ಸತ್ಯವಾಗಿದೆ ಆರ್‌ಸಿಬಿ ಆಟಗಾರ ಆ್ಯಡಂ ಜಂಪಾ ಮಾತು!

ನವದೆಹಲಿ: ನಾವು ಭಾರತೀಯರೇ ಹಾಗೆ. ನಮ್ಮ ದೇಶದ ಬಗ್ಗೆ, ಈ ದೇಶದಲ್ಲಿನ ಹುಳುಕುಗಳ ಬಗ್ಗೆ ಯಾರೂ ಮಾತನಾಡಬಾರದು. ಮಾತನಾಡಿದರೆ ನಾವು ಕೆರಳಿಬಿಡುತ್ತೇವೆ. ಆದರೆ ನಮ್ಮೀ ದುಡುಕುತನವೇ ನಮಗೆ ಸಂಕಷ್ಟ ತಂದಿರುವುದಕ್ಕೆ ಹಲವಾರು ನಿದರ್ಶನಗಳು ನಮ್ಮ ಕಣ್ಣಮುಂದಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಲೆಗ್ ಸ್ಪಿನ್ನರ್, ಆಸ್ಟ್ರೇಲಿಯಾದ ಆ್ಯಡಂ ಜಂಪಾ ಈ ಮೊದಲು ಇಂಡಿಯನ್ ಪ್ರೀಮಿಯರ್ ಲೀಗ್‌ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆದರೆ ಆಗ ಜಂಪಾ ಹಾಗೆ ಹೇಳಿದ್ದೇ ತಪ್ಪೆನ್ನುವಂತೆ ಭಾರತೀಯ ಹೆಚ್ಚಿನ ಕ್ರಿಕೆಟ್ ಅಭಿಮಾನಿಗಳು ದೂರಿದ್ದರು. ಆದರೆ ಈಗ ಜಂಪಾ ಮಾತು ನಿಜವಾಗಿದೆ.

ಐಪಿಎಲ್ ಮುಂದೂಡಿದ ಬೆನ್ನಲ್ಲೇ ಟಿ20 ವಿಶ್ವಕಪ್ ಯುಎಇಗೆ ಸ್ಥಳಾಂತರಕ್ಕೆ ಸಿದ್ಧತೆ

ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಆತಂಕ ಮಟ್ಟದಲ್ಲಿ ಹೆಚ್ಚುತ್ತಿದ್ದರಿಂದ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದಲ್ಲಿದ್ದ ಆ್ಯಡಂ ಜಂಪಾ ಭೀತಿ ತೋರಿಕೊಂಡಿದ್ದರು. ಅಷ್ಟೇ ಅಲ್ಲ, ಆರ್‌ಸಿಬಿಯಲ್ಲಿದ್ದ ಆಸೀಸ್ ಆಟಗಾರರಾದ ಕೇನ್ ರಿಚರ್ಡ್ಸನ್, ಜಂಪಾ ಐಪಿಎಲ್ ತ್ಯಜಿಸುವ ನಿರ್ಧಾರ ತಾಳಿ ಭಾರತದಿಂದ ತವರಿಗೆ ವಾಪಸ್ಸಾಗಿದ್ದರು.

