ಔಟಾ, ನಾಟ್‌ ಔಟಾ?: ಪಂಜಾಬ್ vs ಬೆಂಗಳೂರು ಪಂದ್ಯದಲ್ಲಿ ವಿವಾದ-ವಿಡಿಯೋ

ಶಾರ್ಜಾ: ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ (ಅಕ್ಟೋಬರ್‌ 3) ನಡೆದ ಪಂಜಾಬ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 48ನೇ ಪಂದ್ಯದಲ್ಲಿ ಅಂಪೈರಿಂಗ್ ವಿವಾದ ಚರ್ಚೆಗೀಡಾಗಿದೆ. ಆರ್‌ಸಿಬಿ ಬ್ಯಾಟ್ಸ್‌ಮನ್‌ ದೇವದತ್ ಪಡಿಕ್ಕಲ್ ಔಟ್ ನೀಡದಿರುವುದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ. ಟ್ವಿಟರ್‌ನಲ್ಲಿ ಅನೇಕರು ಥರ್ಡ್ ಅಂಪೈರ್ ಅನ್ನು ತೆಗೆದು ಹಾಕಿ ಎಂದು ಕಿಡಿ ಕಾರಿದ್ದಾರೆ.

ಐಪಿಎಲ್ 2021: ಋತುರಾಜ್ ಗಾಯಕ್ವಾಡ್ ಆಟಕ್ಕೆ ಪಾಕಿಸ್ತಾನ ಮಾಜಿ ಕ್ರಿಕೆಟಿಗನಿಂದಲೂ ಬಂತು ಮೆಚ್ಚುಗೆಐಪಿಎಲ್ 2021: ಋತುರಾಜ್ ಗಾಯಕ್ವಾಡ್ ಆಟಕ್ಕೆ ಪಾಕಿಸ್ತಾನ ಮಾಜಿ ಕ್ರಿಕೆಟಿಗನಿಂದಲೂ ಬಂತು ಮೆಚ್ಚುಗೆ

ಈ ಘಟನೆ ನಡೆದಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಇನ್ನಿಂಗ್ಸ್‌ನಲ್ಲಿ. 8ನೇ ಓವರ್‌ನಲ್ಲಿ ಆರ್‌ಸಿಬಿ ಬ್ಯಾಟ್ಸ್‌ಮನ್‌ ದೇವದತ್ ಪಡಿಕ್ಕಲ್ ಸ್ಟ್ರೈಕ್‌ನಲ್ಲಿದ್ದಾಗ ಓವರ್‌ ಎಸೆಯೋಕೆ ರವಿ ಬಿಷ್ಣೋಯ್ ಬಂದಿದ್ದರು. ಆಗ ಪಡಿಕ್ಕಲ್ ಬ್ಯಾಟ್ ಹತ್ತಿರದಿಂದ ಪಾಸ್ ಆದ ಚೆಂಡು ವಿಕೆಟ್ ಕೀಪರ್ ಕೆಎಲ್ ರಾಹುಲ್ ಕೈ ಸೇರಿತು.

ಥರ್ಡ್ ಅಂಪೈರ್‌ನಿಂದ ತಪ್ಪು ತೀರ್ಪು

ದೇವದತ್ ಪಡಿಕ್ಕಲ್ ಬ್ಯಾಟ್ ಸಮೀಪದಿಂದ ಚೆಂಡು ಪಾಸಾಗಿದ್ದರಿಂದ ಅದು ಔಟ್ ಎಂದು ನಾಯಕ ಕೆಎಲ್ ರಾಹುಲ್ ಅಂಪೈರ್ ಅವರಲ್ಲಿ ಕೋರಿಕೊಂಡರು. ಆದರೆ ಆನ್ ಫೀಲ್ಡ್ ಅಂಪೈರ್ ನಾಟ್ ಔಟ್ ತೀರ್ಪು ನೀಡಿದರು. ಆಗ ಡಿಸಿಶನ್ ರಿವ್ಯೂಗಾಗಿ ಆನ್ ಫೀಲ್ಡ್ ಅಂಪೈರ್ ಅವರಲ್ಲಿ ಕೋರಿಕೊಂಡರು. ಡಿಆರ್‌ಎಸ್‌ನಲ್ಲಿ ಪಡಿಕ್ಕಲ್ ಬ್ಯಾಟ್ ತಾಗಿದ್ದು ಕಾಣಿಸಿತ್ತು. ಆದರೂ ಥರ್ಡ್ ಅಂಪೈರ್ ಕ್ರಿಷ್ಣಮಾಚಾರಿ ಶ್ರೀನಿವಾಸನ್ ನಾಟ್ ಔಟ್ ತೀರ್ಪಿತ್ತರು. ಹೀಗಾಗಿ ಆನ್ ಫೀಲ್ಡ್ ಅಂಪೈರ್ ಅನಂತ ಪದ್ಮನಾಭನ್ ಕೂಡ ನಾಟ್ ಔಟ್ ಎಂದು ಕೈ ಸನ್ನೆ ಮಾಡಿದರು. ಪಂಜಾಬ್ ಕಿಂಗ್ಸ್‌ ಇದರಿಂದಾಗಿ ಒಂದು ರಿವ್ಯೂ ಕೂಡ ಕಳೆದುಕೊಂಡಿತು. ಅತ್ತ ಆರ್‌ಸಿಬಿ ಬ್ಯಾಟ್ಸ್‌ಮನ್‌ ಔಟ್ ಕೂಡ ಆಗದ್ದು ನೋಡಿ ರಾಹುಲ್ ತನ್ನ ಅಸಮಾಧಾನವನ್ನು ಅಂಪೈರ್ ಅವರೆದು ತೋರಿಕೊಂಡರು. ಆದರೆ ಥರ್ಡ್ ಅಂಪೈರ್ ತೀರ್ಪು ಅದಾಗಿದ್ದರಿಂದ ಆನ್ ಫೀಲ್ಡ್ ಅಂಪೈರ್ ಏನೂ ಮಾಡಲಾಗಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ಆರ್‌ಸಿಬಿ 164 ರನ್ ಬಾರಿಸಿದೆ.

