ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ ಬಗ್ಗೆ 5 ವರ್ಷಗಳ ಹಿಂದೆ ಧೋನಿ ವ್ಯಕ್ತಪಡಿಸಿದ್ದ ಸಂಶಯವನ್ನು ಹಂಚಿಕೊಂಡ ಪೀಟರ್ಸನ್

 IPL 2021 : Kevin Pietersen recalls MS Dhonis words about Virat Kohli from 2016

ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಕೆವಿನ್ ಪೀಟರ್ಸನ್ ಇಂಡಿಯನ್ ಪ್ರೀಮಿಯರ್ ಲೀಗ್‌ನ ಹಳೆಯ ನೆನಪೊಂದನ್ನು ಮೆಲುಕು ಹಾಕಿದ್ದಾರೆ. 2016ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಸಮಯವದು, ಆ ಆವೃತ್ತಿಯಲ್ಲಿ ಮಹೇಂದ್ರ ಸಿಂಗ್ ಧೋನಿ ಮತ್ತು ಕೆವಿನ್ ಪೀಟರ್ಸನ್ ರೈಸಿಂಗ್ ಸೂಪರ್‌ಜಿಯಂಟ್ ಪುಣೆ ತಂಡದ ಆಟಗಾರರಾಗಿದ್ದರು. ಆ ಸಮಯದಲ್ಲಿ ತಮ್ಮ ಮತ್ತು ಮಹೇಂದ್ರ ಸಿಂಗ್ ಧೋನಿ ಅವರ ನಡುವೆ ವಿರಾಟ್ ಕೊಹ್ಲಿ ಕುರಿತಾಗಿ ನಡೆದ ಸಂಭಾಷಣೆಯೊಂದನ್ನು ಕೆವಿನ್ ಪೀಟರ್ಸನ್ ಅವರು ಈಗ ನೆನಪಿಸಿಕೊಂಡಿದ್ದಾರೆ.

ಆ ಸಮಯದಲ್ಲಿ ವಿರಾಟ್ ಕೊಹ್ಲಿ ಮೈದಾನದಲ್ಲಿ ತುಂಬಾ ಶಕ್ತಿಯುತ ಮತ್ತು ಆಕ್ರಮಣಕಾರಿ ಆಟಗಾರನಾಗಿದ್ದರು. ಪ್ರತಿ ಪಂದ್ಯದಲ್ಲಿಯೂ ಸಹ ಶಕ್ತಿಯುತ ಮತ್ತು ಆಕ್ರಮಣಕಾರಿ ಆಟವನ್ನು ಆಡುತ್ತಿದ್ದ ವಿರಾಟ್ ಕೊಹ್ಲಿಯನ್ನು ಗಮನಿಸಿದ ಕೆವಿನ್ ಪೀಟರ್ಸನ್ ಮತ್ತು ಮಹೇಂದ್ರ ಸಿಂಗ್ ಧೋನಿ ಕೊಹ್ಲಿ ಬಗ್ಗೆ ಚರ್ಚೆ ಮಾಡಿದ್ದರಂತೆ. ಈ ಸಂದರ್ಭದಲ್ಲಿ ಮಹೇಂದ್ರ ಸಿಂಗ್ ಧೋನಿ ವಿರಾಟ್ ಕೊಹ್ಲಿ ತನ್ನ ಈ ಆಕ್ರಮಣಕಾರಿ ಸ್ವಭಾವ ಮತ್ತು ಆಟವನ್ನು ಮುಂದಿನ ದಿನಗಳಲ್ಲೂ ಉಳಿಸಿಕೊಳ್ಳುತ್ತಾರಾ ಎಂಬ ಕುತೂಹಲ ಮತ್ತು ಸಂಶಯವನ್ನು ಹೊರಹಾಕಿದ್ದರಂತೆ.

ಅಂದು ಧೋನಿ ಹೊರಹಾಕಿದ್ದ ಕುತೂಹಲಕಾರಿ ಸಂಶಯವನ್ನು ಇಂದು ಕೆವಿನ್ ಪೀಟರ್ಸನ್ ಅವರು ನೆನಪಿಸಿಕೊಂಡಿದ್ದು, ಇಂದಿಗೂ ಸಹ ವಿರಾಟ್ ಕೊಹ್ಲಿ ಆಟದಲ್ಲಿ 5 ವರ್ಷಗಳ ಹಿಂದೆ ಇದ್ದ ಅದೇ ಶಕ್ತಿಯುತ ಮತ್ತು ಆಕ್ರಮಣಕಾರಿ ಲಕ್ಷಣಗಳಿವೆ. ಕಾಲ ಬದಲಾಗಿದೆಯೇ ಹೊರತು ವಿರಾಟ್ ಕೊಹ್ಲಿ ಆಟದಲ್ಲಿದ್ದ ಆಕ್ರಮಣಕಾರಿ ಅಂಶ ಮಾತ್ರ ಇಂದಿಗೂ ಸಹ ಅದೇ ರೀತಿ ಇದೆ ಎಂದು ಕೆವಿನ್ ಪೀಟರ್ಸನ್ ವಿರಾಟ್ ಕೊಹ್ಲಿ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಸ್ತುತ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನವನ್ನು ನೀಡುತ್ತಿದ್ದು, 6 ಪಂದ್ಯಗಳನ್ನಾಡಿ ಐದರಲ್ಲಿ ಜಯಗಳಿಸಿ ಕೇವಲ ಒಂದೇ ಒಂದು ಪಂದ್ಯದಲ್ಲಿ ಸೋಲನ್ನು ಕಂಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಮುಂದಿನ ಪಂದ್ಯವನ್ನು ಶುಕ್ರವಾರ (ಏಪ್ರಿಲ್ 30) ಪಂಜಾಬ್ ಕಿಂಗ್ಸ್ ವಿರುದ್ಧ ಆಡಲಿದೆ.

Story first published: Thursday, April 29, 2021, 21:10 [IST]
Other articles published on Apr 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X