ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಟೂರ್ನಿಯಲ್ಲಿ ಕಣಕ್ಕಿಳಿದಿರುವ ಅತಿ ಹೆಚ್ಚು ವಯಸ್ಸಾದ ಐವರು ಕ್ರಿಕೆಟಿಗರು ಇವರೇ!

IPL 2022: List of 5 oldest players of the tournament

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಎಷ್ಟರ ಮಟ್ಟಿಗಿನ ಪ್ರಾಮುಖ್ಯತೆಯನ್ನು ಹೊಂದಿದೆ ಎಂದರೆ ಹಲವಾರು ವಿದೇಶಿ ಕ್ರಿಕೆಟಿಗರು ಟೂರ್ನಿಯಲ್ಲಿ ಭಾಗವಹಿಸುವುದಕ್ಕೋಸ್ಕರ ತಮ್ಮ ರಾಷ್ಟ್ರೀಯ ತಂಡದ ಪಂದ್ಯಕ್ಕೆ ಗೈರಾದ ಹಲವಾರು ಉದಾಹರಣೆಗಳಿವೆ. ಹೀಗೆ ಒಂದೆಡೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗಾಗಿ ಹಲವಾರು ವಿದೇಶಿ ಕ್ರಿಕೆಟಿಗರು ಅಂತರರಾಷ್ಟ್ರೀಯ ಪಂದ್ಯಗಳನ್ನು ಕಡೆಗಣಿಸಿ ಕಣಕ್ಕಿಳಿದಿದ್ದರೆ, ಮತ್ತೊಂದೆಡೆ ಕೆಲ ಆಟಗಾರರು ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿದ್ದರೂ ಸಹ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಭಾಗವಹಿಸುವುದನ್ನು ಬಿಟ್ಟಿಲ್ಲ.

ಈತ ಚೆನ್ನಾಗಿ ಆಡುವುದು ತಲೆಮಾರಿಗೊಮ್ಮೆ; ಹೀನಾಯ ಟ್ರೋಲ್‌ಗೆ ತುತ್ತಾದ ಮಾಜಿ ಆರ್‌ಸಿಬಿ ಆಟಗಾರಈತ ಚೆನ್ನಾಗಿ ಆಡುವುದು ತಲೆಮಾರಿಗೊಮ್ಮೆ; ಹೀನಾಯ ಟ್ರೋಲ್‌ಗೆ ತುತ್ತಾದ ಮಾಜಿ ಆರ್‌ಸಿಬಿ ಆಟಗಾರ

ಹೀಗೆ ವಯಸ್ಸಾದ ಕ್ರಿಕೆಟಿಗರ ಸಂಖ್ಯೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ದೊಡ್ಡ ಮಟ್ಟದಲ್ಲಿಯೇ ಇದ್ದು, ಆ ಆಟಗಾರರು ಯುವ ಕ್ರಿಕೆಟಿಗರೂ ಸಹ ನಾಚುವಂತೆ ಮೈದಾನದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅದೇ ರೀತಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿಯೂ ಸಹ ಹಲವಾರು ವಯಸ್ಸಾದ ಕ್ರಿಕೆಟಿಗರಿದ್ದು, ಆ ಪೈಕಿ ಅತಿ ಹೆಚ್ಚು ವಯಸ್ಸಾದ ಐವರು ಆಟಗಾರರ ಟಾಪ್ 5 ಪಟ್ಟಿ ಈ ಕೆಳಕಂಡಂತಿದೆ..

