ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

IPL 2022: ಮ್ಯಾಕ್ಸ್‌ವೆಲ್ ನಂತರ ಆರ್‌ಸಿಬಿ ಸೇರಲಿದ್ದಾರೆ ಮತ್ತೋರ್ವ ವಿದೇಶಿ ಆಟಗಾರ; ತಂಡ ಮತ್ತಷ್ಟು ಬಲಿಷ್ಠ

IPL 2022: More power to RCB; Josh Hazlewood available from April 12

ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎಲಿಮಿನೇಟರ್ ಪಂದ್ಯದಲ್ಲಿ ಸೋಲುವ ಮೂಲಕ ಹೊರಬಿದ್ದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ನೂತನ ನಾಯಕ ಫಾಫ್ ಡು ಪ್ಲೆಸಿಸ್ ನಾಯಕತ್ವದಲ್ಲಿ ಕಣಕ್ಕಿಳಿದಿದ್ದು, ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ಬೃಹತ್ ಮೊತ್ತ ಕಲೆ ಹಾಕಿದರೂ ಸಹ ಪಂಜಾಬ್ ಕಿಂಗ್ಸ್ ವಿರುದ್ಧ 5 ವಿಕೆಟ್‍ಗಳ ಹೀನಾಯ ಸೋಲನ್ನು ಅನುಭವಿಸುವುದರ ಮೂಲಕ ಕಹಿ ಆರಂಭವನ್ನು ಪಡೆದುಕೊಂಡಿತ್ತು.

ಮಹಿಳಾ ವಿಶ್ವಕಪ್‌ ಫೈನಲ್: ಪುರುಷ ಕ್ರಿಕೆಟಿಗರೂ ಮಾಡಿರದ ದಾಖಲೆ ಬರೆದ ಪತ್ನಿಗೆ ಮಿಚೆಲ್ ಸ್ಟಾರ್ಕ್ ಚಪ್ಪಾಳೆಮಹಿಳಾ ವಿಶ್ವಕಪ್‌ ಫೈನಲ್: ಪುರುಷ ಕ್ರಿಕೆಟಿಗರೂ ಮಾಡಿರದ ದಾಖಲೆ ಬರೆದ ಪತ್ನಿಗೆ ಮಿಚೆಲ್ ಸ್ಟಾರ್ಕ್ ಚಪ್ಪಾಳೆ

ನಂತರ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ನಡೆದ ತನ್ನ ದ್ವಿತೀಯ ಪಂದ್ಯದಲ್ಲಿ 3 ವಿಕೆಟ್‍ಗಳ ಜಯವನ್ನು ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆಲುವಿನ ಖಾತೆ ತೆರೆದಿದೆ. ಹೀಗೆ ಇಲ್ಲಿಯವರೆಗೂ ಆಡಿರುವ 2 ಪಂದ್ಯಗಳ ಪೈಕಿ ಒಂದರಲ್ಲಿ ಸೋಲು ಹಾಗೂ ಮತ್ತೊಂದರಲ್ಲಿ ಗೆಲುವು ಕಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಂದು ( ಏಪ್ರಿಲ್ 5 ) ತನ್ನ ಮೂರನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಸೆಣಸಾಟ ನಡೆಸುತ್ತಿದ್ದು, ಏಪ್ರಿಲ್ 9ರಂದು ನಾಲ್ಕನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸೆಣಸಾಟ ನಡೆಸಲಿದೆ.

ಐಪಿಎಲ್ 2022: ತೆಲುಗಿನ ಈ ನಟಿ ವೆಂಕಟೇಶ್ ಐಯ್ಯರ್‌ ಪ್ರೇಯಸಿ?: ವೈರಲ್ ಆಯ್ತು ಇಬ್ಬರ ಕಾಮೆಂಟ್ಸ್!ಐಪಿಎಲ್ 2022: ತೆಲುಗಿನ ಈ ನಟಿ ವೆಂಕಟೇಶ್ ಐಯ್ಯರ್‌ ಪ್ರೇಯಸಿ?: ವೈರಲ್ ಆಯ್ತು ಇಬ್ಬರ ಕಾಮೆಂಟ್ಸ್!

ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಇಲ್ಲಿಯವರೆಗೂ ಆಡಿರುವ ಪಂದ್ಯಗಳಿಗೆ ಇಬ್ಬರು ಪ್ರಮುಖ ಆಟಗಾರರು ಅಲಭ್ಯರಾಗಿದ್ದರು. ಆದರೆ ಇದೀಗ ಈ ಇಬ್ಬರೂ ಆಟಗಾರರು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿಯಲು ಸಜ್ಜಾಗಿದ್ದು, ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳ ಪಾಳಯಕ್ಕೆ ಸಂತಸದ ಸುದ್ದಿಯಾಗಿದೆ. ಹೌದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪ್ರಮುಖ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್ ಏಪ್ರಿಲ್ 9ರಂದು ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದ ಮೂಲಕ ತನ್ನ ಆಟವನ್ನು ಆರಂಭಿಸುತ್ತಿದ್ದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮತ್ತೋರ್ವ ಪ್ರಮುಖ ಆಟಗಾರ ನಂತರದ ಪಂದ್ಯದಲ್ಲಿ ತಂಡದ ಪರ ಕಣಕ್ಕಿಳಿಯಲಿದ್ದು, ಈ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಕಂಡಂತಿದೆ ಓದಿ..

