ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2021: ಅಂತ್ಯವಾಯಿತಾ ಭಾರತದ ಈ ಇಬ್ಬರು ಭರವಸೆಯ ಆಟಗಾರರ ಕ್ರಿಕೆಟ್ ಕೆರಿಯರ್!?

IPL 2021: Manish pandey and Kuldeep Yadav face uncertain cricket future

ಐಪಿಎಲ್‌ನ 14ನೇ ಆವೃತ್ತಿ ಈಗ ಕೊನೆಯ ಹಂತ್ಕಕೆ ಬಂದು ತಲುಪಿದೆ. ಈ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಪ್ಲೇಆಫ್‌ಗೆ ಪ್ರವೇಶಿಸಲು ವಿಫಲವಾಗಿ ಅಧಿಕೃತವಾಗಿ ಹೊರಬಿದ್ದಿದೆ. ಬುಧವಾರ ಸನ್‌ರೈಸರ್ಸ್ ಹೈದರಾಬಾದ್ ತಂಡ ವಿರಾಟ್ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡಕ್ಕೆ ಎದುರಾಳಿಯಾಗಿ ಕಣಕ್ಕಿಳಿಯಲು ಸಜ್ಜಾಗಿದೆ. ಪ್ಲೇಆಫ್‌ಗೆ ಪ್ರವೇಶ ಪಡೆದುಕೊಂಡಿರುವ ಆರ್‌ಸಿಬಿ ಈಗ ಟಾಪ್ 2 ತಂಡವಾಗಿ ಪ್ಲೇಆಫ್‌ಗೆ ಪ್ರವೇಶಿಸಲು ಪ್ರಯತ್ನಿಸುತ್ತಿದ್ದು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯ ಆರ್‌ಸಿಬಿಗೆ ಈ ದೃಷ್ಟಿಯಿಂದ ಮಹತ್ವದ್ದಾಗಿದೆ.

ಇನ್ನು ಐಪಿಎಲ್ ಅಂತ್ಯವಾಗುತ್ತಿದ್ದಂತೆಯೇ ಯುಎಇನಲ್ಲಿ ಟಿ20 ವಿಶ್ವಕಪ್ ಕೂಡ ಆರಂಭವಾಗಲಿದೆ. ಅಕ್ಟೋಬರ್ 18ರಿಂದ ಯುಎಇ ಹಾಗೂ ಒಮಾನ್‌ನಲ್ಲಿ ಈ ಪ್ರತಿಷ್ಟಿತ ಟೂರ್ನಿ ಆರಂಭವಾಗಲಿದ್ದು ಕ್ರಿಕೆಟ್ ಅಭಿಮಾನಿಗಳು ಮತ್ತೊಂದು ಹಬ್ಬಕ್ಕೆ ಸಜ್ಜಾಗಲಿದ್ದಾರೆ. ಇಂತಾ ಸಂದರ್ಭದಲ್ಲಿ ಟೀಮ್ ಇಂಡಿಯಾದ ಆಟಗಾರರಾಗಿ ಕಳೆದ ಕೆಲ ವರ್ಷಗಳಿಂದ ತಂಡದ ಭಾಗವಾಗಿದ್ದ ಇಬ್ಬರು ಆಟಗಾರರ ಕ್ರಿಕೆಟ್ ಭವಿಷ್ಯ ಈಗ ಅಕ್ಷರಶಃ ತೂಗುಯ್ಯಾಲೆಯಲ್ಲಿದೆ.

ಟಿ20 ವಿಶ್ವಕಪ್‌: ಆತಂಕಕ್ಕೆ ಕಾರಣವಾಗಿದೆ ಟೀಮ್ ಇಂಡಿಯಾದ ಈ 5 ಆಟಗಾರರ ಪ್ರದರ್ಶನ!ಟಿ20 ವಿಶ್ವಕಪ್‌: ಆತಂಕಕ್ಕೆ ಕಾರಣವಾಗಿದೆ ಟೀಮ್ ಇಂಡಿಯಾದ ಈ 5 ಆಟಗಾರರ ಪ್ರದರ್ಶನ!

