ಐಪಿಎಲ್ 2021: ನಾಯಕನನ್ನು ಬದಲಾಯಿಸಿ; ಕೆಕೆಆರ್ ತಂಡದಲ್ಲಿ ಮೇಜರ್ ಸರ್ಜರಿಗೆ ಚೋಪ್ರ ಸಲಹೆ

ಈ ಬಾರಿಯ ಐಪಿಎಲ್‌ನ ಎರಡನೇ ಚರಣದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಅದ್ಭುತ ಆಟವನ್ನು ಪ್ರದರ್ಶಿಸುವ ಮೂಲಕ ಪ್ಲೇಆಫ್ ಹಂತಕ್ಕೇರಲು ನಾಲ್ಕನೇ ಸ್ಥಾನಕ್ಕಿರುವ ಪೈಪೋಟಿಯಲ್ಲಿ ಮುಂದಿದೆ. ಆದರೆ ಕಳೆದ ಶುಕ್ರವಾರ ಪಂಜಾಬ್ ಕಿಂಗ್ಸ್ ವಿರುದ್ಧದ ಸೋಲು ಕೆಕೆಆರ್ ತಂಡದ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದೆ. ಕೆಕೆಆರ್ ತಂಡದ ಯುವ ಆಟಗಾರರು ನೀಡುತ್ತಿರುವ ಅದ್ಭುತ ಪ್ರದರ್ಶನದಿಂದಾಗಿ ಎರಡನೇ ಚರಣದಲ್ಲಿ ಊಹೆಗೂ ಮೀರಿದ ರೀತಿಯಲ್ಲಿ ಕೆಕೆಆರ್ ತಿರುಗಿ ಬೀಳಲು ಯಶಸ್ವಿಯಾಗಿದೆ. ಆದರೆ ತಂಡದ ನಾಯಕ ಇಯಾನ್ ಮಾರ್ಗನ್ ಹೀನಾಯವಾಗಿ ವೈಫಲ್ಯ ಅನುಭವಿಸಿರುವುದು ಕೆಕೆಆರ್‌ ಚಿಂತೆಗೆ ಕಾರಣವಾಗಿದೆ.

ಈ ಸಂದರ್ಭದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮಾಜಿ ಆಟಗಾರನೂ ಆಗಿರುವ ಹಾಲಿ ಕಾಮೆಂಟೇಟರ್ ಆಕಾಶ್ ಚೋಪ್ರ ತಂಡದಲ್ಲಿ ಎರಡು ಬದಲಾವಣೆಗೆ ಸೂಚಿಸಿದ್ದಾರೆ. ಅಲ್ಲದೆ, ನಾಯಕ ಇಯಾನ್ ಮಾರ್ಗನ್ ಫಾರ್ಮ್ ಬಗ್ಗೆಯೂ ಚೋಪ್ರ ಪ್ರತಿಕ್ರಿಯಿಸಿದ್ದು ನಾಯಕನನ್ನೇ ಆಡುವ ಬಳಗದಿಂದ ಹೊರಗಿಡಲು ಸಲಹೆ ನೀಡಿದ್ದಾರೆ.

ಮುಂಬೈ ಗೆಲುವಿನಾಸೆಗೆ ಮುಳುವಾದ ಅಶ್ವಿನ್, ಶ್ರೇಯಸ್; ಮುಂಬೈ ಇಂಡಿಯನ್ಸ್‌‌ ಪ್ಲೇಆಫ್ ಕಥೆಯೇನು?ಮುಂಬೈ ಗೆಲುವಿನಾಸೆಗೆ ಮುಳುವಾದ ಅಶ್ವಿನ್, ಶ್ರೇಯಸ್; ಮುಂಬೈ ಇಂಡಿಯನ್ಸ್‌‌ ಪ್ಲೇಆಫ್ ಕಥೆಯೇನು?

