ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನನ್ನಿಂದ ಸಾಧ್ಯವಾಗದ ಸಾಧನೆ ಮಾಡಿದ್ದಾರೆ ಪೃಥ್ವಿ ಶಾ: ವೀರೇಂದ್ರ ಸೆಹ್ವಾಗ್

IPL 2021: Virender Sehwag praised Prithvi shaw performence

ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಪೃಥ್ವಿ ಶಾ ನೀಡಿದ ಸ್ಪೋಟಕ ಪ್ರದರ್ಶನ ಸಾಕಷ್ಟು ದಿಗ್ಗಜ ಕ್ರಿಕೆಟಿಗರಿಂದ ಪ್ರಶಂಸೆಗೆ ಪಾತ್ರವಾಗುತ್ತಿದೆ. ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೀಡ ಪೃರ್ಥವಿ ಶಾ ಪ್ರದರ್ಶನದ ಬಗ್ಗೆ ಉತ್ತಮ ಮಾತುಗಳನ್ನು ಆಡಿದ್ದಾರೆ. ಜೊತೆಗೆ ಶಾ ಸಾಮರ್ಥ್ಯದ ಬಗ್ಗೆ ಸೆಹ್ವಾಗ್ ಕೊಂಡಾಡಿದ್ದಾರೆ.

ಡೆಲ್ಲಿ ಹಾಗೂ ಕೊಲ್ಕತ್ತಾ ಪಂದ್ಯದ ಬಳಿಕ ಕ್ರಿಕ್ ಬಝ್ ಜೊತೆಗೆ ಮಾತನಾಡಿದ ಸೆಹ್ವಾಗ್ ಪೃಥ್ವಿ ಶಾ ಬ್ಯಾಟಿಂಗ್ ಬಗ್ಗೆ ಅದ್ಭುತ ಮಾತುಗಳನ್ನು ಆಡಿದ್ದಾರೆ. ಈ ಸಂದರ್ಭದಲ್ಲಿ ತಾನು ಆಡುವ ದಿನಗಳಲ್ಲಿ ಓವರ್‌ನ ಎಲ್ಲಾ ಎಸೆತಗಳನ್ನು ಸಿಕ್ಸರ್‌ಗೆ ಅಟ್ಟುವ ಯೋಚನೆ ಮಾಡುತ್ತಿದ್ದೆ. ಆದರೆ ಪೃಥ್ವಿ ಶಾ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಮಾಡಿದ ಸಾಧನೆ ಮಾಡಲು ನನ್ನಿಂದ ಸಾಧ್ಯವಾಗಲಿಲ್ಲ ಎಂದಿದ್ದಾರೆ.

ಪೃಥ್ವಿ ಶಾ ಸ್ಫೋಟಕ ಬ್ಯಾಟಿಂಗ್, ಕೋಲ್ಕತ್ತಾ ವಿರುದ್ಧ ಡೆಲ್ಲಿಗೆ ಗೆಲುವುಪೃಥ್ವಿ ಶಾ ಸ್ಫೋಟಕ ಬ್ಯಾಟಿಂಗ್, ಕೋಲ್ಕತ್ತಾ ವಿರುದ್ಧ ಡೆಲ್ಲಿಗೆ ಗೆಲುವು

"ಎಲ್ಲಾ ಆರು ಎಸೆತಗಳನ್ನು ಬೌಂಡರಿಗೆ ಅಟ್ಟುವುದು ಎಂದರೆ ಪ್ರತಿ ಎಸೆತವನ್ನು ಕೂಡ ಅದ್ಭುತವಾದ ಗ್ಯಾಪ್‌ನಲ್ಲಿ ಆಡುವುದಾಗಿದೆ. ಅದು ನಿಜಕ್ಕೂ ಸುಲಭವಿಲ್ಲ. ನಾನು ನನ್ನ ವೃತ್ತಿ ಜೀವನವನ್ನು ಆರಂಭಿಸಿದಾಗಿನಿಂದ ಎಲ್ಲಾ ಎಸೆತಗಳನ್ನು ಸಿಕ್ಸರ್‌ಗೆ ಅಟ್ಟುವತ್ತ ಸಾಕಷ್ಟು ಬಾರಿ ಯೋಚಿಸಿದ್ದೆ. ಆದರೆ ನನ್ನಿಂದ 18-20 ರನ್‌ಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತಿತ್ತು".

"ನನ್ನಿಂದ ಯಾವತ್ತಿಗೂ ಒಂದು ಓವರ್‌ನಲ್ಲಿ ಆರು ಬೌಂಡರಿ ಅಥವಾ ಆರು ಸಿಕ್ಸರ್ ಬಾರಿಸಲು ಸಾಧ್ಯವಾಗಿಲ್ಲ. ಅದಕ್ಕಾಗಿ ನೀವು ಅದ್ಭುತವಾದ ಟೈಮಿಂಗ್ ಹೊಂದಿರಬೇಕು ಹಾಗಿದ್ದಾಗ ಮಾತ್ರವೇ ಫೀಲ್ಡರ್‌ಗಳನ್ನು ವಂಚಿಸಿ ಬೌಂಡರಿ ಬಾರಿಸಲು ಸಾಧ್ಯವಿದೆ" ಎಂದು ವೀರೇಂದ್ರ ಸೆಹ್ವಾಗ್ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

"ಬ್ಯಾಟಿಂಗ್‌ನಲ್ಲಿ ಪೃಥ್ವಿ ಶಾ ನಿಜಕ್ಕೂ ಅದ್ಭುತವಾದ ಪ್ರತಿಭೆಯನ್ನು ಹೊಂದಿದ್ದಾರೆ. ಬಹುಶಃ ಅಂಡರ್‌ 19 ತಂಡದಲ್ಲಿ ಜೊತೆಯಾಗಿ ಆಡಿದ್ದರ ಕಾರಣದಿಂದಾಗಿ ಶಿವಂ ಮಾವಿ ಅವರ ಎಸೆತಗಳನ್ನು ಚೆನ್ನಾಗಿ ಬಲ್ಲವರಾಗಿದ್ದರು ಎನಿಸುತ್ತದೆ. ನಾನು ಕೂಡ ಆಶಿಶ್ ನೆಹ್ರಾ ಅವರ ಎಸೆತಗಳನ್ನು ನೆಟ್ಸ್‌ನಲ್ಲಿ ಹಾಗೂ ದೇಶೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಬಾರಿ ಆಡಿದ್ದೆ. ಆದರೆ ಒಂದೇ ಓವರ್‌ನಲ್ಲಿ ಆರಿ ಬೌಂಡರಿಗಳನ್ನು ಬಾರಿಸಲು ನನ್ನಿಂದ ಸಾಧ್ಯವಾಗಿಲ್ಲ" ಎಂದಿದ್ದಾರೆ ವೀರೇಂದ್ರ ಸೆಹ್ವಾಗ್.

Story first published: Friday, April 30, 2021, 16:57 [IST]
Other articles published on Apr 30, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X