ತಂಡ ಸೇರಲಿದ್ದಾರೆ ಈ ವಿದೇಶಿ ಆಟಗಾರ

ತಂಡ ಸೇರಲಿದ್ದಾರೆ ಈ ವಿದೇಶಿ ಆಟಗಾರ

ಆಸ್ಟ್ರೇಲಿಯಾದ ಸ್ಟಾರ್ ಬೌಲರ್ ಜೋಶ್ ಹೇಜಲ್‌ವುಡ್‌ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಲು ಸಿದ್ಧರಿರುವ ಆಟಗಾರ. ಪಾಕಿಸ್ತಾನ ಪ್ರವಾಸ ಕೈಗೊಂಡಿದ್ದ ಆಸ್ಟ್ರೇಲಿಯಾ ಪರ ಕಣಕ್ಕಿಳಿದಿದ್ದ ಜೋಶ್ ಹೇಜಲ್‌ವುಡ್ ಇದೀಗ ಸರಣಿ ಮುಗಿಸಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸಲು ಸಜ್ಜಾಗಿದ್ದಾರೆ. ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಜೋಶ್ ಹೇಜಲ್‌ವುಡ್ ಏಪ್ರಿಲ್ 12ರಂದು ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಿಂದ ಕಣಕ್ಕಿಳಿಯಲಿದ್ದಾರೆ. ಟಿ ಟ್ವೆಂಟಿಯಲ್ಲಿ ಡೇಂಜರಸ್ ಎನಿಸಿಕೊಂಡಿರುವ ಜೋಶ್ ಹೇಜಲ್‌ವುಡ್ ಆಗಮನದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತಷ್ಟು ಬಲಿಷ್ಠವಾಗಲಿದೆ.

ಹೇಜಲ್‌ವುಡ್ ಐಪಿಎಲ್ ಅಂಕಿಅಂಶ

ಹೇಜಲ್‌ವುಡ್ ಐಪಿಎಲ್ ಅಂಕಿಅಂಶ

ಜೋಶ್ ಹೇಜಲ್‌ವುಡ್ ಕಳೆದೆರಡು ಐಪಿಎಲ್ ಟೂರ್ನಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿದು ಎರಡು ಟೂರ್ನಿಗಳ ಪೈಕಿ 12 ಪಂದ್ಯಗಳನ್ನಾಡಿದ್ದು, 12 ವಿಕೆಟ್ ಪಡೆದಿದ್ದಾರೆ. ಕಳೆದ ಬಾರಿಯ ಟೂರ್ನಿಯೊಂದರಲ್ಲೇ 9 ಪಂದ್ಯಗಳನ್ನಾಡಿ 11 ವಿಕೆಟ್ ಪಡೆದಿದ್ದ ಜೋಶ್ ಹೇಜಲ್‌ವುಡ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಕೈಬಿಟ್ಟಿದ್ದು ಈ ಬಾರಿಯ ಮೆಗಾ ಹರಾಜಿನಲ್ಲಿ 7.75 ಕೋಟಿಗೆ ರಾಯಲ್ ಚಾಲೆಂಜರ್ಸ್ ಖರೀದಿಸಿದೆ.

ಜೋಶ್ ಹೇಜಲ್‌ವುಡ್ ಟಿ ಟ್ವೆಂಟಿ ಅಂಕಿಅಂಶ

ಜೋಶ್ ಹೇಜಲ್‌ವುಡ್ ಟಿ ಟ್ವೆಂಟಿ ಅಂಕಿಅಂಶ

ಜೋಶ್ ಹೇಜಲ್‌ವುಡ್ ಇಲ್ಲಿಯವರೆಗೂ 27 ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳನ್ನಾಡಿದ್ದು, 40 ವಿಕೆಟ್ ಪಡೆದಿದ್ದಾರೆ. ಹೀಗೆ ಇಂಡಿಯನ್ ಪ್ರೀಮಿಯರ್ ಲೀಗ್ ಹಾಗೂ ಅಂತರರಾಷ್ಟ್ರೀಯ ಟಿ ಟ್ವೆಂಟಿ ಪಂದ್ಯಗಳಲ್ಲಿ ಒಳ್ಳೆಯ ಅಂಕಿಅಂಶವನ್ನೊಂದಿ ಮಿಂಚಿರುವ ಜೋಶ್ ಹೇಜಲ್‌ವುಡ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಆಗಮನ ತಂಡದ ಬಲವನ್ನು ಮತ್ತಷ್ಟು ಹೆಚ್ಚು ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.

Story first published: Tuesday, April 5, 2022, 18:02 [IST]
Other articles published on Apr 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X