ಶಕೀಬ್ ಅಲ್ ಹಸನ್‌ಗೆ ಸ್ಥಾನ ನೀಡಲು ಉತ್ತಮ ಅವಕಾಶ: ಕ್ರಿಕೆಟ್ ವಿಶ್ಲೇಷಕರಾಗಿ ಖ್ಯಾತಿಗಳಿಸಿರುವ ಆಕಾಶ್ ಚೋಪ್ರ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಗೆ ಪ್ರಮುಖ ಸಲಹೆಯೊಂದನ್ನು ನೀಡಿದ್ದಾರೆ. ಸತತವಾಗಿ ವಿಫಲವಾಗುತ್ತಿರುವ ಕೆಕೆಆರ್ ತಂಡದ ನಾಯಕ ಇಯಾನ್ ಮಾರ್ಗನ್‌ ಬದಲಿಗೆ ಬಾಂಗ್ಲಾದೇಶದ ಆಲ್‌ರೌಂಡರ್ ಶಕೀಬ್ ಅಲ್ ಹಸನ್‌ಗೆ ಆಡುವ ಬಳಗದಲ್ಲಿ ಸ್ಥಾನ ನೀಡಲು ಇದು ಅತ್ಯುತ್ತಮವಾದ ಸಮಯ ಎಂದು ಆಕಾಶ್ ಚೋಪ್ರ ಹೇಳಿದ್ದಾರೆ. ಈ ಸಂದರ್ಭದಲ್ಲಿ ಕೆಕೆಆರ್ ನಾಯಕ ಸ್ವಾರ್ಥ ರಹಿತವಾಗಿ ಬೇರೊಬ್ಬ ಆಟಗಾರನಿಗೆ ಅವಕಾಶ ಮಾಡಿಕೊಡಬೇಕಿದೆ ಎಂದಿದ್ದಾರೆ ಚೋಪ್ರ.

ಐಪಿಎಲ್ 2021: ರುತುರಾಜ್ ಗಾಯಕ್ವಾಡ್ ಚೊಚ್ಚಲ ಶತಕ; ಸ್ಯಾಮ್ಸನ್ ಪಡೆಗೆ ಕಠಿಣ ಗುರಿ ನೀಡಿದ ಸಿಎಸ್‌ಕೆಐಪಿಎಲ್ 2021: ರುತುರಾಜ್ ಗಾಯಕ್ವಾಡ್ ಚೊಚ್ಚಲ ಶತಕ; ಸ್ಯಾಮ್ಸನ್ ಪಡೆಗೆ ಕಠಿಣ ಗುರಿ ನೀಡಿದ ಸಿಎಸ್‌ಕೆ

ಕೈಮುಗಿದು ಕೇಳಿಕೊಳ್ಳುತ್ತೇನೆ: ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ಆಕಾಶ್ ಚೋಪ್ರ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಗೆ ವಿಶೇಷವಾಗಿ ಮನವಿ ಮಾಡಿಕೊಂಡಿದ್ದಾರೆ. "ಕೊಲ್ಕತ್ತಾ ನಾನು ಕೈಮುಗಿದು ಬೇಡಿಕೊಳ್ಳುತ್ತಿದ್ದೇನೆ. ನಾನು ನಿಮಗೆ ಎರಡು ಅಥವಾ ಮೂರು ಆಯ್ಕೆಗಳನ್ನು ನೀಡುತ್ತಿದ್ದೇನೆ. ಮೊದಲನೆಯದಾಗಿ ನಾಯಕನನ್ನು ಬದಲಾಯಿಸಿ. ನೀವು ಈಗಾಗಲೇ ಇದನ್ನು ಮಾಡಿದ್ದು ಅದಕ್ಕಾಗಿ ನಿಮಗೆ ಯಾವುದೇ ಮುಜುಗರವಿರುವುದಿಲ್ಲ. ಕಳೆದ 11 ಇನ್ನಿಂಗ್ಸ್‌ಗಳಲ್ಲಿ ಮಾರ್ಗನ್ 10ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ನಾಯಕನಾಗಿಯೂ ಅಂತಾ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಇದು ಮಾರ್ಗನ್ ಬದಲಿಗೆ ಶಕೀಬ್ ಅಲ್ ಹಸನ್‌ಗೆ ಸ್ಥಾನ ನಿಡಲು ಉತ್ತಮ ಸಂದರ್ಭ ಎನಿಸುತ್ತದೆ" ಎಂದಿದ್ದಾರೆ ಆಕಾಶ್ ಚೋಪ್ರ.

ಸಿಎಸ್‌ಕೆ ವಿರುದ್ಧ ಭರ್ಜರಿ ಜಯ ಸಾಧಿಸಿದ ರಾಜಸ್ಥಾನ್; ಪ್ಲೇಆಫ್ ಆಸೆಯಲ್ಲಿದ್ದ ಮುಂಬೈಗೆ ಸಂಕಷ್ಟ!ಸಿಎಸ್‌ಕೆ ವಿರುದ್ಧ ಭರ್ಜರಿ ಜಯ ಸಾಧಿಸಿದ ರಾಜಸ್ಥಾನ್; ಪ್ಲೇಆಫ್ ಆಸೆಯಲ್ಲಿದ್ದ ಮುಂಬೈಗೆ ಸಂಕಷ್ಟ!

