ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2022: ನಾನೇ ಪುಣ್ಯವಂತ ಎಂದ ಮ್ಯಾಕ್ಸ್‌ವೆಲ್: ಕಾರಣ ಏನು ಗೊತ್ತಾ?

IPL 2022: Glenn Maxwell said very fortunate to shared the dressing room with 2 great cricketers

ಈ ಬಾರಿಯ ಐಪಿಎಲ್‌ನಲ್ಲಿ ಆರ್‌ಸೊಬಿ ತಂಡ ಅದ್ಭುತ ಆರಂಭವನ್ನು ಪಡೆದುಕೊಂಡಿದೆ. ಮೊದಲ ಪಂದ್ಯದಲ್ಲಿ ವಿರೋಚಿತ ಸೋಲು ಅನುಭವಿಸಿದರೂ ನಂತರದ ಎರಡು ಪಂದ್ಯಗಳಲ್ಲಿಯೂ ಆರ್‌ಸಿಬಿ ತಂಡ ಸರ್ವಾಂಗೀಣ ಪ್ರದರ್ಶನ ನೀಡಿದ್ದು ಭರ್ಜರಿಯಾಗಿ ಗೆದ್ದುಕೊಂಡಿದೆ. ತನ್ನ ಮುಂದಿನ ಪಂದ್ಯವನ್ನು ಆರ್‌ಸಿಬಿ ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದ್ದು ಈ ಪಂದ್ಯಕ್ಕೆ ಆರ್‌ಸಿಬಿ ತಂಡದ ಪ್ರಮುಖ ಅಸ್ತ್ರ ಗ್ಲೆನ್ ಮ್ಯಾಕ್ಸ್‌ವೆಲ್ ಲಭ್ಯವಾಗಲಿದ್ದಾರೆ.

ಸತತ ಎರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿ ಅದ್ಭುತ ಪ್ರದರ್ಶನ ನೀಡಿರುವ ಆರ್‌ಸಿಬಿ ತಂಡ ಮೂರನೇ ಪಂದ್ಯದಲ್ಲಿಯೂ ಗೆಲುವು ಸಾಧಿಸುವ ಆತ್ಮವಿಶ್ವಾಸದಲ್ಲಿದೆ. ಅಲ್ಲದೆ ಸ್ಪೊಟಕ ದಾಂಡಿಗ ಗ್ಲೆನ್ ಮ್ಯಾಕ್ಸ್‌ವೆಲ್ ಕೂಡ ಲಭ್ಯವಾಗಿರುವುದು ಆರ್‌ಸಿಬಿ ತಂಡದ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುವುದರಲ್ಲಿ ಅನುಮಾನವಿಲ್ಲ. ಈ ಕುತೂಹಲಕಾರಿ ಪಂದ್ಯಕ್ಕೂ ಮುನ್ನ ಆಸಿಸ್ ಮೂಲದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ. ನಾನು ಬಹಳ ಅದೃಷ್ಟವಂತ ಆಟಗಾರ ಎಂದಿದ್ದಾರೆ ಗ್ಲೆನ್ ಮ್ಯಾಕ್ಸ್‌ವಲ್. ಇದಕ್ಕೆ ಕುತೂಹಲಕಾರಿ ಕಾರಣವೂ ಇದೆ.

IPL 2022: ಸಾಲು ಸಾಲು ಸೋಲು ಕಂಡ ಮುಂಬೈ ಇಂಡಿಯನ್ಸ್ ಗೆಲ್ಲಲು ಈತ ಕಣಕ್ಕಿಳಿಯಲೇಬೇಕು ಎಂದ ಸೆಹ್ವಾಗ್!IPL 2022: ಸಾಲು ಸಾಲು ಸೋಲು ಕಂಡ ಮುಂಬೈ ಇಂಡಿಯನ್ಸ್ ಗೆಲ್ಲಲು ಈತ ಕಣಕ್ಕಿಳಿಯಲೇಬೇಕು ಎಂದ ಸೆಹ್ವಾಗ್!

