ಮನೀಶ್ ಪಾಂಡೆ ಹೊರಗಿಟ್ಟ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಡೇವಿಡ್ ವಾರ್ನರ್

ಸನ್‌ರೈಸರ್ಸ್ ಹೈದರಾಬಾದ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಅದ್ಭುತ ಪ್ರದರ್ಶನ ನೀಡಿ ಪಂದ್ಯವನ್ನು ಟೈ ಮಾಡಿಕೊಂಡಿತು. ಆದರೆ ಸೂಪರ್ ಓವರ್‌ನಲ್ಲಿ ವಾರ್ನರ್ ಬಳಗ ವಿಫಲವಾಗಿ ಎರಡು ಅಂಕವನ್ನು ಬಿಟ್ಟುಕೊಟ್ಟಿದೆ. ಈ ಸೋಲಿನ ಬಳಿಕ ಮಾತನಾಡಿದ ಡೇವಿಡ್ ವಾರ್ನರ್ ಮನೀಶ್ ಪಾಂಡೆಯನ್ನು ತಂಡದಿಂದ ಕೈಬಿಟ್ಟ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಮನೀಶ್ ಪಾಂಡೆಯನ್ನು ತಂಡದಿಂದ ಹೊರಗಿಡುವ ಆಯ್ಕೆಗಾರರ ನಿರ್ಧಾರ ಕಠಿಣವಾದದ್ದು ಎಂದು ಡೇವಿಡ್ ವಾರ್ನರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ಈ ಸಂದರ್ಭದಲ್ಲಿ ಯಾರ ಹೆಸರನ್ನು ತೆಗೆದುಕೊಳ್ಳದೆ ಈ ಪ್ರತಿಕ್ರಿಯೆ ನೀಡಿದ್ದಾರೆ ಸನ್‌ರೈಸರ್ಸ್ ಹೈದರಾಬಾದ್ ನಾಯಕ.

ಐಪಿಎಲ್ 2021: ಹೈದರಾಬಾದ್ ವಿರುದ್ಧ ಸೂಪರ್ ಓವರ್‌ನಲ್ಲಿ ಗೆದ್ದ ಡೆಲ್ಲಿ

ಅನುಭವಿ ಮನೀಶ್ ಪಾಂಡೆ ಈ ಬಾರಿಯ ಐಪಿಎಲ್‌ನಲ್ಲಿ ವೇಗವಾಗಿ ರನ್‌ಗಳಿಸಲು ವಿಫಲವಾದ ಹಿನ್ನೆಲೆಯಲ್ಲಿ ಆಡುವ ಬಳಗದಿಂದ ಕೈಬಿಡಲಾಯಿತು. ಅವರ ಸ್ಥಾನಕ್ಕೆ ಝಾರ್ಖಂಡ್‌ನ ಯುವ ಎಡಗೈ ಆಟಗಾರ ವಿರಾಟ್ ಸಿಂಗ್ ಆವರನ್ನು ಆಡಿಸಲಾಯಿತು. ಆದರೆ ವಿರಾಟ್ ಸಿಂಗ್ ಎದುರಿಸಿದ 14 ಎಸೆತಗಳಲ್ಲಿ ಕೇವಲ 4 ರನ್ ಮಾತ್ರವೇ ಗಳಿಸಿದ್ದಾರೆ.

"ಈ ಬದಲಾವಣೆ ಆಯ್ಕೆಗಾರರ ನಿರ್ಧಾರವಾಗಿದೆ. ನನ್ನ ಅಭಿಪ್ರಾಯದ ಪ್ರಕಾರ ಇದು ಕಠಿಣವಾದ ನಿರ್ಧಾರವಾಗಿದೆ" ಎಂದು ವಾರ್ನರ್ ಹೇಳಿದ್ದಾರೆ. ಈ ಮೂಲಕ ಎಸ್‌ಆರ್‌ಹೆಚ್ ಕೋಚ್ ಟ್ರೇವರ್ ಬೇಲಿಸ್ ಹಾಗೂ ಮೆಂಟರ್ ವಿವಿಎಸ್ ಲಕ್ಷ್ಮಣ್ ಹೆಸರನ್ನು ತೆಗೆದುಕೊಳ್ಳದೆಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

" ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಹಾಗಂದ ಮಾತ್ರಕ್ಕೆ ವಿರಾಟ್ ಸಿಂಗ್ ಅವರನ್ನು ದೂಷಿಸಲು ಸಾಧ್ಯವಿಲ್ಲ. ಆತನೋರ್ವ ಅತ್ಯುತ್ತಮ ಆಟಗಾರ, ಆದರೆ ಇಲ್ಲಿನ ಪಿಚ್ ಬಹಳ ಕಠಿಣವಾಗಿತ್ತು. ಅವರು ಮಧ್ಯದಲ್ಲಿ ಅತ್ಯುತ್ತಮವಾಗಿ ಬೌಲಿಂಗ್ ನಡೆಸಿದರು. ಇದು ನಮಗೆ ಸವಾಲಾಯಿತು" ಎಂದು ವಾರ್ನರ್ ಹೇಳಿದ್ದಾರೆ

For Quick Alerts
ALLOW NOTIFICATIONS
For Daily Alerts
Story first published: Monday, April 26, 2021, 13:07 [IST]
Other articles published on Apr 26, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X