ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್: ಕೆಟ್ಟ ದಾಖಲೆಗೆ ಗಮನ ಎಸೆದ ಋತುರಾಜ್ ಗಾಯಕ್ವಾಡ್

IPL 2021: Chennai Super Kings Ruturaj Gaikwad highlighted for bad record

ಮುಂಬೈ: ಚೆನ್ನೈ ಸೂಪರ್ ಕಿಂಗ್ಸ್‌ನ ಬ್ಯಾಟ್ಸ್‌ಮನ್‌ ಋತುರಾಜ್ ಗಾಯಕ್ವಾಡ್ ಕೆಟ್ಟ ದಾಖಲೆಗೆ ಗಮನ ಸೆಳೆದಿದ್ದಾರೆ. ಈ ಸೀಸನ್‌ನಲ್ಲಿ ಗಾಯಕ್ವಾಡ್ ಬ್ಯಾಟಿಂಗ್‌ ಅಂಕಿ-ಅಂಶಗಳು ನಿರಾಶಾದಾಯವಾಗಿದೆ. ಹಿಂದಿನ ಸೀನ್‌ಗಳಲ್ಲೂ ಗಾಯಕ್ವಾಡ್ ಸಕಾರಾತ್ಮಕ ಕಾರಣಗಳಿಗಿಂತಲೂ ನಕಾರಾತ್ಮಕ ಕಾರಣಗಳಿಗಾಗಿಯೇ ಹೆಚ್ಚು ಚಿತ್ತ ಹರಿಸಿಕೊಂಡಿದ್ದಾರೆ.

ಐಪಿಎಲ್ 2021: ಟಿ20 ಕ್ರಿಕೆಟ್‌ ವಿಶ್ವ ದಾಖಲೆ ಬರೆದ ಸಿಎಸ್‌ಕೆ ನಾಯಕ ಎಂಎಸ್ ಧೋನಿಐಪಿಎಲ್ 2021: ಟಿ20 ಕ್ರಿಕೆಟ್‌ ವಿಶ್ವ ದಾಖಲೆ ಬರೆದ ಸಿಎಸ್‌ಕೆ ನಾಯಕ ಎಂಎಸ್ ಧೋನಿ

ಸೋಮವಾರ ರಾಜಸ್ಥಾನ್ ರಾಯಲ್ಸ್ ವಿರುದ್ಧ ಆರಂಭಿಕರಾಗಿ ಆಡಿದ್ದ ಋತುರಾಜ್ ಗಾಯಕ್ವಾಡ್ 13 ಎಸೆತಗಳಿಗೆ 10 ರನ್ ಬಾರಿಸಿ ಮುಸ್ತಫಿಜುರ್ ರಹ್ಮಾನ್ ಓವರ್‌ನಲ್ಲಿ ಶಿವಂ ದೂಬೆಗೆ ಕ್ಯಾಚಿತ್ತು ನಿರ್ಗಮಿಸಿದರು. ಅದಕ್ಕೂ ಹಿಂದೆ ಡೆಲ್ಲಿ ವಿರುದ್ಧ ಕೂಡ 5 ರನ್ ಬಾರಿಸಿ ಬೇಗನೆ ಔಟ್ ಆಗಿದ್ದರು.

ಐಪಿಎಲ್‌ನಲ್ಲಿ ಋತುರಾಜ್ ಈವರೆಗಿನ ಅಂಕಿ-ಅಂಶಗಳನ್ನು ಗಮನಿಸಿದರೆ, 0-9ರ ಒಳಗೆ 5 ಬಾರಿ ಔಟಾಗಿದ್ದಾರೆ, 10-49ರ ವರೆಗೆ 1 ಬಾರಿ (ಈ ದಿನ), 50ಕ್ಕೂ ಮೇಲೆ 3 ಬಾರಿ ಔಟಾಗಿದ್ದಾರೆ. ಅಂದರೆ ಇಲ್ಲಿ ಗಾಯಕ್ವಾಡ್ 10ರೊಳಗೆ ವಿಕೆಟ್ ಒಪ್ಪಿಸಿದ್ದೇ ಹೆಚ್ಚು ಬಾರಿ.

ಐಪಿಎಲ್ ಇತಿಹಾಸದಲ್ಲೇ ಬಲು ಅಪರೂಪದ ದಾಖಲೆಗಳ ಬರೆದ ಆರ್‌ಸಿಬಿ!ಐಪಿಎಲ್ ಇತಿಹಾಸದಲ್ಲೇ ಬಲು ಅಪರೂಪದ ದಾಖಲೆಗಳ ಬರೆದ ಆರ್‌ಸಿಬಿ!

ಗಾಯಕ್ವಾಡ್ ಕಳಪೆ ಬ್ಯಾಟಿಂಗ್‌ ಪ್ರದರ್ಶಿಸುತ್ತಿದ್ದರೂ ಅವರಿಗೆ ಹೆಚ್ಚು ಅವಕಾಶ ನೀಡುತ್ತಿರುವ ನಾಯಕ ಎಂಎಸ್ ಧೋನಿ ಮತ್ತು ಕೋಚ್ ಸ್ಟೀಫನ್ ಫ್ಲೆಮಿಂಗ್ ನಿಲುವಿಗೆ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಾರಿ ಸಿಎಸ್‌ಕೆ ಸೇರಿಕೊಂಡಿರುವ ಕನ್ನಡಿಗ ರಾಬಿನ್ ಉತ್ತಪ್ಪ ಉತ್ತಮ ಫಾರ್ಮ್‌ನಲ್ಲಿದ್ದರೂ ಅವರನ್ನು ಬೆಂಚ್‌ನಲ್ಲಿ ಕೂರಿಸಿರುವ ಸಿಎಸ್‌ಕೆ ವಿರುದ್ಧ ಕ್ರಿಕೆಟ್ ಅಭಿಮಾನಿಗಳು ಕಿಡಿಕಾರಿದ್ದಾರೆ.

Story first published: Monday, April 19, 2021, 21:03 [IST]
Other articles published on Apr 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X