IPL 2022: ಮುಂಬೈನ ಟಿಮ್ ಡೇವಿಡ್ ರನೌಟ್, ಸಾರಾ ತೆಂಡೂಲ್ಕರ್ ರಿಯಾಕ್ಷನ್ ವೈರಲ್

ಐಪಿಎಲ್ 2022 ರ ಭಾಗವಾಗಿ ಮಂಗಳವಾರ(ಮೇ.17) ನಡೆದ ರೋಚಕ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 3 ರನ್ ಗಳಿಂದ ಸೋತಿದೆ. ಗೆಲುವಿನ ಹೊಸ್ತಿಲಲ್ಲಿದ್ದ ಮುಂಬೈ ತಂಡವು ಕೊನೆಯ ಕ್ಷಣದಲ್ಲಿ ಹೈದ್ರಾಬಾದ್‌ಗೆ ಶರಣಾಯಿತು. ಅದ್ರಲ್ಲೂ ಹೊಸ ಹಿಟ್ಟರ್ ಟಿಮ್ ಡೇವಿಡ್ ನಿರ್ಗಮನ ತಂಡದ ಗೆಲುವಿನ ಸಾಧ್ಯತೆಯನ್ನು ಬಹುತೇಕ ಕಳೆದುಕೊಂಡಿತು. ಪಂದ್ಯ ವೀಕ್ಷಿಸಲು ಬಂದಿದ್ದ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್ ಸಹ ಟಿಮ್ ಡೇವಿಡ್ ಔಟಾಗಿರುವುದನ್ನು ಸಹಿಸಲಾಗಲಿಲ್ಲ.

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಕಾರ್ಪೊರೇಟ್ ಬಾಕ್ಸ್ ನಲ್ಲಿ ಕುಳಿತು ಪಂದ್ಯವನ್ನು ಎಂಜಾಯ್ ಮಾಡಿದ ಸಾರಾ ತೆಂಡೂಲ್ಕರ್ ಕೊನೆಗೆ ಮುಂಬೈ ಸೋಲಿಗೆ ಕಣ್ಣೀರಿಟ್ಟರು. ಇದೀಗ ಸಾರಾ ಫೋಟೋಗಳು ವೈರಲ್ ಆಗಿವೆ. ಸದ್ಯ ಅವರ ಸಹೋದರ ಅರ್ಜುನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ತಂಡದಲ್ಲಿದ್ದರೆ, ಸಚಿನ್ ತೆಂಡೂಲ್ಕರ್ ಆ ತಂಡಕ್ಕೆ ಮೆಂಟರ್ ಆಗಿ ಕಾರ್ಯನಿರ್ವಹಿಸುತ್ತಿರುವುದು ಗೊತ್ತೇ ಇದೆ. ಆದರೆ, ಸಾರಾ ತನ್ನ ಸಹೋದರ ಅರ್ಜುನ್ ತೆಂಡೂಲ್ಕರ್ ಪಾದಾರ್ಪಣೆ ಮಾಡುತ್ತಾರೆ ಎಂದು ಭಾವಿಸಿ ಈ ಪಂದ್ಯಕ್ಕೆ ಬಂದಿರಬಹುದು.

IPL 2022: ಸತತ 13ನೇ 'ಫಾಸ್ಟೆಸ್ಟ್ ಡೆಲಿವರಿ' ಪ್ರಶಸ್ತಿ ಗೆದ್ದ ಉಮ್ರಾನ್ ಮಲ್ಲಿಕ್ ದಾಖಲೆIPL 2022: ಸತತ 13ನೇ 'ಫಾಸ್ಟೆಸ್ಟ್ ಡೆಲಿವರಿ' ಪ್ರಶಸ್ತಿ ಗೆದ್ದ ಉಮ್ರಾನ್ ಮಲ್ಲಿಕ್ ದಾಖಲೆ

