ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಈ ಆಟಗಾರನನ್ನು ತಂಡದಿಂದ ಕೈ ಬಿಟ್ಟರೆ ಮುಂಬೈಗೆ ಗೆಲುವು ಪಕ್ಕಾ ಎಂದ ಡೇಲ್ ಸ್ಟೇನ್

 IPL 2021 : Dale Steyn offers an unorthodox solution to MIs batting woes

ಐಪಿಎಲ್ ಇತಿಹಾಸದಲ್ಲಿ 5 ಐಪಿಎಲ್ ಟ್ರೋಫಿಗಳನ್ನು ಗೆದ್ದಿರುವ ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡದ ಯೋಜನೆಯಂತೆ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಯಾವುದೂ ನಡೆಯುತ್ತಿಲ್ಲ. ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಈಗಾಗಲೇ 5 ಪಂದ್ಯಗಳನ್ನಾಡಿರುವ ಮುಂಬೈ ಇಂಡಿಯನ್ಸ್ ತಂಡ ಜಯಗಳಿಸಿರುವುದು ಕೇವಲ 2 ಪಂದ್ಯಗಳಲ್ಲಿ ಮಾತ್ರ. ಹೀಗೆ ಹೇಳಿಕೊಳ್ಳುವಂತಹ ಪ್ರದರ್ಶನವನ್ನೇನೂ ನೀಡದ ಮುಂಬೈ ಇಂಡಿಯನ್ಸ್ ತಂಡ ಸದ್ಯ ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದೆ. ತಂಡದಲ್ಲಿರುವ ಕೊರತೆಗಳನ್ನು ಗುರುತು ಹಚ್ಚಿ ಅದನ್ನು ಸರಿಪಡಿಸಿಕೊಳ್ಳುವಂತೆ ಈಗಾಗಲೇ ಕೆಲ ಹಿರಿಯ ಆಟಗಾರರು ಮುಂಬೈ ಇಂಡಿಯನ್ಸ್ ತಂಡಕ್ಕೆ ಸಲಹೆಗಳನ್ನು ನೀಡಿದ್ದಾರೆ.

ಇದೀಗ ಸೌತ್ ಆಫ್ರಿಕಾ ತಂಡದ ಡೇಲ್ ಸ್ಟೇನ್ ಕೂಡ ಮುಂಬೈ ಇಂಡಿಯನ್ಸ್ ತಂಡಕ್ಕೆ ಸಲಹೆಯೊಂದನ್ನು ನೀಡಿದ್ದು, ಇದನ್ನು ಅನುಸರಿಸಿದರೆ ಮುಂಬೈ ಇಂಡಿಯನ್ಸ್ ತಂಡ ಗೆಲುವಿನ ಹಾದಿಗೆ ಮರಳಬಹುದು ಎಂದು ತಿಳಿಸಿದ್ದಾರೆ. ಮುಂಬೈ ಇಂಡಿಯನ್ಸ್ ತಂಡ ಕಡ್ಡಾಯವಾಗಿ ಕ್ರಿಸ್ ಲಿನ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು, ಕ್ವಿಂಟನ್ ಡಿ ಕಾಕ್ ಮತ್ತು ಕ್ರಿಸ್ ಲಿನ್ ಮುಂಬೈ ಇಂಡಿಯನ್ಸ್ ತಂಡದ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದರೆ, ರೋಹಿತ್ ಶರ್ಮಾ ಮೂರನೇ ಕ್ರಮಾಂಕದಲ್ಲಿ ಹಾಗೂ ಸೂರ್ಯಕುಮಾರ್ ಯಾದವ್ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬೇಕು. ಹೀಗಾದಾಗ ಮುಂಬೈ ಇಂಡಿಯನ್ಸ್ ತಂಡ ಉತ್ತಮ ಆರಂಭ ಪಡೆದುಕೊಳ್ಳುವುದರ ಜೊತೆಗೆ ಮೇಲಿನ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಉತ್ತಮ ರನ್ ಗಳಿಸಲು ನೆರವಾಗಲಿದೆ ಹಾಗೂ ತಂಡ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಲಿದ್ದು ಮುಂಬೈ ಇಂಡಿಯನ್ಸ್ ತಂಡ ಜಯಗಳಿಸಲು ಸುಲಭವಾಗಲಿದೆ ಎಂದು ತಿಳಿಸಿದರು.

ಈಗಾಗಲೇ ಇಶಾನ್ ಕಿಶನ್ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಸಾಕಷ್ಟು ಅವಕಾಶಗಳನ್ನು ಪಡೆದುಕೊಂಡಿದ್ದು ಈ ಹಿಂದಿನ ಆವೃತ್ತಿಗಳಲ್ಲಿ ತೋರಿದಂತಹ ಪ್ರದರ್ಶನವನ್ನೇನೂ ಆತ ತೋರುತ್ತಿಲ್ಲ, ಹೇಗಿದ್ದರೂ ತಂಡದಲ್ಲಿ ಕೇವಲ 3 ವಿದೇಶಿ ಆಟಗಾರರನ್ನು ಆಡಿಸಲಾಗುತ್ತಿದೆ, ಹೀಗಾಗಿ ಇಶಾನ್ ಕಿಶನ್ ಬದಲು ಕ್ರಿಸ್ ಲಿನ್‌ರನ್ನು ತಂಡಕ್ಕೆ ತೆಗೆದುಕೊಳ್ಳುವುದು ಸೂಕ್ತ ಎಂದು ಡೇಲ್ ಸ್ಟೇನ್ ಸಲಹೆ ನೀಡಿದ್ದಾರೆ. ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಪಂದ್ಯದಲ್ಲಿ ಮುಂಬೈ ಪರ ಆರಂಭಿಕ ಆಟಗಾರನಾಗಿ ಬಂದಿದ್ದ ಕ್ರಿಸ್ ಲಿನ್ 35 ಎಸೆತಗಳಲ್ಲಿ 49 ರನ್ ಗಳಿಸಿ ಮಿಂಚಿದ್ದರು. ಆದರೆ ಮುಂದಿನ ಪಂದ್ಯಗಳಲ್ಲಿ ಕ್ರಿಸ್ ಲಿನ್‌ಗೆ ಮುಂಬೈ ಇಂಡಿಯನ್ಸ್ ತಂಡ ಆಡುವ ಅವಕಾಶವನ್ನೇ ನೀಡಿಲ್ಲ.

Story first published: Thursday, April 29, 2021, 16:16 [IST]
Other articles published on Apr 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X