ಐಪಿಎಲ್ 2021: ಎಸ್‌ಆರ್‌ಹೆಚ್ vs ಎಂಐ, ಪ್ರಮುಖ ಮೈಲಿಗಲ್ಲುಗಳ ಮೇಲೆ ಕಣ್ಣಿಟ್ಟ ಆಟಗಾರರು!

ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂದು ಏಕಕಾಲದಲ್ಲಿ ಎರಡು ಪಂದ್ಯಗಳು ನಡೆಯಲಿದೆ. ಸಂಜೆ 7:30ಕ್ಕೆ ನಡೆಯಲಿರುವ ಈ ಸೆಣೆಸಾಟದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿದೆ. ಮತ್ತೊಂದು ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ.

ಇದರಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಪ್ಲೇಆಫ್‌ಗೇರಲು ಅಸಾಧ್ಯ ಗುರಿಯನ್ನು ಮುಂದಿಟ್ಟುಕೊಂಡಿರುವುದು ಈಗ ಕುತೂಹಲಕಾರಿ ಸಂಗತಿಯಾಗಿದೆ. ಈ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಮುಂದಿನ ಹಂತಕ್ಕೇರುವ ಪ್ರಯತ್ನವನ್ನು ಯಾವ ರೀತಿಯಾಗಿ ನಡೆಸಲಿದೆ ಎಂಬುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಈ ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಮುಖಾಮುಖಿಯಲ್ಲಿ ಕೆಲ ಸಂಭಾವ್ಯ ದಾಖಲೆಗಳಿಗಾಗಿ ಆಟಗಾರರು ಸಜ್ಜಾಗಿದ್ದಾರೆ. ಆ ಬಗ್ಗೆ ಕುತೂಹಲಕಾರಿ ಮಾಹಿತಿ ಮುಂದಿದೆ ಓದಿ..

ಡೆಲ್ಲಿ ವಿರುದ್ಧ ಕಣಕ್ಕಿಳಿಯಲಿದೆ ಈ ಬಲಿಷ್ಠ ಆರ್‌ಸಿಬಿ ತಂಡ; ಪಂದ್ಯದ ನಂತರ ಆರ್‌ಸಿಬಿಗೆ ಯಾವ ಸ್ಥಾನ ಸಿಗಲಿದೆ?ಡೆಲ್ಲಿ ವಿರುದ್ಧ ಕಣಕ್ಕಿಳಿಯಲಿದೆ ಈ ಬಲಿಷ್ಠ ಆರ್‌ಸಿಬಿ ತಂಡ; ಪಂದ್ಯದ ನಂತರ ಆರ್‌ಸಿಬಿಗೆ ಯಾವ ಸ್ಥಾನ ಸಿಗಲಿದೆ?

ರಶೀದ್ ಖಾನ್: ಸನ್ ರೈಸರ್ಸ್ ಹೈದರಾಬಾದ್ ತಂಡದ ಸ್ಪಿನ್ನರ್ ರಶೀದ್ ಖಾನ್ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿಈಗ 389 ವಿಕೆಟ್ ಸಂಪಾದಿಸಿದ್ದಾರೆ. ಒಟ್ಟಾರೆ ಅತಿ ಹೆಚ್ಚು ಟಿ20 ವಿಕೆಟ್ ಪಡೆದವರ ಪಟ್ಟಿಯಲ್ಲಿ ರಶೀದ್ ಖಾನ್ ಮೂರನೇ ಸ್ಥಾನದಲ್ಲಿದ್ದಾರೆ. ಈಗ ಎರಡನೇ ಸ್ಥಾನಕ್ಕೇರುವ ಅವಕಾಶ ರಶೀದ್ ಮುಂದಿದ್ದು ಇದಕ್ಕಾಗಿ ಅವರು ಎರಡು ವಿಕಟ್ ಪಡೆಬೇಕಿದೆ. ಎರಡನನೇ ಸ್ಥಾನದಲ್ಲಿರುವ ಲಸಿತ್ ಮಾಲಿಂಗ 390 ವಿಕೆಟ್ ತಮ್ಮ ಖಾತೆಯಲ್ಲಿ ಹೊಂದಿದ್ದಾರೆ.