ತೆರೆಮರೆಗೆ ಸರಿಯುತ್ತಾರಾ ಕನ್ನಡಿಗ ಮನೀಶ್ ಪಾಂಡೆ

ತೆರೆಮರೆಗೆ ಸರಿಯುತ್ತಾರಾ ಕನ್ನಡಿಗ ಮನೀಶ್ ಪಾಂಡೆ

ಕರ್ನಾಟಕದಿಂದ ಆಯ್ಕೆಯಾಗಿರುವ ಪ್ರತಿಭಾನ್ವಿತ ಆಟಗಾರ ಮನೀಶ್ ಪಾಂಡೆ. ಅಂಡರ್ 19 ವಿಶ್ವಕಪ್‌ನಲ್ಲಿ ಮಿಂಚಿದ್ದ ಮನೀಶ್ ಪಾಂಡೆ ಬಳಿಕ ದೇಶೀಯ ಕ್ರಿಕೆಟ್‌ನಲ್ಲಿಯೂ ಅದ್ಭುತ ಪ್ರದರ್ಶನ ನೀಡಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದರು. ಆದರೆ ಆಡುವ ಬಳಗದಲ್ಲಿ ಮನೀಶ್ ಪಾಂಡೆಗೆ ಅವಕಾಶ ಸಿಕ್ಕಿದ್ದು ಬಹಳ ಕಡಿಮೆ. ಹಾಗಿದ್ದರೂ ಸಿಕ್ಕ ಅವಕಾಶದಲ್ಲಿ ಮನೀಶ್ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದರು.

ಆದರೆ ಇತ್ತೀಚೆಗೆ ಮನೀಶ್ ಪಾಂಡೆ ಪ್ರದರ್ಶನ ತೀರಾ ಕೆಳ ಮಟ್ಟದಲ್ಲಿದೆ. ಐಪಿಎಲ್‌ನಲ್ಲಿ ಸದಾ ಸ್ಥಿರ ಪ್ರದರ್ಶನಕ್ಕೆ ಹೆಸರಾಗಿದ್ದ ಮನೀಶ್ ಇತ್ತೀಚೆಗೆ ವೇಗವಾಗಿ ರನ್‌ಗಳಿಸಲು ವಿಫಲವಾಗಿದ್ದಾರೆ. ಹೀಗಾಗಿ ಸನ್‌ರೈಸರ್ಸ್ ಹೈದರಾಬಾದ್ ಪರವಾಗಿ ಆಡುವ ಬಳಗದಿಂದಲೂ ಮನೀಶ್ ಪಾಂಡೆ ಹೊರಬಿದ್ದಿದ್ದರು. ಈಗ ಮನೀಶ್ ಪಾಂಡೆ ಕ್ರಿಕೆಟ್ ವೃತ್ತಿ ಜೀವನದ ಮುಂದೆ ಪ್ರಶ್ನಾರ್ಥಕ ಚಿಹ್ನೆಯೆದ್ದಿದೆ. ಈ ಕಳಪೆ ಫಾರ್ಮ್‌ನಿಂದ ಮನೀಶ್ ಯಾವ ರೀತಿಯಾಗಿ ಹೊರಗೆ ಬಂದು ಮತ್ತೆ ಐಪಿಎಲ್ ಹಾಗೂ ಟೀಮ್ ಇಂಡಿಯಾದಲ್ಲಿ ಹೇಗೆ ಸ್ಥಾನ ಗಳಿಸಲಿದ್ದಾರೆ ಎಂಬುದು ಕೂಡ ಕುತೂಹಲ ಮೂಡಿಸಿದೆ.

ಉತ್ತಮ ಆರಂಭ ಪಡೆದರೂ ಮನೀಶ್ ಎಡವಿದ್ದೆಲ್ಲಿ?

ಉತ್ತಮ ಆರಂಭ ಪಡೆದರೂ ಮನೀಶ್ ಎಡವಿದ್ದೆಲ್ಲಿ?

