ಐಪಿಎಲ್ 2022ಕ್ಕೆ ಹೊಸ ತಂಡಗಳು: ಈ 6 ನಗರಗಳನ್ನು ಪಟ್ಟಿ ಮಾಡಿದ ಬಿಸಿಸಿಐ

ಸದ್ಯ ಕ್ರಿಕೆಟ್ ಅಭಿಮಾನಿಗಳ ಚಿತ್ತ ಭಾರತ ಮತ್ತು ಇಂಗ್ಲೆಂಡ್ ನಡುವೆ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿಯತ್ತ ನೆಟ್ಟಿದೆ. ಈ ಸರಣಿಯ 4 ಪಂದ್ಯಗಳು ಈಗಾಗಲೇ ಮುಗಿದಿದ್ದು ಐದನೇ ಹಾಗೂ ಕೊನೆಯ ಪಂದ್ಯ ಇದೇ ಶುಕ್ರವಾರದಿಂದ ( ಸೆಪ್ಟೆಂಬರ್ 10 ) ಆರಂಭವಾಗಲಿದೆ. ಈ ಸರಣಿ ಮುಗಿದ ನಂತರ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಉಳಿದ ಪಂದ್ಯಗಳು ಯುಎಇಯಲ್ಲಿ ಮುಂದುವರಿಯಲಿವೆ.

ಓವಲ್ ಟೆಸ್ಟ್: ಪಂದ್ಯಶ್ರೇಷ್ಠ ಪ್ರಶಸ್ತಿಗೆ ನನಗಿಂತ ಈ ಆಟಗಾರ ಅರ್ಹ ಎಂದ ರೋಹಿತ್ ಶರ್ಮಾ!ಓವಲ್ ಟೆಸ್ಟ್: ಪಂದ್ಯಶ್ರೇಷ್ಠ ಪ್ರಶಸ್ತಿಗೆ ನನಗಿಂತ ಈ ಆಟಗಾರ ಅರ್ಹ ಎಂದ ರೋಹಿತ್ ಶರ್ಮಾ!

ಹೌದು ಇದೇ ವರ್ಷದ ಏಪ್ರಿಲ್ 9ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಪಂದ್ಯದ ಮೂಲಕ ಆರಂಭವಾಗಿದ್ದ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಕೊರೊನಾ ವೈರಸ್ ಕಾರಣದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು. ಹೀಗೆ ತಾತ್ಕಾಲಿಕವಾಗಿ ಸ್ಥಗಿತಗೊಂಡ ಹದಿನಾಲ್ಕನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯನ್ನು ಸೆಪ್ಟೆಂಬರ್ 19ರಿಂದ ಯುಎಇಯಲ್ಲಿ ಮುಂದುವರೆಸಲಾಗುತ್ತಿದೆ.

'ವಿಶ್ವ ಕ್ರಿಕೆಟ್‍ನಲ್ಲಿ ಭಾರತ ಪವರ್‌ಹೌಸ್, ಕೊಹ್ಲಿ ಸೂಪರ್‌ಸ್ಟಾರ್' ಎಂದು ಕೊಂಡಾಡಿದ ದಿಗ್ಗಜ ಕ್ರಿಕೆಟಿಗ'ವಿಶ್ವ ಕ್ರಿಕೆಟ್‍ನಲ್ಲಿ ಭಾರತ ಪವರ್‌ಹೌಸ್, ಕೊಹ್ಲಿ ಸೂಪರ್‌ಸ್ಟಾರ್' ಎಂದು ಕೊಂಡಾಡಿದ ದಿಗ್ಗಜ ಕ್ರಿಕೆಟಿಗ

ಹೀಗೆ ಪ್ರಸ್ತುತ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿರುವಾಗಲೇ 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಕುರಿತು ಸಹ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ. ಹೌದು, ಮುಂದಿನ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಿಂದ ಎರಡು ಅಧಿಕ ತಂಡಗಳ ಸೇರ್ಪಡೆಯಾಗಲಿದೆ ಎಂಬ ಸುದ್ದಿ ಈ ಹಿಂದೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದೀಗ ಆ ವಿಚಾರವಾಗಿಯೇ ಮತ್ತೊಂದು ಸುದ್ದಿ ಹೊರ ಬಿದ್ದಿದ್ದು ಮುಂದಿನ ವರ್ಷದ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಗೆ 2 ನೂತನ ತಂಡಗಳಿಗೆ ಅವಕಾಶ ನೀಡುವ ಕುರಿತಾಗಿ 6 ನಗರಗಳ ಕಿರು ಪಟ್ಟಿಯನ್ನು ಬಿಸಿಸಿಐ ಬಿಡುಗಡೆಗೊಳಿಸಿದೆ.

