ಸಂಜು ಸ್ಯಾಮ್ಸನ್ ಮತ್ತು ಕೊಹ್ಲಿಯನ್ನು ಓಝಾ ಸಿಮ್ ಕಾರ್ಡ್‌ಗೆ ಹೋಲಿಸಿದ್ದೇಕೆ?

ಭಾರತದ ಮಾಜಿ ಸ್ಪಿನ್ನರ್ ಪ್ರಗ್ಯಾನ್ ಓಝಾ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಕುರಿತು ಮಾತನಾಡಿದ್ದು ಸಂಜು ಸ್ಯಾಮ್ಸನ್ ಪ್ರೀಪೇಯ್ಡ್ ಸಿಮ್ ಕಾರ್ಡ್ ಇದ್ದಂತೆ ಎಂದಿದ್ದಾರೆ.

ಈ ಬಾರಿಯ ಐಪಿಎಲ್ ಟೂರ್ನಿಯ ನಾಲ್ಕನೇ ಪಂದ್ಯ ರಾಜಸ್ಥಾನ್ ರಾಯಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳ ನಡುವೆ ನಡೆಯಿತು. ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಭರ್ಜರಿ ಶತಕ ಸಿಡಿಸುವುದರ ಮೂಲಕ ಐಪಿಎಲ್ ಇತಿಹಾಸದಲ್ಲಿ ನಾಯಕನಾಗಿ ಆಡಿದ ಮೊದಲ ಪಂದ್ಯದಲ್ಲಿಯೇ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ಕೀರ್ತಿಗೆ ಪಾತ್ರರಾದರು. 63 ಎಸೆತಗಳಲ್ಲಿ ಸಂಜು ಸ್ಯಾಮ್ಸನ್ 119 ರನ್ ಗಳಿಸಿ ಮಿಂಚಿದರು.

ಸಂಜು ಸ್ಯಾಮ್ಸನ್ ರ ಈ ಇನ್ನಿಂಗ್ಸ್ ಬಗ್ಗೆ ಮಾಜಿ ಕ್ರಿಕೆಟಿಗ ಪ್ರಗ್ಯಾನ್ ಓಝಾ ಮಾತನಾಡಿದ್ದು ಸಂಜು ಸ್ಯಾಮ್ಸನ್ ಒಬ್ಬ ಅದ್ಭುತ ಆಟಗಾರ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ, ಆದರೆ ಸಂಜು ಸ್ಯಾಮ್ಸನ್ ಇನ್ನೂ ಸಹ ಕಿರಿಯ ಆಟಗಾರನಾಗಿರುವುದರಿಂದ ಮುಂಬರುವ ಪಂದ್ಯಗಳಲ್ಲಿಯೂ ಸಹ ಸ್ಥಿರವಾಗಿ ಉತ್ತಮ ಪ್ರದರ್ಶನವನ್ನು ನೀಡಿ ಪೈಪೋಟಿಯಲ್ಲಿ ಮೇಲುಗೈ ಸಾಧಿಸಿದರೆ ಮಾತ್ರ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗುತ್ತದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಪೋಸ್ಟ್ ಪೇಯ್ಡ್ ಸಿಮ್ ಕಾರ್ಡ್‌ಗಳಿದ್ದಂತೆ, ಅವರು ಇನ್ನೂ ಕೆಲ ದಿನಗಳ ಕಾಲ ಸ್ಥಿರವಾಗಿ ಉತ್ತಮ ಆಟ ಆಡದೇ ಇದ್ದರೂ ಸಹ ತಂಡದಲ್ಲಿ ಉಳಿದುಕೊಳ್ಳಬಹುದು ಆದರೆ ಸಂಜು ಸ್ಯಾಮ್ಸನ್ ರಂತಹ ಯುವ ಆಟಗಾರರು ಪ್ರೀಪೇಯ್ಡ್ ಸಿಮ್ ಕಾರ್ಡ್‌ಗಳಿದ್ದಂತೆ ತಂಡದಲ್ಲಿ ಸ್ಥಾನ ಪಡೆಯಬೇಕೆಂದರೆ ಉತ್ತಮ ಆಟದಲ್ಲಿ ಸ್ಥಿರತೆ ಇರಲೇಬೇಕು ಎಂದು ಓಝಾ ಹೇಳಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Friday, April 16, 2021, 14:36 [IST]
Other articles published on Apr 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X