ಹಾಗಾದರೆ ಗ್ಲೆನ್ ಮ್ಯಾಕ್ಸ್‌ವೆಲ್ ಈ ರೀತಿ ಹೇಳಿಕೆ ನೀಡಲು ಕಾರಣವೇನು? ಯಾವ ವಿಚಾರವಾಗಿ ತಾನು ಅದೃಷ್ಟವಂತ ಎಂದಿದ್ದಾರೆ ಗ್ಲೆನ್ ಮ್ಯಾಕ್ಸ್‌ವೆಲ್? ಮುಂದೆ ಓದಿ..

ಕಳೆದ ಬಾರಿಯ ಐಪಿಎಲ್ ಟೂರ್ನಿಯ ಬಗ್ಗೆ ಮಾತು

ಕಳೆದ ಬಾರಿಯ ಐಪಿಎಲ್ ಟೂರ್ನಿಯ ಬಗ್ಗೆ ಮಾತು

ಗ್ಲೆನ್ ಮ್ಯಾಕ್ಸ್‌ವೆಲ್ ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯ ಬಗ್ಗೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಆರ್‌ಸಿಬಿ ತಂಡದ ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ ಎಬಿ ಡಿವಿಲಿಯರ್ಸ್ ಅವರಂತಾ ದಿಗ್ಗಜರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿರುವ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ. ಇದು ಇಂಥಾ ಆಟಗಾರರೊಂದಿಗೆ ಆಡುವ ಅವಕಾಶ ದೊರೆತಿರುವುದು ನನ್ನ ಪುಣ್ಯ ಎಂದಿದ್ದಾರೆ ಗ್ಲನ್ ಮ್ಯಾಕ್ಸ್‌ವೆಲ್.

ಕಳೆದ ಬಾರಿಯ ಆವೃತ್ತಿಯ ಅತ್ಯುತ್ತಮ ಸಂಗತಿಯಿದು

ಕಳೆದ ಬಾರಿಯ ಆವೃತ್ತಿಯ ಅತ್ಯುತ್ತಮ ಸಂಗತಿಯಿದು

ಗ್ಲೆನ್ ಮ್ಯಾಕ್ಸ್‌ವೆಲ್ ಮಾತನಾಡುತ್ತಾ "ಎಬಿ ಡಿವಿಲಿಯರ್ಸ್ ಮತ್ತು ವಿರಾಟ್ ಕೊಹ್ಲಿ ಇಬ್ಬರೂ ಎಂತಾ ಶ್ರೇಷ್ಠ ಆಟಗಾರರು ಎಂಬುದು ಎಲ್ಲರಿಗೂ ತಿಳಿದಿದೆ. ಅವರು ಬಹಳ ನನಗೆ ಬಹಳಷ್ಟು ಆಪ್ತವಾಗಿದ್ದಾರೆ. ಕಳೆದ ವರ್ಷ ಇಬ್ಬರು ಶ್ರೇಷ್ಠ ಆಟಗಾರರೊಂದಿಗೆ ಆಡುವ ಅವಕಾಶ ದೊರೆತು ಅವರೊಂದಿಗೆ ಉತ್ತಮ ಉತ್ತಮ ಸ್ನೇಹವನ್ನು ಗಳಿಸಿಕೊಂಡಿದ್ದೇನೆ. ಕಳೆದ ವರ್ಷದ ಐಪಿಎಲ್‌ನಲ್ಲಿ ನಾನು ಕಂಡುಕೊಂಡಿರುವ ಅತ್ಯುತ್ತಮ ಸಂಗತಿಯಿದು" ಎಂದಿದ್ದಾರೆ ಗ್ಲೆನ್ ಮ್ಯಾಕ್ಸ್‌ವೆಲ್.