ಟ್ವಿಟರ್‌ನಲ್ಲಿ ಅನೇಕ ನೆಟ್ಟಿಗರು ಕಿಡಿ

ಆರ್‌ಸಿಬಿ ಮತ್ತು ಪಿಬಿಕೆಎಸ್ ಪಂದ್ಯದಲ್ಲಿ ಥರ್ಡ್ ಅಂಪೈರ್ ತಪ್ಪು ತೀರ್ಪು ನೀಡಿದ್ದು ನೋಡಿ ಟ್ವಿಟರ್‌ನಲ್ಲಿ ಅನೇಕರು ಕಿಡಿ ಕಾರಿದ್ದಾರೆ. ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಮಾಜಿ ಆಟಗಾರ, ಈಗ ಕಾಮೆಂಟೇಟರ್ ಆಗಿರುವ ಸ್ಕಾಟ್ ಸ್ಟೈರಿಸ್ ಕೂಡ ಬೇಸರ ತೋರಿಕೊಂಡು ಟ್ವೀಟ್‌ ಮಾಡಿದ್ದಾರೆ. "ಈ ಕೂಡಲೇ ಥರ್ಡ್ ಅಂಪೈರ್ ಅನ್ನು ಕಿತ್ತು ಹಾಕಿ. ಔಟ್ ಇದ್ದರೂ ನಾಟ್ ಔಟ್. ಏನು ಜೋಕಿದು," ಎಂದು ಸ್ಟೈರಿಸ್ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಟ್ವಿಟರ್‌ನಲ್ಲಿ ಇನ್ನೂ ಅನೇಕರು ತಮ್ಮ ಅಸಮಾಧಾನ ತೋರಿಕೊಂಡಿದ್ದಾರೆ. ದಯವಿಟ್ಟು ಯಾರಾದರೂ ಇವರಿಗೆ ಟ್ಯುಟೋರಿಯಲ್ ನೀಡಿ ಎಂದು ಅನೇಕರು ಬರೆದುಕೊಂಡಿದ್ದಾರೆ. ಥರ್ಡ್ ಅಂಪೈರ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.

Yuzvendra chahal ಹಾಕಿದ ಈ ಬಾಲಿಗೆ Sarfraz out | Oneindia Kannada
ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಪ್ಲೇಯಿಂಗ್ XI

ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಪ್ಲೇಯಿಂಗ್ XI

ಆರ್‌ಸಿಬಿ ಪ್ಲೇಯಿಂಗ್ XI: ವಿರಾಟ್ ಕೊಹ್ಲಿ (ಸಿ), ದೇವದತ್ ಪಡಿಕ್ಕಲ್, ಶ್ರೀಕರ್ ಭಾರತ್ (ವಿಕೆ), ಗ್ಲೆನ್ ಮ್ಯಾಕ್ಸ್‌ವೆಲ್, ಎಬಿ ಡಿವಿಲಿಯರ್ಸ್, ಡೇನಿಯಲ್ ಕ್ರಿಶ್ಚಿಯನ್, ಜಾರ್ಜ್ ಗಾರ್ಟನ್, ಶಹಬಾಜ್ ಅಹ್ಮದ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಾಹಲ್.

ಪಿಬಿಕೆಎಸ್ ಪ್ಲೇಯಿಂಗ್ XI: ಕೆಎಲ್ ರಾಹುಲ್ (ಸಿ & ವಿಕೆ), ಮಯಾಂಕ್ ಅಗರ್ವಾಲ್, ಐಡೆನ್ ಮಾರ್ಕ್ರಮ್, ನಿಕೋಲಸ್ ಪೂರನ್, ಸರ್ಫರಾಜ್ ಖಾನ್, ಶಾರುಖ್ ಖಾನ್, ಮೊಯಿಸ್ ಹೆನ್ರಿಕ್ಸ್, ಹರಪ್ರೀತ್ ಬ್ರಾರ್, ಮೊಹಮ್ಮದ್ ಶಮಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 13 - October 23 2021, 03:30 PM
ಆಸ್ಟ್ರೇಲಿಯಾ
ದಕ್ಷಿಣ ಆಫ್ರಿಕಾ
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, October 3, 2021, 17:26 [IST]
Other articles published on Oct 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X