ಐಪಿಎಲ್ 2021: ಬೆಂಗಳೂರು vs ಡೆಲ್ಲಿ, ರೋಚಕ ಪಂದ್ಯದ ಹೈಲೈಟ್ಸ್‌

ಅಹ್ಮದಾಬಾದ್: ಮಿಸ್ಟರ್ 360 ಡಿಗ್ರೀ ಖ್ಯಾತಿಯ ಎಬಿ ಡಿ ವಿಲಿಯರ್ಸ್ ಭರ್ಜರಿ ಬ್ಯಾಟಿಂಗ್‌, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್ ಬೌಲಿಂಗ್ ನೆರವಿನಿಂದ ಆರ್‌ಸಿಬಿ ಈ ಐಪಿಎಲ್‌ ಸೀಸನ್‌ನಲ್ಲಿ 5ನೇ ಜಯ ದಾಖಲಿಸಿದೆ. ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮಂಗಳವಾರ (ಏಪ್ರಿಲ್ 27) ನಡೆದ ಐಪಿಎಲ್ 22ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 1 ರನ್ ರೋಚಕ ಜಯ ಗಳಿಸಿದೆ.

ಕೇನ್ ರಿಚರ್ಡ್ಸನ್ ಬದಲು ಆರ್‌ಸಿಬಿ ತಂಡ ಸೇರಿದ ಸ್ಕಾಟ್ ಕುಗ್ಗೆಲೀಜ್ನ್

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು, 20 ಓವರ್‌ಗಳಲ್ಲಿ 5 ವಿಕೆಟ್ ಕಳೆದು 171 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್, 20 ಓವರ್‌ಗೆ 4 ವಿಕೆಟ್ ಕಳೆದು 170 ರನ್ ಗಳಿಸಿ ತಲೆ ಬಾಗಿತು.

ಡೆಲ್ಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದ ಹೈಲೈಟ್ಸ್‌
* ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ರಾಯಲ್ ಚಾಲೆಂಜರ್ಸ್ ಬೆಂಗಳೂರು, 20 ಓವರ್‌ಗಳಲ್ಲಿ 5 ವಿಕೆಟ್ ಕಳೆದು 171 ರನ್ ಗಳಿಸಿತ್ತು.
* ಬೆಂಗಳೂರಿನಿಂದ ಬ್ಯಾಟಿಂಗ್: ನಾಯಕ ವಿರಾಟ್ ಕೊಹ್ಲಿ 12, ದೇವದತ್ ಪಡಿಕ್ಕಲ್ 17, ರಜತ್ ಪಟಿದಾರ್ 31, ಗ್ಲೆನ್ ಮ್ಯಾಕ್ಸ್‌ವೆಲ್ 25, ಎಬಿ ಡಿ ವಿಲಿಯರ್ಸ್ 75 (42 ಎಸೆತ), ವಾಷಿಂಗ್ಟನ್ ಸುಂದರ್ 6 ರನ್‌.
* ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್, 20 ಓವರ್‌ಗೆ 4 ವಿಕೆಟ್ ಕಳೆದು 170 ರನ್ ಗಳಿಸಿ ತಲೆ ಬಾಗಿತು.
* ಡೆಲ್ಲಿಯಿಂದ ರನ್ ಸಾಧನೆ: ಪೃಥ್ವಿ ಶಾ 21, ರಿಷಭ್ ಪಂತ್ 58, ಮಾರ್ಕಸ್ ಸ್ಟೋಯ್ನಿಸ್ 22, ಶಿಮ್ರನ್ ಹೆಟ್ಮೈಯರ್ 53 (25), ಶಿಖರ್ ಧವನ್ 6, ಸ್ಟೀವ್ ಸ್ಮಿತ್ 4 ರನ್‌.

* ಡೆಲ್ಲಿಯಿಂದ ಬೆಸ್ಟ್ ಬೌಲಿಂಗ್: ಕಾಗಿಸೊ ರಬಾಡ, ಆವೇಶ್ ಖಾನ್, ಅಮಿತ್ ಮಿಶ್ರಾ, ಅಕ್ಷರ್ ಪಟೇಲ್ ತಲಾ 1 ವಿಕೆಟ್.

* ಆರ್‌ಸಿಬಿಯಿಂದ ಬೌಲಿಂಗ್: ಹರ್ಷಲ್ ಪಟೇಲ್ 2, ಮೊಹಮ್ಮದ್ ಸಿರಾಜ್ ಮತ್ತು ಕೈಲ್ ಜೇಮಿಸನ್ ತಲಾ 1 ವಿಕೆಟ್‌.
* ಎಬಿ ಡಿ ವಿಲಿಯರ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು. ಇದೇ ಪಂದ್ಯದಲ್ಲಿ ಎಬಿಡಿ 5000 ರನ್ ದಾಖಲೆ ನಿರ್ಮಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Tuesday, April 27, 2021, 23:45 [IST]
Other articles published on Apr 27, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X