ಬೆನ್ ಕಟ್ಟಿಂಗ್‌ಗೆ ಸ್ಥಾನ ನೀಡಿ: ಇನ್ನು ಇದೇ ಸಂದರ್ಭದಲ್ಲಿ ಆಕಾಶ್ ಚೋಪ್ರ ಕೆಕೆಆರ್ ತಂಡದ ಪರವಾಗಿ ಕೊನೆಯ ಪಂದ್ಯದಲ್ಲಿ ಪದಾರ್ಪಣೆ ಮಾಡಿದ ಟಿಮ್ ಸೀಫರ್ಟ್‌ರನ್ನು ಆಡುವ ಬಳಗದಿಂದ ಹೊಪರಗಿಡಲು ಸಲಹೆ ನೀಡಿದ್ದಾರೆ. ಅವರ ಸ್ಥಾನಕ್ಕೆ ಆಸ್ಟ್ರೇಲಿಯಾದ ಅಲ್‌ರೌಂಡರ್ ಬೆನ್ ಕಟ್ಟಿಂಗ್ ಸೂಕ್ತವೆನಿಸಬಲ್ಲರು, ಅಲ್ಲದೆ ಕೆಳ ಕ್ರಮಾಂಕದಲ್ಲಿ ಕಟ್ಟಿಂಗ್ ಬ್ಯಾಟಿಂಗ್‌ನಲ್ಲಿಯೂ ಉತ್ತಮವಾಗಿ ಕೊಡುಗೆ ನೀಡಬಲ್ಲ ಸಾಮರ್ಥ್ಯ ಹೊಂದಿದ್ದು ಬೌಲಿಂಗ್ ವಿಭಾಗದಲ್ಲಿಯೂ ಹೆಚ್ಚಿನ ಪರಿಣಾಮಕಾರಿಯಾಗಬಲ್ಲರು ಎಂಬ ಅಭಿಪ್ರಾಯವನ್ನು ಚೋಪ್ರ ವ್ಯಕ್ತಪಡಿಸಿದ್ದಾರೆ.

ಆರ್‌ಸಿಬಿ, ಕೆಕೆಆರ್, ಪಂಜಾಬ್ ಪ್ಲೇ ಆಫ್ಸ್‌ ಅವಕಾಶ ಹೇಗಿದೆ? ಇಲ್ಲಿದೆ ವಿವರಣೆ!ಆರ್‌ಸಿಬಿ, ಕೆಕೆಆರ್, ಪಂಜಾಬ್ ಪ್ಲೇ ಆಫ್ಸ್‌ ಅವಕಾಶ ಹೇಗಿದೆ? ಇಲ್ಲಿದೆ ವಿವರಣೆ!

RCB ತಂಡದಲ್ಲಿ ಮ್ಯಾಕ್ಸ್​ವೆಲ್ ಚೆನ್ನಾಗಿ ಆಡ್ತಾ ಇರೋದು ಯಾಕೆ ಗೊತ್ತಾ? | Oneindia Kannada

ಕೋಲ್ಕತ್ತಾ ನೈಟ್ ರೈಡರ್ಸ್ ಪೂರ್ಣ ತಂಡ: ಇಯಾನ್ ಮಾರ್ಗನ್ (ನಾಯಕ), ದಿನೇಶ್ ಕಾರ್ತಿಕ್, ಶುಬ್ಮನ್ ಗಿಲ್, ನಿತೀಶ್ ರಾಣಾ, ಟಿಮ್ ಸೀಫರ್ಟ್, ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಕುಲದೀಪ್ ಯಾದವ್, ಶಿವಂ ಮಾವಿ, ಲಾಕಿ ಫರ್ಗ್ಯೂಸನ್, ಟಿಮ್ ಸೌಥಿ, ಕಮಲೇಶ್ ನಾಗರಕೋಟಿ, ಸಂದೀಪ್ ವಾರಿಯರ್, ಪ್ರಸಿದ್ಧ್ ಕೃಷ್ಣ, ರಾಹುಲ್ ತ್ರಿಪಾಠಿ, ವರುಣ್ ಚಕ್ರವರ್ತಿ, ಶಕೀಬ್ ಅಲ್ ಹಸನ್, ಶೆಲ್ಡನ್ ಜಾಕ್ಸನ್, ವೈಭವ್ ಅರೋರಾ, ಹರ್ಭಜನ್ ಸಿಂಗ್, ಕರುಣ್ ನಾಯರ್, ಬೆನ್ ಕಟಿಂಗ್, ವೆಂಕಟೇಶ್ ಅಯ್ಯರ್, ಪವನ್ ನೇಗಿ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, October 3, 2021, 13:04 [IST]
Other articles published on Oct 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X