ಎಬಿಡಿ ಮತ್ತೊಂದು ಆವೃತ್ತಿಯಲ್ಲಿ ಆಡಲಿದ್ದಾರೆ ಎಂದುಕೊಂಡಿದ್ದೆ

ಎಬಿಡಿ ಮತ್ತೊಂದು ಆವೃತ್ತಿಯಲ್ಲಿ ಆಡಲಿದ್ದಾರೆ ಎಂದುಕೊಂಡಿದ್ದೆ

ಇನ್ನು ಈ ಸಂದರ್ಭದಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್ ಕಳೆದ ಐಪಿಎಲ್ ಆವೃತ್ತಿಯ ಬಳಿಕ ನಿವೃತ್ತಿ ಘೋಷಿಸಿದ ಎಬಿ ಡಿವಲಿಯರ್ಸ್ ನಿರ್ಧಾರದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು. "ಎಬಿ ಡಿವಿಲಿಯರ್ಸ್ ತಮ್ಮ ನಿವೃತ್ತಿಯನ್ನು ಘೋಷನೆ ಮಾಡಿದಾಗ ನಾನು ಸಣ್ಣ ಪ್ರಮಾಣದ ಆಘಾತಕ್ಕೆ ಒಳಗಾದೆ. ಅವರು ಕನಿಷ್ಠ ಮತ್ತೊಂದು ಆವೃತ್ತಿಯಲ್ಲಿ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ನಾನು ಭಾವಿಸಿದ್ದೆ. ಅದನ್ನೇ ಎಲ್ಲರೂ ಕೂಡ ಎಬಿ ಡಿವಲಿಯರ್ಸ್ ಅವರಿಂದ ನಿರೀಕ್ಷಿಸಿದ್ದರು. ಅವರಿನ್ನೂ ಕೂಡ ಸೂಪರ್‌ಸ್ಟಾರ್. ಅವರು ತಂಡದ ಪರವಾಗಿ ನಿರ್ಣಾಯಕ ಪಾತ್ರವನ್ನು ನಿರ್ವಹಿಸುತ್ತಿದ್ದರು. ಅವರು ಮಾದರಿಯಾಗುವಂತೆ ಮುನ್ನಡೆಸುತ್ತಿದ್ದರು. ಅವರಂತಾ ಆಟಗಾರರನ್ನು ನಿಮ್ಮ ಚೇಂಜಿಂಗ್ ರೂಮ್‌ನಲ್ಲಿ ಹೊಂದಿರುವುದು ಶ್ರೇಷ್ಠ ಸಂಗತಿ" ಎಂದಿದ್ದಾರೆ.

ರಾಬಿನ್ ಉತ್ತಪ್ಪ ಗೆ ಮುಂಬೈ ಇಂಡಿಯನ್ಸ್ ತಂಡ ಕೊಟ್ಟ ಕಿರುಕುಳ,ಹಿಂಸೆ ಅಷ್ಟಿಷ್ಟಲ್ಲ | Oneindia Kannada
ಈ ಬಾರಿಯ ಆವೃತ್ತಿಯ ಆರ್‌ಸಿಬಿ ಸಂಪುರ್ಣ ಸ್ಕ್ವಾಡ್

ಈ ಬಾರಿಯ ಆವೃತ್ತಿಯ ಆರ್‌ಸಿಬಿ ಸಂಪುರ್ಣ ಸ್ಕ್ವಾಡ್

ಫಾಫ್ ಡು ಪ್ಲೆಸಿಸ್ (ನಾಯಕ), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ರಜತ್ ಪಾಟಿದಾರ್, ಅನುಜ್ ರಾವತ್, ವಿರಾಟ್ ಕೊಹ್ಲಿ, ಶೆರ್ಫೇನ್ ರುದರ್‌ಫೋರ್ಡ್, ಚಾಮ ವಿ ಮಿಲಿಂದ್, ಶಹಬಾಜ್ ಅಹ್ಮದ್, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಆಕಾಶ್ ದೀಪ್, ಸಿದ್ದಾರ್ಥ್ ಕೌಲ್, ಕರ್ಣ್ ಶರ್ಮಾ, ಡೇವಿಡ್ ವಿಲ್ಲಿ, ಜೋಶ್ ಹೇಜಲ್‌ವುಡ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಸುಯಶ್ ಪ್ರಭುದೇಸಾಯಿ, ಅನೀಶ್ವರ್ ಗೌತಮ್

Story first published: Saturday, April 9, 2022, 9:36 [IST]
Other articles published on Apr 9, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X