ಈ ಬಾರಿಯ ಐಪಿಎಲ್‌ನಲ್ಲಿ ಮನೀಶ್ ಪಾಂಡೆ ಉತ್ತಮ ಆರಂಭವನ್ನು ಪಡೆದುಕೊಂಡಿದ್ದಾರೆ. ಆದರೆ ಈ ಆರಂಭವನ್ನು ಮುಂದುವರಿಸಲು ಮನೀಶ್ ವಿಫಲವಾದರು. ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಮನೀಶ್ ಈ ಬಾರಿ ಕೇವಲ 7 ಪಂದ್ಯಗಳಲ್ಲಿ ಮಾತ್ರವೇ ಆಡಿದ್ದು ಇದರಲ್ಲಿ ಎರಡು ಅರ್ಧ ಶತಕಗಳ ಸಹಿತ 223 ರನ್‌ಗಳಿಸಿದ್ದಾರೆ. ಆದರೆ 114.35ರಷ್ಟು ಕಡಿಮೆ ಸ್ಟ್ರೆಕ್‌ರೇಟ್‌ನಲ್ಲಿ ಮನೀಶ್ ಬ್ಯಾಟಿಂಗ್ ನಡೆಸಿರುವುದು ಮನೀಶ್ ಫಾರ್ಮ್ ತಂಡದ ಆಡುವ ಬಳಗದಿಂದ ಹೊರಬೀಳಲು ಕಾರಣವಾಗಿದೆ. ವಿಚಿತ್ರವೆಂದರೆ ಎಸ್‌ಆರ್‌ಹೆಚ್ ನಾಯಕ ಕೇನ್ ವಿಲಿಯಮ್ಸನ್ ಕೂಡ ಇದಕ್ಕಿಂತ ಹೆಚ್ಚಿನ ಸ್ಟ್ರೈಕ್‌ರೇಟ್ ಹೊಂದಿಲ್ಲ ಎಂಬುದು ಗಮನಾರ್ಹ. ಕೇನ್ ಕೇವಲ 114.07 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.

ಡೆಲ್ಲಿ ವಿರುದ್ಧ ಸಿಎಸ್‌ಕೆ ಸೋಲಿಗೆ ಕಾರಣ ಮತ್ತು ಧೋನಿ ಕಳಪೆ ಬ್ಯಾಟಿಂಗ್ ಕುರಿತು ತುಟಿ ಬಿಚ್ಚಿದ ಹೆಡ್ ಕೋಚ್