2 ನೂತನ ತಂಡಗಳಿಗೆ ಸೂಚಿಸಲಾಗಿರುವ 6 ನಗರಗಳ ಕಿರುಪಟ್ಟಿ

2 ನೂತನ ತಂಡಗಳಿಗೆ ಸೂಚಿಸಲಾಗಿರುವ 6 ನಗರಗಳ ಕಿರುಪಟ್ಟಿ

ಮುಂದಿನ ವರ್ಷದ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಕಣಕ್ಕಿಳಿಯಲಿದ್ದು ಈಗಿರುವ 8 ತಂಡಗಳ ಜತೆಗೆ ಮತ್ತೆರಡು ಹೊಸ ತಂಡಗಳು ಸೇರ್ಪಡೆಯಾಗಲಿವೆ. ಹೀಗೆ ನೂತನವಾಗಿ ಸೇರ್ಪಡೆಯಾಗಿರುವ 2 ತಂಡಗಳಿಗೆ ಈ ಕೆಳಕಂಡ ಒಟ್ಟು 6 ನಗರಗಳನ್ನು ಸೂಚಿಸಿ ಬಿಸಿಸಿಐ ಕಿರು ಪಟ್ಟಿಯಲ್ಲಿ ಸೇರಿಸಿದೆ.

1. ಗುವಾಹಟಿ

2. ರಾಂಚಿ

3. ಕಟಕ್

4. ಅಹ್ಮದಾಬಾದ್

5. ಲಕ್ನೋ

6. ಧರ್ಮಶಾಲಾ

ಹಿಂದಿ ಮಾತನಾಡುವ ವಲಯಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ ಬಿಸಿಸಿಐ

ಹಿಂದಿ ಮಾತನಾಡುವ ವಲಯಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ ಬಿಸಿಸಿಐ

ಮುಂದಿನ ವರ್ಷ ಸೇರ್ಪಡೆಯಾಗಲಿರುವ 2 ಹೊಸ ತಂಡಗಳು ಹೆಚ್ಚು ಹಿಂದಿ ಭಾಷೆಯನ್ನು ಮಾತನಾಡುವ ಜನರು ಇರುವಂತಹ ನಗರಗಳಾಗಿರಬೇಕು ಎಂದು ಬಿಸಿಸಿಐ ತೀರ್ಮಾನಿಸಿದೆ. ಇತ್ತೀಚೆಗಷ್ಟೇ ಸೋನಿ ಪಿಕ್ಚರ್ಸ್ ನೆಟ್‌ವರ್ಕ್‌ನ ಸೋನಿ ಟೆನ್ 3 ಹಿಂದಿ ಚಾನೆಲ್ ದೇಶದ ನಂ.1 ಸ್ಪೋರ್ಟ್ಸ್ ಚಾನಲ್ ಆಗಿ ಹೊರಹೊಮ್ಮಿದೆ. ಹಿಂದಿ ಭಾಷೆಯ ಚಾನೆಲ್ ಆಗಿರುವ ಸೋನಿ ಟೆನ್ 3 ಸ್ಪೋರ್ಟ್ಸ್ ಚಾನೆಲ್ ಶೇ. 50. 7 ವೀಕ್ಷಣೆಯನ್ನು ಪಡೆದುಕೊಂಡಿದ್ದು ವ್ಯವಹಾರದ ದೃಷ್ಟಿಯಿಂದ ಚಿಂತನೆ ನಡೆಸಿರುವ ಬಿಸಿಸಿಐ ಹಿಂದಿ ಮಾತನಾಡುವ ನಗರಗಳಿಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಿದೆ.

ಹಾಗೂ ದಕ್ಷಿಣ ಭಾರತದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್ ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳಿದ್ದು ಬಹುತೇಕ ದಕ್ಷಿಣ ಭಾರತದ ಕ್ರೀಡಾಭಿಮಾನಿಗಳು ಈ ತಂಡಗಳನ್ನೇ ಬೆಂಬಲಿಸುತ್ತಿದ್ದು ಮತ್ತೊಂದು ತಂಡ ರಚಿಸುವ ಅವಶ್ಯಕತೆಯಿಲ್ಲ ಎಂಬ ಚಿಂತನೆಯನ್ನು ಸಹ ಬಿಸಿಸಿಐ ನಡೆಸಿದೆ.

ಹೊಸ ತಂಡಗಳ ಮೂಲಬೆಲೆ 2000 ಕೋಟಿ!

ಹೊಸ ತಂಡಗಳ ಮೂಲಬೆಲೆ 2000 ಕೋಟಿ!

ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಪ್ರೀಮಿಯರ್ ಲೀಗ್ ಆಗಿರುವ ಇಂಡಿಯನ್ ಪ್ರಿಮಿಯರ್ ಲೀಗ್ ಟೂರ್ನಿಗೆ ಮುಂದಿನ ವರ್ಷ ಹೊಸದಾಗಿ ಸೇರ್ಪಡೆಯಾಗಲಿರುವ 2 ತಂಡಗಳಿಗೆ ಮೂಲಬೆಲೆಯನ್ನಾಗಿ ತಲಾ 2000 ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ಅಷ್ಟೇ ಅಲ್ಲದೆ ಇದರಿಂದ ಬಿಸಿಸಿಐಗೆ ಬರೋಬ್ಬರಿ 5000 ಕೋಟಿ ರೂಪಾಯಿ ಲಾಭ ಬರುವ ನಿರೀಕ್ಷೆ ಇದೆ.

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 22 - October 28 2021, 07:30 PM
ಆಸ್ಟ್ರೇಲಿಯಾ
ಶ್ರೀಲಂಕಾ
Predict Now

For Quick Alerts
ALLOW NOTIFICATIONS
For Daily Alerts
Story first published: Wednesday, September 8, 2021, 16:28 [IST]
Other articles published on Sep 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X