1. ಮೊಹಮ್ಮದ್ ನಬಿ

1. ಮೊಹಮ್ಮದ್ ನಬಿ

2017ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ಗೆ ಪದಾರ್ಪಣೆ ಮಾಡಿದ್ದ ಅಪ್ಘಾನಿಸ್ತಾನದ ಆಲ್‌ರೌಂಡರ್ ಮೊಹಮ್ಮದ್ ನಬಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಸೇರಿದ್ದಾರೆ. ಮೊಹಮ್ಮದ್ ನಬಿಗೆ 37 ವರ್ಷ ವಯಸ್ಸಾಗಿದ್ದು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿರುವ ವಯಸ್ಸಾದ ಕ್ರಿಕೆಟಿಗರ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ. ಇನ್ನು ಇಲ್ಲಿಯವರೆಗೂ ಯಾವುದೇ ಪಂದ್ಯದಲ್ಲಿಯೂ ಮೊಹಮ್ಮದ್ ನಬಿ ಕಣಕ್ಕಿಳಿಯುವ ಅವಕಾಶವನ್ನು ಪಡೆದುಕೊಂಡಿಲ್ಲ.

2. ವೃದ್ಧಿಮಾನ್ ಸಹಾ

2. ವೃದ್ಧಿಮಾನ್ ಸಹಾ

ತನ್ನ 23ನೇ ವಯಸ್ಸಿಗೆ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಪದಾರ್ಪಣೆ ಮಾಡಿದ್ದ ವೃದ್ಧಿಮಾನ್ ಸಹಾ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಪ್ರಮುಖ ಆಟಗಾರನಾಗಿದ್ದರು ಹಾಗೂ 2011ರ ಐಪಿಎಲ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಕಣಕ್ಕಿಳಿದಿದ್ದ ವೃದ್ಧಿಮಾನ್ ಸಹಾ 2017ರ ಐಪಿಎಲ್‌ವರೆಗೂ ಪಂಜಾಬ್ ಕಿಂಗ್ಸ್ ಪರ ಉತ್ತಮ ಪ್ರದರ್ಶನ ನೀಡಿದ್ದರು. ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಎರಡು ಕೋಟಿಗೆ ಗುಜರಾತ್ ಟೈಟನ್ಸ್ ತಂಡ ಸೇರಿದ್ದಾರೆ. ಇನ್ನು ವೃದ್ಧಿಮಾನ್ ಸಹಾಗೆ ವರ್ಷ ವಯಸ್ಸಾಗಿದ್ದು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿರುವ ವಯಸ್ಸಾದ ಕ್ರಿಕೆಟಿಗರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಇನ್ನು ಈ ಬಾರಿಯ ಟೂರ್ನಿಯಲ್ಲಿ 4 ಪಂದ್ಯಗಳನ್ನಾಡಿ 133 ರನ್ ಗಳಿಸಿರುವ ಸಹಾ ಇನ್ನಿಂಗ್ಸ್‌ವೊಂದರಲ್ಲಿ ಕಲೆಹಾಕಿರುವ ಗರಿಷ್ಟ ರನ್ 68.

3. ಫಾಫ್ ಡು ಪ್ಲೆಸಿಸ್

3. ಫಾಫ್ ಡು ಪ್ಲೆಸಿಸ್

2012ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಪದಾರ್ಪಣೆ ಮಾಡಿದ್ದ ಫಾಫ್ ಡು ಪ್ಲೆಸಿಸ್ ಚೆನ್ನೈ ಸೂಪರ್ ಕಿಂಗ್ಸ್ ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಕಣಕ್ಕಿಳಿದು 16 ಪಂದ್ಯಗಳನ್ನಾಡಿ 633 ರನ್ ಕಲೆಹಾಕಿ ಅಬ್ಬರಿಸಿದ್ದರು. ಇನ್ನು ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿ ನಾಯಕನಾಗಿರುವ ಫಾಫ್ ಡು ಪ್ಲೆಸಿಸ್‌ಗೆ ಈಗ 37 ವರ್ಷ ವಯಸ್ಸಾಗಿದ್ದು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿರುವ ವಯಸ್ಸಾದ ಕ್ರಿಕೆಟಿಗರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.