ಮನೀಶ್ ಪಾಂಡೆ: ಸನ್ ರೈಸರ್ಸ್ ಹೈದರಾಬಾದ್ ತಂಡದ ಅನುಭವಿ ಆಟಗಾರ ಮನೀಶ್ ಪಾಂಡೆ ಕಳೆದ ಮೂರು ಪಂದ್ಯಗಳಲ್ಲಿ ಆಡುವ 11ರ ಬಳಗದಿಂದ ಹೊರಗುಳಿದಿದ್ದರು. ಇಂದಿನ ಪಂದ್ಯದಲ್ಲಿ ಅವರಿಗೆ ಆಡುವ ಬಳಗದಲ್ಲಿ ಅವಕಾಶ ದೊರೆತರೆ ಟಿ 20 ಕ್ರಿಕೆಟ್ ನಲ್ಲಿ 6000 ರನ್‌ಗಳಿಸಿದ ಆಟಗಾರರ ಪಟ್ಟಿಗೆ ಸೇರಿಕೊಳ್ಳುವ ಅವಕಾಶವಿದೆ. ಇದಕ್ಕಾಗಿ ಮನೀಶ್ ಪಾಂಡೆ 26 ರನ್‌ಗಳನ್ನು ಗಳಿಸಬೇಕಿದೆ. ಅಲ್ಲದೆ ಟಿ20 ಕ್ರಿಕೆಟ್‌ನಲ್ಲಿ 500 ಬೌಂಡರಿಗಳಿಸಿದ ಆಟಗಾರ ಎನಿಸಿಕೊಳ್ಳುವ ಸನಿಹದಲ್ಲಿರುವ ಮನೀಶ್ ಈ ಸಾಧನೆ ಮಾಡಲು ನಾಲ್ಕು ಬೌಂಡರಿಗಳ ಅವಶ್ಯಕತೆಯಿದೆ.

ಆರ್‌ಸಿಬಿಗೆ ಇನ್ನೂ ಇದೆ ದ್ವಿತೀಯ ಸ್ಥಾನ ಪಡೆಯುವ ಅವಕಾಶ!; ಹೀಗಾದರೆ ಮಾತ್ರಆರ್‌ಸಿಬಿಗೆ ಇನ್ನೂ ಇದೆ ದ್ವಿತೀಯ ಸ್ಥಾನ ಪಡೆಯುವ ಅವಕಾಶ!; ಹೀಗಾದರೆ ಮಾತ್ರ

ಶಹಬಾಜ್ ನದೀಮ್: ಸನ್ ರೈಸರ್ಸ್ ಹೈದರಾಬಾದ್ ತಂಡದ ಸ್ಪಿನ್ನರ್ ಶಹಬಾಜ್ ನದೀಮ್ ಇಂದಿನ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಂಡರೆ ಐಪಿಎಲ್ ನಲ್ಲಿ 50 ವಿಕೆಟ್ ಪಡೆದ ಆಟಗಾರರ ಪಟ್ಟಿಗೆ ಸೇರಿಕೊಳ್ಳುವ ಅವಕಾಶ ಹೊಂದಿದ್ದಾರೆ. ಇದಕ್ಕಾಗಿ ನದೀಮ್ ಎರಡು ವಿಕೆಟ್ ಕಬಳಿಸಬೇಕಿದೆ.

ಕಿರಾನ್ ಪೊಲಾರ್ಡ್: ಮುಂಬೈ ಇಂಡಿಯನ್ಸ್ ತಂಡದ ಆಲ್‌ರೌಂಡರ್ ಕೀರನ್ ಪೊಲಾರ್ಡ್ ಮುಂಬೈ ಮೂಲದ ಫ್ರಾಂಚೈಸಿ ಪರವಾಗಿ 200ನೇ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. 2010ರ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಸೇರ್ಪಡೆಯಾದ ಈ ವೆಸ್ಟ್ ಇಂಡೀಸ್‌ನ ಆಟಗಾರ ಮುಂಬೈ ಫ್ರಾಂಚೈಸಿ ಪರವಾಗಿ ಈ ಸಾಧನೆ ಮಾಡಿದ ಮೊದಲ ಆಟಗಾರನಾಗಲಿದ್ದಾರೆ.

ಹಾರ್ದಿಕ್ ಪಾಂಡ್ಯ: ಮುಂಬೈ ಇಂಡಿಯನ್ಸ್ ತಂಡದ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಐಪಿಎಲ್‌ನಲ್ಲಿ ಎರಡಯ ಮಹತ್ವದ ಸಾಧನೆ ಮಾಡುವ ಸನಿಹದಲ್ಲಿದ್ದಾರೆ. ಐಪಿಎಲ್‌ನಲ್ಲಿ 100 ಸಿಕ್ಸರ್ ಮತ್ತು 100 ಬೌಂಡರಿ ಸಿಡಿಸಿದ ಆಟಗಾರ ಎನಿಸುವ ಅವಕಾಶ ಹೊಂದ್ದಾರೆ ಹಾರ್ದಿಕ್ ಪಾಂಡ್ಯ. ಇದಕ್ಕಾಗಿ ಹಾರ್ದಿಕ್ ಮೂರು ಸಿಕ್ಸರ್ ಹಾಗೂ ಮೂರು ಬೌಂಡರಿಯನ್ನು ಬಾರಿಸುವ ಅವಶ್ಯಕತೆಯಿದೆ.