ನಟರಾಜನ್ ಅವರ ನಾಲ್ಕನೇ ಹಾಗೂ ಇನ್ನಿಂಗ್ಸ್‌ನ 18ನೇ ಓವರ್‌ನಲ್ಲಿ ಟಿಮ್ ಡೇವಿಡ್ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದರು. (18 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್ ಸಹಿತ 46 ರನ್ ಕಲೆಹಾಕಿದರು) 18ನೇ ಓವರ್‌ನಲ್ಲಿ ನಾಲ್ಕು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಮುಂಬೈ ತಂಡಕ್ಕೆ ನೆರವಾದರು. ಆದರೆ, ಓವರ್‌ನ ಕೊನೆಯ ಎಸೆತದಲ್ಲಿ ಸಿಂಗಲ್ ತೆಗೆದುಕೊಂಡು ಮುಂದಿನ ಓವರ್‌ಗೆ ಸ್ಟ್ರೈಕ್ ತೆಗೆದುಕೊಳ್ಳುವ ನಿರೀಕ್ಷೆಯಲ್ಲಿದ್ದ ಟಿಮ್ ಡೇವಿಡ್ ರನ್‌ಗೆ ರನೌಟ್ ಆದರು. ಇದು ಮುಂಬೈ ಇಂಡಿಯನ್ಸ್ ಅಭಿಮಾನಿಗಳ ಆಘಾತಕ್ಕೆ ಕಾರಣವಾಯಿತು.

ಮುಂಬೈ ವಿರುದ್ಧ ಜಯಭೇರಿ ಬಾರಿಸುವ ನಿರೀಕ್ಷೆಯಲ್ಲಿದ್ದ ಟಿಮ್ ಡೇವಿಡ್, ಚೆಂಡು ಬೌಲರ್ ನಟರಾಜನ್ ಅವರ ವಿಕೆಟ್ ಹತ್ತಿರವಿದ್ದರೂ ಕೆಚ್ಚೆದೆಯಿಂದ ಸಿಂಗಲ್ ರನ್ ಗಳಿಸಲು ಹೋಗಿ ರನೌಟ್ ಆದರು. ಮುಂಬೈ ಡಗೌಟ್‌ನಲ್ಲಿರುವ ತಂಡದ ಸಹ ಆಟಗಾರರು 'ನಿಮಗೆ ಈ ಸಿಂಗಲ್ ಬೇಕಿತ್ತೇ?' ಎಂದು ಅಸಹನೆ ತೋರಿದರು. ಸಾರಾ ತೆಂಡೂಲ್ಕರ್ ಕೂಡ ಟಿಮ್ ಡೇವಿಡ್ ರನೌಟ್ ಆಗಿದ್ದನ್ನ ನಂಬಲಾಗದೆ ಬಾವುಕರಾದರು. ಅಚಾನಕ್ ರನೌಟ್ ಆದ ಟಿಮ್ ಡೇವಿಡ್ ಬಹಳ ಬೇಸರದಿಂದ ಪೆವಿಲಿಯನ್ ಸೇರಿಕೊಂಡರು.

Rinku Singh ಆಟ ಕಡೆಗೆ ಯಾವ ರೀತಿ ಬದಲಾಯ್ತು | Oneindia Kannada

ಸನ್‌ರೈಸರ್ಸ್ ಹೈದ್ರಾಬಾದ್ ಈ ಪಂದ್ಯದಲ್ಲಿ ಮೂರು ರನ್‌ಗಳ ರೋಚಕ ಗೆಲುವು ಸಾಧಿಸಿತು. ಮುಂಬೈ ಇಂಡಿಯನ್ಸ್ ಸೀಸನ್‌ನಲ್ಲಿ 10ನೇ ಸೋಲು ಕಂಡಿತು.

For Quick Alerts
ALLOW NOTIFICATIONS
For Daily Alerts
Story first published: Wednesday, May 18, 2022, 19:56 [IST]
Other articles published on May 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X