2. ಡ್ವೇಯ್ನ್ ಬ್ರಾವೋ

2. ಡ್ವೇಯ್ನ್ ಬ್ರಾವೋ

ಐಪಿಎಲ್ ಉದ್ಘಾಟನಾ ಆವೃತ್ತಿಯಲ್ಲಿ ಡ್ವೇಯ್ನ್ ಬ್ರಾವೋ ಕಣಕ್ಕಿಳಿದಿದ್ದಾಗ 24 ವರ್ಷ ವಯಸ್ಸಿನವರಾಗಿದ್ದರು ಹಾಗೂ ಆ ಆವೃತ್ತಿಯಲ್ಲಿ ಅವರು ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದಿದ್ದರು. 2010ರ ಐಪಿಎಲ್ ಆವೃತ್ತಿಯವರೆಗೂ ಮುಂಬೈ ಇಂಡಿಯನ್ಸ್ ಪರ ಕಣಕ್ಕಿಳಿದಿದ್ದ ಡ್ವೇಯ್ನ್ ಬ್ರಾವೋ ಹೆಚ್ಚು ಮಿಂಚಿದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡ ಸೇರಿದ ನಂತರ. ಈ ಬಾರಿಯೂ ಸಹ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದಿರುವ ಡ್ವೇಯ್ನ್ ಬ್ರಾವೋಗೆ 38 ವರ್ಷ ವಯಸ್ಸಾಗಿದ್ದು, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿರುವ ವಯಸ್ಸಾದ ಕ್ರಿಕೆಟಿಗರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

CSK ವಿರುದ್ಧ ಸೇಡು ತೀರಿಸಿಕೊಳ್ಳಲು ವಿರಾಟ್ ಹೇಗೆ ರೆಡಿಯಾಗಿದ್ದಾರೆ ಗೊತ್ತಾ? | Oneindia Kannad
1. ಎಂಎಸ್ ಧೋನಿ

1. ಎಂಎಸ್ ಧೋನಿ

ಐಪಿಎಲ್‌ನಲ್ಲಿ ಅತಿ ಹೆಚ್ಚು ವಯಸ್ಸಾದ ಆಟಗಾರ ಎಂದ ಕೂಡಲೇ ಎಲ್ಲರಿಗೂ ನೆನಪಾಗುವ ಮೊದಲ ಕ್ರಿಕೆಟಿಗ ಎಂ ಎಸ್ ಧೋನಿ. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಮುನ್ನ ನಾಯಕತ್ವವನ್ನು ರವೀಂದ್ರ ಜಡೇಜಾಗೆ ಹಸ್ತಾಂತರಿಸಿದ್ದ ಎಂಎಸ್ ಧೋನಿ ಇದೀಗ ಮತ್ತೆ ನಾಯಕತ್ವವನ್ನು ವಹಿಸಿಕೊಂಡಿದ್ದಾರೆ. ಸದ್ಯ 40 ವರ್ಷ ಪೂರೈಸಿರುವ ಎಂಎಸ್ ಧೋನಿ ಈ ಬಾರಿಯ ಐಪಿಎಲ್‌ನಲ್ಲಿ ಕಣಕ್ಕಿಳಿದಿರುವ ಅತ್ಯಂತ ಹಿರಿಯ ಆಟಗಾರ ಎನಿಸಿಕೊಂಡಿದ್ದಾರೆ. ಇನ್ನು ಎಂಎಸ್ ಧೋನಿ ಇಷ್ಟು ವರ್ಷ ವಯಸ್ಸಾದರೂ ಸಹ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಬೇಡಿಕೆ ಸ್ವಲ್ಪವೂ ಕಡಿಮೆ ಆಗದೇ ಇರುವುದು ಅವರ ಸಾಮರ್ಥ್ಯ ಮತ್ತು ಪ್ರಾಮುಖ್ಯತೆಯನ್ನು ಸಾರಿ ಹೇಳುತ್ತದೆ.

Story first published: Wednesday, May 4, 2022, 10:18 [IST]
Other articles published on May 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X