ಕ್ರಿಕೆಟ್ ಜೀವನದ ಕಠಿಣ ಸಂದರ್ಭದಲ್ಲಿ ಕುಲ್ದೀಪ್ ಯಾದವ್

ಕ್ರಿಕೆಟ್ ಜೀವನದ ಕಠಿಣ ಸಂದರ್ಭದಲ್ಲಿ ಕುಲ್ದೀಪ್ ಯಾದವ್

ಟೀಮ್ ಇಂಡಿಯಾದ ಖಾಯಂ ಆಟಗಾರನಾಗಿ ಕಳೆದ ಕೆಲ ವರ್ಷಗಳಲ್ಲಿ ಮಿಂಚಿದ್ದ ಕುಲ್ದೀಪ್ ಯಾದವ್ ಇತ್ತೀಚೆಗೆ ತೀರಾ ಕಳಪೆ ಫಾರ್ಮ್‌ನಲ್ಲಿದ್ದಾರೆ. ಅದರಲ್ಲೂ 2019ರ ಏಕದಿನ ವಿಶ್ವಕಪ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಬಳಿಕ ಕುಲ್ದೀಪ್ ಯಾದವ್ ಪ್ರದರ್ಶನ ಕೆಳಮುಖವಾಗಿಯೇ ಸಾಗಿತು. ನಂತರ ಟೀಮ್ ಇಂಡಿಯಾ ಸ್ಕ್ವಾಡ್‌ಗೆ ಆಯ್ಕೆಯಾಗುತ್ತಿದ್ದರೂ ಆಡುವ ಬಳಗದಲ್ಲಿ ಸ್ಥಾನ ಪಡೆಯುವಲ್ಲಿ ಕುಲ್ದೀಪ್ ಸತತವಾಗಿ ವಿಫಲವಾಗುತ್ತಾ ಸಾಗಿದರು. 2019ರ ವಿಶ್ವಕಪ್‌ನ ಬಳಿಕ ಕುಲ್ದೀಪ್ ಭಾರತ ಆಡಿದ 21 ಏಕದಿನ ಪಂದ್ಯಗಳ ಪೈಕಿ 14 ಪಂದ್ಯಗಳಲ್ಲಿ ಅವಕಾಶ ಪಡೆದುಕೊಂಡರೆ, ಭಾರತ ಆಡಿದ 30 ಟಿ20 ಪಂದ್ಯಗಳ ಪೈಕಿ ಐದು ಪಂದ್ಯಗಳಲ್ಲಿ ಮಾತ್ರವೇ ಆಡುವ ಅವಕಾಶ ಪಡೆದುಕೊಂಡರು. ಟೀಮ್ ಇಂಡಿಯಾ ಆಡಿದ 22 ಟೆಸ್ಟ್ ಪಂದ್ಯಗಳಲ್ಲಿ ಯಾದವ್ ಕೇವಲ ಒಂದು ಪಂದ್ಯದಲ್ಲಿ ಮಾತ್ರವೇ ಸ್ಥಾನ ಪಡೆದುಕೊಂಡಿದ್ದಾರೆ

Virat Kohli SRH ವಿರುದ್ಧ ಪಂದ್ಯ ಸೋತ ನಂತರ ಹೇಳಿದ್ದೇನು | Oneindia Kannada
ಐಪಿಎಲ್‌ನಲ್ಲಿಯೂ ಕುಲ್ದೀಪ್ ವಿಫಲ

ಐಪಿಎಲ್‌ನಲ್ಲಿಯೂ ಕುಲ್ದೀಪ್ ವಿಫಲ

ಈ ಮಧ್ಯೆ ಟೀಮ್ ಇಂಡಿಯಾ ಪರವಾಗಿ ಮಾತ್ರವಲ್ಲದೆ ಐಪಿಎಲ್‌ನಲ್ಲಿಯೂ ಕೆಕೆಆರ್ ತಂಡದ ಪರವಾಗಿ ಕಣಕ್ಕಿಳಿಯುವ ಕುಲ್ದೀಪ್ ಅಲ್ಲಿಯೂ ಆಡುವ ಬಳಗದಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾದರು. 2020ರ ಆವೃತ್ತಿಯ ಐಪಿಎಲ್‌ನಲ್ಲಿ ಕುಲ್ದೀಪ್ ಯಾದವ್ ಕೆಕೆಆರ್ ಪರವಾಗಿ ಕೇವಲ 5 ಪಂದ್ಯಗಳಲ್ಲಿ ಮಾತ್ರವೇ ಅವಕಾಶ ಪಡೆದುಕೊಂಡರು. 2021ರ ಐಪಿಎಲ್ ಆವೃತ್ತಿಯಲ್ಲಿ ಕುಲ್ದೀಪ್‌ಗೆ ಒಂದೇ ಒಂದು ಪಂದ್ಯದಲ್ಲಿಯೂ ಆಡುವ ಅವಕಾಶ ದೊರೆತಿಲ್ಲ. ಇದೀಗ ಕುಲ್ದೀಪ್ ಯಾದವ್ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಮುಂದಿನ ಆರು ತಿಂಗಳ ಕಾಲ ಕುಲ್ದೀಪ್ ಯಾದವ್ ಮೈದಾನಕ್ಕೆ ಇಳಿಯುವುದು ಸಾಧ್ಯವಿಲ್ಲ. ಹೀಗಾಗಿ ಕುಲ್ದೀಪ್ ಯಾದವ್ ಕ್ರಿಕೆಟ್ ಭವಿಷ್ಯ ಕೂಡ ಈಗ ಕಗ್ಗತ್ತಲಿನಲ್ಲಿದೆ.

Story first published: Wednesday, October 6, 2021, 16:21 [IST]
Other articles published on Oct 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X