐಪಿಎಲ್‌ನಲ್ಲೂ ನಿರೂಪಣೆ ನೀಡಲಿದ್ದಾರೆ.

ಆರ್‌ಸಿಬಿ ಫ್ಯಾನ್ಸ್ ಬೇಕಂತಲೇ ಕೆಣಕಿ ಸೋಲುತ್ತಾರೆ ಎಂದ ಅಶ್ವಿನ್

ಮ‍ಧು ಮೈಲಂಕೋಡಿ ಮೂಲತಃ ಕಾಸರಗೋಡಿನವರು. ಮಧು ವಿದ್ಯಾಭ್ಯಾಸ ಮುಗಿಸಿದ್ದೆಲ್ಲಾ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲೆ. ಸದ್ಯ ಮಧು ಐಪಿಎಲ್‌ನ ಅಧಿಕೃತ ಪ್ರಸಾರಕ ಸ್ಟಾರ್‌ಸ್ಪೋರ್ಟ್ಸ್‌ನಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾರ್ಪೊರೇಟ್ ಮತ್ತು ಖಾಸಗಿ ಕಾರ್ಯಕ್ರಮಗಳ ವೇಳೆ ಮಧು ನಿರೂಪಣೆ ನಡೆಸಿಕೊಡುತ್ತಾರೆ. ನಯನತಾರಾ ನಟಿಸಿದ್ದ 'ಮೂಕುತ್ತಿ ಅಮ್ಮನ್' ತಮಿಳು ಚಿತ್ರದಲ್ಲೂ ದೇವಾಂಮೃತಂ ಪಾತ್ರದಲ್ಲಿ ಮಧು ನಟಿಸಿದ್ದರು.

ಐಪಿಎಲ್‌ನಲ್ಲಿ ಅತೀ ಹೆಚ್ಚು ಗೆಲುವುಗಳ ದಾಖಲೆಯಿರುವ ತಂಡಗಳ ಪಟ್ಟಿ

ಕನ್ನಡದ ಜೊತೆಗೆ ಮಂಗಳೂರಿನ ಸ್ಥಳೀಯ ಭಾಷೆ ತುಳು, ಇಂಗ್ಲಿಷ್, ಮಲಯಾಳಂ, ಹವ್ಯಕ ಕನ್ನಡ ಭಾಷೆಗಳಲ್ಲಿ ಮಧು ನಿರರ್ಗಳವಾಗಿ ಮಾತನಾಡಬಲ್ಲರು. ಏಪ್ರಿಲ್ 9ರಿಂದ ಆರಂಭಗೊಳ್ಳಲಿರುವ ಐಪಿಎಲ್‌ನಲ್ಲಿ ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ನಿರೂಪಣೆ ನೀಡಲಿರುವ ಕಿರ ನಾರಾಯಣ್, ಜತಿನ್ ಸಪ್ರು, ಸಂಜನಾ ಗಣೇಶನ್, ಕಿರಣ್ ಶ್ರೀನಿವಾಸ್ ಸಾಲಿನಲ್ಲಿ ಮಧು ಕೂಡ ಇರಲಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Friday, April 9, 2021, 15:58 [IST]
Other articles published on Apr 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X