ಈ 5 ಅನ್‌ಕ್ಯಾಪ್‌ಡ್ ಆಟಗಾರರು ಮುಂದಿನ ಐಪಿಎಲ್‌ನಲ್ಲಿ ಬಾಚಿಕೊಳ್ಳಲಿದ್ದಾರೆ ಕೋಟಿ ಕೋಟಿ ದುಡ್ಡು!ಈ 5 ಅನ್‌ಕ್ಯಾಪ್‌ಡ್ ಆಟಗಾರರು ಮುಂದಿನ ಐಪಿಎಲ್‌ನಲ್ಲಿ ಬಾಚಿಕೊಳ್ಳಲಿದ್ದಾರೆ ಕೋಟಿ ಕೋಟಿ ದುಡ್ಡು!

ಸೂರ್ಯಕುಮಾರ್ ಯಾದವ್: ಮುಂಬೈ ಇಂಡಿಯನ್ಸ್ ತಂಡದ ಪ್ರಮುಖ ಬ್ಯಾಟರ್ ಸೂರ್ಯಕುಮಾರ್ ಯಾದವ್ ಟಿ20 ಕ್ರಿಕೆಟ್‌ನಲ್ಲಿ ಒಟ್ಟಾರೆಯಾಗಿ 4000 ರನ್‌ಗಳ ಸಮೀಪದಲ್ಲಿದ್ದಾರೆ. ಈ ಸಾಧನೆಗಾಗಿ ಸೂರ್ಯಕುಮಾರ್ ಯಾದವ್ ಇಂದಿನ ಪಂದ್ಯದಲ್ಲಿ 59 ರನ್‌ಗಳನ್ನು ಗಳಿಸಬೇಕಿದೆ.

ಜಿಮ್ಮಿ ನೀಶಮ್: ಮುಂಬೈ ಇಂಡಿಯನ್ಸ್ ತಂಡದ ಆಲ್ ರೌಂಡರ್ ಜಿಮ್ಮಿ ನೀಶಮ್ ಒಟ್ಟಾರೆ ಟಿ 20 ಕ್ರಿಕೆಟ್‌ನಲ್ಲಿ 150 ವಿಕೆಟ್‌ ಪಡೆದ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಕಾತರದಲ್ಲಿದ್ದಾರೆ. ಈ ಕಿವೀಸ್ ಆಟಗಾರನಿಗೆ ಈ ಸಾಧನೆ ಮಾಡಲು 3 ವಿಕೆಟ್‌ಗಳ ಅಗತ್ಯವಿದೆ.

ನಥನ್ ಕೌಲ್ಟರ್ ನೈಲ್: ಮುಂಬೈ ಇಂಡಿಯನ್ಸ್ ವೇಗಿ ನಥನ್ ಕೌಲ್ಟರ್ ನೈಲ್ ಐಪಿಎಲ್‌ನಲ್ಲಿ ವಿಕೆಟ್‌ ಪಡೆದ ಆಟಗಾರ ಎನಿಸಲು ನಾಲ್ಕು ವಿಕೆಟ್‌ಗಳ ಅಗತ್ಯವಿದೆ.

ಕ್ರಿಸ್ ಲಿನ್: ಮುಂಬೈ ಇಂಡಿಯನ್ಸ್ ತಂಡದ ಆಟಗಾರ ಕ್ರಿಸ್ ಲಿನ್ ಯುಎಇ ಲೆಗ್‌ನಲ್ಲಿ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಪಡೆದುಕೊಂಡಿಲ್ಲ. ಇಂದಿನ ಪಂದ್ಯದಲ್ಲಿ ಕ್ರಿಸ್ ಲಿನ್‌ಗೆ ಅವಕಾಶ ದೊರೆತರೆಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 6000 ರನ್‌ಗಳನ್ನು ಗಳಿಸಿದ ಆಟಗಾರರ ಪಟ್ಟಿಗೆ ಸೇರಿಕೊಳ್ಳುವ ಪ್ರಯತ್ನ ಮಾಡಲಿದ್ದಾರೆ. ಇದಕ್ಕಾಗಿ 75 ರನ್‌ಗಳನ್ನು ಅವರು ಗಳಿಸಬೇಕಿದೆ. ಅಲ್ಲದೆ ಆಸ್ಟ್ರೇಲಿಯಾದ ಈ ಆಟಗಾರ ಟಿ20 ಕ್ರಿಕೆಟ್‌ನಲ್ಲಿ 500 ಬೌಂಡರಿಗಳ ಸಾಧನೆಯಿಂದ 2 ಬೌಂಡರಿಗಳ ಅಂತರ ದೂರದಲ್ಲಿದ್ದಾರೆ.