ಎಚ್ಚರಿಸಿದ್ದ ಆ್ಯಡಂ ಜಂಪಾ

ಎಚ್ಚರಿಸಿದ್ದ ಆ್ಯಡಂ ಜಂಪಾ

ತಾನು ಐಪಿಎಲ್ ತೊರೆದಿದ್ದರ ಬಗ್ಗೆ ಮಾತನಾಡುವಾಗ ಜಂಪಾ, 'ಐಪಿಎಲ್ ಬಯೋಬಬಲ್ ನಾನು ನೋಡಿರುವ ಬಯೋ ಬಬಲ್‌ಗಳಲ್ಲೇ ದುರ್ಬಲ ಬಯೋಬಬಲ್,' ಎಂದು ಹೇಳಿದ್ದರು. ಇದು ಐಪಿಎಲ್ ಆಯೋಜಕರಿಗೆ ಮತ್ತು ಭಾರತೀಯ ಅಭಿಮಾನಿಗಳಿಗೆ ಸರಿ ಕಂಡಿರಲಿಲ್ಲ. ಈ ಹೇಳಿಕೆ ನೀಡಿದ್ದ ಜಂಪಾ ಮೇಲೆಯೇ ಕ್ರಿಕೆಟ್ ಅಭಿಮಾನಿಗಳು ಕಿಡಿ ಕಾರಿದ್ದರೇ ಹೊರತು, ಜಂಪಾ ಮಾತನ್ನು ಗಂಭೀರವಾಗಿ ಯಾರೂ ಪರಿಗಣಿಸಿರಲಿಲ್ಲ.

ನಿಜವಾದ ಜಂಪಾ ಮಾತು

ನಿಜವಾದ ಜಂಪಾ ಮಾತು

ತನ್ನ ಮಾತು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ, ಐಪಿಎಲ್ ಆಯೋಜಕರಿಗೆ ಬೇಸರ ತಾರದಿರಲಿ ಎಂಬ ಕಾರಣಕ್ಕೆ ಜಂಪಾ ತಾನೇ ಕ್ಷಮೆಯಾಚಿಸಿದ್ದರು. ಆದರೆ ಜಂಪಾ ಆವತ್ತು ಹೇಳಿದ ಮಾತು ನಿಜವಾಗಿದೆ. ಐಪಿಎಲ್‌ನ ಬಯೋಬಬಲ್ ದುರ್ಬಲವಾಗಿತ್ತು ಅನ್ನೋದಕ್ಕೆ ಬಯೋಬಬಲ್ ಒಳಗೆ ಕಾಣಿಸಿಕೊಂಡ ಕೊರೊನಾವೈರಸ್ ಪ್ರಕರಣಗಳೇ ಸಾಕ್ಷಿ ಹೇಳುತ್ತಿವೆ. ಇದರ ಪರಿಣಾಮ 2021ರ ಐಪಿಎಲ್ ರದ್ದಾಗಿದೆ.

ಐಪಿಎಲ್ ರದ್ದಿಗೆ ಅಸಲಿ ಕಾರಣ

ಐಪಿಎಲ್ ರದ್ದಿಗೆ ಅಸಲಿ ಕಾರಣ

ಅಸಲಿಗೆ ಐಪಿಎಲ್ ಬಯೋ ಬಬಲ್ ಒಳಗೆ ಜಿಪಿಎಸ್ ವ್ಯವಸ್ಥೆ ಸರಿಯಿರಲಿಲ್ಲ. ಮೈದಾನ ಸಿಬ್ಬಂದಿಗಳಿಗೆ ಪ್ರತ್ಯೇಕ ಬಯೋ ಬಬಲ್ ಇರಲಿಲ್ಲ. ಆಗಾಗ ಹೋಟೆಲ್ ಬುಕ್ಕಿಂಗ್‌ಗಳು ನಡೆಯುತ್ತಿದ್ದವು. ಬಯೋಬಬಲ್ ಒಳಗಿದ್ದವರು ಬಹಳಷ್ಟು ಸಾರಿ ಕೋವಿಡ್-19 ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದರು. ಈ ಎಲ್ಲಾ ಕಾರಣಗಳಿಂದಲೇ ಇವತ್ತು ಐಪಿಎಲ್ ರದ್ದಾಗಿದೆ. ಇದನ್ನೆಲ್ಲಾ ಗಮನಿಸಿಯೇ ಅಂದು ಜಂಪಾ ಐಪಿಎಲ್ ಬಯೋ ಬಬಲ್ ಸರಿಯಿಲ್ಲ ಎಂದಿದ್ದರು. ಜಂಪಾ ಅವರ ಮಾತು ಇಂದು ನಿಜವಾಗಿದೆ!

For Quick Alerts
ALLOW NOTIFICATIONS
For Daily Alerts
Story first published: Tuesday, May 4, 2021, 17:58 [IST]
Other articles published on May 4, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X