ಧೋನಿ, ಜಡೇಜಾ, ರೈನಾ, ಬ್ರಾವೋ ಅಲ್ಲ; ಈತ ಸಿಎಸ್‌ಕೆ ತಂಡದ ಅತ್ಯುತ್ತಮ ಆಟಗಾರ ಎಂದ ಗಂಭೀರ್!ಧೋನಿ, ಜಡೇಜಾ, ರೈನಾ, ಬ್ರಾವೋ ಅಲ್ಲ; ಈತ ಸಿಎಸ್‌ಕೆ ತಂಡದ ಅತ್ಯುತ್ತಮ ಆಟಗಾರ ಎಂದ ಗಂಭೀರ್!

ಆಡಂ ಮಿಲ್ನೆ: ಮುಂಬೈ ಇಂಡಿಯನ್ಸ್ ತಂಡದ ವೇಗದ ಬೌಲರ್ ಆಡಮ್ ಮಿಲ್ನೆ ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 150 ವಿಕೆಟ್ ಸಂಪಾದಿಸಿದ ಆಟಗಾರರ ಪಟ್ಟಿಗೆ ಸೇರಿಕೊಳ್ಳುವ ತವಕದಲ್ಲಿದ್ದಾರೆ. ಆದರೆ ಇದಕ್ಕಾಗಿ ಮಿಲ್ನೆ ಇಂದಿನ ಪಂದ್ಯದಲ್ಲಿ ನಾಲ್ಕು ವಿಕೆಟ್ ಪಡೆಯಬೇಕಿದೆ.

ಸನ್ ರೈಸರ್ಸ್ ಹೈದರಾಬಾದ್ ಸಂಪೂರ್ಣ ಸ್ಕ್ವಾಡ್: ಕೇನ್ ವಿಲಿಯಮ್ಸನ್ (ನಾಯಕ), ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್), ಜೇಸನ್ ರಾಯ್, ಅಭಿಷೇಕ್ ಶರ್ಮಾ, ಪ್ರಿಯಂ ಗರ್ಗ್, ಅಬ್ದುಲ್ ಸಮದ್, ಜೇಸನ್ ಹೋಲ್ಡರ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಸಿದ್ದಾರ್ಥ್ ಕೌಲ್, ಉಮ್ರಾನ್ ಮಲಿಕ್, ಶ್ರೀವಾತ್ಸ ಗೋಸ್ವಾಮಿ, ಮನೀಶ್ ಪಾಂಡೆ, ಕೇದಾರ್ ಜಾಧವ್, ಮೊಹಮ್ಮದ್ ನಬಿ, ಜಗದೀಶ ಸುಚಿತ್, ಶಹಬಾಜ್ ನದೀಮ್, ಖಲೀಲ್ ಅಹ್ಮದ್, ಸಂದೀಪ್ ಶರ್ಮಾ, ವಿರಾಟ್ ಸಿಂಗ್, ಡೇವಿಡ್ ವಾರ್ನರ್, ಬೆಸಿಲ್ ತಂಪಿ, ಮುಜೀಬ್ ಉರ್ ರಹಮಾನ್

ಮುಂಬೈ ಇಂಡಿಯನ್ಸ್ ಸಂಪೂರ್ಣ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಸೌರಭ್ ತಿವಾರಿ, ಕೀರನ್ ಪೊಲಾರ್ಡ್, ಜೇಮ್ಸ್ ನೀಶಮ್, ನಾಥನ್ ಕೌಲ್ಟರ್-ನೈಲ್, ಜಯಂತ್ ಯಾದವ್, ಜಸ್‌ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್, ಕ್ವಿಂಟನ್ ಡಿ ಕಾಕ್, ಆಡಮ್ ಮಿಲ್ನೆ, ಕೃನಾಲ್ ಪಾಂಡ್ಯ, ರಾಹುಲ್ ಚಾಹರ್, ಪಿಯೂಷ್ ಚಾವ್ಲಾ, ಆದಿತ್ಯ ತಾರೆ, ಧವಳ್ ಕುಲಕರ್ಣಿ, ಕ್ರಿಸ್ ಲಿನ್, ರೂಶ್ ಕಲರಿಯಾ, ಅನ್ಮೋಲ್‌ಪ್ರೀತ್ ಸಿಂಗ್, ಅನುಕುಲ್ ರಾಯ್, ಮಾರ್ಕೊ ಜಾನ್ಸನ್, ಯುಧ್ವೀರ್

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, October 8, 2021, 15:30 [IST]
Other articles published on Oct 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X